ಭಾರತೀಯ ಟೆಲಿಕಾಂ ಕಂಪೆನಿಗಳಲ್ಲಿ (Indian Telecom Company) ಎರಡನೇ ಜನಪ್ರಿಯ ಕಂಪೆನಿಯೆಂದರೆ ಅದು ಏರ್‌ಟೆಲ್ ಕಂಪೆನಿ. ಈ ಕಂಪೆನಿ ತನ್ನ ಗ್ರಾಹಕರಿಗೆ ವಿಶೇಷ ರೀಚಾರ್ಜ್ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ತನ್ನತ್ತ ಆಕರ್ಷಿಸಿಕೊಂಡಿದೆ. ಏರ್‌ಟೆಲ್ (Airtel) ಈ ವರ್ಷದಲ್ಲಿ ತನ್ನ ರೀಚಾರ್ಜ್ ಬೆಲೆಯನ್ನು (Recharge plan) ಏರಿಕೆ ಮಾಡಿದೆ ಆದರೆ ಈ ಕಂಪೆನಿಯ ಗ್ರಾಹಕರು ಇನ್ನೂ ಹಾಗೆಯೇ ಇದ್ದಾರೆ. ಹೆಚ್ಚಾಗುವುದಲ್ಲದೇ, ಕಡಿಮೆಯಂತೂ ಆಗಿಲ್ಲ. ಇದಕ್ಕೆ ಕಾರಣ ಏರ್‌ಟೆಲ್ ಯೋಜನೆಗಳಲ್ಲಿ ನೀಡುತ್ತಿರುವಂತಹ ಪ್ರಯೋಜನಗಳು ಎಂದು ಹೇಳ್ಬಹುದು. ಏರ್‌ಟೆಲ್ ಅಗ್ರಸ್ಥಾನದಲ್ಲಿರುವ ಜಿಯೋ ಕಂಪೆನಿಗೆ ಪ್ರಬಲ ಪೈಪೋಟಿಯನ್ನು ನೀಡುವ ನಿಟ್ಟಿನಲ್ಲಿ ಹೊಸ ಪ್ಲ್ಯಾನ್ಗಳನ್ನು ಪರಿಚಯಿಸುತ್ತಾ ಬರುತ್ತಿದೆ.
ಭಾರತೀಯ ಜನಪ್ರಿಯ ಎರಡನೇ ಟೆಲಿಕಾಂ ಕಂಪೆನಿಯೆಂದು ಗುರುತಿಸಿಕೊಂಡಿರುವ ಏರ್‌ಟೆಲ್ ಕಂಪೆನಿ, ಇದೀಗ ತನ್ನ ಗ್ರಾಹಕರಿಗಾಗಿ ಅಧಿಕ ವ್ಯಾಲಿಡಿಟಿ, ಅಧಿಕ ಡೇಟಾ, ಅನಿಯಮಿತ ಕರೆ ಮಾಡುವ ಸೌಲಭ್ಯಗಳನ್ನು ಹೊಂದಿದ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ಹಲವಾರು ಓಟಿಟಿ ಅಪ್ಲಿಕೇಶನ್ಗಳ ಚಂದಾದಾರಿಕೆ ಸಹ ದೊರೆಯುತ್ತದೆ.
ಏರ್‌ಟೆಲ್ 999 ರೂಪಾಯಿ ಯೋಜನೆ
ಏರ್‌ಟೆಲ್‌ನ 999 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ವ್ಯಾಲಿಡಿಟಿ ಅವಧಿ ಮುಗಿಯುವವರೆಗೆ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕಾಲ್ ಮಾಡುವ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2.5 ಜಿಬಿ ಡೇಟಾ ಹಾಗೂ 100 ಉಚಿತ ಎಸ್‌ಎಮ್‌ಎಸ್ ಮಾಡಬಹುದಾಗಿದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಓಟಿಟಿ ಚಂದಾದಾರಿಕೆ, ಅಮೆಜಾನ್ ಪ್ರೈಮ್‌ನ ಚಂದಾದಾರಿಕೆ ಸಿಗಲಿದ್ದು, ಏರ್‌ಟೆಲ್‌ನ ವಿಂಕ್ ಮ್ಯೂಸಿಕ್ ಸೇವೆ ಸಹ ದೊರೆಯುತ್ತದೆ. ಇದರೊಂದಿಗೆ ಹೆಲೋ ಟೂನ್ಸ್ ಮತ್ತು 100 ರೂಪಾಯಿ ಫಾಸ್ಟ್ಯಾಗ್ ಕ್ಯಾಶ್ ಬ್ಯಾಕ್ ಸಹ ಸಿಗಲಿದೆ.
ಇದನ್ನೂ ಓದಿ: ಸಿನಿಮಾ ಪ್ರಿಯರಿಗೆ ಗುಡ್ ನ್ಯೂಸ್! ಮತ್ತೆ 4 ಸ್ಥಳಗಳಲ್ಲಿ ಥಿಯೇಟರ್ ಸ್ಥಾಪಿಸಿದ ಪಿವಿಆರ್ ಸಂಸ್ಥೆ
ಏರ್‌ಟೆಲ್‌ನ 839 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 839 ರೂಪಾಯಿ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 2ಜಿಬಿ ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಇದರೊಂದಿಗೆ ಯಾವುದೇ ನೆಟ್ವರ್ಕ್ಗೆ ಅನ್ಲಿಮಿಟೆಡ್ ಉಚಿತವಾಗಿ ವಾಯ್ಸ್ ಕಾಲ್ ಮಾಡಬಹುದಾಗಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಮಾಡುವ ಸೌಲಭ್ಯ ಸಹ ಹೊಂದಿದೆ.
ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಇದರಲ್ಲಿ ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ಟ್ ಚಂದಾದಾರಿಕೆ ಸೌಲಭ್ಯ ಲಭ್ಯ ಇದ್ದು, ಜೊತೆಗೆ ಏರ್‌ಟೆಲ್ ಆ್ಯಪ್ಗಳ ಸೇವೆಗಳು ಸಹ ಲಭ್ಯ ಆಗಲಿವೆ. ಹಾಗೆಯೇ ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್, ವಿಂಕ್ ಮ್ಯೂಸಿಕ್ ಸೇವೆಗಳು ಸಿಗುತ್ತದೆ.
ಏರ್‌ಟೆಲ್‌ನ 779 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಈ ವರ್ಷ ಪರಿಚಯಿಸಿದ ನೂತನ 779 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಏರ್‌ಟೆಲ್ ಸೇರಿದಂತೆ ಇತರೆ ನೆಟ್ವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಇನ್ನು ಈ ಯೋಜನೆಯ ವ್ಯಾಲಿಡಿಟಿ ಅವಧಿಗೆ ಒಟ್ಟು 90 ಜಿಬಿ ಡೇಟಾ ಸೌಲಭ್ಯ ದೊರೆಯಲಿದೆ. ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸೌಲಭ್ಯ, ಏರ್‌ಟೆಲ್ ಆ್ಯಪ್ಗಳ ಸೇವೆ ದೊರೆಯುತ್ತದೆ.
ಏರ್‌ಟೆಲ್‌ನ 719 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಕಂಪೆನಿಯ 719 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಈ ವ್ಯಾಲಿಡಿಟಿ ಅವಧಿ ಮುಗಿಯುವ ಹೊತ್ತಿಗೆ ಗ್ರಾಹಕರು ಒಟ್ಟು 126 ಜಿಬಿ ಡೇಟಾವನ್ನು ಪಡೆಯಬಹುದು.
ಹಾಗೆಯೇ ಪ್ರತಿದಿನ 100 ಉಚಿತ ಕಾಲ್ ಮಾಡುವ ಸೌಲಭ್ಯ ಸಹ ಸಿಗಲಿದೆ. ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸೌಲಭ್ಯ, ಏರ್‌ಟೆಲ್ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ಉಚಿತ ಹೆಲೋ ಟ್ಯೂನ್ ಸೌಲಭ್ಯ ದೊರೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ