HOME » NEWS » Tech » NISSAN KICKS YEAR END DISCOUNT RS 65000 OFF NISSAN KICKS SUV CAR HG

Nissan Kicks year-end discount: ನಿಸಾನ್​ ಕಂಪನಿ ಈ ಕಾರಿನ ಮೇಲೆ ನೀಡಿದೆ ವರ್ಷಾಂತ್ಯದ ಡಿಸ್ಕೌಂಟ್​​!

ನಿಸ್ಸಾಸ್​ ಕಿಕ್ಸ್​ ಎಸ್​ಯುವಿ ಕಾರುಗಳ ಮೇಲೆ ಈ ಆಫರ್​ ಒದಗಿಸಲಿದೆ. ಇನ್ನು ಕಾರಿನ ಮೇಲೆ 15 ಸಾವಿರ ಕ್ಯಾಶ್​ ಡಿಸ್ಕೌಂಟ್​ ನೀಡುತ್ತಿದೆ. ಜೊತೆಗೆ 50 ಸಾವಿರದವರೆಗೆ ಎಕ್ಸ್​ಚೇಂಜ್​ ಬೆನಿಫಿಟ್ಸ್​ ಒದಗಿಸುತ್ತಿದೆ.

news18-kannada
Updated:December 6, 2020, 3:25 PM IST
Nissan Kicks year-end discount: ನಿಸಾನ್​ ಕಂಪನಿ ಈ ಕಾರಿನ ಮೇಲೆ ನೀಡಿದೆ ವರ್ಷಾಂತ್ಯದ ಡಿಸ್ಕೌಂಟ್​​!
Nissan Kicks
  • Share this:
2020ನೇ ವರ್ಷಾಂತ್ಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ . ಈಗಾಗಲೇ ಕೆಲವು ಕಾರು ಕಂಪನಿಗಳು  ಕಾರುಗಳ ಮೇಲೆ ವರ್ಷಾಂತ್ಯದ ಆಫರ್​​ ಹೊರಡಿಸಿದೆ. ಹೋಂಡಾ ಕಾರು ಕಂಪನಿ ಕೆಲ ಕಾರುಗಳ ಮೇಲೆ ಆಫರ್​ ನೀಡಿದೆ. ಇದೀಗ ನಿಸಾನ್​ ಕಂಪನಿ ಕೂಡ ಭರ್ಜರಿ ಆಫರ್​ ಹೊತ್ತುತಂದಿದೆ. 65 ಸಾವಿರದವರೆಗೆ ಬೆನಿಫಿಟ್​ ನೀಡಿದೆ.

ನಿಸ್ಸಾಸ್​ ಕಿಕ್ಸ್​ ಎಸ್​ಯುವಿ ಕಾರುಗಳ ಮೇಲೆ ಈ ಆಫರ್​ ಒದಗಿಸಲಿದೆ. ಇನ್ನು ಕಾರಿನ ಮೇಲೆ 15 ಸಾವಿರ ಕ್ಯಾಶ್​ ಡಿಸ್ಕೌಂಟ್​ ನೀಡುತ್ತಿದೆ. ಜೊತೆಗೆ 50 ಸಾವಿರದವರೆಗೆ ಎಕ್ಸ್​ಚೇಂಜ್​ ಬೆನಿಫಿಟ್ಸ್​ ಒದಗಿಸುತ್ತಿದೆ.

ಕಿಕ್ಸ್​​​ ಕಾರು 1.3 ಲೀಟರ್​ ಟರ್ಬೊ ಪೆಟ್ರೋಲ್​ ಎಂಜಿನ್​ ಹೊಂದಿದೆ. 154ಹೆಚ್​ಪಿ ಪವರ್​ ಮತ್ತು 256ಎನ್​ಎಮ್​ ಉತ್ಪಾದಿಸುತ್ತದೆ. ಸಿವಿಟಿ ಮತ್ತು 6 ಸ್ಪೀಡ್​ ಮ್ಯಾನುಯೆಲ್​ ಗೇರ್​ ಹೊಂದಿದೆ.

ಇನ್ನು ಪೆಟ್ರೋಲ್​ ಮತ್ತು ಡಿಸೇಲ್​ ಎರಡು ವೇರಿಯಂಟ್​ನಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಹೊಸ ವರ್ಷದ ಪ್ರಾರಂಭಕ್ಕೂ ಮುನ್ನ ನಿಸಾನ್​ ಕಿಕ್ಸ್​ ಕಾರಿನ ಮೇಲೆ ವರ್ಷಾಂತ್ಯದ ಆಫರ್​ ಹೊರಡಿಸಿದೆ.
Published by: Harshith AS
First published: December 6, 2020, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories