Airtel New Plans: ಏರ್​ಟೆಲ್​ನಿಂದ ಹೊಸ ರೀಚಾರ್ಜ್​ ಪ್ಲ್ಯಾನ್​ ಬಿಡುಗಡೆ; 15 ಜಿಬಿ ಡೇಟಾ ಉಚಿತ

ಏರ್​ಟೆಲ್

ಏರ್​ಟೆಲ್

ಏರ್​ಟೆಲ್​ ಇದೀಗ ಗ್ರಾಹಕರಿಗಾಗಿ ಹೊಸ 149 ರೂಪಾಯಿ ರೀಚಾರ್ಜ್​ ಪ್ಲ್ಯಾನ್​ ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು 15ಕ್ಕೂ ಹೆಚ್ಚು ಓಟಿಟಿ ಚಂದಾದಾರಿಕೆಯನ್ನು ಪಡೆಯಬಹುದು ಮತ್ತು 15 ಜಿಬಿ ಡೇಟಾ ಸೌಲಭ್ಯವೂ ಲಭ್ಯವಾಗುತ್ತದೆ. ಇನ್ನೂ ಅನೇಕ  ಪ್ರಯೋಜನಗಳು ಇದರಲ್ಲಿ ಲಭ್ಯವಿದ್ದು, ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಮುಂದೆ ಓದಿ ...
  • Share this:

    ಏರ್​ಟೆಲ್ (Airtel)​ ದೇಶದ ಎರಡನೇ ಟೆಲಿಕಾಂ ಕಂಪೆನಿಯೆಂದು ಗುರುತಿಸಕೊಂಡಿದೆ. ಈ ಕಂಪೆನಿ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ರೀಚಾರ್ಜ್​ ಯೋಜನೆಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಏರ್​ಟೆಲ್​ ಇತ್ತೀಚೆಗೆ ತನ್ನ ರೀಚಾರ್ಜ್​ ಬೆಲೆಯನ್ನು ಏರಿಕೆ ಮಾಡಿತ್ತು. ಆದರೆ ಇದೀಗ ಮತ್ತೆ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಯೋಜನೆಯೊಂದನ್ನು ಪರಿಚಯಿಸಿದೆ. ಈ ಕಂಪೆನಿಯಿಂದ ಇದುವರೆಗೆ ಯಾವುದೇ ರೀತಿಯ ಪ್ರತ್ಯೇಕ ಓಟಿಟಿ ಪ್ಲಾಟ್​​ಫಾರ್ಮ್​ (OTT Platform)ಗಳನ್ನು ಪಡೆಯುವಂತಹ ರೀಚಾರ್ಜ್​ ಯೋಜನೆಗಳನ್ನು ಪರಿಚಯಿಸಿರಲಿಲ್ಲ. ಆದರೆ ಈಗ 149 ರೂಪಾಯಿಯ ಹೊಸ ಪ್ಲ್ಯಾನ್ (Recharge Plans)​ ಒಂದನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು 15 ಕ್ಕೂ ಹೆಚ್ಚು ಓಟಿಟಿ ಪ್ಲಾಟ್​ಫಾರ್ಮ್​ಗಳನ್ನು ಪಡೆಯಬಹುದು.


    ಏರ್​ಟೆಲ್​ ಇದೀಗ ಗ್ರಾಹಕರಿಗಾಗಿ ಹೊಸ 149 ರೂಪಾಯಿ ರೀಚಾರ್ಜ್​ ಪ್ಲ್ಯಾನ್​ ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು 15ಕ್ಕೂ ಹೆಚ್ಚು ಓಟಿಟಿ ಚಂದಾದಾರಿಕೆಯನ್ನು ಪಡೆಯಬಹುದು ಮತ್ತು 15 ಜಿಬಿ ಡೇಟಾ ಸೌಲಭ್ಯವೂ ಲಭ್ಯವಾಗುತ್ತದೆ. ಇನ್ನೂ ಅನೇಕ  ಪ್ರಯೋಜನಗಳು ಇದರಲ್ಲಿ ಲಭ್ಯವಿದ್ದು, ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.


    ಏರ್​ಟೆಲ್​ನ 149 ರೂಪಾಯಿ ರೀಚಾರ್ಜ್​ ಪ್ಲ್ಯಾನ್​


    149 ರೂಪಾಯಿಯ ಏರ್‌ಟೆಲ್​ನ ಹೊಸ ಪ್ರಿಪೇಯ್ಡ್ ಯೋಜನೆಯು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಈ ಯೋಜನೆ ಮೂಲಕ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ಒದಗಿಸಲಿದೆ. ಇನ್ನು ಈ ಯೋಜನೆ ಮೂಲಕ ಬಳಕೆದಾರರು SonyLIV, Eros Now, ShemarooME, Hoichoi, Ultra, LionsgatePlay, Epicon, ManoramaMax, Dollywood Play, Divo, Klikk, Namaflix, HungamaPlay, Docubay, SocialSwag, ShortsTV, Chaupal, Kanccha Lannka ಮತ್ತು Raj Digital TV ಫ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶ ಪಡೆಯಲಿದ್ದಾರೆ. ಇಷ್ಟೇ ಅಲ್ಲದೇ, ಈ ಯೋಜನೆಗೆ ಚಂದಾದಾರರಾಗುವ ಏರ್‌ಟೆಲ್ ಗ್ರಾಹಕರಿಗೆ 1ಜಿಬಿ ಡೇಟಾ ಸೌಲಭ್ಯ ದೊರೆಯಲಿದೆ.


    ಇದನ್ನೂ ಓದಿ: ನೀವ್ ವಾಟ್ಸಾ​ಪ್​ನಲ್ಲಿ ಆನ್​ಲೈನ್ ಇರೋದು ಗೋತ್ತಾಗ್ಬಾರ್ದು ಅಂದ್ರೆ ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ


    ಏರ್​ಟೆಲ್​ನ ಈ ಯೋಜನೆ ಓಟಿಟಿ ಪ್ಲಾಟ್​​ಫಾರ್ಮ್​ಗಳನ್ನು ಬಯಸುವವರಿಗೆ ಉತ್ತಮವಾಗಿದೆ. ಆದರೆ ಇದು ಡೇಟಾ ಆನ್​​ ಪ್ಯಾಕ್​ ಆಗಿದೆ. ಅಂದರೆ  ಗ್ರಾಹಕರು ಈಗಾಗಲೇ ರೀಚಾರ್ಜ್​ ಪ್ಯಾಕ್​ ಹೊಂದಿದ್ದರೆ ಮಾತ್ರ ಈ ಯೋಜನೆಯನ್ನು ರೀಚಾರ್ಜ್​ ಮಾಡಿಕೊಳ್ಬಹುದು. ಇಲ್ಲವಾದರೆ ಇದರ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಇನ್ನು ಈ ಯೋಜನೆಯನ್ನು ಕೇವಲ ಓಟಿಟಿ ಪ್ಲಾಟ್​ಫಾರ್ಮ್​ಗಳನ್ನು ಬಳಸಲು ಮಾತ್ರ ಆಯ್ಕೆ ಮಾಡ್ಬಹುದು.


    ಏರ್​ಟೆಲ್


    148 ರೂಪಾಯಿ ರೀಚಾರ್ಜ್ ಪ್ಲ್ಯಾನ್​


    ಇನ್ನು ಹೆಚ್ಚುವರಿ ಡೇಟಾ ಸೌಲಭ್ಯವನ್ನು ಬಳಸುವವರಿಗೆ ಏರ್​ಟೆಲ್​ 148 ರೂಪಾಯಿಯ ಡೇಟಾ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಇದನ್ನು ಡೇಟಾ ಆ್ಯಡ್​ ಆನ್​ ಪ್ಲ್ಯಾನ್​ ಎಂದೂ ಕರೆಯಬಹುದು. ಏಕೆಂದರೆ ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಜೊತೆಗೆ 15 ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದು. ಇನ್ನು ಈ ಯೋಜನೆಯ ಓಟಿಟಿ ಪ್ಲಾಟ್​ಫಾರ್ಮ್​ ಬಗ್ಗೆ ಹೇಳುವುದಾದರೆ, ಇದರಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತದೆ. ಆದರೆ, ಮೇಲೆ ತಿಳಿಸಿದ 15 ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರು ಚಾನೆಲ್ ಅನ್ನು ಮಾತ್ರ ಆಯ್ಕೆ ಮಾಡಬಹುದು. ಅಂದರೆ, ಈ ಯೋಜನೆಯು ಕೇವಲ ಒಂದು ಓಟಿಟಿ ಅಪ್ಲಿಕೇಶನ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ.





     ಏರ್​​ಟೆಲ್​ನ 549 ರೂಪಾಯಿ ಪ್ರೀಪೇಯ್ಡ್​ ಪ್ಲ್ಯಾನ್​




    ಏರ್‌ಟೆಲ್‌ ಟೆಲಿಕಾಂನ 549 ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2ಜಿಬಿ ಡೇಟಾವನ್ನು ಬಳಸಿಕೊಳ್ಳಬಹುದಾಗಿದೆ. ಹಾಗೆಯೇ ಅನಿಯಮಿತ ವಾಯ್ಸ್​ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಉಚಿತವಾಗಿ ಮಾಡಬಹುದಾಗಿದೆ.  ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಉಚಿತ ಹೆಲೋ ಟ್ಯೂನ್ ಪ್ರಯೋಜನ ಸಿಗಲಿದೆ. ಜೊತೆಗೆ ಫಾಸ್ಟ್‌ಟ್ಯಾಗ್ ನಲ್ಲಿ 100 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ಸಹ ಲಭ್ಯವಾಗಲಿದೆ.


    Published by:Prajwal B
    First published: