NewIndiaAgainstRape: ಮಕ್ಕಳ ಮೇಲಿನ ದೌರ್ಜನ್ಯ ವಿರುದ್ಧ India4Children ಹೊಸ ಅಭಿಯಾನ

2017-18ನೇ ಸಾಲಿನ ವರದಿಯಲ್ಲಿ ತಿಳಿಸಿರುವಂತೆ ಮಕ್ಕಳ ಮೇಲಿನ ಪ್ರಕರಣಗಳಲ್ಲಿ ಶೇ.40 ರಷ್ಟು ಮಾತ್ರ ಆರೋಪ ಪಟ್ಟಿ ಸಲ್ಲಿಸಲಾಗಿದೆ.

zahir | news18
Updated:May 8, 2019, 4:53 PM IST
NewIndiaAgainstRape: ಮಕ್ಕಳ ಮೇಲಿನ ದೌರ್ಜನ್ಯ ವಿರುದ್ಧ India4Children ಹೊಸ ಅಭಿಯಾನ
ಸಾಂದರ್ಭಿಕ ಚಿತ್ರ
zahir | news18
Updated: May 8, 2019, 4:53 PM IST
ಪ್ರಪಂಚದೆಲ್ಲೆಡೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದಂತಹ ಪ್ರಕರಣಗಳು  ಹೆಚ್ಚಾಗುತ್ತಿದೆ. ಒಂದೆಡೆ ಕ್ರೂರ ಕೃತ್ಯಗಳು ಹೆಚ್ಚುತ್ತಿದ್ದರೆ ಸರ್ಕಾರ ಅಮಾಯಕ ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗುತ್ತಿದೆ. ಇದು ನಮ್ಮ ಸಂಸ್ಕೃತಿ, ಆರ್ಥಿಕ ಸ್ಥಿತಿ ಮತ್ತು ಜನಾಂಗೀಯತೆಯ ಮೇಲೆ ಧಕ್ಕೆಯನ್ನುಂಟು ಮಾಡುತ್ತಿದೆ.

ಇಂತಹ ಪೈಶಾಚಿಕ ಕೃತ್ಯಗಳನ್ನು ತಡೆಯಲು  India4Children ಸಂಸ್ಥೆ ವಿಶೇಷ ಅಭಿಯಾನವನ್ನು ಆರಂಭಿಸಿದ್ದು, ಸಾಮಾಜಿಕ ಜಾಲತಾಣ 'ಹಲೋ' ಆ್ಯಪ್ ಕೂಡ ಸಾಥ್​ ನೀಡಿದೆ. ಈ ಮೂಲಕ ದೇಶದ ಮಕ್ಕಳಿಗೆ ಧೈರ್ಯ ತುಂಬುವಂತಹ ಕೆಲಸಕ್ಕೆ ಕೈ ಹಾಕಿದೆ. #NewIndiaAgainstRape ಎಂಬ ಹ್ಯಾಶ್​ ಟ್ಯಾಗ್ ಅಭಿಯಾನದೊಂದಿಗೆ ಭಾರತವನ್ನು ಒಂದು ಸುರಕ್ಷಿತ ಸ್ಥಳವನ್ನಾಗಿಸಲು 'ಹಲೋ' ಪಣ ತೊಟ್ಟಿದೆ.

#NewIndiaAgainstRape ಹ್ಯಾಶ್ ಟ್ಯಾಗ್ ಬಳಸಿ ಹೇಗೆ ದೇಶವನ್ನು ಮಕ್ಕಳ ಸುರಕ್ಷಿತ ತಾಣವನ್ನಾಗಿ ಮಾಡಬಹುದು ಎಂಬುದರ ನಿಮ್ಮ ಆಲೋಚನೆ ಮತ್ತು ಕಲ್ಪನೆಗಳನ್ನು ಹಂಚಿಕೊಳ್ಳಬಹುದು. ಈ ಮೂಲಕ ಭವಿಷ್ಯದ ಉಜ್ವಲ ಭಾರತದ ನಿರ್ಮಾಣದಲ್ಲಿ ನೀವು ಕೂಡ ಕೈ ಜೋಡಿಸಬಹುದು. India4Children ಹಾಗೂ 'ಹಲೋ' ಆ್ಯಪ್ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ನೀವು ಕೂಡ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಧನಾತ್ಮಕ ಬದಲಾವಣೆಗೆ ಕಾರಣರಾಗಬಹುದು.

ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ದೇಶದಲ್ಲಿ ಮಕ್ಕಳ ಅಪಹರಣ ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಕಳೆದೊಂದು ವರ್ಷವೇ ಶೇ.30 ರಷ್ಟು ಮಕ್ಕಳ ಮೇಲಿನ ಪ್ರಕರಣಗಳು ಹೆಚ್ಚಾಗಿರುವುದು ಆಘಾತಕಾರಿ.

2017-18ನೇ ಸಾಲಿನ ವರದಿಯಲ್ಲಿ ತಿಳಿಸಿರುವಂತೆ ಮಕ್ಕಳ ಮೇಲಿನ ಪ್ರಕರಣಗಳಲ್ಲಿ ಶೇ.40 ರಷ್ಟು ಮಾತ್ರ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ ಶೇ.22.7 ರಷ್ಟು ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಉಳಿದವರು ಯಾವುದೇ ಭಯವಿಲ್ಲ ಅಪರಾಧ ಕೃತ್ಯ ಎಸೆಗಿ ಸಹ ಪಾರಾಗಿದ್ದಾರೆ.

2016 ರಲ್ಲಿ ಬಿಡುಗಡೆ ಮಾಡಲಾದ ವರದಿಯಲ್ಲಿ ಹೇಳಿರುವಂತೆ ದೇಶದ ಪ್ರತಿ ಒಂದು ಲಕ್ಷ ಮಕ್ಕಳಲ್ಲಿ 24 ಮಕ್ಕಳ ಮೇಲೆ ಅಪರಾಧ ಕೃತ್ಯಗಳು ನಡೆದಿದೆ. ಇವರನ್ನು ಲೈಂಗಿಕ ಶೋಷಣೆ, ಮಾರಾಟ, ಕೂಲಿ ಕೆಲಸಗಳಿಗೆ ಬಳಸಿಕೊಳ್ಳುವ ಮೂಲಕ ದೌರ್ಜನ್ಯ ಎಸಗಲಾಗುತ್ತಿದೆ ಎಂದು ತಿಳಿಸಲಾಗಿದೆ.

ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಪೋಕ್ಸೊ ಕಾಯ್ದೆಯು ಜಾರಿಯಲ್ಲಿದ್ದರೂ, ದಿನ ಕಳೆದಂತೆ ಮಕ್ಕಳ ಮೇಲೆ ಪಾಪ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿರುವುದು ಆಘಾತಕಾರಿ ಅಂಶವಾಗಿದೆ. ಹಾಗಾಗಿ ಪ್ರತಿಯೊಬ್ಬರು #NewIndiaAgainstRape ಎಂಬ  India4Children  ಅಭಿಯಾನಕ್ಕೆ ಹಲೋ ಆ್ಯಪ್ ಬೆಂಬಲಿಸಿದ್ದು, ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನೀವೂ ಸಹ ಕೈ ಜೋಡಿಸಬೇಕೆಂದು ಕೇಳಿಕೊಂಡಿದೆ.

ಇದನ್ನೂ ಓದಿ: ಅಂಗರಕ್ಷಕಿಯನ್ನೇ ವಿವಾಹವಾದ ಥೈಲ್ಯಾಂಡ್ ರಾಜ: ರಾಣಿಯ ಫೋಟೋ ವೈರಲ್

First published:May 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...