• Home
  • »
  • News
  • »
  • tech
  • »
  • Unknown Number: ಜಾರಿಗೆ ಬರಲಿದೆ ಹೊಸ ಕ್ರಮ, ಅಪರಿಚಿತರ ಕರೆ ಕಂಡುಹಿಡಿಯುತ್ತೆ ಈ ಟೆಕ್ನಾಲಜಿ

Unknown Number: ಜಾರಿಗೆ ಬರಲಿದೆ ಹೊಸ ಕ್ರಮ, ಅಪರಿಚಿತರ ಕರೆ ಕಂಡುಹಿಡಿಯುತ್ತೆ ಈ ಟೆಕ್ನಾಲಜಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಾಟ್ಸಾಪ್ ಮೂಲಕ ಬರುವ ಕರೆಗಳಿಗೂ ಸಹ ಇದೇ ರೀತಿಯ ಪ್ರತ್ಯೇಕವಾದ ಕ್ರಮವನ್ನು ಜಾರಿಗೆ ತರುವ ನಿರೀಕ್ಷೆಯಿದೆ. ವಾಟ್ಸಾಪ್ ಅನ್ನು ಸಿಮ್ ಕಾರ್ಡ್ ಗಳಿಗೆ ಲಿಂಕ್ ಮಾಡಿರುವುದರಿಂದ, ಬಳಕೆದಾರರ ಫೋನ್ ಸಂಖ್ಯೆ ಮತ್ತು ವಾಟ್ಸಾಪ್ ಖಾತೆಯ ನಡುವೆ ನೇರ ಲಿಂಕ್ ಇದೆ.

  • Share this:

ನಾವು ಅನೇಕ ಬಾರಿ ನಮ್ಮ ಮೊಬೈಲ್ ಫೋನ್ ಗಳಿಗೆ ಬರುವಂತಹ ಅಪರಿಚಿತ ಕರೆಗಳನ್ನು ನೋಡಿ ಯಾರು ಮಾಡಿದ್ದಾರೆ? ಯಾಕೆ ಮಾಡಿರಬಹುದು? ಮತ್ತೆ ತಿರುಗಿ ಆ ಸಂಖ್ಯೆಗೆ (Number) ಕರೆ ಮಾಡಿದರೆ ಕರೆಯನ್ನ ತೆಗೆದುಕೊಳ್ಳುತ್ತಿಲ್ಲವಲ್ಲ, ಹೋಗಲಿ ಬಂದ ಕರೆಯನ್ನ ಎತ್ತಿದರೂ ಸಹ ಏನು ಮಾತಾಡ್ತಾ (Talk) ಇಲ್ಲ ಅಂತ ತುಂಬಾನೇ ಮನಸ್ಸಿಗೆ ಕಿರಿಕಿರಿ ಮಾಡಿಕೊಂಡಿರುತ್ತೇವೆ. ಹೌದು ಎಷ್ಟೋ ಸಾರಿ ನಮ್ಮ ಸ್ನೇಹಿತರು (Friends) ಮತ್ತು ನಮ್ಮ ಜೊತೆ ಕೆಲಸ (Work) ಮಾಡುವವರು ನಮ್ಮನ್ನು ಸುಮ್ಮನೆ ಕಾಡಿಸಬೇಕೆಂದು ಹೀಗೆಲ್ಲಾ ಮಾಡುತ್ತಿರುತ್ತಾರೆ. ಕೆಲವೊಂದು ಬಾರಿ ನಿಜವಾಗಿಯೂ ಅಪರಿಚಿತ ಸಂಖ್ಯೆಯಿಂದ ಕರೆಗಳು ಬರುತ್ತವೆ.


ಅದಕ್ಕಾಗಿಯೇ ಈಗ ಬಹುತೇಕರು ತಮ್ಮ ಮೊಬೈಲ್ ಫೋನ್ ಗಳಿಗೆ ಯಾರು ಕರೆ ಮಾಡಿದ್ದು ಅಂತ ತಿಳಿದುಕೊಳ್ಳುವ ಸಲುವಾಗಿ ಟ್ರೂ ಕಾಲರ್ ಅಂತಹ ಅಪ್ಲಿಕೇಶನ್ ಗಳನ್ನು ಬಳಸುತ್ತಿರುತ್ತಾರೆ ಅಂತ ಹೇಳಬಹುದು.


ಆದರೆ ಈ ರೀತಿಯ ಅಪ್ಲಿಕೇಶನ್ ಗಳು ಡೇಟಾ ಕ್ರೌಡ್ ಸೋರ್ಸ್ ಆಗಿರುವುದರಿಂದ ಅವುಗಳಿಗೆ ಅದರದ್ದೇ ಆದ ಕೆಲವು ಮಿತಿಗಳಿವೆ ಎಂಬುದನ್ನು ನಾವು ಮರೆಯೋ ಹಾಗಿಲ್ಲ. ಆದರೆ ಇನ್ಮುಂದೆ ನಿಮ್ಮ ಮೊಬೈಲ್ ಫೋನ್ ಗೆ ಬರುವಂತಹ ಅಪರಿಚಿತ ಕರೆಗಳನ್ನು ಯಾರು ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳುವುದು ಸಹ ತುಂಬಾನೇ ಸುಲಭವಾದ ಕೆಲಸವಾಗಬಹುದು. ಅದು ಹೇಗೆ ಸಾಧ್ಯ ಅಂತ ನಿಮಗೆ ಪ್ರಶ್ನೆಯೊಂದು ಕಾಡುತ್ತಿರಬಹುದು, ಮುಂದೆ ಓದಿ ನಿಮಗೆ ಅರ್ಥವಾಗುತ್ತದೆ.


ಇದನ್ನೂ ಓದಿ: ಇತಿಹಾಸ ಸೃಷ್ಟಿಸಲು ಹೊರಟಿರುವ ಇಸ್ರೋ, ದೇಶದ ಮೊದಲ ಖಾಸಗಿ ರಾಕೆಟ್ ಉಡಾವಣೆ!


ಕರೆ ಮಾಡಿದವರ ಹೆಸರು ಇನ್ಮುಂದೆ ಸ್ಕ್ರೀನ್ ಮೇಲೆ ಬರುತ್ತಂತೆ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶೀಘ್ರದಲ್ಲಿಯೇ ತಮ್ಮ ಬಳಕೆದಾರರಿಗೆ ಕರೆ ಬಂದಾಗ ಮೊಬೈಲ್ ಸ್ಕ್ರೀನ್ ಮೇಲೆ ಕರೆ ಮಾಡಿರುವ ವ್ಯಕ್ತಿಯ ಹೆಸರು ಅಲ್ಲಿ ಬರುವಂತೆ ಖಚಿತಪಡಿಸಿಕೊಳ್ಳಲು ಎಲ್ಲಾ ಹೊಸ ಕ್ರಮಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ಈ ರೀತಿಯಾಗಿ ಬರುವ ಕರೆ ಮಾಡಿರುವ ವ್ಯಕ್ತಿಯ ಹೆಸರು ಟೆಲಿಕಾಂ ಆಪರೇಟರ್ ಗಳ ದಾಖಲೆಯಲ್ಲಿ ಲಭ್ಯವಿರುವ ಬಳಕೆದಾರರ ‘ನೋ ಯುವರ್ ಕಸ್ಟಮರ್’ (ಕೆವೈಸಿ) ದಾಖಲೆಗೆ ಅನುಗುಣವಾಗಿರುತ್ತದೆ. ಈ ಹೊಸ ಕ್ರಮವನ್ನು ಜಾರಿಗೆ ತಂದಾಗ, ಕರೆ ಮಾಡಿದವರ ಸಂಪರ್ಕವನ್ನು ಅವರ ಸಂಪರ್ಕ ಪಟ್ಟಿಯಲ್ಲಿ ಉಳಿಸದಿದ್ದರೂ ಸಹ ಚಂದಾದಾರರು ಕರೆ ಮಾಡಿದವರ ಹೆಸರನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.


ಈಗ ಬಹುತೇಕರು ಬಳಸುತ್ತಿರುವ ಟ್ರೂ ಕಾಲರ್ ಹೇಗೆ ಕೆಲಸ ಮಾಡುತ್ತದೆ? ಟ್ರೂ ಕಾಲರ್ ನಂತಹ ಥರ್ಡ್ ಪಾರ್ಟಿಯ ಅಪ್ಲಿಕೇಶನ್ ಗಳನ್ನು ಈಗೆಲ್ಲಾ ಬಳಸುತ್ತಿದ್ದಾರೆ. ಡೇಟಾ ಕ್ರೌಡ್ ಸೋರ್ಸ್ ಆಗಿರುವುದರಿಂದ ಟ್ರೂಕಾಲರ್ ನಂತಹ ಅಪ್ಲಿಕೇಶನ್ ಗಳಿಗೆ ಕೆಲವು ಮಿತಿಗಳಿದ್ದು, 100 ಪ್ರತಿಶತದಷ್ಟು ಅಧಿಕೃತತೆಯನ್ನು ಖಾತರಿಪಡಿಸಲಾಗುವುದಿಲ್ಲ, ಆದರೆ ಇದು ಕೆವೈಸಿ ಡೇಟಾದಲ್ಲಿ ಖಾತರಿಪಡಿಸಲ್ಪಡುತ್ತದೆ. ಫೋನ್ ಸ್ಕ್ರೀನ್ ಮೇಲೆ ತೋರಿಸುವ ಕಾಲರ್ ನ ಕೆವೈಸಿ ಹೆಸರಿನ ಕಾರ್ಯವಿಧಾನದ ಮತ್ತೊಂದು ಪ್ರಯೋಜನವೆಂದರೆ ಸ್ಪ್ಯಾಮ್ ಕರೆಗಳನ್ನು ಸರಿಯಾಗಿ ಗುರುತಿಸಬಹುದು ಅಥವಾ ಅವುಗಳನ್ನು ವರದಿ ಸಹ ಮಾಡಬಹುದು.


ವಾಟ್ಸಾಪ್ ಮೂಲಕ ಬರುವ ಕರೆಗಳಿಗೂ ಅನ್ವಯ
ಮುಂದಿನ ದಿನಗಳಲ್ಲಿ ವಾಟ್ಸಾಪ್ ಮೂಲಕ ಬರುವ ಕರೆಗಳಿಗೂ ಸಹ ಇದೇ ರೀತಿಯ ಪ್ರತ್ಯೇಕವಾದ ಕ್ರಮವನ್ನು ಜಾರಿಗೆ ತರುವ ನಿರೀಕ್ಷೆಯಿದೆ. ವಾಟ್ಸಾಪ್ ಅನ್ನು ಸಿಮ್ ಕಾರ್ಡ್ ಗಳಿಗೆ ಲಿಂಕ್ ಮಾಡಿರುವುದರಿಂದ, ಬಳಕೆದಾರರ ಫೋನ್ ಸಂಖ್ಯೆ ಮತ್ತು ವಾಟ್ಸಾಪ್ ಖಾತೆಯ ನಡುವೆ ನೇರ ಲಿಂಕ್ ಇದೆ. ದೂರಸಂಪರ್ಕ ಇಲಾಖೆ, ಟ್ರಾಯ್ ಮತ್ತು ಟೆಲಿಕಾಂ ಆಪರೇಟರ್ ಗಳನ್ನು ಒಳಗೊಳ್ಳುವಂತಹ ಕ್ರಮಗಳನ್ನು ಜಾರಿಗೆ ತರಲು ಪೂರ್ಣ ಪ್ರಮಾಣದ ಕಾರ್ಯವಿಧಾನವನ್ನು ರೂಪಿಸುವ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

First published: