Nokia New Logo: 60 ವರ್ಷಗಳ ನಂತರ ಲೋಗೋ ಬದಲಾಯಿಸಿದ ನೋಕಿಯಾ ಕಂಪೆನಿ! ಹೊಸ ವಿನ್ಯಾಸದಲ್ಲಿ ಬಿಡುಗಡೆ

ನೋಕಿಯಾದ ಹೊಸ ಲೋಗೋ

ನೋಕಿಯಾದ ಹೊಸ ಲೋಗೋ

60 ವರ್ಷಗಳಿಂದ ತನ್ನ ಒಂದೇ ಲೋಗೋವನ್ನು ಮುಂದುವರೆಸಿಕೊಂಡು ಬಂದಿದ್ದ ನೋಕಿಯಾ ಕಂಪೆನಿ, ಇದೀಗ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ಇದು ತನ್ನ ಕಂಪೆನಿಯ ಹೊಸ ಕಾರ್ಯವೈಖರಿ ಬಿಡುಗಡೆಯಾಗುತ್ತಿದೆ ಎಂದು ಸೂಚನೆ ನೀಡಿದೆ.

  • News18 Kannada
  • 5-MIN READ
  • Last Updated :
  • New Delhi, India
  • Share this:

    ನೋಕಿಯಾ ಬ್ರ್ಯಾಂಡ್ (Nokia Brand) ಗೊತ್ತಿಲ್ಲದವರೇ ಇಲ್ಲ. ಕೆಲವು ವರ್ಷಗಳ ಹಿಂದೆ, ಇದು ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದ್ದ ಒಂದು ಕಂಪೆನಿಯಾಗಿತ್ತು. ಆದರೆ ಇತ್ತೀಚೆಗೆ ನೋಕಿಯಾ ಕಂಪೆನಿಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಎಷ್ಟೇ ಹೊಸ ಫೋನ್​ಗಳನ್ನು ಬಿಡುಗಡೆ ಮಾಡಿದ್ರೂ ಕೆಲವು ದಿನಗಳವರೆಗೆ ಮಾತ್ರ ಬೇಡಿಕೆಯಿರುತ್ತದೆ. ಆದರೆ ನಂತರದಲ್ಲಿ ಈ ಕಂಪೆನಿಯ ಸ್ಮಾರ್ಟ್​​​ಫೋನ್​ಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ. ಈಗ ಮತ್ತೆ ನೋಕಿಯಾ ಕಂಪೆನಿ (Nokia Company) ಟೆಕ್​ ವಲಯದಲ್ಲಿ ವೇಗವಾಗಿ ಬೆಳೆಯಲು ಯೋಜಿಸುತ್ತಿದೆ. ಭಾನುವಾರ ತನ್ನ ಬ್ರಾಂಡ್​ನ ಹೊಸ ಲೋಗೋವನ್ನು (Nokia Launched New Logo) ಬಿಡುಗಡೆ ಮಾಡಿದೆ. ಸುಮಾರು ಆರು ದಶಕಗಳಲ್ಲಿ ಮೊದಲ ಬಾರಿಗೆ, ನೋಕಿಯಾ ಬ್ರ್ಯಾಂಡ್ ಅನ್ನು ಮತ್ತೆ ಹೊಸದಾಗಿ ನಿರ್ಮಿಸಿದೆ.


    60 ವರ್ಷಗಳಿಂದ ತನ್ನ ಒಂದೇ ಲೋಗೋವನ್ನು ಮುಂದುವರೆಸಿಕೊಂಡು ಬಂದಿದ್ದ ನೋಕಿಯಾ ಕಂಪೆನಿ, ಇದೀಗ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ಇದು ತನ್ನ ಕಂಪೆನಿಯ ಹೊಸ ಕಾರ್ಯವೈಖರಿ ಬಿಡುಗಡೆಯಾಗುತ್ತಿದೆ ಎಂದು ಸೂಚನೆ ನೀಡಿದೆ.


    60 ವರ್ಷಗಳ ನಂತರ ಮೊದಲ ಬಾರಿ ಬದಲಾವಣೆ


    ಆರು ದಶಕಗಳ ಕಾಲ ಒಂದೇ ಲೋಗೋವನ್ನು ಉಳಿಸಿಕೊಂಡು ಬಂದಿದ್ದ ನೋಕಿಯಾ ಇದೀಗ ಹೊಸ ಕಾರ್ಯತಂತ್ರದ ಸೂಚನೆ ನೀಡಿದೆ. ಹೊಸ ಲೋಗೋದಲ್ಲಿ ‘ನೋಕಿಯಾ’ ಪದದ ಐದು ಅಕ್ಷರಗಳು ಐದು ವಿಭಿನ್ನ ಶೈಲಿಯಲ್ಲಿದೆ. ಈ ಹಿಂದೆ ನೀಲಿ ಬಣ್ಣದಲ್ಲಿದ್ದ ನೋಕಿಯಾ ಅಕ್ಷರಗಳಿಗೆ ಇದೀಗ ಹೊಸ ರೂಪ ನೀಡಲಾಗಿದ್ದು ವಿನೂತನ ಡಿಸೈನ್‌ನ 5 ಫಾಂಟ್‌ನಲ್ಲಿ ಬಣ್ಣ ಬಣ್ಣದಲ್ಲಿ ನೋಕಿಯಾ ಪದದ ಅಕ್ಷರಗಳು ಲೋಗೋದಲ್ಲಿ ಕಂಗೊಳಿಸುತ್ತಿವೆ.


    ಇದನ್ನೂ ಓದಿ: ಉಚಿತವಾಗಿ ಮ್ಯಾಚ್​ ನೋಡಲು ಇಲ್ಲಿದೆ ಏರ್​ಟೆಲ್​ನ ಬೆಸ್ಟ್​ ರೀಚಾರ್ಚ್​ ಪ್ಲ್ಯಾನ್​ಗಳು


    ಈ ಬಗ್ಗೆ ನೋಕಿಯಾ ಸಿಇಒ ಅಭಿಪ್ರಾಯ


    ಈ ಬಗ್ಗೆ ಮಾತನಾಡಿರುವ ನೋಕಿಯಾದ ಸಿಇಒ ಪೆಕ್ಕಾ ಲುಂಡ್ಮಾರ್ಕ್, ”ಹಳೆಯ ಲೋಗೋದ ವಿಶಿಷ್ಟ ನೀಲಿ ಬಣ್ಣವನ್ನು ಬಳಕೆಯ ಅನುಗುಣವಾಗಿ ಬಣ್ಣಗಳ ಶ್ರೇಣಿಗೆ ಕೈಬಿಡಲಾಗಿದೆ. ಈ ಹಿಂದೆ ಸ್ಮಾರ್ಟ್​ಫೋನ್​ಗಳಿಗೆ ಸಂಬಂಧಿಸಿದ ನಮ್ಮ ಸಂಸ್ಥೆ ಇಂದು ವ್ಯಾಪಾರ ತಂತ್ರಜ್ಞಾನದ ಸಂಸ್ಥೆಯಾಗಿದೆ. 2020ರ ಬಿಕ್ಕಟ್ಟಿನ ಬಳಿಕ ಮರುಹೊಂದಿಕೆ, ವೇಗವರ್ಧನೆ ಮತ್ತು ಪ್ರಮಾಣ ಎಂಬ ಮೂರು ಕಾರ್ಯತಂತ್ರವನ್ನು ನಾವು ಇರಿಸಿಕೊಂಡಿದ್ದೆವು.


    ನೋಕಿಯಾದ ಹೊಸ ಲೋಗೋ


    ಇದೀಗ ಮರುಹೊಂದಿಸುವ ಹಂತ ಮುಗಿದಿದೆ. ನೋಕಿಯಾ ತನ್ನ ಸೇವಾ ಪೂರೈಕೆದಾರ ವ್ಯವಹಾರವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಶೇ. 21 ರಷ್ಟು ಬೆಳವಣಿಗೆಯನ್ನು ಕಂಡಿದ್ದೇವೆ. ಇದು ಪ್ರಸ್ತುತ ನಮ್ಮ ಮಾರಾಟದ ಶೇಕಡಾ 8 ರಷ್ಟಿದೆ. ಭಾರತ ದೇಶ ನಮ್ಮ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ,” ಎಂದು ಹೇಳಿದ್ದಾರೆ.


    ಫೆಬ್ರವರಿ 27ರಿಂದ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ ಕಾರ್ಯಕ್ರಮ


    ವಿಶೇಷ ಎಂದರೆ ಫೆಬ್ರವರಿ 27 ಇಂದಿನಿಂದ ಗುರವಾರದವರೆಗೆ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ ಈವೆಂಟ್​ ನಡೆಯಲಿದೆ. ಆದರೆ ಈ ಈವೆಂಟ್​ನ ಮೊದಲೇ ನೋಕಿಯಾ ತನ್ನ ಬ್ರಾಂಡ್​ನಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿರುವುದು ಗ್ರಾಹಕರಲ್ಲಿ, ತಂತ್ರಜ್ಞರಲ್ಲಿ ಕುತೂಹಲ ಮೂಡಿಸಿದೆ. ”ಸೇವೆಗಳನ್ನು ಪೂರೈಸುವ ವಹಿವಾಟಿನತ್ತ ಕಂಪನಿ ಗಮನ ಮುಂದುವರಿಸಲಿದ್ದು, ದೂರಸಂಪರ್ಕ ಕಂಪನಿಗಳಿಗೆ ಅಗತ್ಯ ಸಾಧನಗಳನ್ನು ನೀಡುವುದು, ಅದರಲ್ಲಿಯೂ ಮುಖ್ಯವಾಗಿ ಬೇರೆ ಉದ್ದಿಮೆಗಳಿಗೆ ಟೆಲಿಕಾಂ ಗಿಯರ್‌ ಮಾರಾಟ ಮಾಡಲು ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದೇವೆ,” ಎಂದು ನೋಕಿಯಾದ ಸಿಇಒ ಪೆಕ್ಕಾ ಲುಂಡ್ಮಾರ್ಕ್ ಹೇಳಿದರು.




    ಏಕಕಾಲದಲ್ಲಿ 3 ಸ್ಮಾರ್ಟ್​​​ಫೋನ್​ಗಳನ್ನು ಬಿಡುಗಡೆ ಮಾಡಿದ ನೋಕಿಯಾ ಕಂಪೆನಿ


    ಜನಪ್ರಿಯ ಸ್ಮಾರ್ಟ್​​ಫೋನ್​ ತಯಾರಿಕಾ ಕಂಪೆನಿಯಾಗಿರುವ ನೋಕಿಯಾ ಇದೀಗ ಮಾರುಕಟ್ಟೆಗೆ ಏಕಕಾಲದಲ್ಲಿ 3 ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ನೋಕಿಯಾ ಕಂಪೆನಿಯಿಂದ ನೋಕಿಯಾ ಸಿ22, ನೋಕಿಯಾ ಜಿ22 ಮತ್ತು ನೋಕಿಯಾ ಸಿ32 ಎಂಬ ಸ್ಮಾರ್ಟ್​​ಫೋನ್​​ಗಳು ಲಾಂಚ್​ ಆಗುತ್ತಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು