ಶೀಘ್ರದಲ್ಲೇ ರಸ್ತೆಗಿಳಿಯಲಿದೆ ವಿಶ್ವದ ಅತೀ ಕಡಿಮೆ ತೂಕದ ಕಾರು !

news18
Updated:July 11, 2018, 8:02 PM IST
ಶೀಘ್ರದಲ್ಲೇ ರಸ್ತೆಗಿಳಿಯಲಿದೆ ವಿಶ್ವದ ಅತೀ ಕಡಿಮೆ ತೂಕದ ಕಾರು !
https://twitter.com/TUecomotive
news18
Updated: July 11, 2018, 8:02 PM IST
-ನ್ಯೂಸ್ 18 ಕನ್ನಡ

ಚೀನಿಯರು ಹೊಸ ಆವಿಷ್ಕಾರ ಕಂಡು ಹಿಡಿಯುವುದರಲ್ಲಿ ಸದಾ ಮುಂದು ಎಂಬುದರಲ್ಲಿ ಎರಡು ಮಾತಿಲ್ಲ. ಅದರಂತೆ ಇದೀಗ ಚೀನಾ ದೇಶದ ಟಿಯು ಐನ್ದೊವೆನ್ ವಿಶ್ವವಿದ್ಯಾಲಯದ ಟೆಕ್ನಾಲಜಿ ವಿದ್ಯಾರ್ಥಿಗಳು ಹೊಸ ಕಾರೊಂದನ್ನು ತಯಾರಿಸಿದ್ದಾರೆ. ಈ ಕಾರು ವಿಶ್ವದ ಅತ್ಯಂತ ಕಡಿಮೆ ತೂಕದ ಕಾರು ಎಂಬ ಖ್ಯಾತಿ ಪಡೆದಿದೆ.

ಚೀನಿ ವಿದ್ಯಾರ್ಥಿಗಳೇ ಸೇರಿ ನಿರ್ಮಿಸಿರುವ ಈ ಕಾರಿಗೆ ನೊಹ (Noah) ಎಂದು ಹೆಸರಿಡಲಾಗಿದೆ. ಫ್ಲಾಕ್ಸ್​ ಮತ್ತು ಸಕ್ಕರೆಯೊಂದಿಗೆ ಜೈವಿಕ ಮಿಶ್ರಣ ಬಳಸಿ ಇದರ ಬಾಡಿ ತಯಾರಿಸಲಾಗಿದೆ. ಈ ಕಾರಿನ ತೂಕ ಕೇವಲ 350 ಕೆ.ಜಿ ಆಗಿದ್ದು, ವಿಶ್ವದ ಕಡಿಮೆ ತೂಕದ ಕಾರೆಂಬ ಕೀರ್ತೀ ನೊಹ ಪಾಲಾಗಿದೆ.


Loading...

100 ವೇಗದಲ್ಲಿ ಚಲಿಸುವ ಸಾರ್ಮಥ್ಯ ಹೊಂದಿರುವ ಈ ಕಾರನ್ನು ಒಂದು ಬಾರಿ ಚಾರ್ಜ್ ಮಾಡಿದರೆ 240 ಕಿ.ಮೀ ಚಲಿಸುತ್ತದೆ. ನೊಹ ಎಲೆಕ್ಟ್ರಿಕ್ ಕಾರನ್ನು ಪ್ರಪಂಚದ ಮೊದಲ ಸೆರ್ಕ್ಯುಲರ್ ಕಾರು ಎಂದು ಹೇಳಲಾಗಿದ್ದು, ಇದರ ವಿನ್ಯಾಸ ಕೂಡ ಆಕರ್ಷಕವಾಗಿದೆ.

ಇದರಲ್ಲಿನ ಎಲೆಕ್ಟ್ರೊಮೋಟರ್ ಆರು ಮಾಡ್ಯೂಲರ್ ಬ್ಯಾಟರಿಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ತಂತ್ರಜ್ಞಾನ ಬೆಳೆದಂತೆ ಬ್ಯಾಟರಿಗಳನ್ನು ಬದಲಾಯಿಸಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ.


ಆಧುನಿಕ ತಂತ್ರಜ್ಞಾನಗಳನ್ನು ಈ ಕಾರಿಗೆ ಅಳವಡಿಸಿದ್ದು, ಇದರ ಡೋರ್​ಗಳಿಗೆ NFC ಸ್ಕ್ಯಾನರ್ ಬಳಸಲಾಗಿದೆ. ಈ ಸ್ಕ್ಯಾನರ್ ಹೊಂದಿರುವ ಕಾರು ಮಾಲಿಕನನ್ನು ಗುರುತಿಸಿ ಸ್ವಯಂ ಚಾಲಿತವಾಗಿ ಡೋರ್ ತೆರೆಯುತ್ತದೆ. ಹಾಗೆಯೇ ಮೊಬೈಲ್ ಬಳಸಿ ಇದರ ಡೋರ್​ಗಳನ್ನು ತೆರೆಯಲು ಮತ್ತು ಮುಚ್ಚುವ ಆಯ್ಕೆ ನೀಡಲಾಗಿದೆ. ನೊಹ (Noah) ಕಾರಿನ ಮೊದಲ ವಿನ್ಯಾಸ ಈಗಾಗಲೇ ಕಾರು ಪ್ರಿಯರ ಗಮನ ಸೆಳೆದಿದ್ದು, ಶೀಘ್ರದಲ್ಲೇ ವಿಶ್ವ ಕಾರು ಮಾರುಕಟ್ಟೆಯಲ್ಲಿ ಈ ಕಾರು ಹೊಸ ಸಂಚಲನ ಸೃಷ್ಟಿಸಲಿದೆ ಎನ್ನಲಾಗಿದೆ.

First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...