ನಾವು ಸಾಮಾನ್ಯವಾಗಿ ನಮ್ಮ ಮೊಬೈಲ್ ಫೋನ್ ನಲ್ಲಿ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ಗಳಲ್ಲಿ ಯುಪಿಐ ಅನ್ನು ಸಕ್ರಿಯಗೊಳಿಸಿಕೊಳ್ಳಲು ಡೆಬಿಟ್ ಕಾರ್ಡ್ ಅನ್ನು ಬಳಸುತ್ತೇವೆ. ಅಂದರೆ ಡೆಬಿಟ್ ಕಾರ್ಡ್ ನಲ್ಲಿರುವ ಆ ಸಂಖ್ಯೆಯನ್ನು ಕೇಳುತ್ತದೆ ಮತ್ತು ಆ ಮಾಹಿತಿಯನ್ನೆಲ್ಲಾ ನಾವು ನೀಡಿದ ಮೇಲೆ ಅದಕ್ಕೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನ ಅಲ್ಲಿ ಹಾಕಿದ ನಂತರವೇ ನಮ್ಮ ಯುಪಿಐ ಸಕ್ರಿಯವಾಗುತ್ತದೆ. ಆದರೆ ಈಗ ಇದರ ಅವಶ್ಯಕತೆ ಇಲ್ವಂತೆ ಅಂತ ಖುದ್ದು ಬ್ಯಾಂಕ್ ನವರೇ ಹೇಳಿದ್ದಾರೆ ನೋಡಿ. ಎಲ್ಲಾ ಬ್ಯಾಂಕ್ ನವರು ಇದನ್ನು ಹೇಳಿಲ್ಲ ಕಣ್ರೀ.. ಆಧಾರ್ ಆಧಾರಿತ ಒನ್-ಟೈಮ್ ಪಾಸ್ವರ್ಡ್ (ಒಟಿಪಿ) ದೃಢೀಕರಣವನ್ನು ಬಳಸಿಕೊಂಡು ತನ್ನ ಗ್ರಾಹಕರು ಯುಪಿಐ ಅನ್ನು ಸಕ್ರಿಯಗೊಳಿಸಬಹುದು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತ್ತೀಚೆಗೆ ಘೋಷಿಸಿದೆ.
ಯುಪಿಐಗೆ ಡೆಬಿಟ್ ಕಾರ್ಡ್ ಬೇಕಾಗಿಲ್ವಂತೆ..
ಈ ಹಿಂದೆ, ಯುಪಿಐ ಅನ್ನು ಸಕ್ರಿಯಗೊಳಿಸಲು, ಗ್ರಾಹಕರು ನೋಂದಣಿ ಮಾಡುವಾಗ ಪಿನ್ ಹೊಂದಿಸಲು ಒಟಿಪಿ ದೃಢೀಕರಣಕ್ಕಾಗಿ ಡೆಬಿಟ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ಬಳಸಬೇಕಾಗಿತ್ತು. ಈ ಪ್ರಕ್ರಿಯೆಯು ಡೆಬಿಟ್ ಕಾರ್ಡ್ ಹೊಂದಿರದ ಅನೇಕ ಬ್ಯಾಂಕ್ ಖಾತೆದಾರರಿಗೆ ಪ್ರವೇಶವನ್ನು ನಿರ್ಬಂಧಿಸುತ್ತಿತ್ತು ಎಂಬುದು ನಮಗೆ ಗೊತ್ತೇ ಇದೆ.
ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸುಲಭದಲ್ಲಿ ಯುಪಿಐ ನೋಂದಾಯಿಸಲು ಅವಕಾಶ ಮಾಡಿಕೊಟ್ಟಿದೆ. ಪಿಎನ್‌ಬಿ ಟ್ವೀಟ್ ಪ್ರಕಾರ, "ನಿಮಗೆ ತಿಳಿದಿದೆಯೇ? ಯುಪಿಐಗೆ ನೋಂದಾಯಿಸಲು ನಿಮ್ಮ ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ಆಧಾರ್ ಕಾರ್ಡ್ ನೊಂದಿಗೆ ಯುಪಿಐ ವೇವ್ ಓಪನ್ ಮಾಡಿ ಮತ್ತು ಸ್ಕ್ಯಾನ್ ಮಾಡಿ! ಎಂದು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://bit.ly/3V9NOw3."
ಎನ್‌ಪಿಸಿಐ ವೆಬ್ಸೈಟ್ ಪ್ರಕಾರ, "ಆಧಾರ್ ಒಟಿಪಿಯನ್ನು ಪರಿಚಯಿಸುವುದು ಯುಪಿಐ ಅನ್ನು ಹೊಂದಿಸಲು ಮತ್ತು ಮರುಹೊಂದಿಸಲು ಉತ್ತಮ ಮತ್ತು ಸುಲಭವಾದ ಮಾರ್ಗವಾಗಿದೆ ಮತ್ತು ಡೆಬಿಟ್ ಕಾರ್ಡ್ ಹೊಂದಿರದ ಮತ್ತು ಪಾವತಿ ಮಾಡಲು ಯುಪಿಐ ಪ್ಲಾಟ್ಫಾರ್ಮ್ ನಲ್ಲಿ ಅನುಭವ ಬಯಸುವ ಬಳಕೆದಾರರ ವಿಭಾಗಗಳ ಅಗತ್ಯವನ್ನು ಪೂರೈಸುತ್ತದೆ.
ಆಧಾರ್ ಬಳಸಿ ಯುಪಿಐ ಪಿನ್ ಸೆಟ್ ಮಾಡುವುದು ಹೇಗೆ?
ಹಂತ 1: ಯುಪಿಐ ಅಪ್ಲಿಕೇಶನ್ ನಲ್ಲಿ ಹೊಸ ಯುಪಿಐ ಪಿನ್ ಸೆಟ್ ಮಾಡಲು ಆಯ್ಕೆ ಮಾಡಿ
ಹಂತ 2: ಇದಕ್ಕಾಗಿ ಆಧಾರ್ ಆಧಾರಿತ ಪರಿಶೀಲನೆಯನ್ನು ಆರಿಸಿಕೊಳ್ಳಿರಿ
ಹಂತ 3: ನಂತರ ಅಕ್ಸೆಪ್ಟ್ ಮಾಡಿ
ಹಂತ 4: ಆಧಾರ್ ಕಾರ್ಡ್ ನಲ್ಲಿರುವ ಕೊನೆಯ 6 ಅಂಕಿಗಳನ್ನು ಟೈಪ್ ಮಾಡುವ ಮೂಲಕ ಮೌಲ್ಯೀಕರಿಸಿ
ಹಂತ 5: ನಂತರ ರಿಜಿಸ್ಟರ್ ಮೊಬೈಲ್ ಸಂಖ್ಯೆ ಬರುವ ಒಟಿಪಿ ಒಂಬರ್ಅನ್ನು ನಮೂದಿಸಿ
ಹಂತ 6: ಮತ್ತೊಮ್ಮೆ ಅಕ್ಸೆಪ್ಟ್ ಕೇಳುತ್ತದೆ, ನೀವು ಸ್ವೀಕರಿಸಿ ಮತ್ತು ಒಪ್ಪಿಗೆ ಸೂಚಿಸಿ
ಹಂತ 7: ಒಮ್ಮೆ ಬ್ಯಾಂಕ್ ಮೌಲ್ಯೀಕರಿಸಿದ ನಂತರ, ಹೊಸ ಯುಪಿಐ ಪಿನ್ ಅನ್ನು ನಮೂದಿಸಿ ಮತ್ತು ದೃಢೀಕರಿಸಿಕೊಳ್ಳಿ
ಆಧಾರ್ ಒಟಿಪಿ ಮೂಲಕ ಯುಪಿಐ ಪಿನ್ಗಳನ್ನು ಹೊಂದಿಸಲು ಏನೆಲ್ಲಾ ಮಾಡಿರಬೇಕು?
ಎನ್‌ಪಿಸಿಐ ವೆಬ್ಸೈಟ್ ಪ್ರಕಾರ, "ಯುಪಿಐ ಪಿನ್ ಸೆಟ್ ಮಾಡಿಕೊಳ್ಳಲು ಗ್ರಾಹಕರ ಆಧಾರ್ ಸಂಖ್ಯೆಯನ್ನು ಪಡೆಯಲಾಗುತ್ತಿದೆ ಮತ್ತು ಮೌಲ್ಯೀಕರಿಸಲಾಗುತ್ತಿದೆ ಮತ್ತು ಆಧಾರ್ ಬಳಸಿ ಪ್ರತಿ ಸೆಟ್ ಯುಪಿಐ ಪಿನ್ಗೆ ಗ್ರಾಹಕರ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಲಿಂಕ್ ಮಾಡಿದ್ದರೆ ಮತ್ತು ಅವರ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ್ದರೆ ಮಾತ್ರ ಆಧಾರ್ ಒಟಿಪಿ ಮೂಲಕ ಯುಪಿಐ ಪಿನ್ ಗಳನ್ನು ಹೊಂದಿಸಲು ಸಾಧ್ಯವಾಗುತ್ತದೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆ ಮತ್ತು ಆಧಾರ್, ಯುಐಡಿಎಐ ಒಂದೇ ಎಂದು ಖಚಿತಪಡಿಸಿಕೊಳ್ಳಬೇಕು.
ಗ್ರಾಹಕರು ಆಧಾರ್ ಬಳಸಿ ಯುಪಿಐ ಪಿನ್ ಅನ್ನು ಹೊಂದಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಮತ್ತು ಗ್ರಾಹಕರ ಬ್ಯಾಂಕ್ ಅದನ್ನು ಬೆಂಬಲಿಸದಿದ್ದರೆ ಅದನ್ನು ಗ್ರಾಹಕರಿಗೆ ತಿಳಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ