ದೇಶದಲ್ಲಿ ಹಲವಾರು ಸ್ಮಾರ್ಟ್ಫೋನ್ಗಳು (Smartphones) ಬಿಡುಗಡೆಯಾಗುತ್ತದೆ. ಅದ್ರಲ್ಲೂ ಈ ವರ್ಷ ಮೊಬೈಲ್ ಮಾರುಕಟ್ಟೆಗೆ ಕಂಪನಿಗಳು ದಿನಕ್ಕೊಂದರಂತೆ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಸ್ವದೇಶಿ ಸ್ಮಾರ್ಟ್ಫೋನ್ ತಹಯಾರಕ ಕಂಪನಿಗಳು ಹಲವಾರು ಇದೆ. ಅದ್ರಲ್ಲಿ ಲಾವಾ (Lava) ಕೂಡ ಒಂದು. ಈ ಲಾವಾ ಕಂಪನಿ ತನ್ನ ಬ್ರಾಂಡ್ನ ಅಡಿಯಲ್ಲಿ ಹಲವಾರು ಮೊಬೈಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಈ ವರ್ಷದ ಕೊನೆಯಲ್ಲಿ ಮತ್ತೊಂದು ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಸ್ಮಾರ್ಟ್ಫೋನ್ ಇದುವರೆಗೆ ಬಿಡುಗಡೆಯಾದಂತಹ ಮೊಬೈಲ್ಗಳಿಗಿಂತ (Mobile) ವಿಶೇಷ ಫೀಚರ್ಸ್ಗಳನ್ನು ಒಳಗೊಂಡಿದೆ.
ಸ್ವದೇಶಿ ಮೊಬೈಲ್ ತಯಾರಕ ಕಂಪನಿಯಾಗಿರುವ ಲಾವಾ ಈ ಬಾರಿ ವರ್ಷಾಂತ್ಯದಲ್ಲಿ ಲಾವಾ ಎಕ್ಸ್3 ಎಂಬ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಸ್ಮಾರ್ಟ್ಫೋನ್ ಇದೇ ಡಿಸೆಂಬರ್ 27, 2022 ರಲ್ಲಿ ಮಾರುಕಟ್ಟೆಗೆ ಬರಲಿದೆ.
ಲಾವಾ ಎಕ್ಸ್3 ಸ್ಮಾರ್ಟ್ಫೋನ್ ಫೀಚರ್ಸ್
ಲಾವಾ ಎಕ್ಸ್3 ಸ್ಮಾರ್ಟ್ಫೋನ್ 6.53 ಇಂಚಿನ ಹೆಚ್ಡಿ+ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 1600x720 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಡಿಸ್ಪ್ಲೇ 60 Hz ರಿಫ್ರೆಶ್ ರೇಟ್ನೊಂದಿಗೆ ಬರುತ್ತದೆ. ಇನ್ನು ಡಿಸ್ಪ್ಲೇ 81.76% ಸ್ಕ್ರೀನ್ ಟು ಬಾಡಿ ವಿನ್ಯಾಸವನ್ನು ಒಳಗೊಂಡಿದೆ. ಜೊತೆಗೆ ಡಿಸ್ಪ್ಲೇ 270ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, ವಾಟರ್ ಡ್ರಾಪ್ ನಾಚ್ ಫೀಚರ್ ಅನ್ನು ಇದು ಹೊಂದಿರಲಿದೆ.
ಇದನ್ನೂ ಓದಿ: ಸಿಮ್ ಇಲ್ಲದೆಯೇ ಟೆಲಿಗ್ರಾಮ್ ಓಪನ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ಕ್ಯಾಮೆರಾ ಫೀಚರ್ಸ್ ಹೇಗಿದೆ?
ಲಾವಾ ಎಕ್ಸ್3 ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಜೊತೆಗೆ ವಿಜಿಎ ಸೆಕೆಂಡರಿ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ ವಿಡಿಯೋ ಕಾಲ್ಗಾಗಿ ಮತ್ತು ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಫೀಚರ್ಸ್
ಲಾವಾ ಎಕ್ಸ್3 ಸ್ಮಾರ್ಟ್ಫೋನ್ 10W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದು 4000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು ಒಮ್ಮೆ ಫುಲ್ ಚಾರ್ಜ್ ಆಗಲು 165 ನಿಮಿಷ ಸಮಯ ಬೇಕಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, 3.5 ಎಂಎಂ ಹೆಡ್ಫೋನ್ ಜ್ಯಾಕ್, ಜಿಪಿಎಸ್, ಬ್ಲೂಟೂತ್ ಸೇರಿದಂತೆ ಬ್ಯಾಕ್ ಪ್ಯಾನಲ್ನಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ.
ಪ್ರೊಸೆಸರ್ ಸಾಮರ್ಥ್ಯ ಹೇಗಿದೆ?
ಲಾವಾ ಎಕ್ಸ್3 ಸ್ಮಾರ್ಟ್ಫೋನ್ ಕ್ವಾಡ್ ಕೋರ್ ಹೆಲಿಯೋ ಎ22 SoC ಪ್ರೊಸೆಸರ್ ವೇಗವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಗೋ ಎಡಿಷನ್ ಆಪರೇಟಿಂಗ್ ಸಿಸ್ಟಮ್ನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 3ಜಿಬಿ ರ್ಯಾಮ್ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಬಳಸಿ ಸ್ಟೋರೇಜ್ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ.
ಬೆಲೆ ಮತ್ತು ಲಭ್ಯತೆ
ಲಾವಾ ಎಕ್ಸ್3 ಸ್ಮಾರ್ಟ್ಫೋನ್ 6,999ರೂಪಾಯಿ ಬೆಲೆಯಲ್ಲಿ ಬರಲಿದೆ. ಇದು ಅಮೆಜಾನ್ ಇಂಡಿಯಾದ ಅಧಿಕೃತ ವೆಬ್ಸೈಟ್ ಮೂಲಕ ಡಿಸೆಂಬರ್ 27ಕ್ಕೆ ಫಸ್ಟ್ ಸೇಲ್ ಆರಂಭವಾಗಲಿದೆ. ಇನ್ನು ಫೋನ್ ಆರ್ಕ್ಟಿಕ್ ಬ್ಲೂ, ಚಾರ್ಕೋಲ್ ಬ್ಲ್ಯಾಕ್ ಮತ್ತು ಲುಸ್ಟರ್ ಬ್ಲೂ ಸೇರಿದಂತೆ ಮೂರು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಖರೀದಿಸುವ ಅವಕಾಶವನ್ನು ನೀಡಲಿದೆ. ಇದು ಈಗಾಗಲೇ ಪ್ರೀ ಆರ್ಡರ್ಗೆ ಲಭ್ಯವಿದ್ದು, ಪ್ರೀ ಆರ್ಡರ್ ಮಾಡುವ ಗ್ರಾಹಕರಿಗೆ ಕಂಪನಿಯು 2,999ರೂಪಾಯಿ ಮೌಲ್ಯದ ಲಾವಾ ಪ್ರೋಬಡ್ಸ್ ಎನ್11 ಅನ್ನು ಉಚಿತವಾಗಿ ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ