ವಾಟ್ಸಾಪ್ (WhatsApp) ನಮ್ಮ ಜೀವನದ ದೊಡ್ಡ ಭಾಗವೇ ಆಗಿದೆ. ಬೆಳಗೆದ್ದು ವಾಟ್ಸಪ್ ನೋಡೋದು, ಸ್ಟೇಟಸ್ ಅಪ್ಡೇಟ್ ಮಾಡೋದು, ಕೆಲಸಕ್ಕೆ ಸಂಬಂಧಿಸಿದ ವಿಷಯಗಳನ್ನು ಚಾಟ್ (Chatting) ಮಾಡೋದು. ಅಷ್ಟೇ ಏಕೆ ಕೆಲವು ಮುಖ್ಯವಾದ ನೋಟ್ಸ್ ಕ್ರಿಯೇಟ್ ಮಾಡಿಕೊಳ್ಳಲು ವಾಟ್ಸಾಪ್ ಬೇಕೇ ಬೇಕು. ಇನ್ನು ವಾಟ್ಸಪ್ ಕೂಡ ಇವತ್ತಿಗೂ ತನ್ನ ಬಳಕೆದಾರರನ್ನು ಹಾಗೇ ಉಳಿಸಿಕೊಂಡಿದೆ. ಜೊತೆಗೆ ಬಳಕೆದಾರರ ಸ್ನೇಹಿ ಆಗಿದೆ. ಸಾಲದ್ದಕ್ಕೆ ಹೊಸ ಹೊಸ ಫೀಚರ್ಸ್ಗಳನ್ನು (New Features) ಅಪ್ಡೇಟ್ ಮಾಡುವ ಮೂಲಕ ಜನರ ಕೈಯಲ್ಲಿ ಭದ್ರವಾಗಿ ಬೇರೂರುತ್ತಿದೆ.
ಇತ್ತೀಚೆಗೆ ವಾಟ್ಸಾಪ್ ಸ್ಟೋರಿಸ್, ಹಣ ಕಳಿಸುವ ವ್ಯವಸ್ಥೆಗಳೆಲ್ಲವೂ ಕೂಡ ವಾಟ್ಸಾಪ್ನ ಬೆಳವಣಿಗೆಗೆ ಕಾರಣವಾಗಿದೆ. ಸದ್ಯ ಮತ್ತೊಂದು ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ ಅಪ್ಡೇಟ್ ಮಾಡಲು ಕಾರ್ಯ ನಿರ್ವಹಿಸುತ್ತಿದೆ. ಅದೇ ಪ್ರೈವೇಟ್ ನ್ಯೂಸ್ ಲೆಟರ್. ಆದರೆ ಇದು ಟೆಲಿಗ್ರಾಂನ ಫೀಚರ್ ಅನ್ನು ಕಾಪಿ ಮಾಡ್ತಿದೆ ಅನ್ನೋ ವಾದವೂ ಇದೆ.
ಟೆಲಿಗ್ರಾಂನ ಕಾಪಿ ಮಾಡ್ತಿದ್ಯಾ ವಾಟ್ಸಾಪ್?
ವಾಬೀಟಾಇನ್ಫೋ.ಕಾಂ ನ ಇತ್ತೀಚಿನ ವರದಿಯ ಪ್ರಕಾರ ಮೆಟಾ ಒಡೆತನದ ವಾಟ್ಸಾಪ್ ಟೆಲಿಗ್ರಾಂನಲ್ಲಿರುವಂತೆ ಪ್ರೈವೇಟ್ ನ್ಯೂಸ್ ಲೆಟರ್ ವೈಶಿಷ್ಯ್ಟವನ್ನು ಪರಿಚಯಿಸಲು ಯೋಚಿಸುತ್ತಿದೆ ಎಂದು ಹೇಳಲಾಗುತ್ತಿತ್ತು. ಈಗ ಅದರ ಹೆಸರನ್ನು ನ್ಯೂಸ್ ಲೆಟರ್ ಎಂದು ಬದಲಿಸಲಾಗಿದೆ ಎನ್ನಲಾಗುತ್ತಿದೆ. ಈ ನ್ಯೂಸ್ ಲೆಟರ್ಗಳಿಗೆ ಬಳಕೆದಾರರು ಚಂದಾದಾರರಾಗಬಹುದು.
ಇದನ್ನೂ ಓದಿ: ಪೋಷಕರೇ, ನಿಮ್ಮ ಮಕ್ಕಳ ಸ್ಕ್ರೀನ್ ಟೈಮ್ ಜಾಸ್ತಿ ಇದ್ರೆ ಈಗ್ಲೇ ಬ್ರೇಕ್ ಹಾಕಿ, ಆಪಲ್ ಸಿಇಒ ಸಲಹೆ
ವಾಟ್ಸಾಪ್ ಹೊಸ ಫೀಚರ್ನ ಸ್ಕ್ರೀನ್ಶಾಟ್
ಟೆಲಿಗ್ರಾಂನ ಕಾಪಿ ಎಂದು ಹೇಳಲಾಗುತ್ತಿರುವ, ಹೆಸರಿನ ಬದಲಾವಣೆಯ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿದೆ. ನ್ಯೂಸ್ಲೆಟರ್ನ ಚಂದಾದಾರರಾದರೂ ಗ್ರಾಹಕರ ಹೆಸರು ಮತ್ತು ನಂಬರ್ ಗೌಪ್ಯವಾಗಿರುತ್ತದೆ. ಜೊತೆಗೆ ಗ್ರಾಹಕರೇ ಚಾನೆಲ್ ಹೆಸರನ್ನು ಗುರುತಿಸಬಹುದು. ತಮಗೆ ಬೇಕಾದವರಿಂದ ನ್ಯೂಸ್ಲೆಟರ್ ಪಡೆಯಬಹುದು.
ವಾಟ್ಸಾಪ್ನಲ್ಲಿ ಈಗಾಗಲೇ ಕೆಲವು ಫೀಚರ್ಗಳು ಬಂದಿವೆ. ಇನ್ನೂ ಕೆಲವು ಬರುತಲಿದೆ. ಮತ್ತಷ್ಟೂ ಹೊಸ ವೈಶಿಷ್ಟ್ಯಗಳು ಬರುವುದಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನ್ಯೂಸ್ಲೆಟರ್ ಸದ್ಯ ಬಳಕೆದಾರರಲ್ಲಿ ಕುತೂಹಲ ಹುಟ್ಟಿಸಿದೆ.
ವಾಟ್ಸಾಪ್ ಬೇರೆ ಅಪ್ಲಿಕೇಷನ್‌ಗಳಿಂದ ವೈಶಿಷ್ಟ್ಯತೆಯನ್ನು ಕದಿಯುತ್ತಿದೆಯೇ?
ಇನ್ನು ವಾಟ್ಸಪ್ ಮಾರ್ಕೆಟ್ನಲ್ಲಿ ತನ್ನ ಅಸ್ತಿತ್ವ ಭದ್ರಪಡಿಸಿಕೊಳ್ಳಲು ಇನ್ನಿತರ ಆ್ಯಪ್ಗಳ ವೈಶಿಷ್ಟ್ಯತೆಗಳನ್ನು ನಕಲಿಸುತ್ತದೆ ಎನ್ನುವ ಆರೋಪವಿದೆ. ಇದರಲ್ಲಿ ವಾಟ್ಸಪ್ನ ಪೋಲ್ ಫೀಚರ್ ಟೆಲಿಗ್ರಾಂ ಅನ್ನೇ ಹೋಲುತ್ತದೆ. ಅಷ್ಟೇ ಅಲ್ಲದೇ ಸಿಗ್ನಲ್ನಿಂದ ಡಿಸ್ ಅಪಿಯರಿಂಗ್ ಮೆಸೇಜ್ ಆಯ್ಕೆಯನ್ನು ಕೂಡ ನಕಲಿಸಿದೆ ಎನ್ನುವ ಆರೋಪವಿದೆ.
ಟೆಲಿಗ್ರಾಂನಿಂದ ಏನೆಲ್ಲಾ ನಕಲಿಸಿದೆ?
ಇದಿಷ್ಟೇ ಅಲ್ಲದೇ ವಾಟ್ಸಾಪ್ನ ಇನ್ನಿತರ ಫೀಚರ್ಗಳಾದ ರಿಪ್ಲೈ, ಮೆನ್ಷನ್, ಗ್ರೂಪ್ ಜಾಯಿನಿಂಗ್ ಲಿಂಕ್, ಮೆಸೇಜ್ ರಿವೋಕ್, ಡ್ಯೂಯೆಲ್ ವೇರಿಫಿಕೇಷನ್, ಪಿನ್ ಚಾಟ್ಸ್, ಎಡಿಟ್ ಸೆಂಟ್ ಮೆಸೇಜ್, ಪಿಡಿಎಫ್ ಸಪೋರ್ಟ್, ಈ ಎಲ್ಲಾ ಆಯ್ಕೆಗಳು ಮೊದಲು ಟೆಲಿಗ್ರಾಂನಲ್ಲಿ ಪರಿಚಯವಾಗಿತ್ತು. ಆದರೆ ಆ ನಂತರದಲ್ಲಿ ಇದೇ ವೈಶಿಷ್ಟ್ಯಗಳು ಅಥವಾ ಇದನ್ನು ಹೋಲುವಂತಹ ವೈಶಿಷ್ಟ್ಯಗಳು ವಾಟ್ಸಾಪ್ನಲ್ಲಿ ಕಾಣಿಸಿಕೊಳ್ಳಲು ಆರಂಭಿಸಿತು. ಈ ಕಾರಣದಿಂದಲೇ ವಾಟ್ಸಪ್ನ ಪ್ರಬಲ ಸ್ಪರ್ಧಿ ಟೆಲಿಗ್ರಾಂನ ಫೀಚರ್ಗಳು ಕಾಪಿಯಾಗುತ್ತಿವೆ ಎನ್ನುವ ವಾದವಿದೆ.
ವಾಟ್ಸಾಪ್ ಕೈ ಕೊಟ್ಟಾಗ ಟೆಲಿಗ್ರಾಂನತ್ತ ಧಾವಿಸಿದ ಗ್ರಾಹಕರು
ಆದರೆ ವಾಟ್ಸಾಪ್ ಆಗಾಗ ಸಮಸ್ಯೆಯಾದಾಗ ಜನರು ಶೀಘ್ರವೇ ಟೆಲಿಗ್ರಾಂನತ್ತ ಹೊರಳಿದ ಉದಾಹರಣೆ ಸಾಕಷ್ಟಿದೆ. ಈ ನಿಟ್ಟಿನಲ್ಲಿ ಟೆಲಿಗ್ರಾಂ ಕೂಡ ಎಲ್ಲರನ್ನೂ ತಲುಪಲು ಹೊಸ ಯೋಜನೆಗಳನ್ನು ಯೋಚಿಸುತ್ತಲೇ ಇರುತ್ತದೆ. ಈ ಎಲ್ಲಾ ಸೌಲಭ್ಯಗಳು ಗ್ರಾಹಕನ ಬೆಳವಣಿಗೆಯ ಮೂಲಮಂತ್ರವನ್ನೇ ಜಪಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ