• Home
  • »
  • News
  • »
  • tech
  • »
  • Motorola X40: ಮೊಟೊರೊಲಾದಿಂದ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ! ಇದರಲ್ಲಿ ಏನಿದೆ ಸ್ಪೆಷಲ್‌ ಫೀಚರ್ಸ್?

Motorola X40: ಮೊಟೊರೊಲಾದಿಂದ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ! ಇದರಲ್ಲಿ ಏನಿದೆ ಸ್ಪೆಷಲ್‌ ಫೀಚರ್ಸ್?

ಮೊಟೊರೊಲಾo moto x40 ಮೊಬೈಲ್

ಮೊಟೊರೊಲಾo moto x40 ಮೊಬೈಲ್

ಮೊಟೊ X40 ಸ್ಮಾರ್ಟ್‌ಫೋನ್‌ ಹೊಸ ವರ್ಷನ್‌ ಆಗಿದ್ದು ಗ್ರಾಹಕರಿಕರಿಗೆ ಕೈಗೆಟಕುವ ದರದಲ್ಲಿ ಸಿಗುತ್ತಿದ್ದು, ಗ್ರಾಹಕರು ಬಯಸುವ ಫೀಚರ್ಸ್‌ ಅನ್ನು ಒಳಗೊಂಡಿದೆ. ಜೊತೆಗೆ ಇನ್ನೂ ಹಲವು ವಿಶೇಷ ಫೀಚರ್ಸ್‌ ಅನ್ನು ಹೊಂದಿದೆ.

  • Share this:

    ಟೆಕ್‌ ಮಾರುಕಟ್ಟೆಯಲ್ಲಿ ಹೊಸ ಫೀಚರ್ಸ್‌ಗಳನ್ನು (New Features) ಹೊಂದಿದ ಸ್ಮಾರ್ಟ್‌ಫೋನ್‌ಗಳು (Smartphones) ಬರುತ್ತಿರುತ್ತದೆ. ಈ ಸ್ಮಾರ್ಟ್‌ಫೋನ್‌ಗಳ ಹೊಸ ಮಾದರಿಗಳಿಗಾಗಿ ಗ್ರಾಹಕರು ಕಾಯುತ್ತಿರುತ್ತಾರೆ. ಈ ಸ್ಮಾರ್ಟ್‌ಫೋನ್‌ ಕಂಪನಿಗಳು ಹಲವಾರು ಇವೆ. ಇದು ವರ್ಷಕ್ಕೊಂದು ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡುತ್ತಿರುತ್ತದೆ. ಗ್ರಾಹಕರು ಕೂಡ ಈ ಸ್ಮಾರ್ಟ್‌ಫೋನ್‌ಗಳ ಬರುವಿಕೆಗಾಗಿ ಕಾದು ನಂತರ ತಮ್ಮ ಆಯ್ಕೆಯ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸುತ್ತಾರೆ. ಈ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿಗಳಲ್ಲಿ ಮೊಟೊರೊಲಾ (Motorola) ಕೂಡ ಒಂದು. ಇದು ಹೊಸ ರೀತಿಯ ಸ್ಮಾರ್ಟ್‌ಫೊನ್‌ಗಳನ್ನು ಪರಿಚಯಿಸುತ್ತಿರುತ್ತದೆ. ಈ ಬಾರಿ ಕೂಡ ಮೊಟೊರೊಲಾ ಹಲವು ಫೀಚರ್ಸ್‌ ಅನ್ನು ಒಳಗೊಂಡ ಮೊಟೊ X40 (Moto X40) ಎಂಬ ಸ್ಮಾರ್ಟ್‌ಫೊನ್‌ ಅನ್ನು ಪರಿಚಯಿಸುತ್ತಿದೆ. 


    ಈ ಮೊಟೊ X40 ಸ್ಮಾರ್ಟ್‌ಫೋನ್‌ ಹೊಸ ವರ್ಷನ್‌ ಆಗಿದ್ದು ಗ್ರಾಹಕರಿಕರಿಗೆ ಕೈಗೆಟಕುವ ದರದಲ್ಲಿ, ಗ್ರಾಹಕರು ಬಯಸುವ ಫೀಚರ್ಸ್‌ ಅನ್ನು ಒಳಗೊಂಡಿದೆ.ಇದು ಇನು ಹಲವು ವಿಶೇಷ ಫೀಚರ್ಸ್‌ ಅನ್ನು ಹೊಂದಿದೆ. ಹೇಗಿದೆ ಎಂಬುದು ಇಲ್ಲಿದೆ ಮಾಹಿತಿ.


    ಮೊಟೊ X40 ಸ್ಮಾರ್ಟ್‌ಫೋನ್‌ನ ಫೀಚರ್ಸ್‌


    ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ


    ಮೊಟೊ X40 ಸ್ಮಾರ್ಟ್‌ಫೋನ್‌ 6.67 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 10 ಬಿಟ್ ಕಲರ್‌ ಅನ್ನು ನೀಡಲಿದೆ. ಇದಲ್ಲದೆ ಡಿಸ್‌ಪ್ಲೇ 165Hz ರಿಫ್ರೆಶ್ ರೇಟ್‌ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇದು 399ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಒಳಗೊಂಡಿದೆ.


    ಇದನ್ನೂ ಓದಿ: ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಇನ್ನೊಬ್ಬರಿಗೆ ನೀಡಿದರೆ ದಂಡ ಗ್ಯಾರಂಟಿ! ಅಕೌಂಟ್‌ ಶೇರ್‌ ಮಾಡುವ ಮುನ್ನ ಇದನ್ನ ರೀಡ್ ಮಾಡಿ


    ಪ್ರೊಸೆಸರ್‌ ಸಾಮರ್ಥ್ಯ:


    ಮೊಟೊ X40 ಸ್ಮಾರ್ಟ್‌ಫೋನ್‌ 3.0GHz ಸ್ನಾಪ್‌ಡ್ರಾಗನ್‌ 8 Gen 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128 GB, 12GB RAM ಮತ್ತು 256GB ಹಾಗೂ 18GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.‌


    ಕ್ಯಾಮೆರಾ ಸೆಟ್‌ಅಪ್‌ ಹೇಗಿದೆ?


    ಮೊಟೊ X40 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 60 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.‌


     New smartphone released by Motorola What are the special features
    ಮೊಟೊ X40


    ಬ್ಯಾಟರಿ ಮತ್ತು ಇತರೆ ಫೀಚರ್ಸ್‌ಗಳು:


    ಮೊಟೊ X40 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 68 ವ್ಯಾಟ್ಸ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ಯುಎಸ್‌ಬಿ ಟೈಪ್‌ ಸಿ, ಮಾಸ್‌ ಸ್ಟೋರೇಜ್‌ ಡಿವೈಸ್‌, USB ಚಾರ್ಜಿಂಗ್‌ ಬೆಂಬಲಿಸಲಿದೆ. ಇದಲ್ಲದೆ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಆಕ್ಸಿಲೆರೋಮೀಟರ್‌, ಕಂಪಾಸ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ.‌


    ಬೆಲೆ ಮತ್ತು ಲಭ್ಯತೆ:


    ಮೊಟೊ X40 ಸ್ಮಾರ್ಟ್‌ಫೋನ್‌ "Motorola Edge 40 Pro" ಮಾನಿಟರ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು Q1 2023 ರ ಹೊತ್ತಿಗೆ ಚೀನಾದ ಹೊರಗಿನ ಮಾರುಕಟ್ಟೆಗಳಿಗೆ ಆಗಮಿಸುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಇನ್ನು ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಕಲರ್‌ಗಳಲ್ಲಿ ಬರಲಿದೆ ಅನ್ನೋದು ಇನ್ನು ಕೂಡ ತಿಳಿದುಬಂದಿಲ್ಲ.


    ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಅನಗತ್ಯ ಸಂದೇಶ ಕಳುಹಿಸಿದರೆ ದಂಡ! ಇದಕ್ಕಂತನೇ ಸರ್ಕಾರದಿಂದ ಸಮಿತಿ ರಚನೆ


    ಇದು ಮೊಟೊರೊಲಾ ಕಂಪೆನಿಯ ಅಡಿಯಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ ಆಗಿದ್ದು ಇದರ ಬೆಲೆ ಮತ್ತು ಲಭ್ಯತೆಯ ಬಗ್ಗೆ ಇನ್ನು ಮಾರುಕಟ್ಟೆಗೆ ಸ್ಪಷ್ಟನೆ ನೀಡಿಲ್ಲ.

    Published by:Harshith AS
    First published: