• Home
 • »
 • News
 • »
 • tech
 • »
 • Nokia 2780 Flip: ಮಾರುಕಟ್ಟೆಗೆ ಲಗ್ಗೆಯಿಟ್ಟ ನೋಕಿಯಾ 2780 ಫ್ಲಿಪ್ ಫೀಚರ್ ಫೋನ್: ಬೆಲೆ, ಫೀಚರ್ ಮಾಹಿತಿ ಇಲ್ಲಿದೆ

Nokia 2780 Flip: ಮಾರುಕಟ್ಟೆಗೆ ಲಗ್ಗೆಯಿಟ್ಟ ನೋಕಿಯಾ 2780 ಫ್ಲಿಪ್ ಫೀಚರ್ ಫೋನ್: ಬೆಲೆ, ಫೀಚರ್ ಮಾಹಿತಿ ಇಲ್ಲಿದೆ

Nokia 2780 Flip

Nokia 2780 Flip

ನೋಕಿಯಾ 2780 ಫ್ಲಿಪ್ ಈಗಾಗಲೇ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ನೋಕಿಯಾ 2760 ಫ್ಲಿಪ್ ನ ನಂತರದಲ್ಲಿ ಬಂದಿರುವ ಹೊಸ ಮಾದರಿಯ ಫೋನ್ ಅಂತ ಹೇಳಿದರೆ ತಪ್ಪಾಗುವುದಿಲ್ಲ.

 • Share this:

  ನೀವು ನೋಕಿಯಾ (Nokia) ಕಂಪನಿಯ ಮೊಬೈಲ್ ಫೋನ್ ಗಳನ್ನು ಇಷ್ಟಪಡುತ್ತಿದ್ದರೆ, ನಿಮಗಾಗಿ ಸಿಹಿ ಸುದ್ದಿ ಇಲ್ಲಿದೆ. ಎಚ್ಎಂಡಿ ಗ್ಲೋಬಲ್ ಮಾಲೀಕತ್ವದ ನೋಕಿಯಾ ಕಂಪನಿ ಇದೀಗ ತನ್ನ ಹೊಸ ಫ್ಲಿಪ್ ಫೋನ್ ಅನ್ನು ಯುಎಸ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಇತ್ತೀಚಿನ ಮಾದರಿಯ ಫ್ಲಿಪ್ ಫೋನ್ (Nokia 2780 Flip) ಹಲವಾರು ಬದಲಾವಣೆಗಳನ್ನು ಹೊಂದಿದೆ. ಅದು ಖರೀದಿದಾರರಿಗೆ ಹೆಚ್ಚು ಆಕರ್ಷಕವಾಗಿ ಕಾಣಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.


  ನೋಕಿಯಾ 2780 ಫ್ಲಿಪ್ ಈಗಾಗಲೇ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ನೋಕಿಯಾ 2760 ಫ್ಲಿಪ್ ನ ನಂತರದಲ್ಲಿ ಬಂದಿರುವ ಹೊಸ ಮಾದರಿಯ ಫೋನ್ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಹೊಸ ಆವೃತ್ತಿಗೆ ಸಂಬಂಧಿಸಿದಂತೆ, ಇದು ಕೈಒಎಸ್ ಪ್ಲಾಟ್‌ಫಾರ್ಮ್ ನಲ್ಲಿ ಚಲಿಸುತ್ತದೆ, ಅಂದರೆ ನೀವು ವಾಟ್ಸಾಪ್ ಅನ್ನು ಇದರಲ್ಲಿ ಬಳಸಬಹುದು ಅಂತ ಅರ್ಥ.


  ಇದನ್ನೂ ಓದಿ: ಭಾರತದಲ್ಲಿ ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೇಗಿದೆ?


  ನೋಕಿಯಾ 2780 ಫ್ಲಿಪ್ ಫೋನ್ ನ ವಿಶೇಷತೆ ಮತ್ತು ಬೆಲೆ ಏನು?


  ಈ ಹೊಸ ಕ್ಲಾಮ್ಶೆಲ್ ವಿನ್ಯಾಸದ ಫ್ಲಿಪ್ ಫೀಚರ್ ಫೋನ್ ಅನ್ನು ಯುಎಸ್ ನಲ್ಲಿ ಹೊಸ ನೋಕಿಯಾ 2780 ಫ್ಲಿಪ್ ಎಂದು ಕರೆಯಲಾಗುತ್ತದೆ. ಡ್ಯುಯಲ್ ಡಿಸ್ ಪ್ಲೇ ಗಳು, ಎಫ್ಎಂ ರೇಡಿಯೋ, ಎಂಪಿ 3 ಬೆಂಬಲ ಮತ್ತು ವೈ-ಫೈ ಬೆಂಬಲವನ್ನು ಫೋನ್ ನ ವೈಶಿಷ್ಟ್ಯಗಳು ಒಳಗೊಂಡಿವೆ. ಫೋನ್ ವೋಲ್ಟ್ ಮತ್ತು ರಿಯಲ್ ಟೈಮ್ ಟೆಕ್ಸ್ಟ್ (ಆರ್‌ಟಿಟಿ) ಅನ್ನು ಸಹ ಬೆಂಬಲಿಸುತ್ತದೆ, ಇದು ಫೋನ್ ಕರೆ ಸಮಯದಲ್ಲಿ ಸಂವಹನ ನಡೆಸಲು ಪಠ್ಯವನ್ನು ಬಳಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.


  ಸ್ಥಿರವಾದ ಫೋಕಸ್ ಮತ್ತು ಎಲ್ಇಡಿ ಫ್ಲ್ಯಾಶ್


  ನೋಕಿಯಾದ ಹೊಸ ಕೊಡುಗೆಯು ಡ್ಯುಯಲ್ ಡಿಸ್ ಪ್ಲೇ ಯೊಂದಿಗೆ ಬರುತ್ತದೆ, ಆದರೆ ಟಚ್ ಸ್ಕ್ರೀನ್ ನ ಆಯ್ಕೆಯನ್ನು ಈ ಫೋನ್ ಬೆಂಬಲಿಸುವುದಿಲ್ಲ. ಇದು ಟಿ9 ಕೀಬೋರ್ಡ್ ಅನ್ನು ಸಹ ನೀಡುತ್ತದೆ ಮತ್ತು ಪ್ರಸ್ತುತ ಯುಎಸ್ ಬಳಕೆದಾರರಿಗೆ ಇದು 89.99 ಡಾಲರ್ ಎಂದರೆ ಭಾರತದ ಮೌಲ್ಯದಲ್ಲಿ ಸುಮಾರು 7,400 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಸಾಧನವು ಭಾರತಕ್ಕೆ ಯಾವಾಗ ಬರಲಿದೆ ಅಂತ ಯಾವುದೇ ಮಾಹಿತಿ ಬಂದಿಲ್ಲ. ಇದರ ಒಳಭಾಗದಲ್ಲಿ 2.7 ಇಂಚಿನ ಟಿಎಫ್‌ಟಿ ಡಿಸ್ ಪ್ಲೇ ಇದ್ದು, 1.7 ಇಂಚಿನ ಹೊರಭಾಗದಲ್ಲಿ ಎರಡನೇ ಸ್ಕ್ರೀನ್ ಸಹ ಇದೆ. ಸ್ಥಿರವಾದ ಫೋಕಸ್ ಮತ್ತು ಎಲ್ಇಡಿ ಫ್ಲ್ಯಾಶ್ ನೊಂದಿಗೆ 5 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಸಹ ಇದು ಹೊಂದಿದೆ.


  ಕೆಂಪು ಮತ್ತು ನೀಲಿ ಬಣ್ಣದ ಫೋನ್


  ನೋಕಿಯಾ 2780 ಫ್ಲಿಪ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 215 ನಿಂದ ಚಾಲಿತವಾಗಿದೆ, ಇದು ಸ್ನ್ಯಾಪ್ ಡ್ರಾಗನ್ 205 ನಿಂದ ಅಪ್ಗ್ರೇಡ್ ಆಗಿದೆ. ಕಂಪನಿಯ ವೆಬ್ಸೈಟ್ ನಲ್ಲಿ ಫೋನ್ ಅನ್ನು 4 ಜಿಬಿ ರ್ಯಾಮ್ ಮತ್ತು 512 ಎಂಬಿ ಆಂತರಿಕ ಸ್ಟೋರೇಜ್ ನೊಂದಿಗೆ ಜೋಡಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದು 1450 ಎಂಎಎಚ್ ತೆಗೆದು ಹಾಕಬಹುದಾದ ಬ್ಯಾಟರಿಯನ್ನು ಸಹ ಹೊಂದಿದೆ. ಈ ಫೋನ್ ರಿಯಲ್ ಟೈಮ್ ಟೆಕ್ಸ್ಟ್, ಬ್ಲೂಟೂತ್ 4.2 ಮತ್ತು ಎಲ್‌ಟಿಇ ಕನೆಕ್ಟಿವಿಟಿಯನ್ನು ಬೆಂಬಲಿಸುತ್ತದೆ. ನೋಕಿಯಾ 2780 ಫ್ಲಿಪ್ ಕೆಂಪು ಮತ್ತು ನೀಲಿ ಎರಡು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ.


  ಇದನ್ನೂ ಓದಿ: ಐಫೋನ್ ಹರಾಜಿನ ಕಥೆ ಕೇಳಿದ್ರೆ ಗಾಬರಿ ಆಗ್ತಿರಾ!


  ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ಬಿಡುಗಡೆಯಾದ ನೋಕಿಯಾ 2660 ಫ್ಲಿಪ್ ಹೇಗಿತ್ತು?


  ಸೆಪ್ಟೆಂಬರ್ ನಲ್ಲಿ ನೋಕಿಯಾ ಡ್ಯುಯಲ್ ಸ್ಕ್ರೀನ್ ಗಳು, ದೀರ್ಘ ಬ್ಯಾಟರಿ ಬಾಳಿಕೆ ಮತ್ತು ಇತರ ಹಲವಾರು ವೈಶಿಷ್ಟ್ಯಗಳೊಂದಿಗೆ ನೋಕಿಯಾ 2660 ಫ್ಲಿಪ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದು ಮನರಂಜನೆಗಾಗಿ ಎಫ್ಎಂ ರೇಡಿಯೋ ಮತ್ತು MP3 ಪ್ಲೇಯರ್ ಅನ್ನು ಸಹ ಹೊಂದಿತ್ತು. ನೋಕಿಯಾ 2660 ಫ್ಲಿಪ್ ನೀಲಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ 4,699 ರೂಪಾಯಿಗೆ ಲಭ್ಯವಿತ್ತು.

  Published by:Precilla Olivia Dias
  First published: