Nokia Smart TV: ಹೊಸ ಸ್ಮಾರ್ಟ್​ಟಿವಿ ಪರಿಚಯಿಸಲಿರುವ ನೋಕಿಯಾ!

Nokia Smart TV: ನೋಕಿಯಾ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ನೂತನ ಸ್ಮಾರ್ಟ್​ಟಿವಿ 43 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಕ್ವಾಡ್​ ಕೋರ್​ ಪ್ರೊಸೆಸರ್​ ಅಳವಡಿಸಲಾಗಿದೆ. ಇದರ ಜೊತೆಗೆ mali- 450 MP GPU, 2.25GB RAM​ ಮತ್ತು 16GB ಸ್ಟೊರೇಜ್​​ ನೀಡಿದೆ.

news18
Updated:May 29, 2020, 4:54 PM IST
Nokia Smart TV: ಹೊಸ ಸ್ಮಾರ್ಟ್​ಟಿವಿ ಪರಿಚಯಿಸಲಿರುವ ನೋಕಿಯಾ!
ನೋಕಿಯಾ ಸ್ಮಾರ್ಟ್​ಟಿವಿ
  • News18
  • Last Updated: May 29, 2020, 4:54 PM IST
  • Share this:
ಬೇಸಿಕ್​ ಮತ್ತು ಫೀಚರ್​ ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದ ನೋಕಿಯಾ ಕಂಪನಿ ಸ್ಮಾರ್ಟ್​ಟಿವಿಯನ್ನು ಪರಿಚಯಿಸಿತ್ತು. ಇದೀಗ ಮತ್ತೊಂದು ಹೊಸ ಸ್ಮಾರ್ಟ್​ಟಿವಿಯನ್ನು ಗ್ರಾಹಕರಿಗೆ ಪರಿಚಯಿಸಲು ಮುಂದಾಗಿದೆ. ಜೂನ್​ ​4 ರಂದು ನೂತನ ಸ್ಮಾರ್ಟ್​ಟಿವಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ನೋಕಿಯಾ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ನೂತನ ಸ್ಮಾರ್ಟ್​ಟಿವಿ 43 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಕ್ವಾಡ್​ ಕೋರ್​ ಪ್ರೊಸೆಸರ್​ ಅಳವಡಿಸಲಾಗಿದೆ. ಇದರ ಜೊತೆಗೆ mali- 450 MP GPU, 2.25GB RAM​ ಮತ್ತು 16GB ಸ್ಟೊರೇಜ್​​ ನೀಡಿದೆ.

ನೋಕಿಯಾ ಸಂಸ್ಥೆ ಕಳೆದ ವರ್ಷ 55 ಇಂಚಿನ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಟಿವಿಯನ್ನು ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಮಾಡಿತ್ತು. ಆದರೀಗ 43 ಇಂಚಿನ ಸ್ಮಾರ್ಟ್​ಟಿವಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ. ನೂತನ ಟಿವಿ ಕೆಲವು ಫೀಚರ್​ ಗ್ರಾಹಕರ ಕೂತೂಹಲ ಹೆಚ್ಚಿಸಿದೆ.

ಇನ್ನು ನೋಕಿಯಾ ಬಿಡುಗಡೆ ಮಾಡುತ್ತಿರುವ ಹೊಸ ಸ್ಮಾರ್ಟ್​ಟಿವಿಯ ಬೆಲೆ 34,000 ರೂ ಇರಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ 55 ಇಂಚಿನ ಸ್ಮಾರ್ಟ್​ಟಿವಿಯಲ್ಲಿ ಅಳವಡಿಸಿದ್ದ ಕೆಲವು ವಿಶೇಷತೆಗಳು ನೂತನ ಟಿವಿಯಲ್ಲೂ ಅಳವಡಿಸಲಾಗಿದೆ.

TikToK: ಟಿಕ್​​ಟಾಕ್​ ರೇಟಿಂಗ್ ಏರಿಕೆ; 80 ಲಕ್ಷ ನೆಗೆಟಿವ್ ರಿವೀವ್ ಡಿಲೀಟ್ ಮಾಡಿದ ಗೂಗಲ್!
First published: May 29, 2020, 4:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading