ವಾಟ್ಸಾಪ್​ ಸಿಇಒ ಆಗಿ ಭಾರತೀಯನ ನೇಮಕ?

news18
Updated:May 4, 2018, 7:38 PM IST
ವಾಟ್ಸಾಪ್​ ಸಿಇಒ ಆಗಿ ಭಾರತೀಯನ ನೇಮಕ?
news18
Updated: May 4, 2018, 7:38 PM IST
ನ್ಯೂಸ್​ 18 ಕನ್ನಡ

ನ್ಯೂಯಾರ್ಕ್​ (ಮೇ.04) ;  ಸಾಮಾಜಿಕ ಜಾಲತಾಣ ವಾಟ್ಸಾಪ್​ನ ಕಾರ್ಯ ನಿರ್ವಹಣಾಧಿಕಾರಿ ಪಟ್ಟದಿಂದ ಜಾನ್​ ಕೋಮ್​ ಕೆಳಗಿಳಿದ ಬಳಿಕ ಈ ಜಾಗಕ್ಕೆ ಭಾರತೀಯರೊಬ್ಬರ ಆಯ್ಕೆಗೆ ಸಂಸ್ಥೆ ಮುಂದಾಗಿದೆ ಎಂದು ವರದಿಯಾಗಿದೆ.

ಪ್ರಪಂಚದ ಅತ್ಯಂತ ದೊಡ್ಡ ಚಾಟಿಂಗ್​ ಸಂಸ್ಥೆಯಿಂದ ಕೆಲ ದಿನಗಳ ಹಿಂದೆ ಜಾನ್​ ಕೋಮ್​ ಹೊರಕ್ಕೆ ಬಂದಿದ್ದಾರೆ. ಇದೀಗ ಈ ಸ್ಥಾನಕ್ಕೆ ಹುಡುಕಾಟ ಆರಂಭವಾಗಿದ್ದು, ಈಗಿರುವ ಮಾಹಿತಿಗಳ ಪ್ರಕಾರ ವಾಟ್ಸಾಪ್​ನ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ನೀರಜ್​ರನ್ನು ಸಿಇಒ ಆಗಿ ನೇಮಿಸಬಹುದು ಎಂದು ಹೇಳಲಾಗಿದೆ.

ಗೂಗಲ್​ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿರುವ ನೀರಜ್​, ದೆಹಲಿಯ ಐಐಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೊದಲಿಗೆ ಕ್ಲೌಡ್​ ಸ್ಟೋರೆಜ್​ ಕಂಪನಿಗೆ ಸೇರಿಕೊಂಡಿದ್ದರು. ಬಳಿಕ ಎಮ್​ಬಿಎ ಮಾಡಿ ಟೈಮ್ಸ್​ ಇಂಟರ್​ನೆಟ್​ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ ಗೂಗಲ್​ ಸೇರಿದ್ದ ನೀರಜ್​ 2011ರಿಂದ ವಾಟ್ಸಾಪ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸದ್ಯದ ಮಾಹಿತಿಗಳ ಪ್ರಕಾರ ವಾಟ್ಸಾಪ್​ ಸಿಇಒಗಳ ಸಂಭವನೀಯ ಪಟ್ಟಿಯಲ್ಲಿ ನೀರಜ್​ ನಾಲ್ಕನೇ ಸ್ಥಾನದಲ್ಲಿದ್ದು ಹೀಗಾಗಿ ಮೂಲ ಮಾಹಿತಿಗಳ ಪ್ರಕಾರ ನೀರಜ್​ ವಾಟ್ಸಾಪ್​ ಸಿಇಒ ಆಗಬಹುದು ಎಂದು ಹೇಳುತ್ತಿದ್ದಾರೆ.
First published:May 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ