ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ಗಳಲ್ಲಿ (Messaging Application) ಒಂದಾಗಿರುವ ವಾಟ್ಸಾಪ್ (WhatsApp) ನಿರಂತರವಾಗಿ ತನ್ನ ಬಳಕೆದಾರರಿಗೆ ಒಂದಲ್ಲೊಂದು ಫೀಚರ್ಗಳನ್ನು ಪರಿಚಯಿಸುವ ಮೂಲಕ ಭಾರೀ ಮೆಚ್ಚಗೆಯನ್ನು ಪಡೆದಿದೆ. ವಾಟ್ಸಾಪ್ ಬಗ್ಗೆ ಹಿಂದಿನ ವರ್ಷವನ್ನು ಸ್ವಲ್ಪ ಮೆಲುಕು ಹಾಕುವುದಾರೆ, ವಾಟ್ಸಾಪ್ ಕಂಪೆನಿ ಕಳೆದ ವರ್ಷ ಹಲವಾರು ಅಪ್ಡೇಟ್ಗಳನ್ನು ಮಾಡಿದೆ. ಅದೇ ರೀತಿ 2023ರಲ್ಲಿ ಇನ್ನೂ ಹಲವಾರು ಫೀಚರ್ಸ್ಗಳು ಬರಲಿದೆ ಎಂದು ಹೇಳಿತ್ತು. ಅದೇ ರೀತಿಯಲ್ಲಿ ಈ ಬಾರಿ ಆರಂಭದ ತಿಂಗಳಿನಿಂದಲೇ ಹೊಸ ಅಪ್ಡೇಟ್ಗಳನ್ನು (New Updates) ಪರಿಚಯಿಸುತ್ತಾ ಬಂದಿದೆ. ಇದೀಗ ತನ್ನ ಬಳಕೆದಾರರಿಗಾಗಿ ವಿಶೇಷ ಫೀಚರ್ ಒಂದು ಬಿಡುಗಡೆಯಾಗುತ್ತಿದ್ದು, ಇದು ಬಳಕೆದಾರರಿಗೆ ಬಹಳಷ್ಟು ಅನುಕೂಲವಾಗಲಿದೆ.
ಹೌದು, ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಇದೀಗ ಬಳಕೆದಾರರ ಬಹಳ ಬೇಡಿಕೆಯ ಫೀಚರ್ ಒಂದನ್ನು ಪರಿಚಯಿಸಿದೆ. ಈ ಮೂಲಕ ಇನ್ಮುಂದೆ ಇನ್ನೊಬ್ಬರಿಗೆ ಯಾವುದೇ ತಪ್ಪಿ ಮೆಸೇಜ್ ಮಾಡಿದ್ರು ಅದನ್ನು ಎಡಿಟ್ ಮಾಡಬಹುದಾಗಿದೆ.
15 ನಿಮಿಷದಲ್ಲಿ ಎಡಿಟ್ ಮಾಡ್ಬಹುದು
ವಾಟ್ಸಾಪ್ ಶೀಘ್ರದಲ್ಲೇ ಎಡಿಟ್ ಸೆಂಡ್ ಮೆಸೇಜ್ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಈಗಾಗಲೇ ಸೆಂಡ್ ಮಾಡಿರುವ ಮೆಸೇಜ್ ಅನ್ನು ಎಡಿಟ್ ಮಾಡಲು ಅವಕಾಶ ನೀಡಲಿದೆ. ಆದರೆ ನೀವು ಮೆಸೇಜ್ ಅನ್ನು ಕಳುಹಿಸಿದ 15 ನಿಮಿಷಗಳ ಒಳಗೆ ಎಡಿಟ್ ಮಾಡಲು ಅವಕಾಶ ನೀಡಲಿದೆ ಎಂದು ವರದಿಯಾಗಿದೆ. ಇದರಿಂದ ನೀವು ಯಾರಿಗಾದರೂ ಮೆಸೇಜ್ ಕಳುಹಿಸಿದಾಗ ಅದರಲ್ಲಿ ಏನಾದರು ತಪ್ಪಿದ್ದರೆ ಆಗಲೇ ಎಡಿಟ್ ಮಾಡುವಂತಹ ಅವಕಾಶ ಲಭ್ಯವಾಗುತ್ತದೆ.
ಇದನ್ನೂ ಓದಿ: ಇನ್ಮುಂದೆ ನಿಮ್ಮ ಹಳೆಯ ಫೋನ್ ಆನ್‌ಲೈನ್‌ನಲ್ಲಿ ಸೇಲ್ ಮಾಡ್ಬಹುದು, ಇಲ್ಲಿದೆ 5 ವೆಬ್ಸೈಟ್ಗಳು
ಇನ್ಮುಂದೆ ಡಿಲೀಟ್ ಮಾಡುವ ಬದಲಿ ಎಡಿಟ್ ಮಾಡ್ಬಹುದು
ಈ ಫೀಚರ್ ಮೂಲಕ ವಾಟ್ಸಾಪ್ ಬಳಕೆದಾರರು ತಾವು ಇನ್ನೊಬ್ಬರಿಗೆ ಕಳುಹಿಸಿದ ಮೆಸೇಜ್ನಲ್ಲಿ ಯಾವುದೇ ರೀತಿಯ ತಪ್ಪಿದ್ದರೆ ಎಡಿಟ್ ಮಾಡುವ ಅವಕಾಶ ದೊರೆಯುತ್ತದೆ. ಹಾಗೆಯೇ ನೀವು ಕಳುಹಿಸಿದಂತಹ ಮೆಸೇಜ್ನಲ್ಲಿ ಏನಾದರು ಹೆಚ್ಚುವರಿ ಸೇರ್ಪಡೆಗಳಿದ್ದರೆ ಆಗಲೇ ಬರೆಯಬಹುದು. ಆದರೆ ಈ ಫೀಚರ್ 15 ನಿಮಿಷಗಳ ಒಳಗೆ ಮಾತ್ರ ಬಳಕೆಗೆ ಅನ್ವಯವಾಗುತ್ತದೆ. ಈ ಹಿಂದೆ ಸೆಂಡ್ ಮಾಡಿದ ಮೆಸೇಜ್ನಲ್ಲಿ ತಪ್ಪಿದ್ದರೆ ಡಿಲೀಟ್ ಮಾಡಲು ಡಿಲೀಟ್ ಫಾರ್ ಎವ್ರಿವನ್ ಎಂಬ ಫೀಚರ್ ನೀಡಿತ್ತು. ಆದರೆ ಇನ್ಮುಂದೆ ಮೆಸೇಜ್ ಡಿಲೀಟ್ ಮಾಡುವ ಬದಲಿಗೆ ಎಡಿಟ್ ಮಾಡಬಹುದಾಗಿದೆ.
ಯಾರಿಗೆಲ್ಲಾ ಲಭ್ಯವಾಗಲಿದೆ?
ಇನ್ನು ವಾಟ್ಸಾಪ್‌ನ ಈ ಹೊಸ ಆಯ್ಕೆಯು ಇತ್ತೀಚಿನ ವಾಟ್ಸಾಪ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಇದರ ಮೂಲಕ ನೀವು ಸಂದೇಶಗಳನ್ನು ಮಾತ್ರ ಎಡಿಟ್ ಮಾಡಬಹುದು. ಬದಲಿಗೆ ಯಾವುದೇವಿಡಿಯೋ ಹಾಗೂ ಇಮೇಜ್ ಸಂದೇಶಗಳನ್ನು ಎಡಿಟ್ ಮಾಡಲು ಅವಕಾಶ ನೀಡುವುದಿಲ್ಲ. ಈ ಫೀಚರ್ಸ್ ಪ್ರಸ್ತುತ ಐಒಎಸ್ ಬಳಕೆದಾರರಿಗಾಗಿ ನೀಡಲು ಅಭಿವೃದ್ಧಿ ಹಂತದಲ್ಲಿದೆ. ಆದರೆ ಶೀಘ್ರದಲ್ಲೇ ಬೀಟಾ ವರ್ಷನ್‌ನಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಎಲ್ಲ ವಾಟ್ಸಾಪ್ ಬಳಕೆದಾರರು ಈ ಫೀಚರ್ ಅನ್ನು ಪಡೆದುಕೊಳ್ಳಲು ಅವಕಾಶ ಸಿಗಲಿದೆ.
ಕಾಲಿಂಗ್ ಶಾರ್ಟ್‌ಕಟ್ ಫೀಚರ್
ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಾಲ್ ಮಾಡುವವರಿಗೆ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇನ್ನು ಈ ಕಾಲಿಂಗ್ ಶಾರ್ಟ್‌ಕಟ್ ಫೀಚರ್ಸ್ ವಾಟ್ಸಾಪ್ ಅಪ್ಲಿಕೇಶನ್ ತೆರೆಯದೆಯೇ ಕಾಲ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಂದರೆ ವಾಟ್ಸಾಪ್‌ನಲ್ಲಿ ನೀವು ಕಾಲ್ ಮಾಡಬೇಕಾದರೆ ಕಂಟ್ಯಾಕ್ಟ್ ಲಿಸ್ಟ್ ತೆಗೆದು ಹೆಸರನ್ನು ಸರ್ಚ್ ಮಾಡಬೇಕಾದ ಅನಿವಾರ್ಯತೆ ಬರುವುದಿಲ್ಲ.
ಬದಲಿಗೆ ನೀವು ಶಾರ್ಟ್‌ಕಟ್ ಆಯ್ಕೆಯಲ್ಲಿರಿಸಿರುವ ಕಂಟ್ಯಾಕ್ಟ್ ಮೇಲೆ ಕ್ಲಿಕ್ ಮಾಡಿದರೆ ಅವರಿಗೆ ನೇರವಾಗಿ ಕರೆ ಹೋಗಲಿದೆ. ಇದಕ್ಕಾಗಿ ನೀವು ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆರೆಯಬೇಕಾದ ಅವಶ್ಯಕತೆಯಿರುವುದಿಲ್ಲ ಅನ್ನೊದು ವಾಟ್ಸಾಪ್‌ನ ಐಡಿಯಾ ಆಗಿದೆ. ಈ ಹೊಸ ಫೀಚರ್ಸ್ ಮೂಲಕ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುವಷ್ಟು ಸುಲಭವಾಗಿ ಕರೆ ಮಾಡುವುದಕ್ಕೆ ಅವಕಾಶ ಸಿಗಲಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ