ನೋಕಿಯಾ 8.1 ಸ್ಮಾರ್ಟ್​ಫೋನ್​​ ಮಾರುಕಟ್ಟೆಗೆ; ಬುಕ್ಕಿಂಗ್​ ಪಕ್ರೀಯೆ ಪ್ರಾರಂಭ

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ನೋಕಿಯಾ 8.1 ಸ್ಮಾರ್ಟ್​ಫೋನ್​ ಪ್ರಿ ಬುಕ್ಕಿಂಗ್​​ ಪಕ್ರೀಯೆ ಇಂದಿನಿಂದ ಆರಂಭವಾಗಿದೆ.

Harshith AS | news18
Updated:February 1, 2019, 5:51 PM IST
ನೋಕಿಯಾ 8.1 ಸ್ಮಾರ್ಟ್​ಫೋನ್​​ ಮಾರುಕಟ್ಟೆಗೆ; ಬುಕ್ಕಿಂಗ್​ ಪಕ್ರೀಯೆ ಪ್ರಾರಂಭ
ನೋಕಿಯಾ 8.1 ಸ್ಮಾರ್ಟ್​ಫೋನ್​
Harshith AS | news18
Updated: February 1, 2019, 5:51 PM IST
ಗ್ರಾಹಕರಿಗೆ ಹೊಸ ಸುದ್ದಿಯನ್ನು ಹೊತ್ತುತಂದ ನೋಕಿಯಾ 8.1 ಮೊಬೈಲ್​ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಬಾರಿ ನೋಕಿಯಾ ಗ್ರಾಹಕರಿಗಾಗಿ ಹೊಸ ಫೀಚರ್​ ಹೊತ್ತುತಂದಿದ್ದು ಗ್ರಾಹಕರು ಖರೀದಿಸಲು ಕಾತುರದಿಂದ ಕಾಯುತ್ತಿದ್ದಾರೆ.

ನೋಕಿಯಾ 8.1 ಸ್ಮಾರ್ಟ್​ಪೋನ್ 6 GB RAM ಮತ್ತು 128 ROM ಸಾಮರ್ಥ ಒಳಗೊಂಡಿದೆ.  ಸೋನಿ IMX363 ಸೆನ್ಸಾರ್​ ಕ್ಯಾಮೆರಾ ಅಳಡಿಸಿರುವ ನೋಕಿಯಾ 8.1 ಸ್ಮಾರ್ಟ್​ ಫೋನ್​ ಸೆಲ್ಪಿ ಕ್ಯಾಮೆರಾವನ್ನು 20 ಮೆಗಾ ಫಿಕ್ಸೆಲ್​ಗೆ ವೃದ್ಧಿಸಿದೆ.

ಇದನ್ನೂ ಓದಿ: ಪ್ರೇಮಿಗಳ ದಿನವನ್ನು ಟ್ಯಾಟೊ ಹಾಕಿಸಿ ಆಚರಿಸಿಕೊಂಡರೆ ಹೇಗಿರುತ್ತೆ..?

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ನೋಕಿಯಾ 8.1 ಸ್ಮಾರ್ಟ್​ಫೋನ್​ ಪ್ರಿ ಬುಕ್ಕಿಂಗ್​​ ಪಕ್ರೀಯೆ ಇಂದಿನಿಂದ ಆರಂಭವಾಗಿದ್ದು, ಇದರ ​ ಫೀಚರ್​ ಹೇಗಿದೆ ಎಂದು ತಿಳಿಯೋಣ.

ಡಿಸ್​ಪ್ಲೇ

ನೋಕಿಯಾ 8.1 ಸ್ಮಾರ್ಟ್​ಫೋನ್​ ಫುಲ್​ ಹೆಚ್​ಡಿ ಡಿಸ್​ಪ್ಲೇ ಹೊಂದಿದ್ದು 2246 x 1080 ಪಿಕ್ಸೆಲ್​ ರೆಸಲ್ಯೂಷನ್​ ಸಾಮರ್ಥ ಒಳಗೊಂಡಿದೆ.

ಪ್ರೊಸೆಸರ್​
Loading...

ನೋಕಿಯಾ 8.1 ಸ್ಮಾರ್ಟ್​ಪೋನ್​​ನಲ್ಲಿ ಸ್ನಾಪ್​ ಡ್ರಾಗನ್​ 710,  ಓಕ್ಟಾಕೋರ್​ ಪ್ರೊಸೆಸರ್​ ಅಳವಡಿಸಲಾಗಿದೆ. ಇಂಟರ್​ನಲ್​ ಮೆಮೊರಿ ಸ್ಟೋರೆಜ್​ ಅನ್ನು 64 GBವರೆಗೆ ವೃದ್ಧಿಸಿದೆ. ಇನ್ನೂ  SD ಕಾರ್ಡು ಆಯ್ಕೆಯನ್ನು 400GB ತನಕ ವೃದ್ಧಿಸಬಹುದಾಗಿದೆ.

ಕ್ಯಾಮೆರಾ

ಮೊಬೈಲ್​ ಡುಯೆಲ್​ ಕ್ಯಾಮೆರಾವನ್ನು ಹೊಂದಿದ್ದು12 ಮೆಗಾ ಫಿಕ್ಸೆಲ್​  1/2 .55 ಸೋನಿ IMX363 ಸೆನ್ಸಾರ್​ ಮತ್ತು f/1.8 ಅಪರ್ಚರ್​ ಹೊಂದಿದೆ. ಮತ್ತೊಂದು ಕ್ಯಾಮೆರಾ 13 ಮೆಗಾಫಿಕ್ಸೆಲ್​ ಸಾಮರ್ಥವನ್ನು ಒಳಗೊಂಡಿದೆ.

ವಿಶೇಷವಾಗಿ ಸೆಲ್ಪಿ ಪ್ರೀಯರಿಗಾಗಿ 20 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಿದ್ದು, ಮೊಬೈಲ್​ನಲ್ಲಿ ಡುವೆಲ್​ ಹೈ ಕ್ರೈ ಫ್ಲಾಶ್​ ನೀಡಲಾಗಿದೆ.

ಬ್ಯಾಟರಿ

ಗ್ರಾಹಕರಿಗೆ ಧೀರ್ಘ ಕಾಲದ ವರೆಗೆ ಬಳಸಲು ಉಪಯುಕ್ತವಾಗುವಂತೆ 3500mAh ಬ್ಯಾಟರಿಯನ್ನು ನೀಡಲಾಗಿದೆ. ನಿರಂತರವಾಗಿ ಒಂದು ದಿನದ ಕಾಲ ಬಾಳ್ವಿಕೆ ಬರುವ ಸಾಮರ್ಥ ಹೊಂದಿದೆ. ಇದರೊಂದಿಗೆ ವೇಗದ ಚಾರ್ಜರ್​ ನೀಡಲಾಗಿದ್ದು, ಬೇಗನೆ ಜಾರ್ಜ್​ ಮಾಡಿಕೊಳ್ಳ ಬಹುದು.

ಬೆಲೆ..?

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ನೋಕಿಯಾ 8.1 ಸ್ಮಾರ್ಟ್​ಪೋನ್​​ ತನ್ನ ಬೆಲೆಯನ್ನು 4GB RAM ಅನುಸಾರವಾಗಿ 26,999 ರೂ ಗೆ ವೃದ್ಧಿಸಿದೆ.  6GB RAM ಮೊಬೈಲ್​ಗೆ  29,999 ರೂ ಎಂದು ನಿಗದಿಪಡಿಸಿದೆ. ಈಗಾಗಲೆ ಮಾರುಕಟ್ಟೆಯಲ್ಲಿ ಬುಕ್ಕಿಂಗ್​ ಪಕ್ರೀಯೆ ಆರಂಭಗೊಂಡಿದೆ.

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ