Nissan Kicks: ನಿಸಾನ್ ಕಿಕ್ಸ್​ SUVಗೆ 95,000 ರೂ. ಗಳ ಆಫರ್; ಈ ಕೊಡುಗೆ ಇನ್ನು ಕೆಲವೇ ದಿನ!

Nissan Kicks: ಜಪಾನಿನ ವಾಹನ ತಯಾರಕ ಕಂಪನಿ ನಿಸ್ಸಾನ್ ಇಂಡಿಯಾ ಹೊಸ ಕಾರಿಗಾಗಿ ಕಾಯುತ್ತಿದ್ದ ಜನರಿಗೆ, ತನ್ನ ಕಿಕ್ಸ್ SUV ಯಲ್ಲಿ ಕೆಲವು ಕೊಡುಗೆ ಮತ್ತು ಪ್ರಯೋಜನಗಳನ್ನು ನೀಡುತ್ತಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ಭಾರತದಲ್ಲಿ 9.49 ಲಕ್ಷ ರೂ.ಗಳಿಂದ 14.64 ಲಕ್ಷ ರೂ.ಗಳಷ್ಟು ಇದೆ.

ನಿಸಾನ್ ಕಾರ್

ನಿಸಾನ್ ಕಾರ್

  • Share this:
ಕೊರೋನಾದಿಂದಾಗಿ ಆರ್ಥಿಕತೆಯ ಮೇಲೆ ಪೆಟ್ಟು ಬಿದ್ದ ಪರಿಣಾಮ ಹೊಸ ಕಾರು ಖರೀದಿಸುವ ಗ್ರಾಹಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರಿಂದ ಜನರು ಕಡಿಮೆ ಬೆಲೆಯ ಕಾರುಗಳತ್ತ ಮುಖ ಮಾಡಲಾರಂಭಿಸಿದರು. ಬೆಲೆ ಏರಿಕೆ ಚಂಡಮಾರುತದ ಮಧ್ಯೆ, ಜಪಾನಿನ ವಾಹನ ತಯಾರಕ ಕಂಪನಿ ನಿಸ್ಸಾನ್ ಇಂಡಿಯಾ ಹೊಸ ಕಾರಿಗಾಗಿ ಕಾಯುತ್ತಿದ್ದ ಜನರಿಗೆ, ತನ್ನ ಕಿಕ್ಸ್ SUV ಯಲ್ಲಿ ಕೆಲವು ಕೊಡುಗೆ ಮತ್ತು ಪ್ರಯೋಜನಗಳನ್ನು ನೀಡುತ್ತಿದೆ. ಸಂಭಾವ್ಯ ಖರೀದಿದಾರರಿಗೆ ತಮ್ಮ SUV ಆಯ್ಕೆ ಮಾಡಿಕೊಳ್ಳಲು ಆಕರ್ಷಕ ಕೊಡುಗೆಗಳನ್ನು ನೀಡುವುದರ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ನಿಸ್ಸಾನ್ ಕಂಪನಿಯು ಇಂಡಿಯಾ ವೆಬ್‌ಸೈಟ್‌ನಲ್ಲಿ ಬಿಎಸ್ 6 ಕಂಪ್ಲೈಂಟ್ ಕಿಕ್ಸ್ SUV ಕಾರಿನ ಬಗ್ಗೆ ವಿವರಗಳನ್ನು ಬದಗಿಸಿದೆ. ಇವುಗಳಲ್ಲಿ 25 ಸಾವಿರ ರೂ.ಗಳ ನಗದು ರಿಯಾಯಿತಿ, 50,000 ರೂ ವಿನಿಮಯ ಬೋನಸ್ ಮತ್ತು 20,000 ರೂ. ಲಾಯಲ್ಟಿ ಬೋನಸ್‌ - ಇವೆಲ್ಲವೂ ಸೇರಿ ಒಟ್ಟು 95,000 ರೂ. ಮೊತ್ತದ ಪ್ರಯೋಜನಗಳನ್ನು ನೀಡುತ್ತದೆ. ಇದರ ಜತೆಗೆ ನಿಸ್ಸಾನ್ ಎಲ್ಲಾ ಸರ್ಕಾರಿ /PSB /PSU ಉದ್ಯೋಗಿಗಳಿಗೆ LTC ಕೊಡುಗೆಯನ್ನು ಸಹ ನೀಡುತ್ತಿದೆ.

ನಿಸ್ಸಾನ್ ಕಿಕ್ಸ್ ಎಸ್‌ಯುವಿ: ಒಟ್ಟು 95,000 ವರೆಗಿನ ಲಾಭಗಳು
ನಗದು ರಿಯಾಯಿತಿ: ₹ 25,000
ವಿನಿಮಯ ಬೋನಸ್: ₹ 50,000
ಲಾಯಲ್ಟಿ ಬೋನಸ್: ₹ 20,000

ಭಾರತದಲ್ಲಿ ನಿಸ್ಸಾನ್ ಕಿಕ್ಸ್ ಕಾರು, ಎಂಟು ರೂಪಾಂತರಗಳಲ್ಲಿ ಲಭ್ಯವಿದ್ದು, ಇವುಗಳ ಪೈಕಿ ನಾಲ್ಕು ಟ್ರಿಮ್ ಮಟ್ಟದ XL, XV, XV ಪ್ರೀಮಿಯಂ ಮತ್ತು XV ಪ್ರೀಮಿಯಂ (ಒ) ಕಾರು ಮಾರಾಟಕ್ಕೆ ಲಭ್ಯವಿದೆ. ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ SUV, ಎಸ್‌ಯುವಿ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಲಭ್ಯವಿದ್ದು ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಹೊಂದಿದೆ. 1.3-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5 ಎಲ್ ಸ್ವಾಭಾವಿಕ ಆಕಾಂಕ್ಷಿತ ಪೆಟ್ರೋಲ್ ಎಂಜಿನ್ ಆಗಿದ್ದು ಅದು 105 HP ಮತ್ತು 142 NM ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರಸರಣ ಕರ್ತವ್ಯಗಳನ್ನು 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಅಥವಾ CVT ಸ್ವಯಂಚಾಲಿತ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ಭಾರತದಲ್ಲಿ 9.49 ಲಕ್ಷ ರೂ.ಗಳಿಂದ 14.64 ಲಕ್ಷ ರೂ.ಗಳಷ್ಟು ಇದೆ.

ಸದ್ಯ ಕಾರು ಮಾರುಕಟ್ಟೆಯಲ್ಲಿ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ SUV, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಕಾರುಗಳ ಮಧ್ಯೆ ಸ್ಪರ್ಧೆ ನಡೆದಿದೆ. ಭಾರತದ ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಬೆಲೆಯಲ್ಲಿ SUV ಕಾರು ಹೊರ ತಂದಿರುವ ನಿಸ್ಸಾನ್ ಕಂಪನಿಯು, ಕಾರಿನ ಮೇಲೆ ರಿಯಾಯಿತಿ ಮತ್ತು ಹಲವು ಪ್ರಯೋಜನಗಳನ್ನು ನೀಡಲು ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಕಾರು ಮಾರುಕಟ್ಟೆಯಲ್ಲಿ ನಿಸ್ಸಾನ್ ಕಂಪನಿಯು ಯಾವ ರೀತಿ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮಾರ್ಚ್ 31 ರವರೆಗೆ ಮಾತ್ರ ಈ ಕೊಡುಗೆಗಳು ಮಾನ್ಯವಾಗಿರುತ್ತವೆ. ಕಾರಿನ ರೂಪಾಂತರಗಳಲ್ಲಿ ಮತ್ತು ಖರೀದಿಸುವ ಸ್ಥಳಗಳಲ್ಲಿ ಕೊಡುಗೆಗಳು ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಬೇಕು. ಈ ಕೊಡುಗೆಗಳು ಮತ್ತು ಕಾರಿನ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರವಿರುವ ನಿಸ್ಸಾನ್ ಮಾರಾಟಗಾರರೊಂದಿಗೆ ಸಂಪರ್ಕಿಸುವುದು ಉತ್ತಮ.
Published by:Sushma Chakre
First published: