ಈ ಆ್ಯಪ್​ ಮೂಲಕ ಖಿನ್ನತೆಯನ್ನೂ ಪತ್ತೆಹಚ್ಚಬಹುದು!

ಖಿನ್ನತೆಗೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಸಾಕಷ್ಟಿದೆ. ಈ ಪ್ರಮಾಣ ಅಮೆರಿಕದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಅಮೆರಿಕ ತಂತ್ರಜ್ಞರು ಈ ಆ್ಯಪ್​ ಕಂಡು ಹಿಡಿದಿದ್ದಾರೆ.

Rajesh Duggumane | news18
Updated:January 11, 2019, 10:02 AM IST
ಈ ಆ್ಯಪ್​ ಮೂಲಕ ಖಿನ್ನತೆಯನ್ನೂ ಪತ್ತೆಹಚ್ಚಬಹುದು!
ಸಾಂದರ್ಭಿಕ ಚಿತ್ರ
  • News18
  • Last Updated: January 11, 2019, 10:02 AM IST
  • Share this:
ಇದು ಆನ್​ಲೈನ್​ ಯುಗ. ನಮ್ಮ ಆಪ್ತರಿಗೆ ಗೊತ್ತಿರದ ಅನೇಕ ವಿಚಾರಗಳು ನಮ್ಮ ಮೊಬೈಲ್​ಗೆ ತಿಳಿದಿರುತ್ತದೆ! ತಂತ್ರಜ್ಞಾನದ ಮೇಲೆ ನಾವು ಅಷ್ಟು ಅವಲಂಬಿತವಾಗಿದ್ದೇವೆ. ನಿತ್ಯ ನಾವು ಎಷ್ಟು ಕಿ.ಮೀ ಓಡಾಡಿದೆವು, ಎಲ್ಲೆಲ್ಲಿ ಸುತ್ತಾಟ ನಡೆಸಿದೆವು ಎಂಬಿತ್ಯಾದಿ ಮಾಹಿತಿ ಸಂಗ್ರಹಕ್ಕೆ ಆ್ಯಪ್​ ಕೂಡ ಡೆವಲಪ್​ ಆಗಿದೆ. ಈಗ, ವ್ಯಕ್ತಿ ಖಿನ್ನತೆಗೆ ತುತ್ತಾಗಿದ್ದಾನೆಯೇ ಎಂಬುದನ್ನು ತಿಳಿದುಕೊಳ್ಳಲೂ ಆ್ಯಪ್​ ಅಭಿವೃದ್ಧಿ ಮಾಡಲಾಗುತ್ತಿದೆಯಂತೆ.

ನಾವು ಇನ್ಸ್​​ಟಾಗ್ರಾಂನಲ್ಲಿ ಸಾಕಷ್ಟು ಪೋಸ್ಟ್​ಗಳನ್ನು ಲೈಕ್​ ಮಾಡುತ್ತೇವೆ. ಗೂಗಲ್​ನಲ್ಲಿ ಅನೇಕ ವಿಚಾರಗಳನ್ನು ಹುಡುಕುತ್ತೇವೆ. ಯೂಟ್ಯೂಬ್​ನಲ್ಲಿ ಬೇರೆ ಬೇರೆ ವಿಡಿಯೋಗಳನ್ನು ನೋಡಿ ಖುಷಿ ಪಡುತ್ತೇವೆ. ಹೀಗೆ ಆನ್​ಲೈನ್​ ತಾಣಗಳಿಗೆ ಭೇಟಿಕೊಟ್ಟಾಗ ನಮಗೆ ಗೊತ್ತಿಲ್ಲದೇ ನಮ್ಮ ಹೆಜ್ಜೆ ಅಲ್ಲಿ ಮೂಡಿರುತ್ತದೆ. ಅದು ನಮಗೆ ಕಾಣಿಸದೆ ಇರಬಹುದು. ಆದರೆ, ಕೆಲ ಆ್ಯಪ್​ಗಳು ಈ ಬಗ್ಗೆ ನಿಗಾ ಇಡುತ್ತವೆ.

ಇದನ್ನೂ ಓದಿ: ಅಂದು ಕ್ಲೀನರ್​ ಆಗಿ ಕೆಲಸ ಮಾಡಿದ್ದ ವ್ಯಕ್ತಿ, ಇಂದು ವಿಶ್ವದ ನಂಬರ್-1 ಶ್ರೀಮಂತ..!

ಈಗ ಅಭಿವೃದ್ಧಿ ಆಗಿರುವ ಆ್ಯಪ್​ ಕೂಡ ಇದೇ ರೀತಿ ಕಾರ್ಯನಿರ್ವಹಿಸಲಿದೆ. ಮೊಬೈಲ್​ ಬಳಕೆದಾರ ಯಾವ ಯಾವ ತಾಣಗಳಿಗೆ ಭೇಟಿ ನೀಡುತ್ತಾನೆ? ಏನನ್ನು ಹುಡುಕುತ್ತಾನೆ? ಆತನ ಧ್ವನಿಯಲ್ಲಿ ಹಾಗೂ ಹೃದಯ ಬಡಿತದಲ್ಲಿ ಏರಿಳಿತ ಕಂಡಿದೆಯೇ ಎಂಬಿತ್ಯಾದಿ ವಿಚಾರಗಳನ್ನು ಹೊಸ ಆ್ಯಪ್​ ಸಂಗ್ರಹ ಮಾಡುತ್ತದೆ. ಇದನ್ನು ವಿಮರ್ಶಿಸಿ ಮೊಬೈಲ್​ ಬಳಕೆದಾರನ ಖಿನ್ನತೆಗೆ ತುತ್ತಾಗಿದ್ದಾನೋ ಅಥವಾ ಇಲ್ಲವೋ ಎಂಬುದನ್ನು ಆ್ಯಪ್​ ಹೇಳಲಿದೆ.

ಖಿನ್ನತೆಗೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಸಾಕಷ್ಟಿದೆ. ಈ ಪ್ರಮಾಣ ಅಮೆರಿಕದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಅಮೆರಿಕ ತಂತ್ರಜ್ಞರು ಈ ಆ್ಯಪ್​ ಕಂಡು ಹಿಡಿದಿದ್ದಾರೆ. ಈ ಆ್ಯಪ್​ ಸದ್ಯ ಪ್ರಾಯೋಗಿಕ ಹಂತದಲ್ಲಿದೆಯಂತೆ. ಮುಂದಿನ ದಿನಗಳಲ್ಲಿ ಸಕಾಷ್ಟು ಪರೀಕ್ಷೆಗಳನ್ನು ನಡೆಸಿದ ನಂತರವೇ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಮದ್ಯಪಾನ ನಿಯಂತ್ರಿಸಿದ್ರೆ ನಿಮ್ಮ ಈ ದುರಭ್ಯಾಸ ದೂರವಾಗುತ್ತಂತೆ..!

ಈ ಆ್ಯಪ್​ನಿಂದ ಖಾಸಗಿತನಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂಬುದು ಅನೇಕರ ಅನುಮಾನ. ಈ ಆ್ಯಪ್​ ನಮ್ಮ ಪ್ರತಿ ವಿಚಾರವನ್ನೂ ಸಂಗ್ರಹ ಮಾಡುತ್ತದೆ. ಒಂದೊಮ್ಮೆ ಈ ಮಾಹಿತಿ ಸೋರಿಕೆ ಆದರೆ, ಖಾಸಗಿತನಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ ಎಂದು ಅನೇಕರು ವಾದ ಮಂಡಿಸಿದ್ದಾರೆ.
First published:January 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading