ಹೋಂಡಾ ಕಂಪನಿ ಕಳೆದ ಜುಲೈ ತಿಂಗಳಿನಲ್ಲಿ ಹೊಸ ಹೋಂಡಾ ಸಿಟಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಹೆಚ್ಚು ಜನಪ್ರಿಯತೆ ಗಳಿಸಿರುವ ಸೆಡಾನ್ ಕಾರುಗಳಲ್ಲಿ ಹೋಂಡಾ ಸಿಟಿ ಕೂಡ ಜಾಗ ಪಡೆದಿದೆ. ಆದರೀಗ ಈ ಕಾರಿನ ಮೇಲೆ ಕಂಪನಿ 30 ಸಾವಿರ ಆಫರ್ ನೀಡುತ್ತಿದೆ.
ಹೋಂಡಾ ಸಿಟಿ ಮೂರು ವೇರಿಯಂಟ್ನಲ್ಲಿ ಸಿಗುತ್ತಿದೆ. ವಿ, ವಿಎಕ್ಸ್ ಮತ್ತು ಝೆಡ್ಎಕ್ಸ್ ವೇರಿಯಂಟ್ನಲ್ಲಿ ಮಾರುಕಟ್ಟೆಯಲ್ಲಿದೆ. ಆದರೀಗ ಈ ಕಾರಿನ ಮೇಲೆ 30 ಸಾವಿರ ಎಕ್ಸ್ಜೇಂಜ್ ಡಿಸ್ಕೌಂಟ್ ನೀಡುತ್ತಿದೆ.
ಹೋಂಡಾ ಗ್ರಾಹಕರಿಗೆ 6 ಸಾವಿರದಷ್ಟು ಲಾಯಲ್ಟಿ ಬೆನಿಫಿಟ್ಸ್ ನೀಡುತ್ತಿದೆ. ಜೊತೆಗೆ 10 ಸಾವಿರ ಎಕ್ಸ್ಚೇಂಜ್ ಬೆನಿಫಿಟ್ಸ್ ನೀಡುತ್ತಿದೆ.
ಇನ್ನು ಕಾರು 1.5 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊಚಾರ್ಜ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗುತ್ತಿದೆ. ಅಷ್ಟು ಮಾತ್ರವಲ್ಲದೆ, 6 ಸ್ಪೀಡ್ ಮ್ಯಾನುಯೆಲ್ ಗೇರ್ಬಾಕ್ಸ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಜೊತೆಗೆ ಪೆಡಲ್ ಶಿಫ್ಟರ್ ಇದರಲ್ಲಿದೆ. ಇನ್ನು 6 ಸ್ಟೀಡ್ ಗೇರ್ಬಾಕ್ಸ್ ಆಯ್ಕೆಯಲ್ಲಿ ಮತ್ತು ಆಟೋಮ್ಯಾಟಿಕ್ ಆಯ್ಕೆಯಲ್ಲಿ ಸಿಗುತ್ತಿದೆ.
ಹೋಂಡಾ ಸಿಟಿ ಪೆಟ್ರೋಲ್ ಕಾರಿನ ಬೆಲೆ:
- V MT - Rs 10.90 lakh
- V CVT - Rs 12.20 lakh
- VX MT - Rs 12.26 lakh
- VX CVT - Rs 13.56 lakh
- ZX MT - Rs 13.15 lakh
- ZX CVT - Rs 14.45 lakh
ಹೋಂಡಾ ಸಿಟಿ ಡೀಸೆಲ್ ಕಾರಿನ ಬೆಲೆ:
- V MT - Rs 12.40 lakh
- VX MT - Rs 13.76 lakh
- ZX MT - Rs 14.65 lakh
5ನೇ ಜನರೇಷನ್ ಹೋಂಡಾ ಸಿಟಿ ಕಾರು ಎಲ್ಇಡಿ ಹೆಡ್ಲ್ಯಾಂಪ್ ಹೊಂದಿದೆ. 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ ಇದರಲ್ಲಿದೆ. 8 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 7 ಇಂಚಿನ ಹೆಚ್ಡಿ ಫೂಲ್ ಕಲರ್ ಟಿಎಫ್ಟಿ ಮಿಡ್, ಎಲ್ಇಡಿ ಇಂಡಿಕೇಟರ್, ಇಲೆಕ್ಟ್ರೀಕ್ ಸನ್ರೂಫ್ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ