ನೊಕಿಯಾ 5233 ಫೋನ್ ಸ್ಫೋಟಕ್ಕೆ ಒಬ್ಬ ಬಾಲಕಿ ಬಲಿ; ಸ್ಫೋಟಕ್ಕೆ ಕಾರಣ ಏನು?


Updated:March 20, 2018, 1:40 PM IST
ನೊಕಿಯಾ 5233 ಫೋನ್ ಸ್ಫೋಟಕ್ಕೆ ಒಬ್ಬ ಬಾಲಕಿ ಬಲಿ; ಸ್ಫೋಟಕ್ಕೆ ಕಾರಣ ಏನು?

Updated: March 20, 2018, 1:40 PM IST
- ನ್ಯೂಸ್18 ಕನ್ನಡ

ಭುವನೇಶ್ವರ್(ಮಾ. 20): ಫೋನು ಸ್ಫೋಟಗೊಳ್ಳುವ ಹಲವು ಪ್ರಕರಣಗಳಿಗೆ ಈಗ ಹೊಸ ಸೇರ್ಪಡೆಯಾಗಿದೆ. ಹಳೆಯ ನೊಕಿಯಾ ಫೋನೊಂದು ಸ್ಫೋಟಗೊಂಡು ಒಬ್ಬ ವ್ಯಕ್ತಿಯನ್ನು ಬಲಿಪಡೆದಿರುವ ದಾರುಣ ಘಟನೆ ಒಡಿಶಾ ರಾಜ್ಯದಲ್ಲಿ ಖೇರಿಯಾಕನಿ ಜಿಲ್ಲೆಯಲ್ಲಿ ಸಂಭವಿಸಿದೆ. ನೊಕಿಯಾ 5233 ಮಾಡೆಲ್​ನ ಫೋನು ಸ್ಫೋಟಗೊಂಡು 17 ವರ್ಷದ ಉಮಾ ಉರಮ್ ಎಂಬಾಕೆ ಸಾವನ್ನಪ್ಪಿದ್ದಾಳೆ. ಫೋನನ್ನು ಚಾರ್ಜ್​ಗೆ ಇಟ್ಟು ಬಾಲಕಿ ಮಾತನಾಡುವಾಗ ಈ ದುರ್ಘಟನೆ ಸಂಭವಿಸಿದೆ. ಸ್ಫೋಟದಿಂದ ಆಕೆಯ ಕೈ, ಕಾಲು ಮತ್ತು ಎದೆಗೆ ಗಾಯಗಳಾಗಿದ್ದು, ಆಕೆ ಪ್ರಜ್ಱಎತಪ್ಪಿದ್ದಾಳೆ. ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದರೂ ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಇದೇ ವೇಳೆ, ನೊಕಿಯಾ ಫೋನುಗಳ ಹೊಸ ಮಾಲೀಕ ಎಚ್​ಎಂಡಿ ಗ್ಲೋಬಲ್ ಸಂಸ್ಥೆಯು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸ್ಫೋಟಗೊಂಡಿರುವ ಈ ಫೋನು ತಮ್ಮಿಂದ ತಯಾರಾಗಿದ್ದಲ್ಲ ಎಂದು ಸ್ಪಷ್ಟಪಡಿಸಿದೆ. 2017ರಲ್ಲಿ ಸ್ಥಾಪನೆಯಾದ ಎಚ್​ಎಂಡಿ ಗ್ಲೋಬಲ್ ಸಂಸ್ಥೆಯು ನೊಕಿಯಾದ ಈಗಿನ ಹೊಸ ಫೋನುಗಳನ್ನಷ್ಟೇ ತಯಾರಿಸುತ್ತಿದೆ. ದುರಂತಕ್ಕೀಡಾದ ನೊಕಿಯಾ 5233 ಫೋನು ಹಳೆಯ ಸಂಸ್ಥೆಗೆ ಸೇರಿದ್ದಾಗಿದೆ ಎನ್ನಲಾಗಿದೆ.

ಆದರೆ, ನೊಕಿಯಾ 5233 ಫೋನು ಈಗಲೂ ಕೂಡ ಮಾರುಕಟ್ಟೆಯಲ್ಲಿ ನೊಕಿಯಾ ಬ್ರ್ಯಾಂಡ್ ಅಡಿಯಲ್ಲೇ ಮಾರಾಟವಾಗುತ್ತಿರುವುದು ಗಮನಾರ್ಹ. ವಾರಂಟಿ, ಕಸ್ಟಮರ್ ಸಪೋರ್ಟ್ ಇಲ್ಲದೆಯೇ ಅಮೇಜಾನ್, ಫ್ಲಿಪ್​ಕಾರ್ಟ್​ಗಳಲ್ಲಿ ಈ ಫೋನು ಮಾರಾಟವಾಗುತ್ತಿವೆಯಾ? ಈ ಫೋನ್​ನ ಕಸ್ಟಮರ್ ಸಪೋರ್ಟ್ ಯಾರು ಮಾಡುತ್ತಾರೆ? ಎಂಬುದು ಈಗಿನ ಪ್ರಶ್ನೆ.
First published:March 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ