ಟೆಕ್ ಮಾರುಕಟ್ಟೆಯಲ್ಲಿ (Tech Market) ಭಾರೀ ಮುಂಚೂಣಿಯಲ್ಲಿರುವ ಸಾಧನವೆಂದರೆ ಅದು ಸ್ಮಾರ್ಟ್ವಾಚ್ಗಳು ಅಂತಾನೇ ಹೇಳ್ಬಹುದು. ಈ ಸ್ಮಾರ್ಟ್ವಾಚ್ಗಳಿಗೆ (Smartwatches) ಈಗಂತೂ ಎಲ್ಲಿಲ್ಲದ ಬೇಡಿಕೆ. ಇತ್ತೀಚೆಗೆ ಸ್ಮಾರ್ಟ್ವಾಚ್ಗಳಿಗಂತನೇ ಹಲವಾರು ಕಂಪೆನಿಗಳು ಹುಟ್ಟಿಕೊಂಡಿದೆ. ಈ ಸಾಲಿನಲ್ಲಿ ಫೈರ್ಬೋಲ್ಟ್ ಕೂಡ ಇಂದು. ಸ್ಮಾರ್ಟ್ವಾಚ್ ಎಂದಾಗ ಮೊದಲು ನೆನಪಾಗೋದೇ ಫೈರ್ಬೋಲ್ಟ್ ಕಂಪೆನಿ (Fire-Boltt Company). ಏಕೆಂದರೆ ಈ ಕಂಪೆನಿ ಇತ್ತೀಚೆಗೆ ತನ್ನ ಬ್ರಾಂಡ್ನ ಅಡಿಯಲ್ಲಿ ಹೊಸ ಹೊಸ ಸ್ಮಾರ್ಟ್ವಾಚ್ಗಳನ್ನು ನಿರಂತರವಾಗಿ ಪರಿಚಯಿಸುತ್ತಲೇ ಇದೆ. ಈ ಸಾಧನಗಳು ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಜನವರಿಯಲ್ಲಿ ಈ ಕಂಪೆನಿ ಮತ್ತೊಂದು ಸ್ಮಾರ್ಟ್ವಾಚ್ ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಇದರ ಫೀಚರ್ಸ್, ಬೆಲೆ ಬಗ್ಗೆ ಮಾಹಿತಿ ಸೋರಿಕೆಯಾಗಿದೆ.
ಹೌದು, ಫೈರ್ಬೋಲ್ಟ್ ಕಂಪೆನಿ ಸ್ಮಾರ್ಟ್ವಾಚ್ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಭಾರೀ ಬೇಡಿಕೆಯ ಕಂಪೆನಿಯಾಗಿ ಗುರುತಿಸಿಕೊಂಡಿದೆ. ಇದೀಗ ಮಾರುಕಟ್ಟೆಗೆ ಫೈರ್ಬೋಲ್ಟ್ ಸೂಪರ್ನೋವಾ ಎಂಬ ಸ್ಮಾರ್ಟ್ವಾಚ್ ಅನ್ನು ಲಾಂಚ್ ಮಾಡಿದೆ. ಇದರ ಫೀಚರ್ಸ್, ಬೆಲೆ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.
ಫೈರ್ಬೋಲ್ಟ್ ಸೂಪರ್ನೋವಾ ಸ್ಮಾರ್ಟ್ವಾಚ್ ಫೀಚರ್ಸ್
ಫೈರ್-ಬೋಲ್ಟ್ ಸೂಪರ್ನೋವಾ ಸ್ಮಾರ್ಟ್ವಾಚ್ 1.78 ಇಂಚಿನ ಆಲ್ವೇಸ್ ಆನ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 368 x 448 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್ವಾಚ್ 500 ನಿಟ್ಸ್ ಬ್ರೈಟ್ನೆಸ್ ಅನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್ವಾಚ್ನ ಬಾಡಿ ಲೋಹೀಯ ಮಾದರಿಯಲ್ಲಿ ರಚಿಸಲಾಗಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ನ ಈ ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ನಲ್ಲಿ ಭರ್ಜರಿ ಡಿಸ್ಕೌಂಟ್!
123ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ಗಳು
ಇನ್ನು ಈ ಸ್ಮಾರ್ಟ್ವಾಚ್ ಅನ್ನು ಸುಲಭವಾಗಿ ಬಳಕೆ ಮಾಡುವ ಉದ್ದೇಶದಿಂದ ರೊಟೇಟ್ ಕ್ರೌನ್ ಬಟನ್ ಆಯ್ಕೆಯನ್ನು ನೀಡಲಾಗಿದೆ. ಹಾಗೆಯೇ ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 123 ಕ್ಕೂ ಹೆಚ್ಚು ವಿವಿಧ ಸ್ಪೋರ್ಟ್ಸ್ ಮೋಡ್ಅನ್ನು ಅಳವಡಿಸಲಾಗಿದೆ. ಜೊತೆಗೆ ಈ ಸ್ಮಾರ್ಟ್ವಾಚ್ನಲ್ಲಿ ಇನ್ಬಿಲ್ಟ್ ಗೇಮ್ಗಳು, ವಿವಿಧ ವಾಚ್ ಫೇಸ್ಗಳು ಮತ್ತು ನಮಗೆ ಬೇಕಾದ ಹಾಗೆ ಸೆಟ್ ಮಾಡಿಕೊಳ್ಳಬಹುದಾದ 8 ವಾಚ್ ಫೇಸ್ಗಳನ್ನು ಸಹ ಇದರಲ್ಲಿ ಆ್ಯಡ್ ಮಾಡಲಾಗಿದೆ.
ಸೌಂಡ್ ಫೀಚರ್ಸ್
ವೇಗವಾಗಿ ಮತ್ತು ಸುಲಭವಾಗಿ ಕನೆಕ್ಟ್ ಮಾಡುವ ಉದ್ದೇಶದಿಂದ ಇದರಲ್ಲಿ ಬ್ಲೂಟೂತ್ ಆವೃತ್ತಿ 5.0 ಮಾದರಿಯನ್ನು ಅಳವಡಿಸಿದ್ದಾರೆ. ಇದರೊಂದಿಗೆ ತಡೆರಹಿತ ಕರೆ ಅನುಭವಕ್ಕಾಗಿ ಇನ್ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಸಹ ಇದ್ದು, ಇದರೊಂದಿಗೆ ಇನ್ಬಿಲ್ಟ್ ವಾಯ್ಸ್ ಅಸಿಸ್ಟೆಂಟ್ ಆಯ್ಕೆ ಮಾತ್ರ ಬಳಕೆದಾರರಿಗೆ ಹೆಚ್ಚು ಸಹಯಕವಾಗುವ ಫೀಚರ್ ಆಗಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.
ಬ್ಯಾಟರಿ ಫೀಚರ್ಸ್
ಫೈರ್ಬೋಲ್ಟ್ ಸೂಪರ್ನೋವಾ ಸ್ಮಾರ್ಟ್ವಾಚ್ನ ಬ್ಯಾಟರಿ ಫೀಚರ್ಸ್ ಬಗ್ಗೆ ನೋಡುವುದಾದರೆ ಈ ವಾಚ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 5 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಇನ್ನು ಈ ವಾಚ್ ಮೂಲಕ ಸ್ಮಾರ್ಟ್ಫೋನ್ ಕ್ಯಾಮೆರಾ ಮತ್ತು ಮ್ಯೂಸಿಕ್ ಅನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದಾಗಿದೆ. ಇನ್ನು ಹವಾಮಾನ ವರದಿಗಳನ್ನು ಸಹ ಈ ಸ್ಮಾರ್ಟ್ವಾಚ್ ನೀಡುತ್ತದೆ.
ಬೆಲೆ ಮತ್ತು ಲಭ್ಯತೆ
ಫೈರ್ಬೋಲ್ಟ್ ಸೂಪರ್ನೋವಾ ಸ್ಮಾರ್ಟ್ ವಾಚ್ ಅನ್ನು ಇದೀಗ ಸದ್ಯ ಆಫರ್ ಬೆಲೆಯಲ್ಲಿ 3,499 ರೂಪಾಯಿ ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್ವಾಚ್ ಅನ್ನು ಫ್ಲಿಪ್ಕಾರ್ಟ್ ಹಾಗೂ ಫೈರ್ಬೋಲ್ಟ್ ಆನ್ಲೈನ್ ವೆಬ್ಸೈಟ್ ಮೂಲಕ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್ವಾಚ್ ಅನ್ನು ಹಳದಿ, ಕಿತ್ತಳೆ ಮತ್ತು ನೀಲಿ, ಕಪ್ಪು, ತಿಳಿ ಚಿನ್ನದ ಬಣ್ಣ ಸೇರಿದಂತೆ ಹಲವು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ