ಸ್ಮಾರ್ಟ್ಫೊನ್ನಲ್ಲಿ ಕ್ಯಾಮೆರಾಗೆ ಹೆಚ್ಚು ಮನ್ನಣೆ ನೀಡುವ ಈ ಕಾಲಕ್ಕೆ ಅನುಗುಣವಾಗುವಂತೆ ನೋಕಿಯ ಸಂಸ್ಥೆ 5 ಕ್ಯಾಮೆರಾ ಹೊಂದಿರುವ ಮೊಬೈಲ್ನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆಯೇ ಎಂಬ ಪ್ರಶ್ನೆಗೆ ಎಲ್ಲರಿಗೂ ಮೂಡಿದೆ.
ಹೌದು ಇತ್ತೀಚೆಗೆ ಆನ್ಲೈನ್ನಲ್ಲಿ ವೈರಲ್ ಆಗಿರುವ ನೋಕಿಯಾ ಮೊಬೈಲ್ನ ಚಿತ್ರದಲ್ಲಿಐದು ಕ್ಯಾಮೆರಾ ಹೊಂದಿದ್ದು ಸಂಪೂರ್ಣ ನೋಚ್ ಪರದೆಯನ್ನೂ ಸಹ ಈ ಮೊಬೈಲ್ಗೆ ಅಳವಡಿಸಲಾಗಿದೆ. "Nokia 9" ಎಂಬ ಸ್ಮಾರ್ಟ್ಫೊನ್ನ ಚಿತ್ರ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಕಪ್ಪು ಬಿಳಿ ಬಣ್ಣದ ಮಲ್ಟಿ ಲೆನ್ಸ್ ಪಿಕ್ಸೆಲ್ನ ವ್ಯವಸ್ಥೆ ಮೊಬೈಲ್ ಇದಾಗಿದೆ ಎಂದು ದಿ ನೆಕ್ಸ್ಟ್ ವೆಬ್ ವರದಿ ಮಾಡಿದೆ.
ಈ ಚಿತ್ರ ವೈರಲ್ ಆಗುವುದಕ್ಕು ಮುನ್ನ "TA-1094" ಕೋಡ್ನ ಮೂಲಕ ಹೂವಿನ ಮಾದರಿಯಲ್ಲಿ ಈ ಮೊಬೈಲ್ನ ಚಿತ್ರ ವೈರಲ್ ಆಗಿತ್ತು, ಕ್ಯಾಮೆರಾ ನಿರ್ಮಾಣದ ಝೈಸ್ ಸಂಸ್ಥೆಯೊಂದಿಗೆ ಈ ಹಿಂದೆಯಿಂದಲೇ ಒಪ್ಪಂದ ಮಾಡಿಕೊಂಡಿರುವ ನೋಕಿಯಾ, ಇದೀಗ ಝೈಸ್ ಸಂಸ್ಥೆಯಿಂದಲೇ ಈ ಕ್ಯಾಮೆರಾಗಳನ್ನು ಅಭಿವೃದ್ಧಿ ಪಡಿಸಿದೆ.
ಈ ಹಿಂದೆ ಸ್ಲಾಶ್ಲೀಕ್ ಎಂಬ ವೆಬ್ ಮಾಧ್ಯಮ ಶೇರ್ ಮಾಡಿದ್ದ ನೋಕಿಯಾ 9 ಚಿತ್ರಗಳು ಕೂಡಾ ಐದು ಕ್ಯಾಮೆರಾ ಹೊಂದಿದ್ದವು. ಈ ಹಿಂದೆ ನೋಕಿಯಾ ಬಿಟ್ಟಿದ್ದ ಡ್ಯುಯಲ್ ಕ್ಯಾಮೆರಾ ಹೆಚ್ಚಿನ ಮಟ್ಟಿನ ಯಶಸ್ವಿಯನ್ನು ಕಂಡಿಲ್ಲವಾದರೂ ಸಂಸ್ಥೆಯ ಕಮ್ಬ್ಯಾಕ್ಗೆ ಉಪಕಾರಿಯಾಗಿತ್ತು. ಈಗಾಗಲೇ ಹುವಾವೇ ಸಂಸ್ಥೆ ತನ್ನ 'P20 pro' ಮೊಬೈಲ್ಗೆ ಮೂರು ಕ್ಯಾಮೆರಾ ಅಳವಡಿಸಿತ್ತು. ಅಲ್ಲದೇ ಕಳೆದ ಎರಡು ವರ್ಷದಲ್ಲಿ ಎರಡು ಕ್ಯಾಮೆರಾ ಹೊಂದಿರುವ ಮೊಬೈಲ್ಗಳು ಸಾಕಷ್ಟು ವೈರಲ್ ಟ್ರೆಂಡ್ ಹುಟ್ಟಿಸಿದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ