ಕದ್ದು ಮುಚ್ಚಿ ಪೋರ್ನ್​ ವಿಡಿಯೋ ನೋಡುತ್ತಿದ್ದೀರಾ? ಹಾಗಿದ್ರೆ ಎಚ್ಚರ

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವೊಂದು ನಡೆಸಿದ ಸಂಶೋಧನೆಯಿಂದ ‘ಇನ್​ಕಾಗ್ನಿಟೋ ಮೋಡ್‘​ನಲ್ಲಿ ಬ್ರೌಸ್​ ಮಾಡಿದ ಎಲ್ಲಾ ಪೋರ್ನ್​ ವೆಬ್​ಸೈಟ್​​ಗಳು ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತವೆ ಎಂಬ ವಿಚಾರವನ್ನು ಬೆಳಕಿಗೆ ತಂದಿದೆ.

news18
Updated:July 21, 2019, 2:23 PM IST
ಕದ್ದು ಮುಚ್ಚಿ ಪೋರ್ನ್​ ವಿಡಿಯೋ ನೋಡುತ್ತಿದ್ದೀರಾ? ಹಾಗಿದ್ರೆ ಎಚ್ಚರ
@VI
  • News18
  • Last Updated: July 21, 2019, 2:23 PM IST
  • Share this:
ಮೊಬೈಲ್​ನಲ್ಲಿ ಕದ್ದು ಮುಚ್ಚಿ ಪೋರ್ನ್​ ವಿಡಿಯೋ ನೋಡುವ ಅಭ್ಯಾಸವಿದೆಯಾ? ನೀವು ಡಿಜಿಟಲ್ ಬುದ್ದಿವಂತರಾಗಿದ್ದು ಯಾರಿಗೂ ತಿಳಿಯದಂತೆ ‘ಇನ್​ಕಾಗ್ನಿಟೋ ಮೋಡ್‘​ನಲ್ಲಿ ನೋಡುತ್ತಿದ್ದೀರಾ? ಹಾಗಿದ್ದರೆ, ಎಚ್ಚರ. ನಿಮ್ಮ ಮಾಹಿತಿ ಸೋರಿಕೆಯಾಗುತ್ತಿದೆ.

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವೊಂದು ನಡೆಸಿದ ಸಂಶೋಧನೆಯಿಂದ ‘ಇನ್​ಕಾಗ್ನಿಟೋ ಮೋಡ್‘​ನಲ್ಲಿ ಬ್ರೌಸ್​ ಮಾಡಿದ ಎಲ್ಲಾ ಪೋರ್ನ್​ ವೆಬ್​ಸೈಟ್​​ಗಳು ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತವೆ ಎಂಬ ವಿಚಾರವನ್ನು ಬೆಳಕಿಗೆ ತಂದಿದೆ.

ಯಾರಿಗೂ ತಿಳಿಯದೇ ಇನ್​ಕಾಗ್ನಿಟೊ ಮೋಡ್​ನಲ್ಲಿ ಅಶ್ಲೀಲ ವಿಡಿಯೋ ನೋಡಿದರೆ ಬಳಕೆದಾರರ ಐಪಿ ವಿಳಾಸ ಮತ್ತು ಖಾಸಗಿ ಮಾಹಿತಿಯನ್ನು ಸಂಗ್ರಹಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಂತೆಯೇ, ಪೋರ್ನ್​ ವೆಬ್​ಸೈಟ್​ಗಳು  ಮಾಹಿತಿಯನ್ನು ಹೇಗೆ ಸೋರಿಕೆ ಮಾಡುತ್ತಿವೆ ಎಂಬುದನ್ನು ಕಂಡುಹಿಡಿಯಲು ವೆಬ್​ಎಕ್ಸ್​ರೇ ಎಂಬ ಟೂಲ್​ ಬಳಸಿ ಈ ಸತ್ಯಾಂಶವನ್ನು ಬೆಳಕಿಗೆ ತಂದಿದ್ದಾರೆ . ಈ ಮೂಲಕ ಬಳಕೆದಾರನ ಮಾಹಿತಿಯನ್ನು ಸಂಗ್ರಹಿಸುತ್ತಿರುವ 22,484 ಪೋರ್ನ್​ ವೆಬ್​ಸೈಟ್​ಗಳ ಮಾಹಿತಿಯನ್ನು ಕಲೆಹಾಕಿದ್ದಾರೆ.

ಇದನ್ನೂ ಓದಿ: ಶಿಯೋಮಿ ಸಂಸ್ಥೆಯಿಂದ ಹೊಸ ಪವರ್​ಬ್ಯಾಂಕ್​ ಬಿಡುಗಡೆ; ಇದರ ಸಾಮರ್ಥ್ಯವೆಷ್ಟು ಗೊತ್ತಾ?

ಸಂಶೋಧಕರ ಪ್ರಕಾರ ಶೇ.93 ರಷ್ಟು ವೆಬ್​ಸೈಟ್​ಗಳು ಬಳಕೆದಾರರ ಮಾಹಿತಿಯನ್ನು ಥರ್ಡ್​ ಪಾರ್ಟಿಗೆ ಸೋರಿಕೆ ಮಾಡುತ್ತಿವೆ ಎಂದು ತಿಳಿಸಿದೆ. ಅದರಲ್ಲಿ ಗೂಗಲ್​ ಮತ್ತು ಅದರ ಅಂಗ ಸಂಸ್ಥೆಯಿಂದಲೆ ಹೆಚ್ಚಿನ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಹೇಳಿದೆ.
First published: July 20, 2019, 11:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading