• Home
  • »
  • News
  • »
  • tech
  • »
  • Twitter Blue Tick: ಜನಸಾಮಾನ್ಯರಿಗೂ ಇನ್ನು ವಿಐಪಿ ಅಕೌಂಟ್, ನಾಳೆಯಿಂದ ಯಾರ್‌ ಬೇಕಾದ್ರೂ ಪಡೆಯಬಹುದು ಟ್ವಿಟರ್ ಬ್ಲೂ ಟಿಕ್!

Twitter Blue Tick: ಜನಸಾಮಾನ್ಯರಿಗೂ ಇನ್ನು ವಿಐಪಿ ಅಕೌಂಟ್, ನಾಳೆಯಿಂದ ಯಾರ್‌ ಬೇಕಾದ್ರೂ ಪಡೆಯಬಹುದು ಟ್ವಿಟರ್ ಬ್ಲೂ ಟಿಕ್!

ಟ್ವಿಟರ್ ಬ್ಲೂ ಟಿಕ್

ಟ್ವಿಟರ್ ಬ್ಲೂ ಟಿಕ್

ಟ್ವಿಟರ್​ನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡುವುದೇ ಎಲಾನ್ ಮಸ್ಕ್ ಅವರ ಗುರಿಯಾಗಿತ್ತು. ಅದೇ ರೀತಿ ಸಾಕಷ್ಟು ಪ್ರಯತ್ನಗಳನ್ನೂ ಮಸ್ಕ್ ಮಾಡಿದ್ದಾರೆ. ಆ ಪ್ಲಾನ್​ಗಳಲ್ಲಿ ಬ್ಲೂ ಟಿಕ್ ಕೂಡ ಒಂದು. ಈ ಪ್ಲಾನ್​ ಮೂಲಕ ಯಾರಿಗೂ ಕೂಡ ಟ್ವಿಟರ್ ಅಕೌಂಟ್​ ಹೊಂದಿರುವವರಿಗೆ ಬ್ಲೂ ಟಿಕ್ ಪಡೆಯಬಹುದು. ಆದರೆ ಅದಕ್ಕೆ ಕೆಲವೊಂದು ನಿಯಮಗಳಿವೆ. ಅದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್​ ಇಲ್ಲಿದೆ.

ಮುಂದೆ ಓದಿ ...
  • Share this:

    ಸೋಶಿಯಲ್ ಮೀಡಿಯಾದಲ್ಲಿ (Social Media) ಈ ಹಿಂದೆ ಬಹಳಷ್ಟು ಚರ್ಚೆಯಲ್ಲಿದ್ದ ಮೀಡಿಯಾ ಎಂದರೆ ಅದು ಟ್ವಿಟರ್. ಟ್ವಿಟರ್​ ಅನ್ನು ಎಲಾನ್ ಮಸ್ಕ್ (Elon Musk) ಅವರು ಸಾಧೀನ ಪಡಿಸಿಕೊಂಡ ನಂತರ ಏನೇನೋ ಬದಲಾವಣೆಗಳನ್ನು ಪ್ರಯತ್ನಿಸಿದರು. ಆದರೆ ಇದರಲ್ಲಿ ಕೆಲವು ಸಫಲತೆಯನ್ನು ಕಂಡರೆ ಇನ್ನು ಕೆಲವು ವಿಫಲತೆಯನ್ನು ಕಂಡಿದೆ. ಅದ್ರಲ್ಲಿ ಮುಖ್ಯವಾಗಿ ಟ್ವಿಟರ್​ನಲ್ಲಿ ಬ್ಲೂಟಿಕ್ (Blue Tick)​ ವಿಷಯವನ್ನು ಹೇಳ್ಬಹುದು. ಈ ಹಿಂದೆ ಟ್ವಿಟರ್​ನಲ್ಲಿ (Twitter) ಬ್ಲೂ ಟಿಕ್​ ಪಡೆಯುವ ಆಯ್ಕೆಯನ್ನು ಬಿಡುಗಡೆ ಮಾಡಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಆ ಯೋಜನೆ ಸೋಲನ್ನು ಕಂಡಿತು. ಆದರೆ ಇದೀಗ ಮತ್ತೆ ನಾಳೆಯಿಂದ ಬ್ಲೂ ಟಿಕ್​ ಯೋಜನೆ ಪ್ರಾರಂಭ ಎಂದು ಹೇಳಿದ್ದಾರೆ.


    ಹೌದು, ಟ್ವಿಟರ್​ನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡುವುದೇ ಎಲಾನ್ ಮಸ್ಕ್ ಅವರ ಗುರಿಯಾಗಿತ್ತು. ಅದೇ ರೀತಿ ಸಾಕಷ್ಟು ಪ್ರಯತ್ನಗಳನ್ನೂ ಮಸ್ಕ್ ಮಾಡಿದ್ದಾರೆ. ಆ ಪ್ಲಾನ್​ಗಳಲ್ಲಿ ಬ್ಲೂ ಟಿಕ್ ಕೂಡ ಒಂದು. ಈ ಪ್ಲಾನ್​ ಮೂಲಕ ಯಾರಿಗೂ ಕೂಡ ಟ್ವಿಟರ್ ಅಕೌಂಟ್​ ಹೊಂದಿರುವವರಿಗೆ ಬ್ಲೂ ಟಿಕ್ ಪಡೆಯಬಹುದು. ಆದರೆ ಅದಕ್ಕೆ ಕೆಲವೊಂದು ನಿಯಮಗಳಿವೆ. ಅದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್​ ಇಲ್ಲಿದೆ.


    ಬ್ಲೂ ಟಿಕ್​ ಅನ್ನು ಯಾರೆಲ್ಲಾ ಪಡೆಯಬಹುದು?


    ಇದುವರೆಗೆ ಟ್ವಿಟರ್​ನಲ್ಲಿ ಅಕೌಂಟ್​ ಹೊಂದಿರುವವರ ಪೈಕಿ  ಕೇವಲ ಸಿನೆಮಾ ನಟರು, ರಾಜಕಾರಣಿಗಳು, ಸ್ಪೋರ್ಟ್ಸ್​ನವರು ಮತ್ತು ಯಾವುದಾದರೂ ಸಾಧನೆ ಮಾಡಿದವರು ಹೊಂದಿದ್ದರು. ಆದರೆ ಇನ್ನುಮುಂದಿನ ದಿನಗಳಲ್ಲಿ ಎಂಥವರಿಗೂ ಟ್ವಿಟರ್​ನಲ್ಲಿ ಚಂದಾದಾರಿಕೆ ಮೂಲಕ ಬ್ಲೂ ಟಿಕ್ ಪಡೆಯಬಹುದಾಗಿದೆ.


    ಇದನ್ನೂ ಓದಿ: ಡಿಸೆಂಬರ್​ 15ರಂದು ಮೊಟೊ ಎಕ್ಸ್​40 ಸ್ಮಾರ್ಟ್​ಫೋನ್ ಬಿಡುಗಡೆ, ಪ್ರಿಬುಕ್ಕಿಂಗ್​ನಲ್ಲೇ ಭಾರೀ ಬೇಡಿಕೆ


    ಈ ಹಿಂದೆ ಇದೇ ಬ್ಲೂ ಟಿಕ್​ ಯೋಜನೆಯನ್ನು ಬಿಡುಗಡೆ ಮಾಡಿದಾಗ ಕೆಲವೊಂದು ನಕಲಿ ಅಕೌಂಟ್​ಗಳನ್ನು ಕ್ರಿಯೇಟ್​ ಮಾಡುವ ಮೂಲಕ ಕೆಲವರು ಮೋಸ ಮಾಡಿದ್ದರು. ಅದಕ್ಕಾಗಿ ಈ ಯೋಜನೆಯನ್ನು ನಿಲ್ಲಿಸಿದರು. ಆದರೆ ಈ ಎಲ್ಲಾ ತೊಂದರೆಗಳನ್ನು ನೋಡಿಕೊಂಡು ಇದೀಗ ಮತ್ತೆ ಆರಂಭಿಸುತ್ತಿದೆ.


    ಟ್ವಿಟರ್ ಬ್ಲೂ ಟಿಕ್


    ಈ ಬ್ಲೂ ಟಿಕ್​ ಪಡೆಯಲು ಎಷ್ಟು ಪಾವತಿಸಬೇಕು?


    ಈಗ ಮರುಪ್ರಾರಂಭಿಸಲಾದ ಸೇವೆಯಲ್ಲಿ ಟ್ವಿಟರ್ ಬಳಕೆದಾರರು ವೆಬ್ ಬಳಕೆದಾರರಿಗೆ ತಿಂಗಳಿಗೆ $8 ಅಂದರೆ 660 ರೂಪಾಯಿಯಷ್ಟು ಪಾವತಿಸಬೇಕು ಮತ್ತು ಐಫೋನ್ ಬಳಕೆದಾರರಿಗೆ ತಿಂಗಳಿಗೆ $11 ಅಂದರೆ 906 ರೂಪಾಯಿಯಷ್ಟು ವೆಚ್ಚವಾಗುತ್ತದೆ.


    ಬ್ಲೂ ಟಿಕ್​ ಪಡೆಯುವುದರಿಂದ ಏನು ಲಾಭ?


    ಈ ಸೇವೆಗಳನ್ನು ಚಂದಾದಾರಿಕೆ ಮೂಲಕ ಬ್ಲೂ ಟಿಕ್ ಪಡೆಯುವವರಿಗೆ ಕಡಿಮೆ ಜಾಹೀರಾತುಗಳನ್ನು ಪಡೆಯಬಹುದಾಗಿದೆ, ಜೊತೆಗೆ ತುಂಬಾ ದೊಡ್ಡದಾದ ವಿಡಿಯೋಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಮತ್ತು ಅವರ ಟ್ವೀಟ್‌ಗಳನ್ನು ಹೆಚ್ಚು ಶೇರ್​ ಆಗುವಂತೆ ಮಾಡುತ್ತದೆ ಎಂದು ಟ್ವಿಟರ್ ಹೇಳುತ್ತದೆ.


    ಟ್ವಿಟರ್​ನ ಬ್ಲೂ ಟಿಕ್​ ಬಗೆಗಿನ ಸುದ್ದಿ


    ಮುನ್ನೆಚ್ಚರಿಕೆಯ ಜೊತೆಗೆ ಈ ಸೇವೆ ಮರುಸ್ಥಾಪನೆ:


    ಈ ಹಿಂದೆ, ಎಲಾನ್ ಮಸ್ಕ್ ಈ ನಕಲಿ ಖಾತೆಗಳಿಗೆ ಬ್ಲೂ ಮಾರ್ಕ್ ಕುರಿತು ಟ್ವೀಟ್ ಮಾಡಿದ್ದರು. ಅನೇಕ ಬೋಗಸ್ ಖಾತೆಗಳು ಬ್ಲೂ ಟಿಕ್ ಆಗುತ್ತಿದ್ದು, ಇವುಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಬ್ಲೂಟಿಕ್ ಸೇವೆಯನ್ನು ನಿಲ್ಲಿಸುತ್ತಿದ್ದೇವೆ ಎಂದಿದ್ದರು. ಆದರೆ ಇನ್ನುಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದು ಮುಖ್ಯವೆಮದು ಮಸ್ಕ್ ಅವರು ಹೇಳಿದ್ದಾರೆ. ಆದರೆ ಯಾವುದೇ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಮಾಹಿತಿಯನ್ನು ಹೊರಬಿಟ್ಟಿಲ್ಲ.


    ಟ್ವಿಟರ್ ಬ್ಲೂ ಟಿಕ್


    ಕಂಪನಿಗಳಿಗೆ ಚಿನ್ನದ ಬಣ್ಣದ ಟಿಕ್


    ಎಲಾನ್ ಮಸ್ಕ್ ಅವರ ವಿವರಗಳ ಪ್ರಕಾರ, ಟ್ವಿಟರ್‌ನಲ್ಲಿನ ಕಂಪನಿ ಖಾತೆಗಳು ಈಗ ಚಿನ್ನದ ಚೆಕ್ ಗುರುತು ಮತ್ತು ಸರ್ಕಾರಿ ಖಾತೆಗಳು ಬೂದು ಬಣ್ಣದ ಚೆಕ್ ಗುರುತು ಹೊಂದಿರುತ್ತವೆ. ಜನರು ನೀಲಿ ಚೆಕ್ ಗುರುತು ಪಡೆಯುತ್ತಾರೆ. ಇಲ್ಲಿ ಬ್ಲೂ ಟಿಕ್​ಗಳನ್ನು ಸೆಲೆಬ್ರೆಟಿಗಳಿಗೆ ಮಾತ್ರವಲ್ಲದೆ ಯಾರು ಕೂಡ ಪಡೆಯಬಹುದಾಗಿದೆ. ಆದರೆ ಎಲ್ಲವನ್ನೂ  ಪರಿಶೀಲಿಸಿದ ನಂತರವೇ ಈ ಚೆಕ್ ಗುರುತುಗಳನ್ನು ಸಕ್ರಿಯಗೊಳಿಸಲಾಗುತ್ತದೆ.

    Published by:Prajwal B
    First published: