Suzuki Hayabusa: ಭಾರತದ ರಸ್ತೆಯಲ್ಲಿ ಧೂಳೆಬ್ಬಿಸಲಿದೆ ಹೊಸ ಸುಜುಕಿ ಹಯಬುಸಾ; ಏ.26ಕ್ಕೆ ಮಾರುಕಟ್ಟೆಗೆ!

ಹೊಸ ಹಯಬುಸಾ ಬೈಕ್​ 1,340 ಸಿಸಿ ಎಂಜಿನ್​ ಹೊಂದಿದ್ದು, 4 ಸಿಲಿಂಡರ್​ ಎಂಜಿನ್​ ಕೆಪಾಸಿಟಿಯಲ್ಲಿ ಸಿದ್ಧಪಡಿಸಲಾಗಿದೆ. ಹಿಂದಿನ ಆವೃತ್ತಿಯ ಬುಸಾಕ್ಕಿಂತ ಕೊಂಚ ವಿಭಿನ್ನವಾಗಿ ಸಿದ್ಧಪಡಿಸಲಾಗಿದೆ.

New Suzuki Hayabusa. (Photo: Suzuki)

New Suzuki Hayabusa. (Photo: Suzuki)

  • Share this:
    ಸುಜುಕಿ ಮೋಟರ್ಸ್​ನ ಬಹು ನಿರೀಕ್ಷಿತ ಹಯಬುಸಾ ಬೈಕ್​ ಏಪ್ರಿಲ್​ 26ಕ್ಕೆ ಬಿಡುಗಡೆಯಾಗಲಿದೆ. ನೂತನ ಬೈಕ್​ ಆಕರ್ಷಕ ಫೀಚರ್ಸ್​ ಹೊಂದಿದ್ದು, ದುಬಾರಿ ಬೆಲೆ ಹೊಂದಿದೆ. ಈಗಾಗಲೇ ಹರಿದಾಡುತ್ತಿರುವ ಮಾಹಿತಿ ಪ್ರಕಾರ 17-18 ಲಕ್ಷ ರೂ(ಎಕ್ಸ್​ಶೋ ರೂಂ) ಇರಲಿದೆ ಎಂದು ಹೇಳಲಾಗುತ್ತಿದೆ.

    ಸುಜುಕಿ ಹಯಬುಸಾ ಬೈಕ್​ ಆಕರ್ಷಕ ಮತ್ತು ದುಬಾರಿ ಬೈಕ್​ಗಳಲ್ಲಿ ಒಂದು. ಇದೀಗ ಕಂಪನಿ ಹೊಸ ಅವತಾರದೊಂದಿಗೆ ನೂತನ ಹಯಬುಸಾವನ್ನು ರೆಡಿಮಾಡಿದ್ದು, ಬಿಡುಗಡೆಮಾಡಲು ಸಜ್ಜಾಗಿದೆ. ಅದರಂತೆ ನಿಗದಿತ ದಿನಾಂಕದಂತೆ ಮಾರುಕಟ್ಟೆಗೆ ಪ್ರವೇಶಿಸಲಿದೆ.

    ಹೊಸ ಹಯಬುಸಾ ಬೈಕ್​ 1,340 ಸಿಸಿ ಎಂಜಿನ್​ ಹೊಂದಿದ್ದು, 4 ಸಿಲಿಂಡರ್​ ಎಂಜಿನ್​ ಕೆಪಾಸಿಟಿಯಲ್ಲಿ ಸಿದ್ಧಪಡಿಸಲಾಗಿದೆ. ಹಿಂದಿನ ಆವೃತ್ತಿಯ ಬುಸಾಕ್ಕಿಂತ ಕೊಂಚ ವಿಭಿನ್ನವಾಗಿ ಸಿದ್ಧಪಡಿಸಲಾಗಿದೆ. ಮಾತ್ರವಲ್ಲದೆ ಈ ಮೊದಲು ಬಂದ ಹಯಬುಸಾ 197ಎಚ್​ಪಿ ಪವರ್​ ಉತ್ಪಾದಿಸುತ್ತಿತ್ತು ಆದರೆ ಹೊಸ ಬುಸಾ 190 ಎಚ್​​ಪಿಗೆ ಇಳಿಕೆ ಮಾಡಲಾಗಿದೆ. ಇನ್ನು 1,480 ವ್ಹೀಲ್​ ಬೇಸ್​ ಇರಲಿದೆ.





    ಸಿಮ್ಮಿಟ್ರಿಕಲ್​ ಟ್ವಿನ್​ ಸೈಲೆನ್ಸರ್​​ ಎಗ್ಜಾಸ್ಟ್​ ಸಿಸ್ಟಂ ನೀಡಲಾಗಿದೆ. ಜೊತೆಗೆ ಕೆವೈಬಿ ಸಪ್ಲೈಯ್ಡ್​ ಸಸ್ಪೆನ್ಷನ್​ ಅಳವಡಿಸಲಾಗಿದೆ. ಎಲ್​ಇಡಿ ಲೈಟ್​​, ಪ್ರೊಜೆಕ್ಟರ್​ ಸೇರಿದಂತೆ ಮಲ್ಟಿ ಪ್ಯಾನೆಲ್​​ ಹೆಡ್​ಲೈಟ್​​ ನೀಡಲಾಗಿದೆ. ಗ್ರಾಹಕರಿಗಾಗಿ ಮೂರು ಬಣ್ಣದಲ್ಲಿ ಪರಿಚಯಿಸುತ್ತಿದೆ ಎನ್ನಲಾಗುತ್ತಿದೆ. ಗ್ಲಾಸ್​ ಸ್ಪಾರ್ಕಲ್​ ಬ್ಲಾಕ್​​ ಮತ್ತು ಕ್ಯಾಂಡಿ ಬರ್ನ್ಟ್​ ಗೋಲ್ಡ್​, ಮೆಟಾಲಿಕ್​ ಮೇಟ್​ ಸಿಲ್ವರ್​ ಮತ್ತು ಕ್ಯಾಂಡಿ ಡೇರಿಂಗ್​ ರೆಡ್​, ಪರ್ಲ್​ ಬ್ರಿಲಿಯಂಟ್​ ವೈಟ್​ ಮತ್ತು ಮೆಟಾಲಿಕ್​ ಮೇಟ್​ ಸ್ಟೆಲ್ಲರ್​ ಬ್ಲು ಪೇಯಿಂಟ್​ ಆಯ್ಕೆಯಲ್ಲಿ ಬರಲಿದೆ.
    Published by:Harshith AS
    First published: