ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ (Smartphone Market) ಹೊಸ ಹೊಸ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿರುತ್ತಲೇ ಇರುತ್ತದೆ. ಇತ್ತೀಚೆಗಂತೂ ದಿನಕ್ಕೆ ಎರಡರಿಂದ ಮೂರರಂತೆ ಮೊಬೈಲ್ಗಳು ಮಾರುಕಟ್ಟೆಗೆ ಎಂಟ್ರಿಯಾಗುತ್ತಿದೆ. 5ಜಿ (5G Network) ಸೇವೆ ಆರಂಭವಾದ ನಂತರವಂತೂ ಎಲ್ಲಾ ಕಂಪೆನಿಗಳು ಸಹ 5ಜಿ ನೆಟ್ವರ್ಕ್ ಅನ್ನು ಬೆಂಬಲಿಸುವಂತಹ ಸ್ಮಾರ್ಟ್ಫೋನ್ಗಳನ್ನೇ ತನ್ನ ಗ್ರಾಹಕರಿಗಾಗಿ ಪರಿಚಯಿಸ್ತಾ ಇದ್ದಾರೆ. ಇದೀಗ ಜನಪ್ರಿ ಟೆಲಿಕಾಂ ಕಂಪೆನಿಯಾಗಿರುವ ರಿಯಲ್ ಮಿ ಕಂಪೆನಿ (Realme Company) ಮೊಬೈಲ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಿದ್ದು, ಸದ್ಯ ಚೀನಾದ ಮಾರುಕಟ್ಟೆಯಲ್ಲಿ ಭಾರೀ ಸದ್ದಿನಲ್ಲಿದೆ. ರಿಯಲ್‌ಮಿ ಕಂಪೆನಿ ತನ್ನ ರಿಯಲ್‌ಮಿ ವಿ30 ಸೀರಿಸ್ನಿಂದ (Realme V30 Series) ಎರಡು ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡಿದೆ.
ಜನಪ್ರಿ ಯ ಸ್ಮಾರ್ಟ್‌ಫೋನ್ ಕಂಪೆನಿ ರಿಯಲ್‌ಮಿ ಸದ್ಯ ಮಾರುಕಟ್ಟೆಗೆ ರಿಯಲ್‌ಮಿ ವಿ30 ಸೀರಿಸ್ನಿಂದ ರಿಯಲ್‌ಮಿ ವಿ 30 ಮತ್ತು ವಿ30ಟಿ ಎಂಬ ಎರಡು ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡಿದೆ. ಹಾಗಿದ್ರೆ ಈ ಸ್ಮಾರ್ಟ್ಫೋನ್ಗಳ ವಿಶೇಷ ಫೀಚರ್ಸ್ಗಳೆಲ್ಲಾ ಹೇಗಿದೆ ಎಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ರಿಯಲ್‌ಮಿ ವಿ30 ಸ್ಮಾರ್ಟ್‌ಫೋನ್ ಫೀಚರ್ಸ್
ರಿಯಲ್‌ಮಿ ವಿ30 ಸ್ಮಾರ್ಟ್‌ಫೋನ್ ಉತ್ತಮ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಈ ನಿಟ್ಸ್ ಬ್ರೈಟ್ನೆಸ್ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: ವಾಹನಗಳಿಗೆ ಮಾತ್ರ ಅಲ್ಲ, ಇನ್ಮುಂದೆ ಮೊಬೈಲ್ಗಳಿಗೂ ಇನ್ಶೂರೆನ್ಸ್ ಮಾಡಿಕೊಳ್ಳಬಹುದು!
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ ವಿ30 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಎಸ್ಓಸಿ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 12 ಆಧಾರಿತ ರಿಯಲ್‌ಮಿ ಯುಐ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್ ಆಯ್ಕೆಯೊಂದಿಗೆ ಬಿಡುಗಡೆಯಾಗಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 1ಟಿಬಿವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಕೊಳ್ಳಬಹುದಾಗಿದೆ.
ಕ್ಯಾಮೆರಾ ಸೆಟಪ್
ರಿಯಲ್‌ಮಿ ವಿ30 ಸ್ಮಾರ್ಟ್‌ಫೋನ್ ವಿಶೇಷವಾಗಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಮತ್ತು ಇದರಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ರಿಯಲ್‌ಮಿ ವಿ30 ಸ್ಮಾರ್ಟ್‌ಫೋನ್ ಬ್ಯಾಟರಿ ಫೀಚರ್ಸ್
ರಿಯಲ್‌ಮಿ ವಿ30 ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಬ್ಯಾಕಪ್ ಅನ್ನು ಪಡೆದಿದೆ. ಈ ಬ್ಯಾಟರಿಯು 10W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಇತರೆ ಫೀಚರ್ಸ್
ಇನ್ನು ಈ ಸ್ಮಾರ್ಟ್ಫೋನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ ಎಲ್ ಟಿಇ, ವೈ-ಫೈ 802.11 ಎಸಿ, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿವೆ. ಹಾಗೆಯೇ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಮ್ಯಾಗ್ನೆಟೋಮೀಟರ್ ಅನ್ನು ಅಳವಡಿಸಲಾಗಿದೆ.
ರಿಯಲ್‌ಮಿ ವಿ30ಟಿ ಸ್ಮಾರ್ಟ್‌ಫೋನ್ ಫೀಚರ್ಸ್
ರಿಯಲ್‌ಮಿ ವಿ30ಟಿ ಸ್ಮಾರ್ಟ್ಫೋನ್ನ ಫೀಚರ್ಸ್ ಬಹುತೇಕ ರಿಯಲ್‌ಮಿ 30 ಸ್ಮಾರ್ಟ್ಫೋನ್ನ ಫೀಚರ್ಸ್ನಂತೆಯೇ ಹೋಲುತ್ತದೆ.ಈ ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದ್ದು, ಮೀಡಿಯಾ ಟೆಕ್ ಡೈಮೆನಸಿಟಿ 700 SoC ಪ್ರೊಸೆಸರ್ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಿದೆ. ಇನ್ನು ಇದರ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳೂವುದಾದರೆ, ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ಹಾಗೆಯೇ 5,000mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಈ ಬ್ಯಾಟರಿಯು 10W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ ವಿ30 ಸ್ಮಾರ್ಟ್‌ಫೋನ್ 6ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್‌ಫೋನ್ ಬೆಲೆ ಚೀನಾದಲ್ಲಿ CNY 1,099 ಅಂದರೆ ಭಾರತದಲ್ಲಿ ಅಂದಾಜು 13,400 ರೂ. ಎನ್ನಲಾಗಿದೆ.
ಅದೇ ರೀತಿ ರಿಯಲ್‌ಮಿ ವಿ30ಟಿ ಸ್ಮಾರ್ಟ್‌ಫೋನ್ 6ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್ ಆಯ್ಕೆಯನ್ನು ಹೊಂದಿದ ಸ್ಮಾರ್ಟ್ಫೋನ್ಗೆ ಚೀನಾದಲ್ಲಿ CNY 1,299 ಅಂದರೆ ಭಾರತದಲ್ಲಿ ಅಂದಾಜು 15,900ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್ ಡಾರ್ಕ್ ನೈಟ್ ಮತ್ತು ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ