ಹಿಂದಿನ ಟ್ರೆಂಡ್ನಲ್ಲಿ (Trend) ಮೊಬೈಲ್ಗಳಲ್ಲಿ (Mobile) ಕೇವಲ ಒಂದೇ ಸಿಮ್ (Sim) ಅನ್ನು ಬಳಸಲಾಗುತ್ತಿತ್ತು. ಆದರೆ ಕೆಲವೊಂದು ತಂತ್ರಜ್ಞಾನದ ಪ್ರಗತಿಯಿಂದ ತದನಂತರದಲ್ಲಿ ಸ್ಮಾರ್ಟ್ಫೋನ್ಗಳಲ್ಲಿ (Smartphone) ಡ್ಯುಯಲ್ ಸಿಮ್ (Dual sim) ಫೀಚರ್ಸ್ ಬಂತು. ಈ ಮೂಲಕ ಒಂದು ಸ್ಮಾರ್ಟ್ಫೋನ್ನಲ್ಲಿ ಎರಡು ಸಿಮ್ಗಳನ್ನು ಬಳಕೆ ಮಾಡಬಹುದಿತ್ತು. ನಂತರ ಡ್ಯುಯಲ್ ಸಿಮ್ ಬಳಕೆ ಟೆಲಿಕಾಂ ಕಂಪನಿಗಳ (Telecom Company) ಯುಗದಲ್ಲಿ ಒಂದು ಹೊಸ ಟ್ರೆಂಡ್ ಅನ್ನು ರೂಪಿಸಿದೆ. ಸ್ಮಾರ್ಟ್ಫೋನ್ಗಳಲ್ಲಿ ಡ್ಯುಯಲ್ ಸಿಮ್ಗಳ ಬಳಕೆ ವ್ಯಾಪಕವಾಗಿ ಬೆಳೆಯಲು ಕಾರಣ ಟೆಲಿಕಾಂ ಕಂಪನಿಗಳು ಬಿಡುಗಡೆ ಮಾಡಿದ್ದ ರೀಚಾರ್ಜ್ ಪ್ಲಾನ್ಗಳು ಎಂದು ಹೇಳಬಹುದು. ಆದರೆ ಈಗ ಎಲ್ಲಾ ಸಿಮ್ಗಳ ರೀಚಾರ್ಜ್ ಪ್ಲಾನ್ಗಳು ಒಂದೇ ರೀತಿಯಿದೆ. ಆದ್ದರಿಂದ ಎಲ್ಲರೂ ಇತ್ತೀಚೆಗೆ ಒಂದೇ ಸಿಮ್ಗಳನ್ನು ಬಳಕೆ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಡ್ಯುಯಲ್ ಸಿಮ್ ಅನ್ನು ಹೊಂದಿದ್ದಾರೆ. ಈ ಎರಡು ಸಿಮ್ಗಳನ್ನು ಬಳಸುವುದೇ ಒಂದು ಟ್ರೆಂಡ್ ಆಗಿದೆ. ಆದರೆ ಕೆಲ ವರ್ಷಗಳಿಂದ ಪ್ರತಿಯೊಂದು ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್ ಯೋಜನೆಯನ್ನು ಒಂದೇ ರೀತಿ ಬಿಡುಗಡೆ ಮಾಡಿದೆ. ಆದ್ದರಿಂದ ಈಗ ಕೇವಲ ಒಂದೇ ಸಿಮ್ಗಳನ್ನು ಮಾತ್ರ ಮತ್ತೆ ಬಳಸಲು ಆರಂಭಿಸಿದ್ದಾರೆ.
ರೀಚಾರ್ಜ್ ವ್ಯಾಲಿಡಿಟಿಯಲ್ಲಿ ಬದಲಾವಣೆ
ಹಿಂದಿನ ಸಿಮ್ ಬಳಕೆ ಮಾಡಬೇಕಾದರೆ ಅದು ಆ್ಯಕ್ಟಿವ್ ಆಗಿರಲು ಪದೇ ಪದೇ ರೀಚಾರ್ಜ್ ಮಾಡಬೇಕೆಂದಿರಲಿಲ್ಲ. ಒಮ್ಮೆ ರೀಚಾರ್ಜ್ ಮಾಡಿದರೆ ಮತ್ತೆ ಯಾರಿಗೆ ಬೇಕಾದರು ಕಾಲ್ ಮಾಡಬಹುದಿತ್ತು. ಆದರೆ ಕೆಲವರ್ಷಗಳ ಹಿಂದೆ ಟೆಲಿಕಾಂ ಕಂಪನಿಗಳು ಈ ನಿಯಮವನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿದೆ. ಈ ಮೂಲಕ ಇದು ಒಂದು ಸಿಮ್ ಕಾರ್ಡ್ ಆ್ಯಕ್ಟಿವ್ ಇರಬೇಕಾದರೆ ಪ್ರತೀ ತಿಂಗಳು ರೀಚಾರ್ಜ್ ಮಾಡಬೇಕು. ಇಲ್ಲದಿದ್ದರೆ ಯಾವುದೇ ಇಂಟರ್ನೆಟ್, ಕಾಲ್ ಸೌಲಭ್ಯಗಳು ದೊರೆಯುವುದಿಲ್ಲ.
ಇದನ್ನೂ ಓದಿ: ಅಮೆಜಾನ್ನಿಂದಲೂ 20 ಸಾವಿರ ಉದ್ಯೋಗಿಗಳ ವಜಾ, ಡೆಲಿವರಿ ಬಾಯ್ಸ್ಗೀಗ ಆತಂಕ!
ಈ ಕಾರಣದಿಂದ ಡ್ಯುಯಲ್ ಸಿಮ್ ಹೊಂದಿರುವವರು ಪ್ರತೀ ಸಿಮ್ನ ರೀಚಾರ್ಜ್ ವ್ಯಾಲಿಡಿಟಿ ಮುಗಿದ ಕೂಡಲೇ ಸಿಮ್ಗಳಿಗೆ ಉತ್ತಮ ವ್ಯಾಲಿಡಿಟಿ ಹೊಂದಿರುವ ಡೇಟಾ, ಅನ್ಲಿಮಿಟೆಡ್ ಕಾಲ್ ಸೌಲಭ್ಯವನ್ನು ಹೊಂದಿರುವ ರೀಚಾರ್ಜ್ ಅನ್ನು ಮಾಡಬೇಕು. ಒಂದು ವೇಳೆ ರೀಚಾರ್ಜ್ ಮಾಡದಿದ್ದರೆ ಸಿಮ್ಗೆ ಸಂಬಂಧಪಟ್ಟ ಟೆಲಿಕಾಂ ಕಂಪನಿಯಿಂದ ಕಾಲ್ ಮಾಡಿ ರೀಚಾರ್ಜ್ ಮಾಡಬೇಕು ಇಲ್ಲವಾದರೆ ನಿಮ್ಮ ಸಿಮ್ನ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸುತ್ತಾರೆ. ಇದರಿಂದ ಎರಡೂ ಸಿಮ್ಗೆ ಪ್ರತ್ಯೇಕವಾಗಿ ರೀಚಾರ್ಜ್ ಮಾಡಬೇಕಾಗಿದೆ.
ಎಲ್ಲಾ ಟೆಲಿಕಾಂ ಕಂಪನಿಗಳ ರೀಚಾರ್ಜ್ ಯೋಜನೆಗಳು ಒಂದೇ ರೀತಿಯಾಗಿವೆ
ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲಾ ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್ಗಳು ಒಂದೇ ರೀತಿಯಾಗಿದೆ. ಅದ್ದರಿಂದ ಬಳಕೆದಾರರು ಹೆಚ್ಚಾಗಿ ಈಗ ಒಂದೇ ಸಿಮ್ ಅನ್ನು ಬಳಸಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಈ ವರ್ಷದ ಎಪ್ರಿಲ್ನಲ್ಲಿ ಸುಮಾರು 70 ಲಕ್ಷ ಜನರು ಸಿಮ್ ಬಳಸುವುದನ್ನೇ ನಿಲ್ಲಿಸಿದ್ದಾರೆ. ಇವುಗಳಲ್ಲಿ ವೊಡಾಫೋನ್-ಐಡಿಯಾ ಮೊದಲ ಸ್ಥಾನದಲ್ಲಿದ್ದರೆ, ಭಾರ್ತಿ ಏರ್ಟೆಲ್ ದ್ವಿತೀಯ ಸ್ಥಾನದಲ್ಲಿದೆ.
ರೀಚಾರ್ಜ್ ದರದಲ್ಲಿ ಮತ್ತೆ ಹೆಚ್ಚಳ:
ಟೆಲಿಕಾಂ ಕಂಪನಿಗಳು ಕೆಲವೇ ದಿನಗಳಲ್ಲಿ ಮತ್ತೆ ತಮ್ಮ ಪ್ರೀಪೇಯ್ಡ್ ರೀಚಾರ್ಜ್ ಅನ್ನು ಹೆಚ್ಚಿಸಲಿದೆ ಎಂದು ವರದಿಯಾಗಿದೆ. ಈ ಏರಿಕೆಯಿಂದ ಮತ್ತೆ ಎರಡು ಸಿಮ್ಗಳನ್ನು ಹೊಂದಿರುವವರಿಗೆ ಹೊರೆಯಾಗಲಿದೆ. ಕಳೆದ ನವೆಂಬರ್ - ಡಿಸೆಂಬರ್ನಲ್ಲಿ ಕಂಪನಿಗಳು ತನ್ನ ರೀಚಾರ್ಜ್ ಬೆಲೆಯನ್ನು ಹೆಚ್ಚಿಸಿತ್ತು. ಇದೀಗ ಈ ಸಂದರ್ಭ ಮತ್ತೆ ಮರುಕಳಿಸಲಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ 5ಜಿ ಸೇವೆ ಕೂಡ ಆರಂಭವಾಗುವುದರಿಂದ ರೀಚಾರ್ಜ್ ಪ್ಲಾನ್ ಹೆಚ್ಚಳವಾಗುವದು ಮಾತ್ರ ಗ್ಯಾರಂಟಿ ಎಂದು ಕೆಲ ವರದಿಗಲು ಹೇಳಿವೆ.
ಈ ಎಲ್ಲಾ ಕಾರಣಗಳಿಂದ ಡ್ಯುಯಲ್ ಸಿಮ್ಗಳಿಂದ ಒಂದು ಸಿಮ್ನ ಬಳಕೆ ಬದಲಅವಣೆಯಾಗಲಿದೆ. ಈ ಬೆಳವಣಿಗೆಗಳೇ ಇದಕ್ಕೆಲ್ಲಾ ಕಾರಣ ಎಮದು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ