ಭಾರತದಲ್ಲಿ 5G ಸೇವೆಗಳನ್ನು ವಿಸ್ತರಿಸಲು ಕೆಲಸ ಮಾಡುತ್ತಿರುವ ಟೆಲಿಕಾಂ ಕಂಪನಿಗಳಲ್ಲಿ (Telecom Company) ಏರ್ಟೆಲ್ (Airtel) ಕಂಪನಿ ಕೂಡ ಒಂದು. ಇದೀಗ ಏರ್ಟೆಲ್ ಮತ್ತೊಂದು ಹೊಸ ಅಪ್ಡೇಟ್ನೊಂದಿಗೆ ಗ್ರಾಹಕರನ್ನು ಸೆಳೆಯಲು ಬಂದಿದೆ. ಇದು 'ವರ್ಲ್ಡ್ ಪಾಸ್' (World Pass) ಹೆಸರಿನ ಪೋಸ್ಟ್ಪೇಯ್ಡ್ (Postpaid) ಮತ್ತು ಪ್ರಿಪೇಯ್ಡ್ (Prepaid) ಬಳಕೆದಾರರಿಗೆ ಹೊಸ ಅಂತಾರಾಷ್ಟ್ರೀಯ ರೋಮಿಂಗ್ (Roaming) ಯೋಜನೆಗಳನ್ನು ಪರಿಚಯಿಸುತ್ತಿದೆ. ಈ ಯೋಜನೆಗಳು 184 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆ ಮೂಲಕ ಯಾವುದೇ ಬೇರೆ ರೀಚಾರ್ಜ್ (Recharge) ಅನ್ನು ಮಾಡದೇ ಈ ಯೋಜನೆ ಮೂಲಕ ಎರಡು ಅಥವಾ ಹೆಚ್ಚಿನ ದೇಶಗಳಿಗೆ ಪ್ರಯಾಣಿಸಬಹುದು. ಹಾಗಿದ್ರೆ ಈ ಯೋಜನೆಯ ವಿಶೇಷತೆಯೇನು ಎಂಬುದನ್ನು ತಿಳಿಯೋಣ.
ಇತ್ತೀಚೆಗೆ ಟೆಲಿಕಾಂ ಕಂಪನಿಗಳು ಹೊಸತನದ ರೀಚಾರ್ಜ್ ಪ್ಲಾನ್ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಲೇ ಇದೆ. ಇದೀಗ ಏರ್ಟೆಲ್ ತನ್ನ ಗ್ರಾಹಕರಿಗಾಗಿ ವರ್ಲ್ಡ್ ಪಾಸ್ ಪಡೆಯುವಂತಹ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಹಾಗಿದ್ರೆ ಈ ಯೋಜನೆಯಲ್ಲಿ ಸಿಗುವಂತಹ ಸೌಲಭ್ಯಗಳೇನು ಎಂಬುದಕ್ಕೆ ಈ ಕೆಳಗೆ ಉತ್ತರ ಇದೆ.
ಎಲ್ಲಾ ಪ್ರಯಾಣ ಅಗತ್ಯಗಳನ್ನು ಈ ಯೋಜನೆ ಪೂರೈಸುತ್ತದೆ
ಏರ್ಟೆಲ್ನ ವರ್ಲ್ಡ್ ಪಾಸ್ ರೀಚಾರ್ಜ್ ಪ್ಲಾನ್ ಎಲ್ಲಾ ಪ್ರಯಾಣ ಅಗತ್ಯಗಳನ್ನು ಪೂರೈಸುವ ಪ್ಯಾಕ್ ಆಗಿದೆ. ಇದು 184 ದೇಶಗಳಲ್ಲಿ ಕಾರ್ಯನಿರ್ವಹಿಸುವ ಪೋಸ್ಟ್ಪೇಯ್ಡ್ ಮತ್ತು ಪ್ರಿಪೇಯ್ಡ್ ಸಂಪರ್ಕಗಳಿಗಾಗಿ ಆಂತರಿಕ ರೋಮಿಂಗ್ ಯೋಜನೆಗಳ ಸರಣಿಯಾಗಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಇನ್ಮುಂದೆ ಕೈಯಲ್ಲಿ ಶೂ ಕ್ಲೀನ್ ಮಾಡ್ಬೇಕಾಗಿಲ್ಲ, ಬಂದಿದೆ ನೋಡಿ ಪಾಲಿಶ್ ಮಾಡುವ ಹೊಸ ಸಾಧನ
[caption id="attachment_844146" align="alignnone" width="1600"] ಸಾಂಕೇತಿಕ ಚಿತ್ರ[/caption]
ಈ ಯೋಜನೆಗಳು ವಿಶ್ವಾದ್ಯಂತ ಗ್ರಾಹಕರಿಗೆ ಮೀಸಲಾದ ಸಹಾಯವಾಣಿ ಸಂಖ್ಯೆ 99100-99100 ಮೂಲಕ 24 ಗಂಟೆಯೂ ಗ್ರಾಹಕರಿಗೆ ಮಾಹಿತಿಯನ್ನು ನೀಡುತ್ತದೆ. ಈ ಸಂಖ್ಯೆ ವಾಟ್ಸಪ್ ಸಂದೇಶಗಳಲ್ಲಿಯೂ ಲಭ್ಯವಿದೆ.
ಏನಿದು "ವರ್ಲ್ಡ್ ಪಾಸ್" ಪ್ಯಾಕ್?
ಏರ್ಟೆಲ್ ವರ್ಲ್ಡ್ ಟ್ರಾವೆಲರ್ಗಳಿಗಾಗಿ ಸದ್ಯ ಬಿಡುಗಡೆ ಮಾಡಿರುವ ರೋಮಿಂಗ್ ಪ್ಯಾಕ್ ಇದಾಗಿದೆ.ದೇಶವಿದೇಶ ಸುತ್ತುವವರಿಗೆ ಈ ವರ್ಲ್ಡ್ ಪಾಸ್ ಯೋಜನೆ ಬಹಳಷ್ಟು ಏರ್ಟೆಲ್ ಗ್ರಾಹಕರಿಗೆ ಉಪಯೋಗವಾಗಲಿದೆ. ಇದಲ್ಲದೆ ಈ ಯೋಜನೆ 184 ದೇಶಗಳಲ್ಲಿ ಕಾರ್ಯನಿರ್ವಹಿಸುವುದರಿಂದ ಬಹಳಷ್ಟು ಸುಲಭವಾಗುತ್ತದೆ.
ಇನ್ನು ಈ ಪ್ಯಾಕ್ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಎರಡು ಆಯ್ಕೆಗಳಲ್ಲಿ ಕೂಡ ಗ್ರಾಹಕರಿಗೆ ಲಭ್ಯವಿದೆ. ಇದಲ್ಲದೆ ಈ ಪ್ಯಾಕ್ ಮುಗಿದ ನಂತರ ಅಗತ್ಯವಾಗಿ ಡೇಟಾ ಬೇಕೆಂದಾದರೆ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಬಳಸಿಕೊಂಡು ಡೇಟಾವನ್ನು ಆ್ಯಡ್ ಮಾಡಿಕೊಳ್ಳಬಹುದು.
ಏರ್ಟೆಲ್ ವರ್ಲ್ಡ್ ಪಾಸ್ ಯೋಜನೆಯ ಬೆಲೆ ವಿವರಗಳು
ಪೋಸ್ಟ್ ಪೇಯ್ಡ್ ಯೋಜನೆಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ