HOME » NEWS » Tech » NISSAN MAGNITE LAUNCHED AT INTRODUCTORY PRICE OF RS 4 99 LAKH UNDERCUTS RIVALS BY RS 1 7 LAKH HG

ಕಡಿಮೆ ಬೆಲೆಗೆ ನೂತನ ನಿಸಾನ್​ ಮ್ಯಾಗ್ನೈಟ್​​ ಕಾರು ಮಾರಾಟ; ಹೇಗಿದೆ ಗೊತ್ತಾ ಫೀಚರ್ಸ್​​​?

Nissan Magnite: ಸಬ್​-ಕಾಂಪ್ಯಾಕ್ಟ್​ ಎಸ್​​ಯುವಿ ಮ್ಯಾಗ್ನೈಟ್ ಕಾರು ಎಕ್ಸ್​ಇ, ಎಕ್ಸ್​ಎಲ್​​, ಎಕ್ಸ್​ವಿ ಮತ್ತು ಎಕ್ಸ್​ವಿ ಪ್ರಿಮಿಯಂ ವೇರಿಯಂಟ್​ನಲ್ಲಿ ಗ್ರಾಹಕರಿಗಾಗಿ ಪರಿಚಯಿಸಿದೆ.

news18-kannada
Updated:December 2, 2020, 2:59 PM IST
ಕಡಿಮೆ ಬೆಲೆಗೆ ನೂತನ ನಿಸಾನ್​ ಮ್ಯಾಗ್ನೈಟ್​​ ಕಾರು ಮಾರಾಟ; ಹೇಗಿದೆ ಗೊತ್ತಾ ಫೀಚರ್ಸ್​​​?
Nissan Magnite
  • Share this:
ಜಪಾನ್​ ಮೂಲಕ ಕಂಪನಿಯಾದ ನಿಸಾನ್ ಬುಧವಾರದಂದು ಸಬ್​-ಕಾಂಪ್ಯಾಕ್ಟ್​ ಎಸ್​​ಯುವಿ ಮ್ಯಾಗ್ನೈಟ್​​ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಕಾರಿನ ಪ್ರಾರಂಭಿಕ ಬೆಲೆ 4.99 ರೂ ಎಂದು ಕಂಪನಿ ತಿಳಿಸಿದೆ. ಇನ್ನು ಎಲ್ಲಾ ಫೀಚರ್ಸ್​​ ಒಳಗೊಂಡ ಟಾಪ್​ ವೇರಿಯಂಟ್​ ಕಾರಿನ ಬೆಲೆ 9.35 ಲಕ್ಷ ರೂ ಆಗಿದೆ.

ಸದ್ಯ ಡಿಸೆಂಬರ್​ 31ರವರೆಗೆ ಕಾರಿನ ಬೆಲೆ 4.99 ಲಕ್ಷ ರೂ ಇರಲಿದೆ. ಜನವರಿ ನಂತರ ಸಬ್​-ಕಾಂಪ್ಯಾಕ್ಟ್​ ಎಸ್​​ಯುವಿ ಮ್ಯಾಗ್ನೈಟ್ ಕಾರಿನ ಎಕ್ಸ್​ ಶೋ ರೂಂ ಬೆಲೆ 5.54 ಲಕ್ಷ ರೂ ಇರಲಿದೆ.

ಸಬ್​-ಕಾಂಪ್ಯಾಕ್ಟ್​ ಎಸ್​​ಯುವಿ ಮ್ಯಾಗ್ನೈಟ್ ಕಾರು ಎಕ್ಸ್​ಇ, ಎಕ್ಸ್​ಎಲ್​​, ಎಕ್ಸ್​ವಿ ಮತ್ತು ಎಕ್ಸ್​ವಿ ಪ್ರಿಮಿಯಂ ವೇರಿಯಂಟ್​ನಲ್ಲಿ ಗ್ರಾಹಕರಿಗಾಗಿ ಪರಿಚಯಿಸಿದೆ.

ನೂತನ ಕಾರು ಬೆಲೆ ರೂಪದಲ್ಲಿ ಗಮನಿಸಿದಾಗ ಮಾರುತಿ ಸುಜುಕಿ ಕಂಪನಿಯ ವಿತಾರ ಬ್ರೇಜಾ, ಹುಂಡೈ ವೆನ್ಯು, ಕಿಯಾ ಸೋನೆಟ್​, ಟಾಟಾ ನೆಕ್ಸಾನ್​, ಫೋರ್ಡ್​​ ಎಕೋಸ್ಪೋರ್ಟ್​​​​ ಮತ್ತು ಮಹೀಂದ್ರಾ ಕೆಯುವಿ300 ಕಾರಿನ ಬೆಲೆಗೆ ಸ್ಪರ್ಧಿಯಾಗಿದೆ.

ಸಬ್​-ಕಾಂಪ್ಯಾಕ್ಟ್​ ಎಸ್​​ಯುವಿ ಮ್ಯಾಗ್ನೈಟ್ಟ್ ಕಾರು ಎರಡು ಪೆಟ್ರೋಲ್​ ಎಂಜಿನ್​ ಆಯ್ಕೆಯಲ್ಲಿ ಪರಿಚಯಿಸಿದೆ. 1.0 ಲೀಟರ್​​ ಮತ್ತು 1.0 ಲೀಟರ್​​​ ಹೆಚ್​ಆರ್​​​ಎ0 ಟರ್ಬೊ ಆಯ್ಕೆಯಲ್ಲಿದೆ. ಕಂಪನಿ ಸಿವಿಟಿ ಆಟೋಮ್ಯಾಟಿಕ್​ ಅಥವಾ ಫೈವ್​ ಸ್ಪೀಡ್​ ಮ್ಯಾನುಯೆಲ್​ ಆಯ್ಕೆಯಲ್ಲಿ ಖರೀದಿಸುವ ಆಯ್ಕೆ ನೀಡಿದೆ.  ಮೂರು ಸಿಲಿಂಡರ್​​ 98 ಬಿಹೆಚ್​ಪಿ ಪವರ್​ 5 ಸಾವಿರ ಆರ್​ಪಿಎಂ ಮತ್ತು 160 ಎನ್​ಎಮ್​ ಟಾರ್ಕ್​​  ಉತ್ಪಾದಿಸುತ್ತದೆ.

ಇನ್ನು ಕಾರಿನಲ್ಲಿ ಡ್ರೈವರ್​ ಅಸಿಸ್ಟ್​​ ಡಿಸ್​ಪ್ಲೇ, ಬಿ-ಪ್ರೊಜೆಕ್ಟರ್​ ಎಲ್​ಇಡಿ ಹೆಡ್​ಲ್ಯಾಂಪ್​ ಜೊತೆಗೆ ಎಲ್ಇಡಿ ಲೈಟ್​ ಗೈಡ್​, ಆ್ಯಂಟಿ ಲಾಕ್​​ ಬ್ರೇಕಿಂಗ್​​ ಸಿಸ್ಟಂ, ಎಲೆಕ್ಟ್ರಾನಿಕ್​​ ಸ್ಟೆಬಿಲಿಟಿ ಕಂಟ್ರೋಲ್​ ಮತ್ತು ಟ್ರಾಕ್ಷನ್​ ಕಂಟ್ರೋಲ್​ ಸಿಸ್ಟಂ, ವೆಹಿಕಲ್​ ಡೈನಮಿಕ್​ ಕಂಟ್ರೋಲ್​ ಸಿಸ್ಟಂ, ಡುಯೆಲ್​ ಏರ್​ಬ್ಯಾಗ್​, ಆ್ಯಂಡ್ರಾಯ್ಡ್​​ ಮತ್ತು ಆ್ಯಪಲ್​ ಕ್ಯಾರ್​ಪ್ಲೇ ವೈರ್​ಲೆಸ್​​ ಕನೆಕ್ಟಿವಿಟಿ ನೀಡಲಾಗಿದೆ.
Published by: Harshith AS
First published: December 2, 2020, 2:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories