Nokia 3.4: ತ್ರಿವಳಿ ಕ್ಯಾಮೆರಾ ಹೊಂದಿರುವ ನೋಕಿಯಾ 3.4 ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ; ಬೆಲೆ?

Nokia 3 4

Nokia 3 4

ತ್ರಿವಳಿ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾಟ್​ಫೋನಿನಲ್ಲಿ 13 ಮೆಗಾಫಿಕ್ಸೆಲ್​​ ಪ್ರೈಮರಿ ಸೆನ್ಸಾರ್​​, 5 ಮೆಗಾಫಿಕ್ಸೆಲ್​​ ಅಲ್ಟ್ರಾ ವೈಡ್​ ಆ್ಯಂಗಲ್​​ ಶೂಟರ್​, 2 ಮೆಗಾಫಿಕ್ಸೆಲ್​​​ ಡೆಪ್ತ್​​ ಸೆನ್ಸಾರ್​​, ಜೊತೆಗೆ ಎಲ್​ಇಡಿ ಫ್ಲಾಶ್​ ನೀಡಲಾಗಿದೆ

  • Share this:

ನೋಕಿಯಾ ಸ್ಮಾರ್ಟ್​ಫೋನ್​ ಸಂಸ್ಥೆ ನೂತನ ನೋಕಿಯಾ 3.4 ಮತ್ತು ನೋಕಿಯಾ 2.4 ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ.  ಇವರೆಡು ಫೋನ್​ ಹೆಚ್​ಡಿ + ಡಿಸ್​ಪ್ಲೇ ಹೊಂದಿದ್ದು, ಗ್ರಾಹಕರನ್ನು ಅಕರ್ಷಿಸುವ ಹಲವಾರು ಫೀಚರ್​ಗಳನ್ನು ಒಳಗೊಂಡಿದೆ ಈ ಬಗ್ಗೆ ಮಾಹಿತಿ ಇಲ್ಲಿದೆ…


ನೋಕಿಯಾ 3.4 ವಿಶೇಷತೆ:


ನೋಕಿಯಾ 3.4 ಸ್ಮಾರ್ಟ್​ಫೋನ್​ 6.39 ಇಂಚಿನ ಡಿಸ್​ಪ್ಲೇ ಹೊಂದಿದೆ. ಒಕ್ಟಾಕೋರ್​​ ಕ್ವಾಲ್​​ಕ್ಯಾಮ್​ ಸ್ನಾಪ್​ಡ್ರಾಗನ್​​ 4560 ಎಸ್​ಒಸಿ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್​ಫೋನ್​ ಆ್ಯಂಡ್ರಾಯ್ಡ್​  10 ಬೆಂಬಲವನ್ನು ಪಡೆದಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ 3GB, 4GB RAM ಮತ್ತು 32GB, 64GB ಸ್ಟೊರೇಜ್​​ ಆಯ್ಕೆಯಲ್ಲಿ ಸಿಗಲಿದೆ.


ಕ್ಯಾಮೆರಾ: ತ್ರಿವಳಿ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾಟ್​ಫೋನಿನಲ್ಲಿ 13 ಮೆಗಾಫಿಕ್ಸೆಲ್​​ ಪ್ರೈಮರಿ ಸೆನ್ಸಾರ್​​, 5 ಮೆಗಾಫಿಕ್ಸೆಲ್​​ ಅಲ್ಟ್ರಾ ವೈಡ್​ ಆ್ಯಂಗಲ್​​ ಶೂಟರ್​, 2 ಮೆಗಾಫಿಕ್ಸೆಲ್​​​ ಡೆಪ್ತ್​​ ಸೆನ್ಸಾರ್​​, ಜೊತೆಗೆ ಎಲ್​ಇಡಿ ಫ್ಲಾಶ್​ ನೀಡಲಾಗಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.


ಇತರೆ ಫೀಚರ್ಸ್​: 4ಜಿ ಲೈಟ್​ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್​ಫೋನ್​ ವೈ-ಫೈ 802.11, ಬ್ಲೂಟೂತ್​ ವಿ4.2, ಜಿಪಿಎಸ್​/ಎ-ಜಿಪಿಎಸ್​, ಯುಎಸ್​ಬಿ ಟೈಪ್​-ಸಿ, ಎಫ್​ಎಮ್​ ರೇಡಿಯೋ ನೀಡಲಾಗಿದೆ. ದೀರ್ಘಕಾಲದ ಬಾಳಿಕೆಗಾಗಿ 4 ಸಾವಿರ mAh​ ಬ್ಯಾಟರಿ ಅಳವಡಿಸಲಾಗಿದೆ. ‘


ಬೆಲೆ: ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ 13,700 ರೂಗೆ ಸಿಗುತ್ತಿದೆ.


Nokia 3 4 With Triple Rear Cameras Launched Nokia 2 4 Debuts As Well Price Specifications
Nokia 3 4


ನೋಕಿಯಾ 2.4 ವಿಶೇಷತೆ:


ನೋಕಿಯಾ 2.4 ಸ್ಮಾರ್ಟ್​ಫೋನ್​ 6.5 ಇಂಚಿನ ಡಿಸ್​ಪ್ಲೇ ಹೊಂದಿದೆ. ಒಕ್ಟಾಕೋರ್​​ ಮೀಡಿಯಾಟೆಕ್ ಹೆಲಿಯೋ ಪಿ22 ಎಸ್​ಒಸಿ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್​ಫೋನ್​ ಆ್ಯಂಡ್ರಾಯ್ಡ್ರ್ 10 ಬೆಂಬಲವನ್ನು ಪಡೆದಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ 3GB, 4GB RAM ಮತ್ತು 32GB, 64GB ಸ್ಟೊರೇಜ್​​ ಆಯ್ಕೆಯಲ್ಲಿ ಸಿಗಲಿದೆ.


ಕ್ಯಾಮೆರಾ:  ಈ ಸ್ಮಾಟ್​ಫೋನಿನಲ್ಲಿ 13 ಮೆಗಾಫಿಕ್ಸೆಲ್​​ ಪ್ರೈಮರಿ ಸೆನ್ಸಾರ್​​, 2 ಮೆಗಾಫಿಕ್ಸೆಲ್​​​ ಡೆಪ್ತ್​​ ಸೆನ್ಸಾರ್​​​ ನೀಡಲಾಗಿದೆ. ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.


ಇತರೆ ಫೀಚರ್ಸ್​: 4ಜಿ ಲೈಟ್​ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್​ಫೋನ್​ ವೈ-ಫೈ 802.11, ಬ್ಲೂಟೂತ್​ ವಿ5.0, ಜಿಪಿಎಸ್​/ಎ-ಜಿಪಿಎಸ್​, ಯುಎಸ್​ಬಿ ಟೈಪ್​-ಸಿ, ಎಫ್​ಎಮ್​ ರೇಡಿಯೋ ನೀಡಲಾಗಿದೆ. ದೀರ್ಘಕಾಲದ ಬಾಳಿಕೆಗಾಗಿ 4,500mAh​ ಬ್ಯಾಟರಿ ಅಳವಡಿಸಲಾಗಿದೆ. ‘


ಬೆಲೆ: ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ 10,300 ರೂ.ಗೆ ಸಿಗುತ್ತಿದೆ.

top videos
    First published: