• Home
  • »
  • News
  • »
  • tech
  • »
  • LG Company: ಎಲ್‌ಜಿ ಕಂಪನಿಯಿಂದ ಹೊಸ ಫೋಲ್ಡೇಬಲ್‌ ಡಿಸ್‌ಪ್ಲೇ ಬಿಡುಗಡೆ! ನೋಡೋಕೆ ಸಖತ್​ ಡಿಫ್ರೆಂಟ್ ಗುರೂ!

LG Company: ಎಲ್‌ಜಿ ಕಂಪನಿಯಿಂದ ಹೊಸ ಫೋಲ್ಡೇಬಲ್‌ ಡಿಸ್‌ಪ್ಲೇ ಬಿಡುಗಡೆ! ನೋಡೋಕೆ ಸಖತ್​ ಡಿಫ್ರೆಂಟ್ ಗುರೂ!

ಎಲ್‌ಜಿ ಫೋಲ್ಡೇಬಲ್‌ ಡಿಸ್‌ಪ್ಲೇ

ಎಲ್‌ಜಿ ಫೋಲ್ಡೇಬಲ್‌ ಡಿಸ್‌ಪ್ಲೇ

ಕೆಲವು ವರ್ಷಗಳಿಂದ ಈ ರೀತಿಯ ಡಿಸ್‌ಪ್ಲೇಗಳನ್ನು ಆವಿಷ್ಕಾರ ಮಾಡಬೇಕೆಂದು ಹಲವು ಕಂಪನಿಗಳು ಯೋಜನೆ ಮಾಡುತ್ತಿತ್ತು. ಆದರೆ ಇದೀಗ ಮೊದಲ ಬಾರಿಗೆ ಎಲ್‌ಜಿ ಕಂಪನಿ ಫೋಲ್ಡೇಬಲ್‌ ಡಿಸ್‌ಪ್ಲೇಯನ್ನು ಬಿಡುಗಡೆ ಮಾಡುತ್ತಿದೆ. 

  • Share this:

    ತಂತ್ರಜ್ಞಾನ (Technology) ಯುಗದಲ್ಲಿ ಬದಲಾವಣೆ ಅಗತ್ಯ. ಆದರೆ ಇಲ್ಲೊಂದು ಸಂಸ್ಥೆ ಬಹಳ ವಿಶಿಷ್ಟ ಫೀಚರ್ಸ್‌ನೊಂದಿಗೆ (Feature) ಡಿಸ್‌ಪ್ಲೇಯನ್ನು (Display) ಬಿಡುಗಡೆ ಮಾಡುತ್ತಿದೆ. ಈ ಡಿಸ್‌ಪ್ಲೇ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಸೈಜ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಇತ್ತೀಚಿನ ತಂತ್ರಜ್ಞಾನಗಳು ಬಹಳಷ್ಟು ಅಪ್‌ಡೇಟ್‌ಗಳನ್ನು (Update) ಮಾಡುತ್ತಿದೆ. ಇದೀಗ ಎಲ್‌ಜಿ ಕಂಪನಿ (Company) ತನ್ನ ಕ್ರಿಯಾಶೀಲತೆಯಿಂದ ಫೋಲ್ಡೇಬಲ್‌ ಡಿಸ್‌ಪ್ಲೇನ್ನು (Foldable Display) ಬಿಡುಗಡೆ ಮಾಡುತ್ತಿದೆ. ಇದು ಹಲವಾರು ಫೀಚರ್ಸ್‌ ಅನ್ನು ಒಳಗೊಂಡಿದೆ. ಕೊರಿಯನ್ ಟೆಕ್ (Korean Tech Brand) ದೈತ್ಯ ಬ್ರ್ಯಾಂಡ್ ಎಲ್‌ಜಿ (LG) ಕಂಪನಿಯು ಹೊಸದಾಗಿ ಡಿಸ್‌ಪ್ಲೇಯೊಂದನ್ನು ಅಭಿವೃದ್ಧಿಪಡಿಸಿದೆ. ಎಲ್‌ಜಿ ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತ ಪ್ರಕಟಣೆಯ ಮೂಲಕ ಹೊಸದಾದ ಡಿಸ್‌ಪ್ಲೇಯನ್ನು ಅನಾವರಣಗೊಳಿಸಿದ್ದು, ಈ ಡಿಸ್‌ಪ್ಲೇಯನ್ನು ಅದರ ನೈಜ ಗಾತ್ರದಿಂದ ಶೇಕಡಾ 20 ಪ್ರತಿಶತದಷ್ಟು ವಿಸ್ತರಿಸಲು ಸಾಧ್ಯ ಎಂದು ಕಂಪೆನಿ ಹೇಳಿಕೊಂಡಿದೆ.


    ಕೆಲವು ವರ್ಷಗಳಿಂದ ಈ ರೀತಿಯ ಡಿಸ್‌ಪ್ಲೇಗಳನ್ನು ಆವಿಷ್ಕಾರ ಮಾಡಬೇಕೆಂದು ಹಲವು ಕಂಪನಿಗಳು ಯೋಜನೆ ಮಾಡುತ್ತಿತ್ತು. ಆದರೆ ಇದೀಗ ಮೊದಲ ಬಾರಿಗೆ ಎಲ್‌ಜಿ ಕಂಪನಿ ಫೋಲ್ಡೇಬಲ್‌ ಡಿಸ್‌ಪ್ಲೇಯನ್ನು ಬಿಡುಗಡೆ ಮಾಡುತ್ತಿದೆ.


    ಎಲ್‌ಜಿ ಡಿಸ್‌ಪ್ಲೇನ ಸ್ಪೆಷಲ್‌ ಫೀಚರ್ಸ್:‌


    • ಈ ಹೊಸ ಎಲ್‌ಜಿ ಡಿಸ್‌ಪ್ಲೇಯು ಹೆಚ್ಚಿನ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ.

    • ಈ ಎಲ್‌ಜಿ ಡಿಸ್‌ಪ್ಲೇ 12 ಇಂಚಿನ ಗಾತ್ರವನ್ನು ಹೊಂದಿದೆ.



    ಇದನ್ನೂ ಓದಿ: ಡಿಶ್​ ಟಿವಿ ಕಂಪನಿಯಿಂದ ಬರ್ತಿದೆ ಹೊಸ ಒಟಿಟಿ ಪ್ಲಾಟ್​ಫಾರ್ಮ್! ಕಡಿಮೆ ದುಡ್ಡಿಗೆ ಸಾಕಷ್ಟು ಸಿನಿಮಾಗಳು ಲಭ್ಯ!




    • ಇನ್ನು ಇದರ ಗಾತ್ರವನ್ನು ರಬ್ಬರ್ ಬ್ಯಾಂಡ್‌ನಂತೆ 12 ಇಂಚಿನಿಂದ 14 ಇಂಚಿನವರೆಗೆ ವಿಸ್ತರಿಸಲು ಸಾಧ್ಯವಾಗಲಿದೆ ಎಂದು ಎಲ್‌ಜಿ ಕಂಪನಿ ತಿಳಿಸಿದೆ.


    New foldable display release from LG company! Creating a record?
    ಎಲ್‌ಜಿ ಫೋಲ್ಡೇಬಲ್‌ ಡಿಸ್‌ಪ್ಲೇ ಹ


    • ಡಿಸ್‌ಪ್ಲೇ ತಂತ್ರಜ್ಞಾನದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಸಲುವಾಗಿ ನಾವು ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿದ್ದೇವೆ ಎಂದು ಎಲ್‌ಜಿ ಡಿಸ್‌ಪ್ಲೆ ಉಪಾಧ್ಯಕ್ಷ ಮತ್ತು ಸಿಟಿಒ ಆಗಿರುವ ಸೂ-ಯಂಗ್ ಯೂನ್ ಅವರು ಹೇಳಿದ್ದಾರೆ. 

    • ಇದಲ್ಲದೆ ಈ ಎಲ್‌ಜಿ ಕಂಪನಿ ಈ ತಂತ್ರಜ್ಞಾನದಲ್ಲಿ 100 ಪಿಕ್ಸೆಲ್‌ನೊಂದಿಗೆ ಉತ್ತಮ ರೆಸಲ್ಯುಶನ್‌ ಅನ್ನು ನೀಡುತ್ತದೆ.

    • ಈ ಡಿಸ್‌ಪ್ಲೇಯು ಸಂಪೂರ್ಣ RGB ಬಣ್ಣದೊಂದಿಗೆ 4K ಟಿವಿಯ ರೆಸಲ್ಯೂಶನ್‌ಗೆ ಸಮಾನವಾಗಿದೆ ಎಂದು ಹೇಳಲಾಗಿದೆ.

    • ಈ ಡಿಸ್‌ಪ್ಲೇಯನ್ನು ಶೇಕಡಾ 20 ಪ್ರತಿಶತದಷ್ಟು ವಿಸ್ತರಿಸಲು ಅವಕಾಶವಿದೆ.


    ಬೇರೆ ಯಾವ ಕಂಪನಿ ಈ ತಂತ್ರಜ್ಞಾನವನ್ನು ಸ್ಥಾಪಿಸಿದೆ?


    ವಿಷಯ ಏನಪ್ಪಾ ಅಂದ್ರೆ ದಕ್ಷಿಣ ಕೊರಿಯಾದಲ್ಲಿರುವ ದೊಟ್ಟ ತಂತ್ರಜ್ಞಾನ ಕಂಪನಿಯಾಗಿರುವ ಸ್ಯಾಮ್‌ಸಂಗ್‌ ಕಂಪನಿ ಕೂಡ ಈ ತಂತ್ರಜ್ಞಾನವನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.


    ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ:


    ಈ ಎಲ್‌ಜಿ ಕಂಪನಿಯ ಹೊಸ ಡಿಸ್‌ಪ್ಲೇ ಬಹಳ ವಿಶೇಷತೆಯಿಂದ ಕೂಡಿದ್ದು ಜನರನ್ನು ಬಹಳ ಬೇಗ ಆಕರ್ಷಿಸುತ್ತದೆ. ಕೊರಿಯನ್ ದೊಡ್ಡ ಟೆಕ್ ಬ್ರ್ಯಾಂಡ್ ಎಲ್‌ಜಿ (LG) ಕಂಪೆನಿಯು ಹೊಸದಾಗಿ ಈ ಫೋಲ್ಡೇಬಲ್ ಡಿಸ್‌ಪ್ಲೇಯೊಂದನ್ನು ಅಭಿವೃದ್ಧಿಪಡಿಸಿದೆ.‌ ಈ ರೀತಿಯ ಡಿಸ್‌ಪ್ಲೇ ವಿಶ್ವದಲ್ಲಿ ಪ್ರಾರಂಭವಾದ ಮೊದಲ ತಂತ್ರಜ್ಞಾನವಾಗಿದೆ.


    New foldable display release from LG company! Creating a record?
    ಎಲ್‌ಜಿ ಫೋಲ್ಡೇಬಲ್‌ ಡಿಸ್‌ಪ್ಲೇ


    ಇದೇ ರೀತಿಯ ಬ್ರಾಂಡ್‌ ಈ ಹಿಂದೆಯೂ ಬಿಡುಗಡೆಯಾಗಿತ್ತು. ಆದರೆ ಅದು ಕೇವಲ ಮಡಚುವಂತಹ ಟಿವಿಗಳಾಗಿತ್ತು. ಆದರೆ ಈ ಬಾರಿ ರಿಲೀಸ್‌ ಆಗುತ್ತಿರುವ ಡಿಸ್‌ಪ್ಲೇ ಇಲ್ಲಿಯವರೆಗೆ ಇದ್ದದ್ದಕ್ಕಿಂತ ಬಹಳ ಗುಣಮಟ್ಟದ್ದಾಗಿದೆ.


    ಎಲ್‌ಜಿ ಸಿಗ್ನೇಚರ್‌ ಒಎಲ್‌ಇಡಿ ಆರ್ ಟಿವಿ:


    ಈ ಟಿವಿಯನ್ನು ನಿಮಗೆ ಬೇಕಾದಾಗ ತೆಗೆಯುವ, ಬೇಡವಾದಾಗ ಈ ಟಿವಿಯನ್ನು ಮಡಚಿಡಬಹುದು. ಇಂತಹದ್ದೇ ಒಂದು ಟಿವಿಯನ್ನು ಎಲ್ ಜಿ ಇಂಡಿಯಾ ಇತ್ತಿಚೆಗೆ ಎಲ್‌ಜಿ ಸಿಗ್ನೇಚರ್ OLED R ಎಂಬ ತನ್ನ ರೋಲ್ ಮಾಡಬಹುದಾದ ಟಿವಿಯನ್ನು ಬಿಡುಗಡೆ ಮಾಡಿತ್ತು.


    ಇದನ್ನೂ ಓದಿ: LG ಕಂಪನಿಯ OLED R ಮಡಚಬಹುದಾದ ಟಿವಿ ಲಭ್ಯ; ಹಾಗಿದ್ರೆ ಇದರ ಬೆಲೆ?


    ಇದೀಗ ರಿಲಯನ್ಸ್ ಡಿಜಿಟಲ್ ಫ್ಲ್ಯಾಗ್‌ಶಿಪ್ ಸ್ಟೋರ್‌ನಲ್ಲಿ ನವದೆಹಲಿಯಲ್ಲಿ ವಿಶ್ವದ ಏಕೈಕ ರೋಲೇಬಲ್ OLED ಟಿವಿ ಲಭ್ಯವಿರುವ ಬಗ್ಗೆ ಕಂಪನಿ ಘೋಷಿಸಿದೆ. LG ಸಿಗ್ನೇಚರ್ OLED R ಟಿವಿ, ದೆಹಲಿಯ ಸೌತ್ ಎಕ್ಸ್-II ನಲ್ಲಿರುವ ಸ್ಟೋರ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.

    Published by:Harshith AS
    First published: