ಬಹುನಿರೀಕ್ಷಿತ ನೋಕಿಯಾ 'ಬನಾನ' ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತೆ?

zahir | news18
Updated:October 11, 2018, 6:23 PM IST
ಬಹುನಿರೀಕ್ಷಿತ ನೋಕಿಯಾ 'ಬನಾನ' ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತೆ?
zahir | news18
Updated: October 11, 2018, 6:23 PM IST
-ನ್ಯೂಸ್ 18 ಕನ್ನಡ

ನೋಕಿಯಾ ಕಂಪನಿಯ ತನ್ನ ಬಹು ನಿರೀಕ್ಷೆಯ Nokia 8110 4G ಬನಾನ ಫೋನ್​ನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಹಿಂದೆಯೇ ನೋಕಿಯಾ ಈ ಹೊಸ ಮಾದರಿಯನ್ನು ಪ್ರದರ್ಶಿಸಿದರೂ ಭಾರತದ ಮಾರುಕಟ್ಟೆಗೆ ಪರಿಚಯಿಸಿರಲಿಲ್ಲ. ತನ್ನ ಹಳೆಯ ಚಾಂಪಿಯನ್ ಸ್ಲೈಡರ್​ ​ ಹ್ಯಾಂಡ್​ಸೆಟ್​​ನ್ನು ಮತ್ತಷ್ಟು ವಿನ್ಯಾಸಗೊಳಿಸಿ  ನೋಕಿಯಾ 8110 4Gಯನ್ನು ನಿರ್ಮಿಸಲಾಗಿದೆ. ಜಿಯೋ ಫೋನ್​ನಲ್ಲಿ ಬಳಸಲಾಗಿರುವ KaiOS ಅಪರೇಟಿಂಗ್ ಸ್ಟಿಸ್ಟಂ ಇದರಲ್ಲಿದ್ದು,  ವಾಟ್ಸಪ್​, ಯೂಟ್ಯೂಬ್ ಮತ್ತು ಗೂಗಲ್ ಅಪ್ಲಿಕೇಶನ್​ಗಳನ್ನು ಈ ಫೋನ್​ನಲ್ಲಿ ಬಳಸಿಕೊಳ್ಳಬಹುದು.

ಹಳೆಯ ಕಾಲದ ನೋಕಿಯಾದಲ್ಲಿದ್ದ ಸ್ನೇಕ್ ಗೇಮ್​ನ್ನು ಈ ಮೊಬೈಲ್​ನಲ್ಲಿ ಹೊಸ ರೀತಿಯಲ್ಲಿ ಸೃಷ್ಟಿಸಿರುವುದು ಮತ್ತೊಂದು ವಿಶೇಷ. 1996 ರಲ್ಲಿ ನೋಕಿಯಾ ಕಂಪೆನಿ ಬಿಡುಗಡೆ ಮಾಡಿದ ‘8110’ ಮೊಬೈಲ್​ನ ಮಾದರಿಯಲ್ಲಿರುವ ಈ ಫೋನ್​ನಲ್ಲಿ ಸ್ಲೈಡ್​ಗಳನ್ನು ಬಳಸಿ ಕರೆಗಳನ್ನು ಸ್ವೀಕರಿಸಲು ಮತ್ತು ಕಡಿತ ಮಾಡಬಹುದು.

ಬೆಲೆ ಮತ್ತು ವೈಶಿಷ್ಟ್ಯಗಳು

Nokia 8110 4G VoLTE ಕನೆಕ್ಟಿವಿಟಿ ತಂತ್ರಜ್ಞಾನ ಹೊಂದಿದೆ.
ಇದರಲ್ಲಿ ಡ್ಯುಯೆಲ್ ಸಿಮ್ ಆಯ್ಕೆ ನೀಡಲಾಗಿದೆ.
Qualcomm MSM8908 Snapdragon 205 ಪ್ರೊಸೆಸರ್ ಸಾಮರ್ಥ್ಯ ಈ ಫೋನಿನಲ್ಲಿದೆ.
Loading...

4GB+512MB ಇನ್​ಬಿಲ್ಟ್​ ಮೆಮೊರಿ ಇದೆ. ಆದರೆ ಮೆಮೊರಿ ಕಾರ್ಡ್​ ಬಳಸುವ ಆಯ್ಕೆ ನೀಡಲಾಗಿಲ್ಲ.
1500 mAh ಬ್ಯಾಟರಿ ಸಾಮರ್ಥ್ಯವನ್ನು ಸಹ ಫೋನ್ ಹೊಂದಿದೆ.
HotSpot,Bluetooth,Wi-Fi ಕನೆಕ್ಟಿವಿಟಿ ಆಯ್ಕೆ ಕೂಡ ಇದರಲ್ಲಿದೆ.
2 ಮೆಗಾ ಪಿಕ್ಸೆಲ್​ನ ರಿಯರ್​ ಕ್ಯಾಮೆರಾದೊಂದಿಗೆ LED ಫ್ಲಾಶ್​ ನೀಡಲಾಗಿದೆ.
ರೆಡಿಯೋ, USB ಪೋರ್ಟ್​ ಮತ್ತು ಹೆಡ್​ಫೋನ್​ ಆಯ್ಕೆಗಳಿವೆ.
ಬನಾನಾ ಹಳದಿ ಮತ್ತು ಕಪ್ಪು ಬಣ್ಣಗಳಲ್ಲಿ ಈ ಮೊಬೈಲ್ ಲಭ್ಯವಿದೆ.
ಬೆಲೆ: 5,999

First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ