ಯುಕೆ ವೊಡಾಫೋನ್ ಗ್ರೂಪ್ (VODL) ಸೋಮವಾರದಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ನಿಕ್ ರೀಡ್ (Nick Read) ಈ ವರ್ಷದ ಕೊನೆಯಲ್ಲಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಿದೆ. ಗ್ರೂಪ್ ಫೈನಾನ್ಸ್ ಮುಖ್ಯಸ್ಥ ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರನ್ನು ಸ್ವಲ್ಪ ಸಮಯದ ಆಧಾರದ ಮೇಲೆ ಬದಲಾಯಿಸಲಿದ್ದಾರೆ. ತನ್ನ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ, ನಿಕ್ ರೀಡ್ ಅವರು ಸಾಂಕ್ರಾಮಿಕ ರೋಗದಿಂದ ಮೊಬೈಲ್ ಕಂಪನಿಯನ್ನು (Mobile Company) ಬಹಳಷ್ಷು ಅಭಿವೃದ್ಧಿ ಮಾಡಿದ್ದಾರೆ. ಜೊತೆಗೆ ಯುರೋಪ್ ಮತ್ತು ಆಫ್ರಿಕಾದಲ್ಲಿ ಗಮನವನ್ನು ಹೆಚ್ಚಿಸಲು ಕಂಪನಿಯ ಅಸ್ಥಿತ್ವವನ್ನು ಕಾಪಾಡಲು ಶ್ರಮಿಸಿದ್ದಾರೆ. ವೊಡಫೋನ್ ಕಂಪನಿಯ (Vodafone Company) ಕೆಲಸಕಾರ್ಯಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ನಿಕ್ರೀಡ್ ಅವರು ಮಾಡಿದ್ದಾರೆ. ಆದರೆ ಈ ಎಲ್ಲಾ ಬದಲಾವಣೆಗಳ ನಂತರವೂ ವೊಡಾಫೋನ್ನ ಷೇರುಗಳು ಕುಸಿಯುತ್ತಲೇ ಇದ್ದವು.
ನಿಕ್ ರೀಡ್ ಅವರು ವೊಡಫೋನ್ ಕಂಪನಿಯ ಸಿಇಒ ಆಗಿ ಕಂಪನಿಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದವರು. ಆದರೆ 4 ವರ್ಷಗಳ ಅವಧಿಯಲ್ಲಿ ತನ್ನ ಕಂಪನಿಗೆ ಏನೇ ಸಮಸ್ಯೆ ಬಂದಾಗಲು ಅದನ್ನು ಎದುರಿಸಿ ಲಾಭಕ್ಕಾಗಿ ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಕಂಪನಿಯ ಷೇರುಗಳು ನಷ್ಟವನ್ನೇ ಕಾಣಿತು. ಇದೀಗ ವರ್ಷದ ಕೊನೆಯಲ್ಲಿ ಕೆಳಗಿಳಿಯಲಿದ್ದಾರೆಂದು ವೊಡಫೋನ್ ಗ್ರೂಪ್ ತಿಳಿಸಿದೆ.
ನಿಕ್ ರೀಡ್ ಅವರ ವೃತ್ತಿಯ ಕುರಿತು ಹೆಮ್ಮೆಯ ಹೇಳಿಕೆ
"ವೊಡಫೋನ್ನ ವೃತ್ತಿಜೀವನದಲ್ಲಿ 20 ವರ್ಷಗಳಿಗಿಂತ ಹೆಚ್ಚು ಕಾಲ ದುಡಿದಿದ್ದೇನೆ ಮತ್ತು ಯುರೋಪ್ ಮತ್ತು ಆಫ್ರಿಕಾದಾದ್ಯಂತ ಗ್ರಾಹಕರು ಮತ್ತು ಗ್ರೂಪ್ಗಳಿಗೆ ನಾವು ಕಂಪನಿಯನ್ನು ವಿಸ್ತರಣೆ ಮಾಡಿದ್ದೇವೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ನಿಕ್ ರೀಡ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಈ ವರ್ಷದಲ್ಲಿ ಬಿಡುಗಡೆಯಾದ ಬೆಸ್ಟ್ ಕ್ಯಾಮೆರಾವಿರುವ ಸ್ಮಾರ್ಟ್ಫೋನ್ಸ್, DSLRಗೇ ಟಕ್ಕರ್ ಕೊಡುವಂತಿವೆ
ವೊಡಫೋನ್ ಗ್ರೂಪ್ ಅಧ್ಯಕ್ಷರಿಂದ ಸಿಇಒ ಅವರಿಗೆ ಧನ್ಯವಾದ
ವೊಡಾಫೋನ್ ಗ್ರೂಪ್ ಅಧ್ಯಕ್ಷ ಜೀನ್-ಫ್ರಾಂಕೋಯಿಸ್ ವ್ಯಾನ್ ಬಾಕ್ಸ್ಮೀರ್ "ಬೋರ್ಡ್ ಪರವಾಗಿ, ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿಕ್ ಅವರ ಬದ್ಧತೆ ಮತ್ತು ಮಹತ್ವದ ಕೊಡುಗೆಗಾಗಿ ಮತ್ತು ಅವರ ಎರಡು ದಶಕಗಳ ಉತ್ತಮ ಕೆಲಸಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
2001 ರಲ್ಲಿ ವೊಡಾಫೋನ್ ಸೇರಿದರು
ನಿಕ್ ರೀಡ್ 2001 ರಲ್ಲಿ ವೊಡಾಫೋನ್ ಗ್ರೂಪ್ಗೆ ಸೇರಿದರು. 2018 ರಲ್ಲಿ ಸಿಇಒ ಆಗುವ ಮೊದಲು, ಅವರು ಸ್ಥಳೀಯ, ಪ್ರಾದೇಶಿಕ ಮತ್ತು ಜಾಗತಿಕ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ವೊಡಾಫೋನ್ಗೆ ಸೇರುವ ಮೊದಲು, ಅವರು ಯುನೈಟೆಡ್ ಬ್ಯುಸಿನೆಸ್ ಮೀಡಿಯಾ ಪಿಎಲ್ಸಿ ಮತ್ತು ಫೆಡರಲ್ ಎಕ್ಸ್ಪ್ರೆಸ್ ವರ್ಲ್ಡ್ವೈಡ್ನಲ್ಲಿ ಗ್ಲೋಬಲ್ ಫೈನಾನ್ಸ್ನಲ್ಲಿ ಕೆಲಸವನ್ನು ಮಾಡುತ್ತಿದ್ದರು.
ವೊಡಫೋನ್ನಿಂದ ಹೊಸ ಸಿಇಒ ನ ಹುಡುಕಾಟ
ಮಂಡಳಿಯು ಹೊಸ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕರನ್ನು ಹುಡುಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ವೊಡಾಫೋನ್ ತಿಳಿಸಿದೆ.
ನಿಕ್ ರೀಡ್ ಅವರು ನಾಲ್ಕು ವರ್ಷಗಳ ಹಿಂದೆ ಸಿಇಒ ಆಗಿ ಆಯ್ಕೆಯಾಗಿ ಇದೀಗ 2022ರ ವರ್ಷಾಂತ್ಯದಲ್ಲಿ ತನ್ನ ಅಧಿಕಾರದಿಂದ ಕೆಳಗಿಲಿಯಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ