Airtel Recharge Plan: ಏರ್ಟೆಲ್ನಿಂದ ಹೊಸ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ! ಅನಿಯಮಿತ ಡೇಟಾ ಸೌಲಭ್ಯಇತ್ತೀಚೆಗೆ ಸೋಶಿಯಲ್ ಮೀಡಿಯಾಗಳನ್ನು (Social Media) ಬಳಕೆ ಮಾಡುವವರ ಸಂಖ್ಯೆ ಅಗಾಧವಾಗಿ ಬೆಳೆಯುತ್ತಿದೆ. ಇಂಟರ್ನೆಟ್ (Internet) ಬಳಕೆಯೂ ಸಹ ಅಷ್ಟೇ ಅಭಿವೃದ್ಧಿಯಾಗುತ್ತಿದೆ. ಆದರೆ ಈ ಇಂಟರ್ನೆಟ್ ಅನ್ನು ಬಳಕೆ ಮಾಡಬೇಕಾದರೆ ಟೆಲಿಕಾಂ ಕಂಪೆನಿಗಳು ಮಹತ್ತರವಾದ ಪಾತ್ರವಹಿಸುತ್ತವೆ. ಭಾರತದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ. ಒಂದಕ್ಕೊಂದು ಪೈಪೋಟಿ ನೀಡುವ ನಿಟ್ಟಿನಲ್ಲಿ ಈ ಕಂಪೆನಿಗಳು ತನ್ನ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಅದೇ ರೀತಿ ತನ್ನ ಲಾಭಕ್ಕೋಸ್ಕರ ರೀಚಾರ್ಜ್ ಬೆಲೆಯನ್ನೂ ಹೆಚ್ಚು ಮಾಡುತ್ತಾರೆ. ಆದರೆ ಇದೀಗ ಜನಪ್ರಿಯ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ಏರ್‌ಟೆಲ್ (Airtel) ತನ್ನ ಗ್ರಾಹಕರಿಗಾಗಿ ಹೆಚ್ಚುವರಿ ಡೇಟಾ ಸೌಲಭ್ಯವನ್ನು ನೀಡುವ ಯೋಜನೆಯನ್ನು ಪರಿಚಯಿಸಿದೆ.
ಏರ್‌ಟೆಲ್ ಸದ್ಯ ಪರಿಚಯಿಸಿರುವ ಯೋಜನೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್, ವಿಡಿಯೋಗಳನ್ನು ನೋಡುವವರಿಗೆ ತುಂಬಾನೇ ಸಹಕಾರಿಯಾಗಲಿದೆ. ಈ ಯೋಜನೆ ಮೂಲಕ ಸೋಶಿಯಲ್ ಮೀಡಿಯಾಗಳನ್ನು ದಿನವಿಡೀ ಬಳಸಿದರು ಡೇಟಾ ಖಾಲಿಯಾಗುವುದಿಲ್ಲ. ಹಾಗಿದ್ರೆ ಆ ಯೋಜನೆ ಯಾವುದು ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಏರ್ಟೆಲ್ನಿಂದ ಹೊಸ ರೀಚಾರ್ಜ್ ಪ್ಲ್ಯಾನ್ಗಳು
ಏರ್‌ಟೆಲ್ ಇದೀಗ ತನ್ನ ಗ್ರಾಹಕರಿಗಾಗಿ 489 ರೂಪಾಯಿ ಮತ್ತು 509 ರೂಪಾಯಿಗಳ ಎರಡು ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಅಧಿಕ ಇಂಟರ್ನೆಟ್ ಬಳಕೆ ಮಾಡುವವರಿಗೆ ಬಹಳಷ್ಟು ಉಪಯುಕ್ತವಾಗಿದೆ. ಈ ಯೋಜನೆಯ ವಿಶೇಷವೆಂದರೆ ಇದು 5ಜಿ ನೆಟ್ವರ್ಕ್ ಅನ್ನು ಸಹ ಬೆಂಬಲಿಸುತ್ತದೆ. ಈ ಮೂಲಕ ಬಳಕೆದಾರರು ಈ ಹೊಸ ರೀಚಾರ್ಜ್ ಪ್ಲ್ಯಾನ್‌ನಲ್ಲಿ 5G ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದಾಗಿದೆ. ಹಾಗೆಯೇ ಇತರೆ ರೀಚಾರ್ಜ್ ಪ್ಲ್ಯಾನ್‌ಗಳಂತೆಯೇ ವಾಯ್ಸ್ ಕಾಲ್, ಎಸ್‌ಎಮ್‌ಎಸ್ ಮೆಸೇಜ್ ಹಾಗೂ ಇನ್ನಿತರೆ ಸೌಲಭ್ಯ ಲಭ್ಯವಾಗಲಿದೆ.
ಏರ್ಟೆಲ್ನ 489 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಪ್ರಿಪೇಯ್ಡ್ 489 ರೂಪಾಯಿಗಳ ಪ್ಲ್ಯಾನ್ ನಲ್ಲಿ ಗ್ರಾಹಕರು ಅನ್ಲಿಮಿಟೆಡ್ ವಾಯ್ಸ್ ಕಾಲ್, 300 ಎಸ್‌ಎಮ್‌ಎಸ್ ಸೇರಿದಂತೆ ದಿನವೂ ಬಳಕೆ ಮಾಡಬಹುದಾದ ಮಿತಿಯಿಲ್ಲದ ಒಟ್ಟು 50ಜಿಬಿ ಡೇಟಾಸೌಲಭ್ಯ ಇದರಲ್ಲಿ ಲಭ್ಯವಾಗಲಿದೆ. ಹೆಚ್ಚುವರಿಯಾಗಿ ಏರ್‌ಟೆಲ್ ವಿಂಕ್ ಮ್ಯೂಸಿಕ್, ಉಚಿತ ಹೆಲೋ ಟ್ಯೂನ್, ಅಪೊಲೊ 24/7 ಮತ್ತು ಫಾಸ್ಟ್‌ಟ್ಯಾಗ್ ಪ್ರಯೋಜನ ಸಹ ಇದರಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ. ಇನ್ನು ಈ ಪ್ಲ್ಯಾನ್ 30 ದಿನಗಳವರೆಗೆ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ.
ಏರ್ಟೆಲ್ನ 509 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಈ ಬಾರಿ 509 ರೂಪಾಯಿಯ ಪ್ರೀಪೇಯ್ಡ್ ಪ್ಲ್ಯಾನ್‌ನಲ್ಲಿ ಸ್ಥಳೀಯ ಮತ್ತು ಎಸ್ಟಿಡಿ ಕಾಲ್ಗಳ ಪ್ರಯೋಜನ ಸಿಗಲಿದೆ. ಜೊತೆಗೆ ಈ ಪ್ಲ್ಯಾನ್ ಮೂಲಕ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 300 ಎಸ್‌ಎಮ್‌ಎಸ್ ಅನ್ನು ಉಚಿತವಾಗಿ ಮಾಡಬಹುದಾಗಿದೆ. ವಿಶೇಷವಾಗಿ ಈ ಪ್ಲ್ಯಾನ್‌ನಲ್ಲಿ ಒಟ್ಟು 60 ಜಿಬಿ ಡೇಟಾ ಲಭ್ಯವಾಗಲಿದ್ದು, ವ್ಯಾಲಿಡಿಟಿ ಅವಧಿ ಮುಗಿಯುವುದರ ಒಳಗಾಗಿ ಯಾವಾಗ ಬೇಕಾದರೂ ಇದನ್ನು ಬಳಕೆ ಮಾಡಬಹುದಾಗಿದೆ.
7 ರಾಜ್ಯಗಳಲ್ಲಿ ರೀಚಾರ್ಜ್ ಬೆಲೆ ಏರಿಸಿದ ಏರ್‌ಟೆಲ್
57% ರಷ್ಟು ಬೆಲೆಯಲ್ಲಿ ಏರಿಕೆ
ಕಳೆದ ವರ್ಷದಲ್ಲಿ ಟೆಲಿಕಾಂ ಕಂಪೆನಿಗಳು ತನ್ನ ರೀಚಾರ್ಜ್ ಬೆಲೆಯಲ್ಲಿ ಏರಿಕೆ ಮಾಡಿತ್ತು. ಆದರೆ ಪ್ರತೀ ಬಾರಿಗೆ ಏರಿಕೆ ಮಾಡುವಾಗ ಸ್ವಲ್ಪ ಮಟ್ಟಿಗೆ ಮಾಡುತ್ತಿತ್ತು. ಆದರೆ ಈ ಬಾರಿ ಏರ್‌ಟೆಲ್ ಕಂಪೆನಿ ಬರೋಬ್ಬರಿ 57% ರಷ್ಟು ಹೆಚ್ಚಿಸಿ ಗ್ರಾಹಕರಿಗೆ ಶಾಕ್ ನೀಡಿದೆ.
ಇದನ್ನೂ ಓದಿ: ಒನ್ಪ್ಲಸ್ ಕಂಪೆನಿಯ ಈ ಸ್ಮಾರ್ಟ್ವಾಚ್ ಮೇಲೆ ಭರ್ಜರಿ ರಿಯಾಯಿತಿ! ಏನೆಲ್ಲಾ ಆಫರ್ಸ್ ಲಭ್ಯವಿದೆ?
ಈ ಬಗ್ಗೆ ಏರ್ಟೆಲ್ನ ಅಭಿಪ್ರಾಯ
ನಮ್ಮ ಗ್ರಾಹಕರಿಗೆ ಇನ್ನೂ ಉತ್ತಮ ರೀತಿ ಅನುಭವವನ್ನು ನೀಡುವ ನಿಟ್ಟಿನಲ್ಲಿ ಕಡಿಮೆ ಬೆಲೆಯಲ್ಲಿದ್ದ ರೀಚಾರ್ಜ್ ದರಗಳನ್ನು ಸ್ಥಗಿತಗೊಳಿಸಿದ್ದೇವೆ. ಇನ್ಮುಂದೆ ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಏರ್ಟೆಲ್ನ ರೀಚಾರ್ಜ್ನ ಆರಂಭಿಕ ಬೆಲೆಯೇ 155 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು ಅನ್ಲಿಮಿಟೆಡ್ ವಾಯ್ಸ್ ಕಾಲ್, 1 ಜಿ ಡೇಟಾ, 300 ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಪಡೆಯುತ್ತಾರೆ. ಈ ಯೋಜನೆಗಳ ಮೂಲಕ ಗ್ರಾಹಕರಿಗೆ ಬೆಲೆಗೆ ತಕ್ಕಂತರ ಉತ್ತಮ ಮೌಲ್ಯವನ್ನು ನೀಡುತ್ತದೆ ಎಂದು ಏರ್‌ಟೆಲ್ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ