ಕ್ಯಾಮೆರಾ ಪ್ರಿಯರಿಗೆ ಸಿಹಿ ಸುದ್ದಿ: ​ಫಿಲ್ಮ್​ ಶೂಟಿಂಗಾಗಿ ಬಂದಿದೆ ನಿಕಾನ್ Z6 ಕ್ಯಾಮೆರಾ

ಶಾರ್ಟ್​ ಫಿಲ್ಮ್​ಗಳನ್ನು ಚಿತ್ರೀಕರಿಸಲು ಸಹಾಯಕವಾಗಲಿರುವ ಹೊಸ ಮಾದರಿಯ ನಿಕಾನ್ ಕ್ಯಾಮೆರಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

zahir | news18
Updated:January 8, 2019, 4:44 PM IST
ಕ್ಯಾಮೆರಾ ಪ್ರಿಯರಿಗೆ ಸಿಹಿ ಸುದ್ದಿ: ​ಫಿಲ್ಮ್​ ಶೂಟಿಂಗಾಗಿ ಬಂದಿದೆ ನಿಕಾನ್ Z6 ಕ್ಯಾಮೆರಾ
@NIKON
zahir | news18
Updated: January 8, 2019, 4:44 PM IST
ಡಿಜಿಟಲ್ ಜಗತ್ತಿನಲ್ಲಿ ಕ್ಯಾಮೆರಾಗಳ ಮೂಲಕವೇ ಖ್ಯಾತಿ ಪಡೆದಿರುವ ನಿಕಾನ್ ಕಂಪೆನಿಯು ನೂತನ ಮಾದರಿಯ ಕ್ಯಾಮೆರಾಗಳನ್ನು ಪರಿಚಯಿಸಿದೆ.  ಫೋಟೋಗ್ರಾಫಿ ಪ್ರಿಯರನ್ನು ಗಮನದಲ್ಲಿರಿಸಿ ಹೊರತಂದಿರುವ ಹೊಸ ಕ್ಯಾಮೆರಾಗೆ 'ನಿಕಾನ್ Z6' ಎಂದು ಹೆಸರಿಡಲಾಗಿದೆ.

‘ನಿಕಾನ್ Z6’  ಕ್ಯಾಮೆರಾ ಫೋಟೊ ಹಾಗೂ ವೀಡಿಯೋಗ್ರಾಫಿಗೆ ಅನುಗುಣವಾದ ವೈಶಿಷ್ಠ್ಯಗಳನ್ನು ಹೊಂದಿದ್ದು, ಇದರೊಂದಿಗೆ ‘ಫಿಲ್ಮೀ ಮೇಕರ್ ಕಿಟ್’ ಅನ್ನು ಕೂಡ ನೀಡಲಾಗಿದೆ. ಈಗಾಗಲೇ ಅಮೆರಿಕದಲ್ಲಿ  ನಿಕಾನ್ Z6 ಅನ್ನು ಪ್ರದರ್ಶಿಸಲಾಗಿದ್ದು,  ಹೊಸ ಮಾದರಿಯ ಕ್ಯಾಮೆರಾ, ಫೋಟೋಗ್ರಾಫಿ ಪ್ರಿಯರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ರೈಲ್ವೆ ನೇಮಕಾತಿ: ವಿವಿಧ ಹುದ್ದೆಗಳಿಗೆ 10ನೇ ತರಗತಿ ಪಾಸಾದವರಿಂದ ಅರ್ಜಿ ಆಹ್ವಾನ

'ನಿಕಾನ್ Z6' ಫಿಲ್ಮಿ ಕಿಟ್ ವಿಶೇಷತೆಗಳೇನು?

ನಿಕಾನ್ ಕ್ಯಾಮೆರಾ ಮಿರರ್​ಲೆಸ್ ಬಾಡಿ
Z 24-70mm f/4 ಎಸ್ ಲೆನ್ಸ್ ಮತ್ತು FTZ ಲೆನ್ಸ್ ಅಡಾಪ್ಟರ್
ರಾಡ್ ವೀಡಿಯೋ ಮೈಕ್ ಪ್ರೋ
Loading...

ಮೊಝಾ ಏರ್ 2 3-ಆಕ್ಸಿಸ್ ಹ್ಯಾಂಡಲ್ಡ್​ ಗಿಂಬಲ್ ಸ್ಟೆಬ್ಲೈಝರ್
ಎಕ್ಸ್​ಟ್ರಾ ಕ್ಯಾಮೆರಾ ಬ್ಯಾಟರಿ
HDMI ಕೇಬಲ್ ಸೇರಿದಂತೆ ಹಲವು ಕಿಟ್​ಗಳನ್ನು ನೂತನ ನಿಕಾನ್​ Z6ನಲ್ಲಿ ನೀಡಲಾಗಿದೆ.

ಇದನ್ನೂ ಓದಿ: ವೈರಲ್ ವೀಡಿಯೊ: ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಭವಿಷ್ಯ ನುಡಿದಿದ್ದ ಅನಿಲ್ ಕುಂಬ್ಳೆ..!

ಶಾರ್ಟ್​ ಫಿಲ್ಮ್ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿರುವ 'ನಿಕಾನ್ Z6'  ​  ಈ ವರ್ಷ ಅಮೆರಿಕದಲ್ಲಿ ಬಿಡುಗಡೆಯಾಗಲಿದ್ದು, ಇದರ ಬೆಲೆ 4 ಸಾವಿರ ಡಾಲರ್ ಎಂದು ನಿಗದಿಪಡಿಸಲಾಗಿದೆ. ಈ ನೂತನ ಕ್ಯಾಮೆರಾ ಭಾರತದಲ್ಲೂ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಇಂಡಿಯಾದಲ್ಲಿ   ಸುಮಾರು 2 ಲಕ್ಷ 80 ಸಾವಿರ ರೂ. ನಲ್ಲಿ ನಿಕಾನ್ ಫಿಲ್ಮಿ ಕಿಟ್​ ಅನ್ನು ಪರಿಚಯಿಸಲಾಗುತ್ತದೆ ಎನ್ನಲಾಗಿದೆ.
First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ