HOME » NEWS » Tech » NISSAN DATSUN ROLL OUT DISCOUNTS OF UP TO RS 95000 THIS FEBRUARY HG

ಫೆಬ್ರವರಿ ತಿಂಗಳ ಆಫರ್​ ನೀಡಿದ Nissan-Datsun; ಕಾರುಗಳ ಮೇಲೆ 95 ಸಾವಿರದಷ್ಟು ಬೆನಿಫಿಟ್ಸ್​!

ಇದೀಗ ನಿಸ್ಸಾನ್​ ಮತ್ತು ದಟ್ಸನ್​ ಕಾರುಗಳು ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಿದೆ. ಫೆಬ್ರವರಿ ತಿಂಗಳ ಆಫರ್​ ಇದಾಗಿದ್ದು, 95 ಸಾವಿರ ರೂ.ಗಳಷ್ಟು ಬೆನಿಫಿಟ್ಸ್​ ನೀಡಿದೆ.

news18-kannada
Updated:February 18, 2021, 12:54 PM IST
ಫೆಬ್ರವರಿ ತಿಂಗಳ ಆಫರ್​ ನೀಡಿದ Nissan-Datsun; ಕಾರುಗಳ ಮೇಲೆ 95 ಸಾವಿರದಷ್ಟು ಬೆನಿಫಿಟ್ಸ್​!
Nissan
  • Share this:


ಫೆಬ್ರವರಿ ತಿಂಗಳ ವಿಶೇಷವಾಗಿ ಮಾರುತಿ ಸುಜುಕಿ, ಮಹೀಂದ್ರಾ ಕಾರು ಸಂಸ್ಥೆ ಕಾರುಗಳ ಮೇಲೆ ಡಿಸ್ಕೌಂಟ್​ ನೀಡುತ್ತಿದೆ. ಅದರಂತೆ ಇದೀಗ ನಿಸ್ಸಾನ್​ ಮತ್ತು ದಟ್ಸನ್​ ಕಾರುಗಳು ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಿದೆ. ಫೆಬ್ರವರಿ ತಿಂಗಳ ಆಫರ್​ ಇದಾಗಿದ್ದು, 95 ಸಾವಿರ ರೂ.ಗಳಷ್ಟು ಬೆನಿಫಿಟ್ಸ್​ ನೀಡಿದೆ.

ನಿಸ್ಸಾನ್​ ಕಿಕ್ಸ್​: ಈ ಕಾರಿನ ಬೆಲೆ 9.49 ಲಕ್ಷದಿಂದ ಪ್ರಾರಂಭವಾಗಿ 14.64 ಲಕ್ಷದವರೆಗೆ ಇದೆ. ಕಂಪನಿ ಫೆಬ್ರವರಿ ತಿಂಗಳ ಆಫರ್​ ಪ್ರಯುಕ್ತ 25 ಸಾವಿರ ಕ್ಯಾಶ್​​ ಡಿಸ್ಕೌಂಟ್​ ನೀಡುತ್ತಿದೆ. ಜೊತೆಗೆ 50 ಸಾವಿರ ಎಕ್ಸ್​ಚೇಂಜ್​ ಆಫರ್​ ಹಾಗೂ 20 ಸಾವಿರ ಲಾಯಲ್ಟಿ ಬೆನಿಫಿಟ್ಸ್​ ನೀಡುತ್ತಿದೆ. ಒಟ್ಟಿನಲ್ಲಿ ಗ್ರಾಹಕರಿಗಾಗಿ 95 ಸಾವಿರದ ಬೆನಿಫಿಟ್ಸ್​ ನೀಡುತ್ತಿದೆ.

ದಟ್ಸನ್​ ರೆಡಿ-ಗೊ: ಕಾರಿನ ಪ್ರಾರಂಭಿಕ ಬೆಲೆ 2.86 ಲಕ್ಷ ರೂ.ದಿಂದ ಪ್ರಾರಂಭವಾಗಿ 4.82 ಲಕ್ಷದವರೆಗೆ ಇರಲಿದೆ. ಕಂಪೆನಿ ಈ ಕಾರಿನ ಮೇಲೆ 15 ಸಾವಿರ ಕ್ಯಾಶ್​​ ಮತ್ತು ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. 4 ಸಾವಿರ ಕಾರ್ಪೊರೇಟ್​​ ಡಿಸ್ಕೌಂಟ್​​ ನೀಡುತ್ತಿದೆ. ಅಷ್ಟೇ ಅಲ್ಲದೆ,​ 34 ಸಾವಿರ ಟೋಟಲ್​ ಸೇವಿಂಗ್​ ನೀಡುತ್ತಿದೆ.

ದಟ್ಸನ್​ ಗೊ: ಈ ಕಾರಿನ ಬೆಲೆ 4.02 ಲಕ್ಷದಿಂದ ಪ್ರಾರಂಭವಾಗಿ 6.51 ಲಕ್ಷದವರೆಗೆ ಇರಲಿದೆ.  ಅದರಲ್ಲಿ 20 ಸಾವಿರ ಕ್ಯಾಶ್​ ಮತ್ತು ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ. ಗ್ರಾಹಕರಿಗಾಗಿ ಒಟ್ಟಾರೆ 40 ಸಾವಿರ ಸೇವಿಂಗ್​ ಮಾಡುವ ಅವಕಾಶ ನೀಡುತ್ತಿದೆ.

ದಟ್ಸನ್​ ಗೊ ಪ್ಲಸ್​: ದಟ್ಸನ್ ​ಗೊ ಹ್ಯಾಚ್​ಬ್ಯಾಜ್​ ಮತ್ತು ಗೊ ಪ್ಲಸ್​​ ಎಂಪಿವಿ ಕಾರಿಬ ಮೇಲೆ ಆಕರ್ಷಕ ಬೆನಿಫಿಟ್​​ ನೀಡುತ್ತಿದೆ. ಇನ್ನು ದಟ್ಸನ್​​ ಗೊ ಬೆಲೆ 4.25 ಲಕ್ಷದಿಂದ 6.99 ಲಕ್ಷದವರೆಗೆ ಇರಲಿದೆ.
Published by: Harshith AS
First published: February 18, 2021, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories