Music Gadgets: ಸೋನಿ ಕಂಪೆನಿಯಿಂದ ಹೊಸ ವಾಕ್​ಮನ್​​​​ ಲಾಂಚ್​! ಫೀಚರ್ಸ್​ ಹೇಗಿದೆ ಗೊತ್ತಾ?

ಸೋನಿ ವಾಕ್​ಮ್ಯಾನ್​

ಸೋನಿ ವಾಕ್​ಮ್ಯಾನ್​

ಜನಪ್ರಿಯ ಟೆಕ್ ಕಂಪೆನಿಯಾಗಿರುವ ಸೋನಿ ಇದೀಗ ಭಾರತದ ಮಾರುಕಟ್ಟೆಗೆ ಹೊಸ ಸೋನಿ ವಾಕ್​ಮನ್ ​NW-ZX707 ಎಂಬ ಮ್ಯೂಸಿಕ್ ಡಿವೈಸ್​ ಅನ್ನು ಪರಿಚಯಿಸಿದೆ. ಇದು ಇತ್ತೀಚಿನ ವಿನ್ಯಾಸವನ್ನು ಹೊಂದಿದ್ದು, ಬಹಳಷ್ಟು ಫೀಚರ್ಸ್​ಗಳನ್ನು ಇದು ಒಳಗೊಂಡಿದೆ. ಹಾಗಿದ್ರೆ ಈ ಸ್ಮಾರ್ಟ್​​ ಡಿವೈಸ್​ನ ಫೀಚರ್ಸ್​ ಹೇಗಿದೆ, ಬೆಲೆ ಎಷ್ಟು ಎಂಬುದರ ಮಾಹಿತಿ ಈ ಲೇಖನದಲ್ಲಿದೆ.

ಮುಂದೆ ಓದಿ ...
  • Share this:

    ಟೆಕ್ನಾಲಜಿ ಕಂಪೆನಿಗಳು (Technology Company) ಇತ್ತೀಚೆಗೆ ಭಾರೀ ಮುಂಚೂಣಿಯಲ್ಲಿದೆ. ಸ್ಮಾರ್ಟ್​​​ಫೋನ್​ಗಳು ಮಾರುಕಟ್ಟೆಯಲ್ಲಿ ಒಂದು ರೀತಿಯಲ್ಲಿ ಸದ್ದಿನಲ್ಲಿದ್ದರೆ, ಇತರೆ ಮ್ಯೂಸಿಕ್​ ಗ್ಯಾಜೆಟ್​​ಗಳು (Music Gadgets), ಸ್ಮಾರ್ಟ್​​ ಡಿವೈಸ್​ಗಳಿಗೆ ಬಹಳಷ್ಟು ಬೇಡಿಕೆಯಿದೆ. ಜನಪ್ರಿಯ ಸ್ಮಾರ್ಟ್​​ಫೋನ್ ಕಂಪೆನಿಯಾಗಿರುವ ಸೋನಿ ಕಂಪೆನಿ (Sony Company) ಇತ್ತೀಚೆಗೆ ಎಲೆಕ್ಟ್ರಾನಿಕ್ಸ್​ ಡಿವೈಸ್​ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಪ್ರಚಲಿತದಲ್ಲಿದೆ. ಈ ಕಂಪೆನಿ ಸ್ಮಾರ್ಟ್​​ಟಿವಿ, ಸ್ಮಾರ್ಟ್​​​ ಸ್ಪೀಕರ್​, ಗ್ಯಾಜೆಟ್ಸ್​ಗಳು ಸೇರಿದಂತೆ ಅನೇಕ ಸ್ಮಾರ್ಟ್​​​ ಡಿವೈಸ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಭಾರೀ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಪಡೆದಿದೆ. ಈ ಕಂಪೆನಿಯಿಂದ ಬಿಡುಗಡೆಯಾದ ಮ್ಯೂಸಿಕ್​ ಆ್ಯಕ್ಸಿಸರೀಸ್​ಗಳಂತೂ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.


    ಜನಪ್ರಿಯ ಟೆಕ್ ಕಂಪೆನಿಯಾಗಿರುವ ಸೋನಿ ಇದೀಗ ಭಾರತದ ಮಾರುಕಟ್ಟೆಗೆ ಹೊಸ ಸೋನಿ ವಾಕ್​ಮನ್ ​NW-ZX707 ಎಂಬ ಮ್ಯೂಸಿಕ್ ಡಿವೈಸ್​ ಅನ್ನು ಪರಿಚಯಿಸಿದೆ. ಇದು ಇತ್ತೀಚಿನ ವಿನ್ಯಾಸವನ್ನು ಹೊಂದಿದ್ದು, ಬಹಳಷ್ಟು ಫೀಚರ್ಸ್​ಗಳನ್ನು ಇದು ಒಳಗೊಂಡಿದೆ. ಹಾಗಿದ್ರೆ ಈ ಸ್ಮಾರ್ಟ್​​ ಡಿವೈಸ್​ನ ಫೀಚರ್ಸ್​ ಹೇಗಿದೆ, ಬೆಲೆ ಎಷ್ಟು ಎಂಬುದರ ಮಾಹಿತಿ ಈ ಲೇಖನದಲ್ಲಿದೆ.


    ಸೋನಿ ವಾಕ್​ಮನ್ ​NW-ZX707 ವಿನ್ಯಾಸ 


    ಸೋನಿ ವಾಕ್​ಮನ್ NW-ZX707 5 ಇಂಚಿನ ಟಚ್‌ಸ್ಕ್ರೀನ್‌ ಡಿಸ್‌ಪ್ಲೇyನ್ನು ಹೊಂದಿದೆ. ಇದು ಅಲ್ಯೂಮಿನಿಯಂ ಫ್ರೇಮ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ವಾಕ್​ಮನ್ ವೈಫೈ ಕನೆಕ್ಟಿವಿಟಿಯನ್ನು ನೀಡಲಿದ್ದು, ಎಲ್ಲಿಗೂ ಪ್ರಯಾಣ ಮಾಡುವಾಗಲೂ ಮ್ಯೂಸಿಕ್‌ ಅನ್ನು ಸ್ಟ್ರೀಮಿಂಗ್‌ ಮಾಡಲು ಅವಕಾಶ ಸಿಗಲಿದೆ.




    ಇದರಲ್ಲಿ ಹಾಡುಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು, ಆಫ್‌ಲೈನ್‌ನಲ್ಲಿಯೂ ಸಹ ಮ್ಯೂಸಿಕ್‌ ಅನ್ನು ಕೇಳಬಹುದು. ಇನ್ನು ಇದರಲ್ಲಿರುವ ಡಿಎಸ್​ಡಿ ರೀಮಾಸ್ಟರಿಂಗ್ ಇಂಜಿನ್ ಆಡಿಯೋವನ್ನು 11.2MHz DSD ಗೆ ರಿ ಸ್ಯಾಂಪಲ್ಸ್‌ ಮಾಡಲಿದೆ. ಇದರಿಂದ ಹಾಡುಗಳನ್ನು ಕೇಳುವವರಿಗೆ ಉತ್ತಮ ಅನುಭವವನ್ನು ನೀಡುತ್ತದೆ.


    ಸೋನಿ ವಾಕ್​ಮನ್ NW-ZX707 ಸ್ಪೆಷಲ್ ಫೀಚರ್ಸ್​


    ಸೋನಿ ವಾಕ್​ಮನ್ NW-ZX707 ಎಸ್‌-ಮಾಸ್ಟರ್‌ ಹೆಚ್​ಎಕ್ಸ್​ ಡಿಜಿಟಲ್ amp ಮತ್ತು AI-ಚಾಲಿತ ಸೌಂಡ್ ಎಂಜಿನ್ ಡಿಜಿಟಲ್ ಸೌಂಡ್ ಎನ್‌ಹಾನ್ಸ್‌ಮೆಂಟ್ ಎಂಜಿನ್ ಅಲ್ಟಿಮೇಟ್‌ನೊಂದಿಗೆ ಬಿಡುಗಡೆಯಾಗಲಿದೆ. ಇದರಿಂದ ರಿಯಲ್‌ ಟೈಂನಲ್ಲಿ ಮ್ಯೂಸಿಕ್‌ ಅನ್ನು ಹೈ ಎಂಡ್‌ ಮಾಡಲು ಸಾಧ್ಯವಾಗಲಿದೆ.


    ಅಲ್ಲದೆ ಇದರಲ್ಲಿರುವ ಸಿಡಿ ಗುಣಮಟ್ಟ 16-ಬಿಟ್ ಅನ್ನು ಒಳಗೊಂಡಿದ್ದು, ಯಾವುದೇ ನಷ್ಟವಿಲ್ಲದ ಕೋಡೆಕ್ ಆಡಿಯೋವನ್ನು ಹೆಚ್ಚಿಸುವುದಕ್ಕೆ ಅವಕಾಶ ಕಲ್ಪಿಸಲಿದೆ. ಇನ್ನು ಈ ಡಿವೈಸ್‌ ಉತ್ತಮ ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದ್ದು, ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 23 ಗಂಟೆಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದು ಎಂದು ಕಂಪೆನಿ ಹೇಳಿದೆ.


    ಸೋನಿ ವಾಕ್​ಮ್ಯಾನ್​


    ಬೆಲೆ ಎಷ್ಟು?


    ಸೋನಿ ವಾಕ್​ಮನ್ NW-ZX707 ಮ್ಯೂಸಿಕ್​ ಡಿವೈಸ್​ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, 69,990 ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿದೆ.


    ಸೋನಿ ವಾಕ್​ಮನ್ NW-A 105


    ಸೋನಿ ಕಂಪೆನಿ ಇತ್ತೀಚಿಗೆ ವಾಕ್​ಮನ್ NW-A 105 ಬಿಡುಗಡೆ ಮಾಡಿದ್ದು, ಇದು 3.6 ಇಂಚಿನ ಎಚ್‌ಡಿ ಡಿಸ್ಪ್ಲೇಯನ್ನು ಹೊಂದಿದ್ದು, ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಮ್ಯೂಸಿಕ್ ಪ್ಲೇಯರ್ ಹೆಚ್ಚಿನ ರೆಸಲ್ಯೂಶನ್ ಆಡಿಯೋವನ್ನು ಬೆಂಬಲಿಸಲಿದೆ. ಇದು ಸಿಡಿ ಗುಣಮಟ್ಟದ ಸಂಗೀತಕ್ಕಿಂತ ಉತ್ತಮವಾದ ಮ್ಯೂಸಿಕ್​ ಅನುಭವವನ್ನ ನೀಡಲಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ.


    ಇದನ್ನೂ ಓದಿ: ಸ್ಯಾಮ್​ಸಂಗ್​ನ ಈ ಸ್ಮಾರ್ಟ್​​ಫೋನ್​ನ ಬೆಲೆಯಲ್ಲಿ ಭರ್ಜರಿ ಇಳಿಕೆ! ಏನೆಲ್ಲಾ ಆಫರ್ಸ್​ ಲಭ್ಯ?


    ಇದಲ್ಲದೆ ಈ ಸೋನಿ ವಾಕ್​ಮನ್ 4 ಜಿಬಿ ರ್‍ಯಾಮ್ ಮತ್ತು 16ಜಿಬಿ ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯ ಹೊಂದಿದ್ದು, ಮೆಮೊರಿ ಕಾರ್ಡ್‌ ಮೂಲಕ 128ಜಿಬಿವರೆಗೆ ವಿಸ್ತರಿಸಬಹುದಾಗಿದೆ. ಇದಲ್ಲದೆ, ಒಂದೇ ಚಾರ್ಜ್‌ನಲ್ಲಿ ವಾಕ್‌ಮ್ಯಾನ್‌ನಲ್ಲಿ 26 ಗಂಟೆಗಳ ಬ್ಯಾಟರಿ ಬಾಳಿಕೆ ಅವಧಿಯನ್ನು ಹೊಂದಿದ್ದು, ಇದನ್ನು ಯುಎಸ್​ಬಿ ಟೈಪ್-ಸಿ ಸ್ಲಾಟ್‌ನೊಂದಿಗೆ ಚಾರ್ಜ್ ಮಾಡಬಹುದಾಗಿದೆ. ಸದ್ಯ ಈ ವಾಕ್​ಮನ್ನ ಬೆಲೆ 23,990 ರೂಪಾಯಿ ಆಗಿದ್ದು, ಸೋನಿ ಸ್ಟೋರ್‌ನಲ್ಲಿ ಬ್ಲ್ಯಾಕ್‌ ಕಲರ್‌ನಲ್ಲಿ ಮಾತ್ರ ಲಭ್ಯವಿದೆ.

    Published by:Prajwal B
    First published: