ವಾಟ್ಸಾಪ್ (WhastApp) ಇತ್ತೀಚೆಗೆ ತನ್ನ ಗ್ರಾಹಕರಿಗಾಗಿ ಹಲವಾರು ಅನುಕೂಲಕರ ಫೀಚರ್ಸ್ಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಈ ಅಪ್ಲಿಕೇಶನ್ ಅತೀ ಹೆಚ್ಚು ಗ್ರಾಹಕರನ್ನು ಹೊಂದಿಕೊಂಡು ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಎಂದು ಗುರುತಿಸಿಕೊಂಡಿದೆ. ವಾಟ್ಸಾಪ್ ಫೀಚರ್ ಬಗ್ಗೆ ಕಳೆದ ವರ್ಷವನ್ನು ಮೆಲುಕು ಹಾಕುವುದಾದರೆ, ಈ ಅಪ್ಲಿಕೇಶನ್ನಲ್ಲಿ 2022ರಲ್ಲಿ ಬಳಕೆದಾರರಿಗೆ ಅನುಕೂಲವಾಗುವಂತಹ ಹಲವಾರು ಫೀಚರ್ಗಳು ಬಿಡುಗಡೆಯಾಗಿದೆ. ಅದೇ ರೀತಿ ಹಿಂದಿನ ವರ್ಷವೇ 2023ರಲ್ಲಿ ವಾಟ್ಸಾಪ್ನಲ್ಲಿ ಹಲವಾರು ಅಪ್ಡೇಟ್ಗಳು (Update) ಆಗಲಿವೆ ಎಂದು ಹೇಳಿವೆ. ಈ ಮಧ್ಯೆ ಜನವರಿ ಒಂದೇ ತಿಂಗಳಿನಲ್ಲಿ ಇದುವರೆಗೆ 4 ರಿಂದ 5 ಫೀಚರ್ಗಳು ಬಂದಿದ್ದು, ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ.
ವಾಟ್ಸಾಪ್ನಲ್ಲಿ ಈ ವರ್ಷ ಹಲವಾರು ಫೀಚರ್ಸ್ಗಳು ಹೊರ ಬರಲಿದ್ದು, ಸದ್ಯ ಈ ಪ್ಲಾಟ್ಫಾರ್ಮ್ನಲ್ಲಿ ಸರ್ಚ್ ಬೈ ಡೇಟ್ ಎಂಬ ಫೀಚರ್ ಬಿಡುಗಡೆಯಾಗಿದೆ. ಈ ಮೂಲಕ ಯಾವುದೇ ಹಿಂದಿನ ಮೆಸೇಜ್ ಬೇಕಾದರೂ ಸ್ಕ್ರಾಲ್ ಮಾಡಬೇಕಾಗಿಲ್ಲ. ಹಾಗಿದ್ರೆ ಈ ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡಬೇಕಾದರೆ ಈ ಲೇಖನವನ್ನು ಓದಿ.
ಯಾವ ರೀತಿ ಉಪಯೋಗವಾಗಿದೆ?
ವಾಟ್ಸಾಪ್ ಇದೀಗ ತನ್ನ ಪ್ಲಾಟ್ಫಾರ್ಮ್ನಲ್ಲಿ ಸರ್ಚ್ ಬೈ ಡೇಟ್ ಎಂಬ ಹೊಸ ಫೀಚರ್ ಅನ್ನು ಬಳಕೆದಾರರಿಗೆ ಪರಿಚಯಿಸಿದೆ. ಇನ್ಮುಂದೆ ಬಳಕೆದಾರರು ವಾಟ್ಸಾಪ್ನಲ್ಲಿ ಯಾವು್ದೇ ಹಳೆಯ ಮೆಸೇಜ್ ಅನ್ನು ಸುಲಭದಲ್ಲಿ ವೀಕ್ಷಿಸಬಹುದು. ದಿನಾಂಕದ ಆಧಾರದಲ್ಲಿ ನಿಮಗೆ ಬೇಕಾಗಿರುವ ಚಾಟ್ ಅನ್ನು ವಾಟ್ಸಾಪ್ನಲ್ಲಿ ಸರ್ಚ್ ಮಾಡಬಹುದು. ಜೊತೆಗೆ ಆ ದಿನದಲ್ಲಿ ಶೇರ್ ಮಾಡಿದಂತಹ ಫೋಟೋ, ವಿಡಿಯೋವನ್ನು ಸಹ ನೋಡಬಹುದಾಗಿದೆ.
ಸ್ಕ್ರಾಲ್ ಮಾಡುವ ಅಗತ್ಯವಿಲ್ಲ
ಸಾಮಾನ್ಯವಾಗಿ ವಾಟ್ಸಾಪ್ನಲ್ಲಿ ನೀವು ಬಹುಮುಖ್ಯವಾದ ಮಾಹಿತಿಯನ್ನು ಹಂಚಿಕೊಂಡಿದ್ದು, ಅದರ ಬಗ್ಗೆ ಮತ್ತೊಮ್ಮೆ ತಿಳಿದುಕೊಳ್ಳಲು ಬಯಸಿದರೆ ಚಾಟ್ ವಿಂಡೋದಲ್ಲಿ ಹಳೆಯ ಸಂದೇಶವನ್ನು ಸರ್ಚ್ ಮಾಡಲು ಸಂದೇಶಗಳ್ನು ಸ್ಕ್ರೋಲ್ ಮಾಡುತ್ತಾ ಹೋಗಬೇಕಾಗುತ್ತದೆ.
ಇದರಿಂದ ಸಾಕಷ್ಟು ಸಮಯ ಸ್ಕ್ರೋಲಿಂಗ್ನಲ್ಲಿಯೇ ಕಳೆಯುತ್ತಿದೆ. ಆದರೆ ಸರ್ಚ್ ಬೈ ಡೇಟ್ ಫೀಚರ್ಸ್ ನಿಮಗೆ ನೀವು ಸಂದೇಶ ಕಳುಹಿಸಿದ ದಿನಾಂಕ ನಮೂದಿಸಿದರೆ ಸಾಕು ಆ ದಿನಂದು ನೀವು ಕಳುಹಿಸಿದ ಸಂದೇಶಗಳನ್ನು ತೆರೆದಿಡುತ್ತದೆ. ಇದರಿಂದ ನೀವು ಸ್ಕ್ರೋಲಿಂಗ್ ಮಾಡಬೇಕಾದ ಅಗತ್ಯವೇ ಬರುವುದಿಲ್ಲ.
ವಾಟ್ಸಾಪ್ ಸರ್ಚ್ ಬೈ ಡೇಟ್ಸ್ ಫೀಚರ್ ಬಳಸುವುದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ