ಫೋನ್​ ಚಾರ್ಜ್​ ಇಲ್ಲವೆಂದು ಕೊರಗೋದನ್ನ ಬಿಟ್ಟುಬಿಡಿ; ಇಲ್ಲಿದೆ 5 ದಿನಗಳ ಕಾಲ ಬಾಳಿಕೆ ಬರುವ ಬ್ಯಾಟರಿ

ಆಸ್ಟ್ರೇಲಿಯಾದ ಮೋನಶ್​ ವಿಶ್ವವಿದ್ಯಾಲಯ ಸಂಶೋಧನಕಾರರು ಈ ಸಂಶೋಧನೆಯನ್ನು ಮಾಡಿದ್ದು, ಒಂದು ಬಾರಿ ಚಾರ್ಜ್​ ಮಾಡಿದರೆ 5 ದಿನಗಳ ಕಾಲ ಬ್ಯಾಟರಿಯನ್ನು ಅನ್ನು ಬಳಸಬಹುದಾಗಿದೆ ಎಂದು ಹೇಳಿದೆ.

news18-kannada
Updated:January 6, 2020, 8:50 PM IST
ಫೋನ್​ ಚಾರ್ಜ್​ ಇಲ್ಲವೆಂದು ಕೊರಗೋದನ್ನ ಬಿಟ್ಟುಬಿಡಿ; ಇಲ್ಲಿದೆ 5 ದಿನಗಳ ಕಾಲ ಬಾಳಿಕೆ ಬರುವ ಬ್ಯಾಟರಿ
ಫೋನ್
  • Share this:
ಸಾಕಷ್ಟು ಜನರು ಸ್ಮಾರ್ಟ್​ಫೋನ್ ಬ್ಯಾಟರಿ ನಿಲ್ಲುತ್ತಿಲ್ಲವೆಂದು ಕೊರಗುತ್ತಿರುತ್ತಾರೆ. ಇನ್ನು ಕೆಲವರು ಸ್ಮಾರ್ಟ್​ಫೋನ್​ ಕೊಳ್ಳುವ ಮುಂಚೆ ಅದರಲ್ಲಿ ಅಳವಡಿಸಿರುವ ಬ್ಯಾಟರಿಯನ್ನು ಮೊದಲು ಪರಿಶೀಲಿಸುತ್ತಾರೆ. ಹೆಚ್ಚು ಸಮಯ ಬಳಸಲು ಯೋಗ್ಯವಾಗುವ ಸ್ಮಾರ್ಟ್​ಫೋನ್​ಗಳನ್ನು ಕೊಂಡುಕೊಳ್ಳಲು ಮುಂದಾಗುತ್ತಾರೆ.

ಹಾಗಾಗಿ ಹೆಚ್ಚಿನ ಸ್ಮಾರ್ಟ್​ಪೋನ್​ಗಳಲ್ಲಿ 4000 ಎಮ್​ಎಎಚ್​ ಬ್ಯಾಟರಿಯನ್ನು ಅಳವಡಿಸಿರುತ್ತಾರೆ. ಕೆಲ ಸ್ಮಾರ್ಟ್​ಪೋನ್​ 5000 ಎಮ್​ಎಮ್​ ಬ್ಯಾಟರಿಗಳನ್ನು ಹೊಂದಿದೆ. ಈ ಫೋನ್​​​ಗಳನ್ನು ಒಂದು ಬಾರಿ ಚಾರ್ಜ್​ ಮಾಡಿದರೆ 24 ಗಂಟೆಗಳಷ್ಟು ಬಳಸಬಹುದಾಗಿದೆ. ಆದರೂ ಬ್ಯಾಟರಿ ಸಾಲುತ್ತಿಲ್ಲವೆಂದು ಕೊರಗುತ್ತಿರುತ್ತಾರೆ.

ಆದರೀಗ ಸಂಶೋಧನ ತಂಡವೊಂದು ಬರೋಬ್ಬರಿ 5 ದಿನಗಳ ದೀರ್ಘ ಕಾಲ ಬಳಸಬಹುದಾದ ಬ್ಯಾಟರಿಯೊಂದನ್ನ ಸಂಶೋಧಿಸಿದೆ. ಈ ಬ್ಯಾಟರಿ ಮೂಲಕ ಯಾವುದೇ ಸ್ಮಾರ್ಟ್​ಫೋನ್​ಗಳನ್ನು ಚಾರ್ಜ್ ಮಾಡಬಹುದಾಗಿದೆ ಎಂದು ಹೇಳಿದೆ.

ಆಸ್ಟ್ರೇಲಿಯಾದ ಮೋನಶ್​ ವಿಶ್ವವಿದ್ಯಾಲಯ ಸಂಶೋಧನಕಾರರು ಈ ಸಂಶೋಧನೆಯನ್ನು ಮಾಡಿದ್ದು, ಒಂದು ಬಾರಿ ಚಾರ್ಜ್​ ಮಾಡಿದರೆ 5 ದಿನಗಳ ಕಾಲ ಬ್ಯಾಟರಿಯನ್ನು ಅನ್ನು ಬಳಸಬಹುದಾಗಿದೆ ಎಂದು ಹೇಳಿದೆ.

ಇನ್ನು ಈ ಬ್ಯಾಟರಿ ಒಂದೇ ಆದರು ಇದರ ಉಪಯೋಗ ಮಾತ್ರ ಎರಡು. ಮೋನಶ್​ ವಿಶ್ವವಿದ್ಯಾಲಯದ ಸಂಶೋಧಕರು ಸಂಶೋಧಿಸಿದ ಈ ಬ್ಯಾಟರಿಯನ್ನು ಚಾರ್ಜ್ ಮಾಡಿ ವಿದ್ಯುತ್​ ಚಾಲಿತ ವಾಹನಗಳಿಗೂ ಅಳವಡಿಸಬಹುದಾಗಿದು ಎಂದು ಹೇಳಿದೆ. ಇದರಿಂದ ವಿದ್ಯುತ್​ ಚಾಲಿತ ವಾಹನಗಳು ಒಂದು ಸಾವಿರ ಕಿ.ಲೋ ಮೀಟರ್​ ಕ್ರಮಿಸಬಲ್ಲದು ಎಂದಿದೆ.

ಈ ಬ್ಯಾಟರಿ ಉತ್ಪಾದನೆಗೆ ಈಗಾಗಲೇ ಅನುಮತಿ ದೊರೆತಿದ್ದು, ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಮಾರುಕಟ್ಟೆಗೆ ಬರಲಿದೆಯಂತೆ!.
Published by: Harshith AS
First published: January 6, 2020, 8:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading