Prepaid Recharge: 100 ರೂ. ಒಳಗಿನ ಪ್ರಿಪೇಯ್ಡ್ ರೀಚಾರ್ಜ್‌ನಲ್ಲಿ ಇನ್ಮುಂದೆ SMS ಆಫರ್ ಲಭ್ಯವಿಲ್ಲ..!

ಭಾರತದಲ್ಲಿರುವ ಪ್ರೀಪೇಯ್ಡ್ ಬಳಕೆದಾರರು ಇನ್ನುಮುಂದೆ ಕಡಿಮೆ ದರದ ಪ್ರೀಪೇಯ್ಡ್ ರೀಚಾರ್ಜ್ ಪ್ಯಾಕ್‌ನಲ್ಲಿ ಎಸ್‌ಎಮ್‌ಎಸ್(SMS) ಅನುಕೂಲಗಳನ್ನು ಪಡೆಯುವುದಿಲ್ಲ. ಭಾರತದ ಪ್ರಮುಖ ಟೆಲಿಕಾಂ ದಿಗ್ಗಜರು ಈ ತೀರ್ಮಾನ ಕೈಗೊಂಡಿದ್ದು 100 ರೂ. ಒಳಗಿನ ರೀಚಾರ್ಜ್ ಪ್ಯಾಕ್‌ನಲ್ಲಿ ಎಸ್‌ಎಮ್‌ಎಸ್ ಯೋಜನೆಯಲ್ಲಿ ಬದಲಾವಣೆ ಮಾಡಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಜಿಯೋ, ಏರ್‌ಟೆಲ್, ವೋಡಾಫೋನ್, ಐಡಿಯಾ(Jio, Airtel, Vodafone, Idea) ಬಳಕೆದಾರರು ಇನ್ನು ಮುಂದೆ ಆರಂಭಿಕ ಹಂತದ ರೀಚಾರ್ಜ್ ಯೋಜನೆಯಲ್ಲಿ ಎಸ್‌ಎಮ್‌ಎಸ್(SMS) ಪ್ರಯೋಜನಗಳನ್ನು ಪಡೆಯುವುದಿಲ್ಲ. ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಈ ಹಿಂದೆ ಆರಂಭಿಕ ಹಂತದ ರೀಚಾರ್ಜ್ ಯೋಜನೆಯಲ್ಲಿ ಸಾಕಷ್ಟು ಎಸ್‌ಎಮ್‌ಎಸ್ ಯೋಜನೆಗಳನ್ನು ನೀಡುತ್ತಿದ್ದು ಇದೀಗ ARPU (ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ) ಹೆಚ್ಚಿಸುವ ಸಲುವಾಗಿ ಎಸ್‌ಎಮ್ಎಸ್ ಯೋಜನೆಗಳನ್ನು ನೀಡದೇ ಇರುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.


ಭಾರತದಲ್ಲಿರುವ ಪ್ರೀಪೇಯ್ಡ್ ಬಳಕೆದಾರರು ಇನ್ನುಮುಂದೆ ಕಡಿಮೆ ದರದ ಪ್ರೀಪೇಯ್ಡ್ ರೀಚಾರ್ಜ್ ಪ್ಯಾಕ್‌ನಲ್ಲಿ ಎಸ್‌ಎಮ್‌ಎಸ್(SMS) ಅನುಕೂಲಗಳನ್ನು ಪಡೆಯುವುದಿಲ್ಲ. ಭಾರತದ ಪ್ರಮುಖ ಟೆಲಿಕಾಂ ದಿಗ್ಗಜರು ಈ ತೀರ್ಮಾನ ಕೈಗೊಂಡಿದ್ದು 100 ರೂ. ಒಳಗಿನ ರೀಚಾರ್ಜ್ ಪ್ಯಾಕ್‌ನಲ್ಲಿ ಎಸ್‌ಎಮ್‌ಎಸ್ ಯೋಜನೆಯಲ್ಲಿ ಬದಲಾವಣೆ ಮಾಡಿವೆ. ಟೆಲಿಕಾಂ ಕಂಪೆನಿಗಳು ಕೈಗೊಂಡಿರುವ ಬೃಹತ್ ಕಾರ್ಯತಂತ್ರ ಇದಾಗಿದ್ದು ಈ ರೀತಿಯ ಮಾರ್ಪಾಡು ಹೊಸದೇನಲ್ಲ.


ಇತ್ತೀಚಿನ ಬದಲಾವಣೆಗೂ ಮುನ್ನ ಟೆಲಿಕಾಂ ಆಪರೇಟರ್‌ಗಳು ಆರಂಭಿಕ ಹಂತದ ರೀಚಾರ್ಜ್ ಪ್ಯಾಕ್‌ಗಳೊಂದಿಗೆ ಕರೆ ಸಮಯ, ಎಸ್‌ಎಮ್‌ಎಸ್, ಇಂಟರ್ನೆಟ್ ಬಳಕೆಗಾಗಿ ಡೇಟಾ ಒದಗಿಸಿದ್ದವು. ಇದೀಗ ಕೈಗೊಂಡಿರುವ ಹೊಸ ನಿರ್ಧಾರವು ಎಸ್‌ಎಮ್‌ಎಸ್ ಆಫರ್ ಅನ್ನು ಈ ಸಾಲಿನಿಂದ ತೆಗೆದುಹಾಕಿದೆ.


ಇದನ್ನೂ ಓದಿ:Instagram: 16 ವರ್ಷದೊಳಗಿನವರ ಇನ್​ಸ್ಟಾಗ್ರಾಮ್​​ ಖಾತೆ ಇನ್ಮೇಲೆ ಸಂಪೂರ್ಣ Private...!

ಭಾರತದಲ್ಲಿರುವ ಟೆಲಿಕಾಂ ಸೇವೆಗಳಲ್ಲಿ ಈ ಹೊಸ ಬದಲಾವಣೆಯನ್ನು ಕಾಣಬಹುದಾಗಿದೆ. ಏರ್‌ಟೆಲ್ ಹಾಗೂ ಜಿಯೋ 100 ರೂ. ಒಳಗಿನ ರೀಚಾರ್ಜ್ ಯೋಜನೆಯಲ್ಲಿ ಕೆಲವೊಂದು ಆಫರ್‌ಗಳನ್ನು ಮಾತ್ರ ನೀಡುತ್ತಿವೆ, ವೋಡಾಫೋನ್ ಹಾಗೂ ಐಡಿಯಾ ತಮ್ಮ ಚಂದಾದಾರಿಗೆ ಹೆಚ್ಚಿನ ಪ್ರೀಪೇಯ್ಡ್ ರಿಚಾರ್ಜ್ ಪ್ಲಾನ್‌ಗಳನ್ನು ಒದಗಿಸುತ್ತಿದ್ದರೂ ಎಸ್‌ಎಮ್‌ಎಸ್ ಯೋಜನೆಗಳನ್ನು ಒದಗಿಸಿಲ್ಲ.


ಏರ್‌ಟೆಲ್ ಇದೀಗ ಅತ್ಯಂತ ಕಡಿಮೆ ದರದ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ ಅಂದರೆ 79 ರೂ.ಗೆ ನೀಡಿದ್ದು ಇದರಲ್ಲಿ ಗ್ರಾಹಕರು 64 ರೂ. ಟಾಕ್‌ಟೈಮ್ ಹಾಗೂ 200 ಎಮ್‌ಬಿ ಡೇಟಾವನ್ನು 28 ದಿನಗಳಿಗೆ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸಿರುವ ಅಂಶವೆಂದರೆ ಯಾವುದೇ ಔಟ್‌ಗೋಯಿಂಗ್ ಎಸ್‌ಎಮ್ಎಸ್ ಯೋಜನೆಯಿಲ್ಲ. ಈ ಹಿನ್ನೆಲೆ ಬಳಕೆದಾರರು ಪ್ರತಿಯೊಂದು ಟೆಕ್ಸ್ಟ್ ಮೆಸೇಜ್‌ಗಾಗಿ ಶುಲ್ಕ ನೀಡಬೇಕಾಗುತ್ತದೆ.


ಇದನ್ನೂ ಓದಿ:Explainer: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಪುಲ್ಲೇಲ ಗೋಪಿಚಂದ್ ಬಿಟ್ಟು, ದಕ್ಷಿಣ ಕೊರಿಯಾದ ಕೋಚ್‌ ಬಳಿ ತರಬೇತಿ ಪಡೆಯುತ್ತಿರುವುದೇಕೆ..?

ಜಿಯೋ 98 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯನ್ನು ಒದಗಿಸಿದ್ದು ಇದು ಗ್ರಾಹಕರಿಗೆ 1.5ಜಿಬಿ ಡೇಟಾವನ್ನು 14 ದಿನಗಳಿಗೆ ನೀಡಲಿದೆ. ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್ ಹಾಗೂ ಜಿಯೋ ಚಾಲಿತ ಸೇವೆಗಳಿಗೆ ಚಂದಾದಾರಿಕೆಗಳನ್ನು ನೀಡಲಾಗಿದ್ದು ಎಸ್‌ಎಮ್‌ಎಸ್ ಯೋಜನೆಯನ್ನು ನಮೂದಿಸಿಲ್ಲ. ಒಟ್ಟಿನಲ್ಲಿ ಕಡಿಮೆ ದರದ ರೀಚಾರ್ಜ್ ಪ್ಲಾನ್ ನೀವು ಆಯ್ಕೆಮಾಡಿಕೊಂಡಲ್ಲಿ ಎಸ್‌ಎಮ್‌ಎಸ್ ಶುಲ್ಕವನ್ನು ನೀವೇ ಭರಿಸಬೇಕಾಗುತ್ತದೆ.
ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದ ಗ್ರಾಹಕರ ಮೇಲೆ ಎಸ್‌ಎಮ್‌ಎಸ್ ಪ್ಯಾಕ್ ಇಲ್ಲದಿರುವ ಆಫರ್ ಪರಿಣಾಮಕಾರಿಯಾಗಿ ಪ್ರಭಾವ ಬೀರಲಿದೆ. ಹೆಚ್ಚಿನ ಆನ್‌ಲೈನ್ ಸೇವೆಗಳು ಪ್ರಸ್ತುತ ಪರಿಶೀಲನೆ ಎಸ್‌ಎಮ್‌ಎಸ್ ಅನ್ನು ಪ್ರಾರಂಭಿಸಿವೆ. ಆರಂಭಿಕ ಹಂತದ ಯೋಜನೆಗಳಲ್ಲಿ ಎಸ್‌ಎಮ್‌ಎಸ್ ಸೇವೆಗಳು ಲಭ್ಯವಿರದೇ ಇರುವುದರಿಂದ ಬಳಕೆದಾರರು ಹೆಚ್ಚಿನ ಬೆಲೆಯ ರೀಚಾರ್ಜ್ ಯೋಜನೆಗಳನ್ನು ಆಯ್ಕೆಮಾಡಿಕೊಳ್ಳಲೇಬೇಕಾಗಿದೆ.

Published by:Latha CG
First published: