WhatsApp: ವಾಟ್ಸಾಪ್​ ಫೀಚರ್ಸ್​ನಲ್ಲಿ ಹೊಸ ಬದಲಾವಣೆ! ಕೆಲ ಬಳಕೆದಾರರಿಗೆ ಮಾತ್ರ ಲಭ್ಯ

ವಾಟ್ಸಾಪ್​

ವಾಟ್ಸಾಪ್​

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಇದೀಗ ಹೊಸ ಫೀಚರ್​ ಅನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಯಾವುದೇ ಗ್ರೂಪ್​ನಿಂದ ಅಪರಿಚಿತ ನಂಬರ್​ನಿಂದ ಮೆಸೇಜ್ ಬಂದರೆ ತಕ್ಷಣ ಪತ್ತೆಹಚ್ಚಬಹುದು.

  • News18 Kannada
  • 4-MIN READ
  • Last Updated :
  • New Delhi, India
  • Share this:

    ವಾಟ್ಸಾಪ್ (WhatsApp)​ ಇತ್ತೀಚೆಗೆ ಬಹಳಷ್ಟು ಫೀಚರ್ಸ್​ಗಳನ್ನು ತನ್ನ ಬಳಕೆದಾರರಿಗೆ ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಸ್ಮಾರ್ಟ್​ಫೋನ್​ ಬಳಕೆದಾರರನ್ನು ಸೆಳೆಯುತ್ತಿದೆ. ಸ್ಮಾರ್ಟ್​​ಫೋನ್​ (Smartphone) ಹೊಂದಿದವರು ವಾಟ್ಸಾಪ್​ ಹೊಂದಿರದ ಜನಗಳೇ ಇಲ್ಲ. ಅದ್ರಲ್ಲೂ ಈಗಂತೂ ವಾಟ್ಸಾಪ್​ನ ಬೆಳವಣೆಗೆಯಿಂದಾಗಿ ಎಲ್ಲರೂ ವಾಟ್ಸಾಪ್​ ಅನ್ನೇ ಡೌನ್​ಲೋಡ್​ ಮಾಡ್ತಾ ಇದ್ದಾರೆ. ಕಳೆದ ವರ್ಷ ವಾಟ್ಸಾಪ್ ತನ್ನ ಅಪ್ಲಿಕೇಶನ್​​ನಲ್ಲಿ ಹಲವಾರು ಫೀಚರ್ಸ್​​ಗಳು ಬರಲಿದೆ ಎಂದು ಕಂಪೆನಿ ಹೇಳಿತ್ತು. ಅದೇ ರೀತಿ ಈ ಬಾರಿ ಆರಂಭದಿಂದಲೇ ಹೊಸ ಹೊಸ ಫೀಚರ್ಸ್​​ಗಳನ್ನು ಬಿಡುಗಡೆ ಮಾಡಿದೆ. ಇದೀಗ ವಾಟ್ಸಾಪ್​ನಲ್ಲಿ ಮತ್ತೊಂದು ಹೊಸ ಫೀಚರ್ (New Feature)​ ಬರುತ್ತಿದ್ದು, ವಾಟ್ಸಾಪ್​​ ಬಳಕೆದಾರರನ್ನು ಆಕರ್ಷಿಸೋದು ಗ್ಯಾರಂಟಿ.


    ವಾಟ್ಸಾಪ್‌ ಐಒಎಸ್‌ ಬೀಟಾ ವರ್ಷನ್‌ನಲ್ಲಿ ಚಾಟ್​​ ಲೀಸ್ಟ್​ನಲ್ಲಿ ಬರುವಂತಹ ಅನ್​ನೌನ್ ನಂಬರ್​ಗಳ ಬದಲಿಗೆ ಪುಶ್​ ನೇಮ್​ಗಳನ್ನು ನೀಡಲು ಮುಂದಾಗಿದೆ. ಇದರಿಂದ ಇನ್ಮುಂದೆ ಯಾವುದೇ ಅಪರಿಚಿತ ನಂಬರ್​ಗಳಿಂದ ಮೆಸೇಜ್ ಬಂದ್ರೂ ಬೇಗನೆ ಗುರುತಿಸಬಹುದು.


    ಯಾವ ರೀತಿ ಕಾರ್ಯನಿರ್ವಹಿಸುತ್ತದೆ?


    ವಾಟ್ಸಾಪ್‌ ಐಒಎಸ್‌ ಬೀಟಾ ವರ್ಷನ್‌ಪರಿಚಯಿಸಿರುವ ಈ ಫೀಚರ್​ ವಾಟ್ಸಾಪ್ ಗ್ರೂಪ್​ನಲ್ಲಿ ಯಾವುದೇ ನಮಗೆ ಗೊತ್ತಿಲ್ಲದ ನಂಬರ್​ನಿಂದ ಮೆಸೇಜ್​ಗಳು ಬಂದಾಗ ಫೋನ್​ ನಂಬರ್​ ಬದಲಿಗೆ ಅದರ ಪುಶ್​ ನೇಮ್ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಯಾವುದೇ ಚಾಟ್​ ಅನ್ನು ಓಪನ್ ಮಾಡುವ ಮೊದಲಿಗೆ ಅದರ ಪುಶ್​ ನೇಮ್​ ಮೊದಲು ಕಾಣುತ್ತದೆ. ಇದರಿಂದ ಯಾವುದೇ ಚಾಟ್​ ಅನ್ನು ಧೈರ್ಯದಿಂದ ಓಪನ್ ಮಾಡಬಹುದಾಗಿದೆ.


    ಇದನ್ನೂ ಓದಿ: ಅಧಿಕ ಮಾರಾಟವಾದ ಸ್ಮಾರ್ಟ್​ಫೋನ್​ಗಳಲ್ಲಿ ಆ್ಯಪಲ್​​ ಕಂಪೆನಿ ಅಗ್ರಸ್ಥಾನ! ಇಲ್ಲಿದೆ ಕಂಪ್ಲೀಟ್​ ಮಾಹಿತಿ


    ಅನೌನ್​ ನಂಬರ್​ ಪತ್ತೆ ಹಚ್ಚಬಹುದು


    ಇನ್ನು ವಾಟ್ಸಾಪ್ ಪರಿಚಯಿಸುತ್ತಿರುವ ಈ ಫೀಚರ್​ನಿಂದ ಬಳಕೆದಾರರಿಗೆ ಯಾವುದೇ ವಾಟ್ಸಾಪ್ ಗ್ರೂಪ್​ನಿಂದ ಅಪರಿಚಿತ ಕಾಲ್​ಗಳು ಬಂದಾ ತಕ್ಷಣ ಪತ್ತೆಹಚ್ಚಬಹುದು. ಹಾಗೆಯೇ ಇದರಿಂದ ಯಾವುದೇ ತೊಂದರೆಗಳು ಸಹ ಇನ್ಮುಂದೆ ಎದುರಾಗುವುದಿಲ್ಲ.ಇದುವರೆಗೆ ಯಾವುದೇ ಅನೌನ್ ನಂಬರ್ನಿಂದ  ಮಸೇಜ್​ಗಳು ಬಂದಾಗ ಕೇವಲ ನಂಬರ್​ಗಳು ಬರುತ್ತಿತ್ತು. ಆದರೆ ಇನ್ನುಂದೆ ಪುಶ್​ ನೇಮ್​ಗಳು ಬರ್ತದೆ ಎಂದು ವರದಿಯೊಂದು ಹೇಳಿದೆ.


    ವಾಟ್ಸಾಪ್​ ಇದೀಗ ತನ್ನ ಬಳಕೆದಾರರಿಗಾಗಿ ಸ್ಪ್ಲಿಟ್​ ವ್ಯೂ ಎಂಬ ಫೀಚರ್​ ಅನ್ನು ಬಿಡುಗಡೆ ಮಾಡಿದೆ.


    ಏನಿದು ಸ್ಪ್ಲಿಟ್​ ವ್ಯೂ?


    ಸ್ಪ್ಲಿಟ್ ವ್ಯೂ ಎಂಬುದು ಸ್ಮಾರ್ಟ್‌ ಡಿವೈಸ್‌ ಬಳಕೆದಾರರಿಗೆ ಅಗತ್ಯವಾಗಿರುವ ಒಂದು ಪ್ರಮುಖ ಫೀಚರ್ಸ್‌ ಆಗಿದ್ದು, ಒಮ್ಮೆಲೆ ಒಂದೇ ಡಿಸ್‌ಪ್ಲೇನಲ್ಲಿ ಎರಡು ಆ್ಯಪ್​​ಗಳನ್ನು ಓಪನ್‌ ಮಾಡಲು ಅವಕಾಶ ನೀಡುತ್ತದೆ. ಅದರಲ್ಲೂ ಈ ಸೌಲಭ್ಯ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿದ್ದು, ಆಯ್ದ ಆ್ಯಪ್​​ಗಳು ಮಾತ್ರ ಈ ಸೇವೆಗೆ ಬೆಂಬಲ ನೀಡುತ್ತವೆ. ಇದರ ಸಾಲಿಗೆ ಈಗ ವಾಟ್ಸಾಪ್‌ ಸಹ ಸೇರಿಕೊಳ್ಳಲಿದೆ.




    ಟ್ಯಾಬ್​ ಬಳಕೆದಾರರಿಗೆ ಮಾತ್ರ ಲಭ್ಯ


    ಈ ಸ್ಪ್ಲಿಟ್ ವ್ಯೂ ಅನ್ನು ಸದ್ಯಕ್ಕೆ ಪರೀಕ್ಷಿಸಲಾಗುತ್ತಿದ್ದು, ಟ್ಯಾಬ್ಲೆಟ್‌ಗಳಿಗಾಗಿ ಆಂಡ್ರಾಯ್ಡ್ ಬೀಟಾದಲ್ಲಿ ಇದನ್ನು ಹೊರತರಲು ಯೋಜಿಸಲಾಗುತ್ತಿದೆ. ಈ ಮೂಲಕ ಯಾರೆಲ್ಲಾ ಬಳಕೆದಾರರು ಟ್ಯಾಬ್ಲೆಟ್‌ಗಳಲ್ಲಿ ವಾಟ್ಸಾಪ್‌ ಬಳಸುತ್ತಾರೋ ಅವರು ಇನ್ಮುಂದೆ ಈ ಸೌಲಭ್ಯ ಪಡೆದುಕೊಳ್ಳಬಹುದು. ಜೊತೆಗೆ ಈ ವೇಳೆ ಒಬ್ಬರ ಜೊತೆ ಚಾಟಿಂಗ್‌ ಮಾಡುವುದರ ಜೊತೆಗೆ ಇನ್ನೊಂದು ಬದಿಯಲ್ಲಿ ವಾಟ್ಸಾಪ್‌ನ ಇತರೆ ಫೀಚರ್ಸ್‌ ಅನ್ನು ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ.


    ವಾಟ್ಸಾಪ್​ನಲ್ಲಿ ಕಾಲ್​ ಅನ್ನು ಶೆಡ್ಯೂಲ್ ಮಾಡುವ ಫೀಚರ್​


    ವಾಟ್ಸಾಪ್‌ನಲ್ಲಿ ಈಗಾಗಲೇ ವಾಯ್ಸ್‌ ಹಾಗೂ ವಿಡಿಯೋ ಕರೆ ಮಾಡಲು ಅವಕಾಶ ನೀಡಲಾಗಿದೆ. ಅದಾಗ್ಯೂ ಈ ವಿಭಾಗದಲ್ಲಿ ಇನ್ನಷ್ಟು ಹೊಸ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿರುವ ವಾಟ್ಸಾಪ್ ಬಳಕೆದಾರರಿಗೆ ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸುವ ಆಯ್ಕೆಯ ಫೀಚರ್ಸ್‌ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.

    Published by:Prajwal B
    First published: