• Home
 • »
 • News
 • »
 • tech
 • »
 • Noise Smartwatches: ಭಾರತಕ್ಕೆ ಲಗ್ಗೆಯಿಟ್ಟಿದೆ ನಾಯ್ಸ್​ನ ಹೊಸ ಸ್ಮಾರ್ಟ್​ವಾಚ್​! ಫೀಚರ್ಸ್​, ಬೆಲೆ ಮಾಹಿತಿ ಇಲ್ಲಿದೆ

Noise Smartwatches: ಭಾರತಕ್ಕೆ ಲಗ್ಗೆಯಿಟ್ಟಿದೆ ನಾಯ್ಸ್​ನ ಹೊಸ ಸ್ಮಾರ್ಟ್​ವಾಚ್​! ಫೀಚರ್ಸ್​, ಬೆಲೆ ಮಾಹಿತಿ ಇಲ್ಲಿದೆ

ನಾಯ್ಸ್​ ಕಲರ್​​ಫಿಟ್​ ಪ್ರೋ 4 ಆಲ್ಫಾ ಸ್ಮಾರ್ಟ್​ವಾಚ್

ನಾಯ್ಸ್​ ಕಲರ್​​ಫಿಟ್​ ಪ್ರೋ 4 ಆಲ್ಫಾ ಸ್ಮಾರ್ಟ್​ವಾಚ್

ಜನಪ್ರಿಯಾ ಟೆಕ್​ ಕಂಪನಿಯಾಗಿರುವ ನಾಯ್ಸ್​​ ಇದೀಗೆ ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ವಾಚ್​ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್​ವಾಚ್ ಭಾರತದಲ್ಲಿ ಸಂಚಲನ ಮೂಡಿಸಲಿದ್ದು 2023ರಲ್ಲಿ ಖರೀದಿಗೆ ಲಭ್ಯವಾಗಬಹುದು. ಹಾಗಿದ್ರೆ ನಾಯ್ಸ್​​ನ ಹೊಸ ಸ್ಮಾರ್ಟ್​​ವಾಚ್ ಯಾವುದು, ಇದರ ಸ್ಪೆಷಲ್​ ಫೀಚರ್ಸ್​ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ

ಮುಂದೆ ಓದಿ ...
 • Share this:

  ಇತ್ತೀಚಿನ ದಿನಗಳಲ್ಲಿ ಟೆಕ್​ ಕಂಪನಿಗಳು (Tech Company) ಬಹಳಷ್ಟು ಅಭಿವೃದ್ಧಿಯಲ್ಲಿದೆ. ಇದಕ್ಕೆ ಕಾರಣ ಅವುಗಳ ಉತ್ಪನ್ನಗಳ ಗುಣಮಟ್ಟ ಅಂತಾನೇ ಹೇಳ್ಬಹುದು. ಆದರೆ ಈ ಟೆಕ್ನಾಲಜಿ ಕಂಪನಿಗಳಿಗೆ ಹೆಚ್ಚು ಬೇಡಿಕೆಯಿರುವ ಉತ್ಪನ್ನ ಎಂದರೆ ಅದು ಸ್ಮಾರ್ಟ್​ವಾಚ್ (Smartwatch) ಎಂದು ಹೇಳಬಹುದು. ಯಾಕೆಂದರೆ ಸ್ಮಾರ್ಟ್​ವಾಚ್​ಗಳು ಇತ್ತೀಚೆಗೆ ಬಹಳಷ್ಟು ಪ್ರಚಲಿತದಲ್ಲಿದೆ. ಯಾರ ಕೈ ನೋಡಿದರೂ ಸಾಕು ಸ್ಮಾರ್ಟ್​​ವಾಚ್ ಇದ್ದೇ ಇದೆ. ಈ ಸ್ಮಾರ್ಟ್​ವಾಚ್​​ಗಳ ಬೆಳವಣಿಗೆಗೆ ಕಾರಣ ಅದರ ಫೀಚರ್ಸ್​​ಗಳು. ಯಾಕೆಂದರೆ ಈ ಸಾಧನಗಳು ಮೊಬೈಲ್​​ನಂತೆಯೇ ಕೆಲ ಫೀಚರ್ಸ್ (Features)​ ಅನ್ನು ಹೊಂದಿದ್ದು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ಚಿಯಾಗಿದೆ. ಹಾಗೇ ಇದಕ್ಕಾಗಿ ಹಲವಾರು ಕಂಪನಿಗಳು ರಾತ್ರಿ ಹಗಲೆನ್ನದೇ ದುಡಿಯುತ್ತಲೂ ಇದೆ.


  ಜನಪ್ರಿಯಾ ಟೆಕ್​ ಕಂಪನಿಯಾಗಿರುವ ನಾಯ್ಸ್​​ ಇದೀಗೆ ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ವಾಚ್​ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್​ವಾಚ್ ಭಾರತದಲ್ಲಿ ಸಂಚಲನ ಮೂಡಿಸಲಿದ್ದು 2023ರಲ್ಲಿ ಖರೀದಿಗೆ ಲಭ್ಯವಾಗಬಹುದು. ಹಾಗಿದ್ರೆ ನಾಯ್ಸ್​​ನ ಹೊಸ ಸ್ಮಾರ್ಟ್​​ವಾಚ್ ಯಾವುದು, ಇದರ ಸ್ಪೆಷಲ್​ ಫೀಚರ್ಸ್​ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ


  ಯಾವುದು ಆ ಸ್ಮಾರ್ಟ್​​ವಾಚ್


  ನಾಯ್ಸ್​ ಕಂಪನಿ ಇದೀಗ ಭಾರತದಲ್ಲಿ ನಾಯ್ಸ್​ ಕಲರ್​​ಫಿಟ್​ ಪ್ರೋ 4 ಆಲ್ಫಾ ಎಂಬ ಸ್ಮಾರ್ಟ್​ವಾಚ್​ ಅನ್ನು ಅನಾವರ್ಣ ಮಾಡಿದೆ. ಈ ವಾಚ್‌ 100 ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದ್ದು, ಡಬಲ್​​ ಟ್ಯಾಪ್​ ಗೆಸ್ಚರ್ ಈ ವಾಚ್‌ನ ವಿಶೇಷವಾಗಿದೆ.


  ಇದನ್ನೂ ಓದಿ: ಮೈಸೂರಿನಲ್ಲೂ 5ಜಿ ವಿಸ್ತರಿಸಿದ ರಿಲಯನ್ಸ್ ಜಿಯೋ! ಹೇಗಿದೆ ಗೊತ್ತಾ ಇಂಟರ್ನೆಟ್​ ಸ್ಪೀಡ್​?


  ಡಿಸ್​​ಪ್ಲೇ ಫೀಚರ್ಸ್​ ಹೇಗಿದೆ?


  ನಾಯ್ಸ್‌ ಕಲರ್‌ಫಿಟ್‌ ಪ್ರೋ 4 ಆಲ್ಫಾ ಸ್ಮಾರ್ಟ್‌ವಾಚ್‌ 1.78 ಇಂಚಿನ ಅಮೋಲ್ಡ್​ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 268 x 448 ಪಿಕ್ಸೆಲ್ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ 60Hz ರಿಫ್ರೆಶ್ ರೇಟ್‌ ಇದರಲ್ಲಿದ್ದು, ಡಿಸ್‌ಪ್ಲೇ ಆಫ್‌ ಮಾಡಲು ಪಾಮ್ ಕಂಟ್ರೋಲ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಅದನ್ನು ಆನ್‌ ಮಾಡಲು ಡಬಲ್ ಟ್ಯಾಪ್ ಗೆಸ್ಚರ್ ಎಂಬ ವಿಶೇಷ ಫೀಚರ್ಸ್​ ಅನ್ನು ಅಳವಡಿಸಲಾಗಿದೆ.


  ನಾಯ್ಸ್​ ಕಲರ್​​ಫಿಟ್​ ಪ್ರೋ 4 ಆಲ್ಫಾ ಸ್ಮಾರ್ಟ್​ವಾಚ್


  ಇತರೆ ಫೀಚರ್ಸ್​


  ಈ ಹೊಸ ಸ್ಮಾರ್ಟ್‌ವಾಚ್‌ ಎಓಡಿ ಡಿಸ್‌ಪ್ಲೇಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ 4 ವಾಚ್ ಫೇಸ್‌ಗಳನ್ನು ಬೆಂಬಲಿಸಲಿದ್ದು, ಯುಐ ನಲ್ಲಿ ನ್ಯಾವಿಗೇಟ್ ಮಾಡಲು ಹಾಗೂ ಮೆನುವನ್ನು ಪ್ರವೇಶಿಸಲು, ಡಿವೈಸ್‌ನ ಬದಿಯಲ್ಲಿ ಡಿಜಿಟಲ್ ಕ್ರೌನ್‌ ಬಟನ್‌ ಅನ್ನು ಅಳವಡಿಸಿದ್ದಾರೆ. ಹಾಗೆಯೇ ಬ್ಲೂಟೂತ್‌ ಕಾಲ್ ಫೀಚರ್ಸ್‌ ಕೂಡ ಬೆಂಬಲ ಪಡೆದುಕೊಂಡಿದ್ದು, ಸ್ಮಾರ್ಟ್‌ಫೊನ್‌ಗೆ ಬರುವ ಕರೆಗಳನ್ನು ಈ ವಾಚ್‌ನಿಂದಲೇ ಮಾತಾಡಬಹುದು ಮತ್ತು ಕಂಟ್ರೋಲ್​ ಮಾಡಬಹುದಾಗಿದೆ.


  ಹೆಲ್ತ್​ ಟಿಪ್ಸ್​ ಫೀಚರ್ಸ್​


  ಇನ್ನು ಆರೋಗ್ಯ ವಿಷಯದಲ್ಲಿ ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್​, ನಿದ್ರೆಯ ಟ್ರ್ಯಾಕ್‌, ಒತ್ತಡ ನಿರ್ವಹಣೆ ಮತ್ತು ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್‌ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ನೀಡುತ್ತದೆ. ಇದರೊಂದಿಗೆ ನೈಜ ಸಮಯದಲ್ಲಿ ಹೃದಯ ಬಡಿತವನ್ನು ಟ್ರ್ಯಾಕ್ ಮಾಡಲು ಇದು ಸಹಕಾರಿಯಾಗಿದ್ದು, ಗರಿಷ್ಠ, ನಿಮಿಷ ಮತ್ತು ಸರಾಸರಿ ಬಿಪಿಎಂ ಅನ್ನು ಕೂಡ  ಸ್ಪಷ್ಟವಾಗಿ ಮಾಹಿತಿ ನೀಡುತ್ತದೆ.


  ಬ್ಯಾಟರಿ ಫೀಚರ್ಸ್​


  ನಾಯ್ಸ್ ಕಲರ್‌ಫಿಟ್ ಪ್ರೋ  4 ಆಲ್ಫಾ ಸ್ಮಾರ್ಟ್‌ವಾಚ್‌ 270mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಒಂದು ಪೂರ್ಣ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಬ್ಲೂಟೂತ್‌ ಕಾಲ್‌ ಫೀಚರ್ಸ್‌ ಅನ್ನು ಆನ್ ಮಾಡಿದಾಗ 5 ದಿನಗಳವರೆಗೆ ಆನ್ ಮಾಡಿಟ್ಟುಕೊಳ್ಳಬಹುದಾಗಿದೆ. ಇನ್ನು ವೇಗದ ಚಾರ್ಜಿಂಗ್‌ ಆಯ್ಕೆ ಇದರಲ್ಲಿದ್ದು, 10 ನಿಮಿಷದ ಚಾರ್ಜ್‌ನಲ್ಲಿ ಒಂದು ದಿನ ಪೂರ್ತಿ ಬಳಕೆ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್​ವಾಚ್​ ಅನ್ನು ಫುಲ್​ ಚಾರ್ಜ್​​ ಆಗಲು 2 ಗಂಟೆಗಳ ಸವಧಿ ಬೇಕಾಗುತ್ತದೆ.


  ನಾಯ್ಸ್​ ಕಲರ್​​ಫಿಟ್​ ಪ್ರೋ 4 ಆಲ್ಫಾ ಸ್ಮಾರ್ಟ್​ವಾಚ್


  ಬೆಲೆ ಮತ್ತು ಲಭ್ಯತೆ


  ನಾಯ್ಸ್ ಕಲರ್‌ಫಿಟ್ ಪ್ರೋ 4 ಆಲ್ಫಾ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಆಫರ್‌ ಬೆಲೆಯಲ್ಲಿ 3,799 ರೂಪಾಯಿಗಳಿಗೆ ಖರೀದಿ ಮಾಡಬಹುದು. ಹಾಗೆಯೇ ಜೆಟ್ ಬ್ಲ್ಯಾಕ್​, ಡೀಪ್ ವೈನ್, ರೋಸ್ ಪಿಂಕ್, ವಿಂಟೇಜ್ ಬ್ರೌನ್ ಮತ್ತು ಸಿಲ್ವರ್ ಗ್ರೇ ಬಣ್ಣದ ಆಯ್ಕೆಯಲ್ಲಿ ಲಭ್ಯವಿದ್ದು, ಇನ್ನು ಈ ಸ್ಮಾರ್ಟ್​​ವಾಚ್ ಅನ್ನು ಖರೀದಿ ಮಾಡಬೇಕೆಂದು ಬಯಸುವವರು ಅಮೆಜಾನ್​ ಇಕಾಮರ್ಸ್​ ವೆಬ್​ಸೈಟ್​ಗೆ ಭೇಟಿ ನೀಡಬೇಕು.

  Published by:Prajwal B
  First published: