• Home
  • »
  • News
  • »
  • tech
  • »
  • Vodafone Prepaid Plans: ವೊಡಾಫೋನ್​ನಿಂದ ಹೊಸ ರೀಚಾರ್ಜ್​ ಪ್ಲಾನ್​ ಬಿಡುಗಡೆ; ಅನ್ಲಿಮಿಟೆಡ್ ವಾಯ್ಸ್​ ಕಾಲ್,​ ಇಂಟರ್ನೆಟ್​ ಲಭ್ಯ

Vodafone Prepaid Plans: ವೊಡಾಫೋನ್​ನಿಂದ ಹೊಸ ರೀಚಾರ್ಜ್​ ಪ್ಲಾನ್​ ಬಿಡುಗಡೆ; ಅನ್ಲಿಮಿಟೆಡ್ ವಾಯ್ಸ್​ ಕಾಲ್,​ ಇಂಟರ್ನೆಟ್​ ಲಭ್ಯ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವೊಡಾಫೋನ್​ ಐಡಿಯಾ ಈ ಬಾರಿ ಬಿಡುಗಡೆ ಮಾಡಿದ ರೀಚಾರ್ಜ್​ ಪ್ಲಾನ್ ಬಹಳ ವಿಶೇಷವಾಗಿದ್ದು ಇದರಲ್ಲಿ ಇಂಟರ್ನೆಟ್​, ಕಾಲ್​ ಗಳೆಲ್ಲವೂ ಅನ್ಲಿಮಿಟೆಡ್​ ಆಗಿಯೇ ಬಳಸಬಹುದಾಗಿದೆ. ಇನ್ನು ಇದರಲ್ಲಿ ಏನೇನೆಲ್ಲಾ ಫೀಚರ್ಸ್​ ಇದೆ ಎಂಬುದನ್ನು ಇಲ್ಲಿ ಓದಿ.

  • Share this:

    ಮೊಬೈಲ್ (Mobile) ಬಳಕೆ ಮಾಡಿದರೆ ಸಾಕಾ ಅದ್ರಲ್ಲೊಂದು ಸಿಮ್ (Sim)​ ಕೂಡ ಬೇಕು. ಇತ್ತೀಚೆಗೆ ಎಲ್ಲವೂ ಡಿಜಿಟಲ್ (Digital)​ ಆಗಿಯೇ ಬದಲಾವಣೆಯಾಗುತ್ತಿದೆ. ಯಾವುದೇ ವಿಷಯಗಳನ್ನು ತಿಳಿಯಬೇಕಾದರೂ, ವ್ಯವಹಾರ ನಡೆಸಬೇಕಾದರೂ ಈ ಆನ್​ಲೈನ್ (Online)​ ಮೂಲಕವೇ ಮಾಡುತ್ತಾರೆ. ಆದರೆ ಆನ್​ಲೈನ್​ ವ್ಯವಹಾರಗಳನ್ನು ಮಾಡಬೇಕಾದರೆ ಇಂಟರ್ನೆಟ್ (Internet)​ ಅಗತ್ಯವಾಗಿರುತ್ತದೆ. ಆದ್ದರಿಂದ ಈ ಟೆಲಿಕಾಂ ಕಂಪನಿಗಳು ಈ ಇಂಟರ್ನೆಟ್​ ಸೌಲಭ್ಯವನ್ನು ನೀಡುವ ಸಲುವಾಗಿ ಏನಾದರರೊಂದು ವಿಶೇಷ  ಆಫರ್ಸ್​ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತನೇ ಇದೆ. ಇದೀಗ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ (Telecom Company) ಒಂದಾದ ವೊಡಾಫೋನ್ ಐಡಿಯಾ (Vodafone Idea) ವಿಶೇಷ ಪ್ರೀಪೇಯ್ಡ್​ ರೀಚಾರ್ಜ್​ ಪ್ಲಾನ್​​ ಅನ್ನು ಬಿಡುಗಡೆ ಮಾಡಿದೆ. 


    ವೊಡಾಫೋನ್​ ಐಡಿಯಾ ಈ ಬಾರಿ ಬಿಡುಗಡೆ ಮಾಡಿದ ರೀಚಾರ್ಜ್​ ಪ್ಲಾನ್ ಬಹಳ ವಿಶೇಷವಾಗಿದ್ದು ಇದರಲ್ಲಿ ಇಂಟರ್ನೆಟ್​, ಕಾಲ್​ ಗಳೆಲ್ಲವೂ ಅನ್ಲಿಮಿಟೆಡ್​ ಆಗಿಯೇ ಬಳಸಬಹುದಾಗಿದೆ. ಇನ್ನು ಇದರಲ್ಲಿ ಏನೇನೆಲ್ಲಾ ಫೀಚರ್ಸ್​ ಇದೆ ಎಂಬುದನ್ನು ಇಲ್ಲಿ ಓದಿ.


    2999 ರೂಪಾಯಿಯ  ಯೋಜನೆ


    ವೊಡಾಫೋನ್ ಬಿಡುಗಡೆ ಮಾಡಿದ 2,999 ರೂಪಾಯಿಯ ಯೋಜನೆಯಲ್ಲಿ ದಿನಕ್ಕೆ 100 ಎಸ್​ಎಮ್​ಎಸ್​ ಅನ್ನು ಉಚಿತವಾಗಿ ಮಾಡಬಹುದು. ದಿನದಲ್ಲಿ 300 ಮೆಸೇಜ್​ಗಿಂತ ಹೆಚ್ಚು ಮಾಡಿದರೆ ಪ್ರತೀ ಮೆಸೇಜ್​ಗೆ ಒಂದು ರೂಪಾಯಿಯಂತೆ ಕಟ್ ಆಗುತ್ತದೆ. ಆದರೆ ಈ ಯೋಜನೆಯು ಯಾವುದೇ OTT ಪ್ರಯೋಜನಗಳನ್ನು ಹೊಂದಿರುವುದಿಲ್ಲ. ವೊಡಾಫೋನ್ ಐಡಿಯಾದ ಅಪ್ಲಿಕೇಶನ್ ಮೂಲಕ ಚಲನಚಿತ್ರಗಳು ಮತ್ತು ಟಿವಿಯ ಶೋಗಳನ್ನು ನೋಡುವ ಅವಕಾಶ ನೀಡುತ್ತದೆ.


    ಇದನ್ನೂ ಓದಿ: ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್​​ನ್ಯೂಸ್​: ಜಸ್ಟ್ 49 ರೂ.ಗೆ ಭರ್ಜರಿ ಆಫರ್


    ಇನ್ನು ಈ ಯೋಜನೆಯ ವ್ಯಾಲಿಡಿಟಿ 365 ದಿನಗಳು ಆಗಿರುತ್ತದೆ. ಈ ಪ್ಲಾನ್​ ಮೂಲಕ ಬಳಕೆದಾರರು ಅನ್ಲಿಮಿಟೆಡ್​ ವಾಯ್ಸ್​​ ಕಾಲ್ ಮಾಡಬಹುದು. ಜೊತೆಗೆ ಅನ್ಲಿಮಿಟೆಡ್​ ಡೇಟಾವನ್ನು ಸಹ ಉಚಿತವಾಗಿ ನೀಡಿದ್ದಾರೆ. ಇದು ಒಟ್ಟು 850 GB ಡೇಟಾವನ್ನು ನೀಡುತ್ತದೆ. ಈ ಡೇಟಾ ಖಾಲಿಯಾದ ನಂತರ, ಪ್ರತಿ ಎಮ್​ಬಿ ಡೇಟಾಗೆ 50 ಪೈಸೆಯಂತೆ  ರೀಚಾರ್ಜ್​ ಬ್ಯಾಲೆನ್ಸ್​ನಿಂದ ಕಟ್​ ಆಗುತ್ತದೆ.


    ಸಾಂಕೇತಿಕ ಚಿತ್ರ


    2899 ರೂಪಾಯಿ ಯೋಜನೆ


    ಈ 2899 ರೂಪಾಯಿಯ ರೀಚಾರ್ಜ್​ ಪ್ಲಾನ್​ನಲ್ಲಿ ದಿನಕ್ಕೆ 1.5 GB ಡೇಟಾವನ್ನು ಪಡೆಯಬಹುದಾಗಿದೆ. ಅನ್ಲಿಮಿಟೆಡ್​ ವಾಯ್ಸ್​​ ಕಾಲ್ ಸಹ ಮಾಡಬಹುದು. ದಿನಕ್ಕೆ 100 ಎಸ್​ಎಮ್​ಎಸ್​ ಅನ್ನು ಉಚಿತವಾಗಿ ನೀಡಿದೆ. ಈ ಯೋಜನೆಯ ವ್ಯಾಲಿಡಿಟಿ ಕೂಡ ಒಂದು ವರ್ಷ ಇದೆ. ಅಲ್ಲದೆ ಈ ಯೋಜನೆಯು ಅನ್ಲಿಮಿಟೆಡ್ ಉಚಿತ ಡೇಟಾವನ್ನು ಕೂಡ ನೀಡುತ್ತದೆ. ಉಚಿತ ಡೇಟಾ ಅಂದರೆ ಮಧ್ಯಾಹ್ನ 12 ರಿಂದ ಬೆಳಿಗ್ಗೆ 6 ರವರೆಗೆ ಲಭ್ಯವಿದೆ. ಅಲ್ಲದೆ ಪ್ರತಿ ತಿಂಗಳು 2 GB ಬ್ಯಾಕಪ್ ಡೇಟಾ ಲಭ್ಯವಿದೆ. ಇದಕ್ಕೆ ಯಾವುದೇ ಹಣ ಪಾವತಿ ಮಾಡಬೇಕೆಂದಿಲ್ಲ.


    3099 ರೂಪಾಯಿ ಯೋಜನೆ


    ಈ ಎಲ್ಲಾ ಯೋಜನೆಗಳ ಜೆತೆಗೆ ಇನ್ನೊಂದು ಯೋಜನೆಯೂ ಇದೆ. ಅದು 3099 ರೂಪಾಯಿಯ ರೀಚಾರ್ಜ್ ಯೋಜನೆಯಾಗಿದೆ. ಇದು ಒಂದು ವರ್ಷದ ರೀಚಾರ್ಜ್ ಯೋಜನೆಯೂ ಆಗಿದೆ. ಇದು ದಿನಕ್ಕೆ 2 GB ಡೇಟಾದೊಂದಿಗೆ ಬರುತ್ತದೆ. ಈ ಯೋಜನೆಯ ಮೂಲಕ ಅನ್ಲಿಮಿಟೆಡ್​ ವಾಯ್ಸ್​​ ಕಾಲ್ ಕೂಡ ಮಾಡಬಹುದು. ಒಂದು ವರ್ಷದವರೆಗೆ ಡಿಸ್ನಿ ಹಾಟ್​​ಸ್ಟಾರ್​​ ಅಪ್ಲಿಕೇಶನ್​ನ ಚಂದಾದಾರಿಕೆಯನ್ನು ಇದರಲ್ಲಿ ಪಡೆಯಬಹುದಾಗಿದೆ.


    ಈ ಯೋಜನೆ ಸೌಲಭ್ಯವನ್ನು 365 ದಿನಗಳವರೆಗೆ ಪಡೆಯಬಹುದಾಗಿದೆ. ವೊಡಾಫೋನ್ ಟೆಲಿಕಾಂ ಕಂಪನಿಯು ಇತ್ತೀಚೆಗೆ ನಾಲ್ಕು ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಯೋಜನೆಗಳನ್ನು ಪರಿಚಯಿಸಿದೆ. ಅವುಗಳನ್ನೆಲ್ಲಾ ಫಿಫಾ ವಿಶ್ವಕಪ್ ಸಂದರ್ಭದಲ್ಲಿ  ಅನಾವರಣಗೊಳಿಸಲಾಗಿದೆ. ಅವುಗಳೆಂದರೆ ರೂ. 2999, ರೂ. 3999, ರೂ. 4499, ರೂ. ಇವು 5999 ಯೋಜನೆಗಳಾಗಿವೆ. ಈ ಯೋಜನೆಗಳು ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಮಾತ್ರ ಅನ್ವಯಿಸುವ ಯೋಜನೆಗಳಾಗಿವೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು