ಮಾರುಕಟ್ಟೆಗೆ ಹೊಸ ಅವತಾರದೊಂದಿಗೆ ಬರಲಿದೆ ನೋಕಿಯಾ ‘8110’ ಬನಾನ ಫೋನ್

news18
Updated:March 3, 2018, 5:58 PM IST
ಮಾರುಕಟ್ಟೆಗೆ ಹೊಸ ಅವತಾರದೊಂದಿಗೆ ಬರಲಿದೆ ನೋಕಿಯಾ ‘8110’ ಬನಾನ ಫೋನ್
news18
Updated: March 3, 2018, 5:58 PM IST
ನ್ಯೂಸ್ 18 ಕನ್ನಡ

ನೋಕಿಯಾ ಮೊಬೈಲ್ ಕಂಪೆನಿ ಒಂದು ಕಾಲದಲ್ಲಿ ಮೊಬೈಲ್ ಬಳಕೆದಾರರ ನೆಚ್ಚಿನ ಆಯ್ಕೆಯಾಗಿತ್ತು. 90ರ ದಶಕದಲ್ಲಿ ಜನಪ್ರೀಯತೆ ಗಳಿಸಿದ್ದ ಈ ಕಂಪೆನಿ ಬೇರೆ ಬೇರೆ ಮೊಬೈಲ್ ಕಂಪೆನಿಗಳ ಪೈಪೋಟಿಗಳ ಮಧ್ಯೆ ಹಿಂದೆ ಬಿದ್ದಿತು. ಸದ್ಯ ಬಾರ್ಸಿಲೋನಾದಲ್ಲಿ ನಡೆದ ವಿಶ್ವ ಮೊಬೈಲ್ ಸಮ್ಮೇಳನದಲ್ಲಿ ನೋಕಿಯಾ ಕಂಪೆನಿ ಮತ್ತೆ ಗರಿಗೆದರಿದೆ.

1996 ರಲ್ಲಿ ನೋಕಿಯಾ ಕಂಪೆನಿ ಬಿಡುಗಡೆ ಮಾಡಿದ ‘8110’ ಮೊಬೈಲ್ ಈಗ ಮತ್ತೆ ಮಾರುಕಟ್ಟೆಗೆ ಬರಲಿದೆ. ಅದೂ ಹೊಸ ವಿನ್ಯಾಸದಲ್ಲಿ. ಇದೊಂದು 4ಜಿ ತಂತ್ರಜ್ಞಾನವುಳ್ಳ ಆ್ಯಂಡ್ರಾಯ್ಡ್ ಸ್ಮಾರ್ಟ್​ ಫೋನ್ ಆಗಿದ್ದು, ಕೀ ಪ್ಯಾಡ್​ಗೆ ಸ್ಲೈಡರ್ ಕವಚವನ್ನು ಹೊಂದಿದೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು ಎಂಬುದನ್ನ ತಿಳಿದುಕೊಳ್ಳೋಣ.ಹೊಸ ಮಾದರಿಯ ‘8110’ ಮೊಬೈಲ್ ಹಳದಿ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಬಾಳೆ ಹಣ್ಣಿನ ರೀತಿ ಸ್ವಲ್ಪ ಬಾಗಿದಂತಿರುವ ಈ ಫೋನ್, ಸ್ಲೈಡರ್ ಮೂಲಕವೇ ಕರೆಗಳನ್ನು ಸ್ವೀಕರಿಸಬಹುದು ಹಾಗೂ ರದ್ದು ಪಡಿಸಬಹುದು. ಇದು ಫೀಚರ್ ಫೋನ್ ಆಗಿದ್ದರಿಂದ ಗೂಗಲ್ ಅಸಿಸ್ಟೆಂಟ್, ಗೂಗಲ್ ಮ್ಯಾಪ್, ಗೂಗಲ್ ಸರ್ಚ್, ಫೇಸ್​ಬುಕ್, ಟ್ವಿಟರ್ ಸೇರಿದಂತೆ ಕಡಿಮೆ ಸಂಖ್ಯೆಯ ಆ್ಯಪ್​ಗಳು ದೊರೆಯುತ್ತದೆ. ಆದರೆ ವಾಟ್ಸ್​ಆಪ್​ ಇದರಲ್ಲಿ ಲಭ್ಯವಿಲ್ಲ.

ಇನ್ನು ಇದರ ಡಿಸ್​ಪ್ಲೇ 2.4 ಇಂಚಿದ್ದು, 2 ಎಂಪಿ ಹಿಂಬದಿ ಕ್ಯಾಮೆರಾ ಹೊಂದಿದೆ. ಫ್ರಂಟ್ ಕ್ಯಾಮೆರಾ ಇಲ್ಲವಾದರು 1500ಎಂಎಹೆಚ್ ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಸುಮಾರು 25 ದಿನಗಳ ಕಾಲ ಚಾರ್ಜ್​ ಉಳಿಯುತ್ತದೆ. ಅಲ್ಲದೆ 2 ಸಿಮ್​ಗಳನ್ನ ಇದಕ್ಕೆ ಅಳವಡಿಸಬಹುದಾಗಿದೆ. 1.1 ಗಿಗಾ ಹರ್ಟ್ಸ್ ಕ್ವಾಲ್​ಕಾಮ್ ಡ್ಯುಯಲ್ ಕೋರ್ ಪ್ರೊಸೆಸರ್, 512 ಎಂಬಿ RAM ಹಾಗೂ 4 ಜಿಬಿ ಮೆಮೋರಿ ಇದರಲ್ಲಿದೆ.

4ಜಿ ಬಳಕೆದಾರರಿಗೆ ಅನುಕೂಲವಾಗುವಂತೆ ನೋಕಿಯಾ '8110' ಸ್ಪಾರ್ಟ್ ಫೋನ್​ನ್ನು ರಚಿಸಲಾಗಿದ್ದು, ಮೇ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. 79 ಯುರೋ ಅಥವಾ 97 ಡಾಲರ್ ಅಂದರೆ ಭಾರತದಲ್ಲಿ ಸುಮಾರು 5000 ದಿಂದ 6000 ರೂ. ಗಳಿಗೆ ಈ ಫೋನ್ ದೊರೆಯಲಿದೆ.
First published:March 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ