ನೋಕಿಯಾ 7.1 ಸ್ಮಾರ್ಟ್​ಫೋನ್​: ಉತ್ತಮ ಆಫರ್​ನೊಂದಿಗೆ ಮಾರಾಟ ಆರಂಭ

ಭಾರತದಲ್ಲಿ 19,999 ರೂ. ಮುಖ ಬೆಲೆಯಲ್ಲಿ ಮಾರಾಟಕ್ಕಿರುವ ಈ ಮೊಬೈಲ್​ನಲ್ಲಿ Pure ಡಿಸ್​ಪ್ಲೇಯೊಂದಿಗೆ HDR10 ಸಪೋರ್ಟ್​ ನೀಡಲಾಗಿದೆ.

zahir | news18
Updated:December 7, 2018, 6:13 PM IST
ನೋಕಿಯಾ 7.1 ಸ್ಮಾರ್ಟ್​ಫೋನ್​: ಉತ್ತಮ ಆಫರ್​ನೊಂದಿಗೆ ಮಾರಾಟ ಆರಂಭ
nokia 7.1
zahir | news18
Updated: December 7, 2018, 6:13 PM IST
ಜನಪ್ರಿಯ ನೋಕಿಯಾ ಸ್ಮಾರ್ಟ್‌ಫೋನ್ ಹಕ್ಕನ್ನು ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಸಂಸ್ಥೆಯು, ಅತಿ ನೂತನ ನೋಕಿಯಾ 7.1 ಸ್ಮಾರ್ಟ್‌ಫೋನ್​ನ ಮಾರಾಟ ಆರಂಭಿಸಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಈ ಹೊಸ ಸ್ಮಾರ್ಟ್​ಫೋನ್ ಮಿಡ್​ನೈಟ್ ಬ್ಲೂ ಮತ್ತು ಗ್ಲಾಸ್ ಸ್ಟೀಲ್ ಬಣ್ಣಗಳಲ್ಲಿ ಲಭ್ಯವಿದೆ.

ಭಾರತದಲ್ಲಿ 19,999 ರೂ. ಮುಖ ಬೆಲೆಯಲ್ಲಿ ಮಾರಾಟಕ್ಕಿರುವ ಈ ಮೊಬೈಲ್​ನಲ್ಲಿ Pure ಡಿಸ್​ಪ್ಲೇಯೊಂದಿಗೆ HDR10 ಸಪೋರ್ಟ್​ ನೀಡಲಾಗಿದೆ. ಇದರೊಂದಿಗೆ ಡ್ಯುಯೆಲ್ ರಿಯರ್ ಕ್ಯಾಮೆರಾ ಹಾಗೂ ಫಾಸ್ಟ್​ ಚಾರ್ಜಿಂಗ್ ತಂತ್ರಜ್ಞಾನವನ್ನು ಈ ಮೊಬೈಲ್​ನಲ್ಲಿ ಅಳವಡಿಸಲಾಗಿದೆ.

ಹೊಸ ಮೊಬೈಲ್ ಹೊಸ ಆಫರ್
ನೋಕಿಯಾದ ನೂತನ ಸ್ಮಾರ್ಟ್​ಫೋನ್​ ಡಿಸೆಂಬರ್ 7 ರಿಂದ ದೇಶಾದ್ಯಂತ ರಿಟೇಲ್ ಸ್ಟೋರ್ ಮತ್ತು Nokia.com ನಲ್ಲಿ ಖರೀದಿಸಬಹುದು. ಮೊದಲ ಹಂತದ ಖರೀದಿ ಮೇಲೆ ನೋಕಿಯಾ ಭರ್ಜರಿ ಆಫರ್ ನೀಡಿದ್ದು, ಪ್ರೀಪೇಯ್ಡ್ ಬಳಕೆದಾರರಿಗೆ ಕಂಪೆನಿಯು 199 ರ ಪ್ಲಾನ್​ ನೀಡಿದ್ದು, ಇದರಲ್ಲಿ 1TB ಡೇಟಾ ನೀಡಲಾಗುತ್ತದೆ. ಹಾಗೆಯೇ ಪೋಸ್ಟ್​ಪೇಯ್ಡ್​ ಗ್ರಾಹಕರಿಗೆ 499 ಪ್ಲಾನ್​ನೊಂದಿಗೆ 120GB ಹೆಚ್ಚುವರಿ ಡೇಟಾ ಹಾಗೂ 3 ತಿಂಗಳವರೆಗಿನ ಉಚಿತ ನೆಟ್​ಫ್ಲಿಕ್ಸ್​ ಚಂದಾದಾರಿಕೆಯನ್ನು ಒದಗಿಸಲಿದೆ.

ಇದನ್ನೂ ಓದಿ: ಇದು ವಜ್ರದ ವಿಮಾನ; ಆದರೆ ಅಸಲಿ ವಿಷಯ ಗೊತ್ತಾದರೆ ಅಚ್ಚರಿ ಪಡುತ್ತೀರಿ..!

Nokia 7.1 ಮುಖ್ಯ ಫೀಚರ್‌ಗಳು:
ಡಿಸ್​​ಪ್ಲೇ- 5.84 ಇಂಚಿನ ಫುಲ್ HD+ ಡಿಸ್​ಪ್ಲೇ ಹಾಗೂ ಗೊರಿಲ್ಲಾ-3 ಗ್ಲಾಸ್
Loading...

ಪ್ರೊಸೆಸರ್- ಸ್ನಾಪ್​ಡ್ರಾಗನ್ 636 ಪ್ರೊಸೆಸರ್
ಕ್ಯಾಮೆರಾ- ಡ್ಯುಯಲ್ ರಿಯರ್ ಕ್ಯಾಮೆರಾ (12+5MP) ಹಾಗೂ ಫ್ರಂಟ್ ಕ್ಯಾಮೆರಾ 8MP ಕ್ಯಾಮೆರಾ
ಸ್ಟೋರೆಜ್- 4GB RAM, 64GB ಇಂಟರ್ನಲ್ ಸ್ಟೋರೆಜ್
ಬ್ಯಾಟರಿ- 3060 ಎಂಎಎಚ್ ಬ್ಯಾಟರಿ,
ಚಾರ್ಜರ್- 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ

ಇದನ್ನೂ ಓದಿ: SBI ಗ್ರಾಹಕರಿಗೆ ಸಿಹಿ ಸುದ್ದಿ: ಈ ಆ್ಯಪ್ ಬಳಸಿದರೆ 5 ಲೀಟರ್ ಪೆಟ್ರೋಲ್ ಉಚಿತ

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...