Vodafone​ ಪರಿಚಯಿಸಿರುವ ನೂತನ ಪ್ಲಾನ್​ನಲ್ಲಿದೆ ಅನಿಯಮಿತ ಕರೆ, ಉಚಿತ ಅಮೆಜಾನ್​ ಪ್ರೈಮ್, ನೆಟ್​ಫ್ಲಿಕ್ಸ್​​ ವೀಕ್ಷಿಸುವ ಅವಕಾಶ!

ಒಂದು ವರ್ಷದ ಅಮೆಜಾನ್​ ಪ್ರೈಮ್​ ಚಂದಾದಾರಿಕೆ ಜತೆಗೆ ಒಂದು ವರ್ಷದ ನೆಟ್​ಫ್ಲಿಕ್ಸ್​ ಮತ್ತು ಡಿಸ್ನಿ+ ಹಾಟ್​ಸ್ಟಾರ್​ ವಿಐಪಿ ಚಂದಾದಾರಿಕೆ ಪಡೆಯಬಹುದಾಗಿದೆ. ವಿ ಸಿನಿಮಾ, ಟಿವಿ ವಿಐಪಿ ವೀಕ್ಷಿಸುವ ಅವಕಾಶ ನೀಡುತ್ತಿದೆ.

vodafone idea

vodafone idea

  • Share this:
    Vi postpaid plans: ವೊಡಾಫೋನ್​ ಐಡಿಯಾ ಹೊಸ ಪ್ರಿಪೇಯ್ಡ್​ ಯೋಜನೆಯನ್ನು ಪರಿಚಯಿಸಿದೆ. ನೂತನ ಯೋಜನೆಗಳು 1,699 ಮತ್ತು 2,299 ರೂ.ವಿನದ್ದಾಗಿದ್ದು, ಇದರ ಮೂಲಕ ಹಲವು ಬೆನಿಫಿಟ್ಸ್​ಗಳನ್ನ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, ರೆಡ್​ಎಕ್ಸ್​​ ಫ್ಯಾಮಿಲಿ ಪ್ಲಾನ್​​ ಜತೆಗೆ ಅನಿಯಮಿತ ಆಫರ್ ಹಾಗೂ ನೆಟ್​ಫ್ಲಿಕ್ಸ್​, ಅಮೆಜಾನ್​ ಪ್ರೈಮ್​ ವಿಡಿಯೋ ವೀಕ್ಷಿಸಬಹುದಾಗಿದೆ. ಹಾಗಿದ್ದರೆ, ಇವೆರಡು ಪ್ಲಾನ್​ಗಳು ಒದಗಿಸುವ ಕೆಲವು ಆಫರ್​​ಗಳ ಬಗ್ಗೆ ತಿಳಿಯೋಣ.

    ವೊಡಾಫೋನ್​ 1,699 ರೆಡ್​​ಎಕ್ಸ್​ ಫ್ಯಾಮಿಲಿ ಪ್ಲಾನ್​

    ವಿ 1,699 ರೂ.ವಿನ ರೆಡ್​​ಎಕ್ಸ್​ ಫ್ಯಾಮಿಲಿ ಪ್ಲಾನ್​ ಒಂದು ಬಾರಿ ಅಳವಡಿಸಿಕೊಂಡ ನಂತರ ಕೇವಲ ಒಂದು ತಿಂಗಳು ಮಾತ್ರ ಮಾನ್ಯವಾಗಿರುತ್ತದೆ. ಇದು ಮೂರು ಸದಸ್ಯರ ಸಂಪರ್ಕಕ್ಕೆ ಬೆಂಬಲವನ್ನು ನೀಡುತ್ತದೆ. ಇದರ ಜತೆಗೆ ಅನಿಯಮಿತ ಲೋಕಲ್​ ಕರೆ, ಎಸ್​ಟಿಡಿ ಮತ್ತು ಅಂತರಾಷ್ಟ್ರೀಯ ಕರೆ ಮಾಡಬಹುದಾಗಿದೆ. ಜತೆಗೆ ಅನಿಯಮಿತ ಡೇಟಾ ಮತ್ತು ತಿಂಗಳಿಗೆ 3 ಸಾವಿರ ಎಸ್​ಎಮ್​ಎಸ್​ ಅನ್ನು ನೀಡುತ್ತದೆ.

    ಈ ಪ್ಲಾನ್​ ಮೂಲಕ ಇನ್ನಿತರ ಪ್ರಯೋಜನವನ್ನು ನೀಡುತ್ತದೆ. ಒಂದು ವರ್ಷದ ಅಮೆಜಾನ್​ ಪ್ರೈಮ್​ ಚಂದಾದಾರಿಕೆ ಜತೆಗೆ ಒಂದು ವರ್ಷದ ನೆಟ್​ಫ್ಲಿಕ್ಸ್​ ಮತ್ತು ಡಿಸ್ನಿ+ ಹಾಟ್​ಸ್ಟಾರ್​ ವಿಐಪಿ ಚಂದಾದಾರಿಕೆ ಪಡೆಯಬಹುದಾಗಿದೆ. ವಿ ಸಿನಿಮಾ, ಟಿವಿ ವಿಐಪಿ ವೀಕ್ಷಿಸುವ ಅವಕಾಶ ನೀಡುತ್ತಿದೆ.

    ಗ್ರಾಹಕರು 7 ದಿನಗಳ ಉಚಿತ ಇಂಟರ್​ನ್ಯಾಷನಲ್​ ರೋಮಿಂಗ್​ ಪ್ಯಾಕ್​ ಪಡೆಯಬಹುದಾಗಿದೆ. ಇದರ ಬೆಲೆ 2,999 ರೂ ಆಗಿದೆ. ಅಮೆರಿಕ ಮತ್ತು ಕೆನಡಾಗೆ ಪ್ರತಿ ನಿಮಿಷಕ್ಕೆ 0.50 ಪೈಸೆ. ಯುಕೆಗೆ ಪ್ರತಿ ನಿಮಿಷಕ್ಕೆ 3 ರೂ ವ್ಯಯಿಸುತ್ತದೆ.

    ವಿ ಆ್ಯಡ್ಸ್​​ 2,299 ರೆಡ್​ಎಕ್ಸ್​ ಫ್ಯಾಮಿಲಿ ಪ್ಲಾನ್​

    ವೊಡಾಫೋನ್​ ಐಡಿಯಾ 1,699 ರೂ ಪ್ಲಾನ್​ನಲ್ಲಿ ಉಲ್ಲೇಖಿಸಿರುವ ಅದೇ ಪ್ರಯೋಜನವನ್ನ ಈ ಪ್ಲಾನ್​ ಹೊಂದಿದೆ. 2,299 ರೂ.ವಿನ ಪೋಸ್ಟ್​ಪೇಯ್ಡ್​ ಪ್ಲಾನ್​ ಒಟ್ಟು 5 ಸದಸ್ಯರ ಸಂಪರ್ಕ ಬೆಂಬಲಿಸುತ್ತದೆ.
    Published by:Harshith AS
    First published: