Redmi Smart TV | ಸೆಪ್ಟೆಂಬರ್ 22 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ರೆಡ್‌ಮಿ ಟಿವಿ; ಹೇಗಿದೆ?

Redmi Smart TV: ಹೊಸ ಸ್ಮಾರ್ಟ್ ಟಿವಿಗಳು 20W ಅಂತರ್‌ನಿರ್ಮಿತ ಸ್ಪೀಕರ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ ಮತ್ತು ಡಾಲ್ಬಿ ಆಡಿಯೋ ಮತ್ತು DTS ವರ್ಚುವಲ್: Xಗೆ ಸಪೋರ್ಟ್‌ ಮಾಡುತ್ತದೆ, ಇದು ಧ್ವನಿ ಗುಣಮಟ್ಟಕ್ಕೆ ಒತ್ತು ನೀಡುತ್ತದೆ.

Redmi TVs (Photo: Twitter)

Redmi TVs (Photo: Twitter)

  • Share this:

Redmi ಇಂಡಿಯಾ ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಎರಡು ಹೊಸ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಲಿದೆ. ಹೊಸ ಟೆಲಿವಿಷನ್‌ಗಳು ಬ್ರ್ಯಾಂಡ್‌ನ ರೆಡ್‌ಮಿ ಟಿವಿಗಳ ಶ್ರೇಣಿಯ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಲಿದ್ದು, ಡಿಸ್‌ಪ್ಲೇ ಗುಣಮಟ್ಟ ಮತ್ತು ಧ್ವನಿಯಂತಹ ಅಂಶಗಳ ಮೇಲೆ ಸುಧಾರಣೆಯಾಗುವ ಸಾಧ್ಯತೆಯಿದೆ. ರೆಡ್‌ಮಿ ಈಗಾಗಲೇ ಹೊಸ ಈವೆಂಟ್ ಪೇಜ್‌ ಅನ್ನು ಸೆಪ್ಟೆಂಬರ್ 22ಕ್ಕೆ ಸಿದ್ಧಪಡಿಸಿದ್ದು, ಅಂದು ಬ್ರ್ಯಾಂಡ್ ಹೊಸ ಸಾಧನಗಳನ್ನು ಬಿಡುಗಡೆ ಮಾಡುತ್ತದೆ. ಮಧ್ಯಾಹ್ನ 12 ಗಂಟೆಗೆ ಲಾಂಛ್‌ ಆರಂಭವಾಗಲಿದೆ ಮತ್ತು ಬಹು ಮಾದರಿಗಳನ್ನು ನಿರೀಕ್ಷಿಸಲಾಗಿದೆ. ಇನ್ನು, ಒಂದು 32 ಇಂಚಿನ ಸ್ಕ್ರೀನ್ ಮತ್ತು ಇನ್ನೊಂದು 43 ಇಂಚಿನ ಸ್ಕ್ರೀನ್ ಸೇರಿ ಎರಡು ಮಾದರಿಗಳು ಬಿಡುಗಡೆಯಾಗಲಿದೆ ಎಂದು ಟೀಸರ್‌ ಮೂಲಕ ನಿರೀಕ್ಷಿಸಲಾಗಿದೆ.


ಹೊಸ ಸ್ಮಾರ್ಟ್ ಟಿವಿಗಳು 20W ಅಂತರ್‌ನಿರ್ಮಿತ ಸ್ಪೀಕರ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ ಮತ್ತು ಡಾಲ್ಬಿ ಆಡಿಯೋ ಮತ್ತು DTS ವರ್ಚುವಲ್: Xಗೆ ಸಪೋರ್ಟ್‌ ಮಾಡುತ್ತದೆ, ಇದು ಧ್ವನಿ ಗುಣಮಟ್ಟಕ್ಕೆ ಒತ್ತು ನೀಡುತ್ತದೆ.


ಇನ್ನು, ಇದರ ವಿನ್ಯಾಸಕ್ಕೆ ಬಂದರೆ, ಹೊಸ ಟಿವಿಗಳಲ್ಲಿ ಸ್ಲಿಮ್ ಬೆಜೆಲ್‌ಗಳನ್ನು ನಿರೀಕ್ಷಿಸಲಾಗಿದೆ. ಇನ್ನು, ಈ ನಿರೀಕ್ಷಿತ ಎರಡೂ ಮಾದರಿಗಳು ಹೆಚ್ಚು ತಲ್ಲೀನಗೊಳಿಸುವ ಅನುಭವ ನೀಡುತ್ತದೆ. ಟಿವಿಯು ಆಂಡ್ರಾಯ್ಡ್ ಟಿವಿ 11 ಬೆಂಬಲ ಹೊಂದಿದ್ದು ಮತ್ತು Xiaomi ಕಸ್ಟಮ್ ಪ್ಯಾಚ್‌ವಾಲ್ ಅನ್ನೂ ಒಳಗೊಂಡಿದೆ. ಹೊಸ ವೈಶಿಷ್ಟ್ಯಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.0 ಆಟೋ-ಲೇಟೆನ್ಸಿ ಸೇರಿವೆ.


43 ಇಂಚಿನ ಟಿವಿಯು ಪೂರ್ಣ ಎಚ್‌ಡಿ ಡಿಸ್‌ಪ್ಲೇ ಹೊಂದಿರಲಿದೆ, ಆದರೆ ಸಣ್ಣ 32 ಇಂಚಿನ ರೂಪಾಂತರವು ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. ಅಲ್ಲದೆ, ಹೊಸ ವಿವಿಡ್‌ ಪಿಕ್ಚರ್ ಎಂಜಿನ್ ಟಿವಿಗಳಲ್ಲಿ ಹೆಚ್ಚು ಕ್ರಿಸ್ಪ್‌ ಮತ್ತು ಪ್ರಕಾಶಮಾನವಾದ ಔಟ್‌ಪುಟ್‌ ನೀಡುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ.


ಇದನ್ನು ಓದಿ ⇒Xiaomi ಪ್ರಿಯರಿಗೆ ಶಾಕ್! ಕೆಲವು ಬಳಕೆದಾರರ ಸ್ಮಾರ್ಟ್​​ಫೋನ್​ಗಳಿಗೆ ನಿರ್ಬಂಧ!

ಹೊಸ ರೆಡ್‌ಮಿ ಟಿವಿಗಳು ಬ್ರ್ಯಾಂಡ್‌ನ ಹಳೆಯ X-ಸೀರಿಸ್‌ ಸಾಧನಗಳ 50 ಇಂಚಿನ ರೂಪಾಂ ತರದ ಜತೆಗೆ ಸೇರಿಕೊಳ್ಳಲಿದೆ. ಈ ಎಕ್ಸ್‌ ಸೀರಿಸ್‌ನಲ್ಲಿ 55-ಇಂಚು ಮತ್ತು 65-ಇಂಚಿನ ರೂಪಾಂತರದ ಟಿವಿಯನ್ನೂ ಒಳಗೊಂಡಿರುತ್ತದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಎಕ್ಸ್- ಸೀರಿಸ್‌ ಟಿವಿಗಳು ಬೆಲೆ ಏರಿಕೆಯ ನಂತರ 38,999 ರೂ. ನಿಂದ ಆರಂಭವಾಗುತ್ತವೆ, ಈ ಎರಡು ಹೊಸ ಟಿವಿಗಳಿಗೆ ಇನ್ನೂ ಕಡಿಮೆ ಬೆಲೆಯಿರಬಹುದು ಎಂಬ ಸುಳಿವು ನೀಡಿದೆ. ಆದರೆ, ಲಾಂಛ್‌ ದಿನಾಂಕಕ್ಕೆ ಹತ್ತಿರವಿರುವ ಟೀಸರ್‌ಗಳ ಮೂಲಕ ಹೆಚ್ಚಿನ ವಿವರಗಳು ಲಭ್ಯವಿರಬೇಕು.


ಇದನ್ನು ಓದಿ ⇒ China: ಮಕ್ಕಳು ‘ಸೂಪರ್ ಕಿಡ್’ಗಳಾಗಲಿ ಎಂದು ಕೋಳಿ ರಕ್ತದ ಇಂಜೆಕ್ಷನ್ ನೀಡುತ್ತಿದ್ದಾರೆ ಚೀನೀ ಪೋಷಕರು!

ಇತ್ತೀಚೆಗೆ, Xiaomi ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ ಮತ್ತು ಇತರ ಉತ್ಪನ್ನಗಳಿಂದ ಸಂಕ್ಷಿಪ್ತ 'Mi' ಬ್ರ್ಯಾಂಡಿಂಗ್ ಕೈಬಿಡುವುದಾಗಿ ಘೋಷಿಸಿತ್ತು. "ಅದರ ಜಾಗತಿಕ ಬ್ರ್ಯಾಂಡ್‌ ಉಪಸ್ಥಿತಿಯನ್ನು ಏಕೀಕರಿಸುವ ಗುರಿಯೊಂದಿಗೆ" ಈ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ವ್ಯಾಪಾರ ಅಥವಾ ಕಾರ್ಪೊರೇಟ್ ನವರು 'Mi' ಲೋಗೋವನ್ನು ಉಳಿಸಿಕೊಳ್ಳುತ್ತಾರೆ, ಅಂದರೆ ಅಂಗಡಿಗಳು ಮತ್ತು ಕಾರ್ಪೊರೇಟ್ ಕಚೇರಿಗಳು ಹಿಂದಿನಂತೆಯೇ ಅದೇ ಕಿತ್ತಳೆ ಬಣ್ಣದ ಲೋಗೋವನ್ನು ಹೊಂದಿರುತ್ತವೆ. ಆದರೆ, Mi ಬ್ರ್ಯಾಂಡಿಂಗ್ ಅಡಿಯಲ್ಲಿರುವ ಅದರ ಉತ್ಪನ್ನಗಳು 'Xiaomi' ಪೂರ್ವಪ್ರತ್ಯಯದ ಕಡೆಗೆ ಚಲಿಸುತ್ತವೆ ಮತ್ತು ಹೊಸ ಲೋಗೋವನ್ನು ಸೇರಿಸಲಾಗುತ್ತದೆ. ರೆಡ್‌ಮಿ ಅಡಿಯಲ್ಲಿ ತಯಾರಿಸಿದ ಉತ್ಪನ್ನಗಳು ಅದೇ ಮೊನಿಕರ್ ಮತ್ತು ಲಾಂಛನವನ್ನು ಹೊಂದಿರುತ್ತವೆ ಎಂದೂ ಚೀನೀ ಟೆಕ್ ಕಂಪನಿ ಹೇಳಿದೆ.
First published: