WhatsApp: ವಾಟ್ಸಾಪ್​ನಿಂದ ಹೊಸ ಫೀಚರ್​ ಬಿಡುಗಡೆ! ಬಳಕೆದಾರರಿಗೆ ಚಾಟ್​ ಮಾಡಲು ಇನ್ನಷ್ಟು ಸುಲಭ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಾಟ್ಸಾಪ್​ ಪ್ರತೀ ಬಾರಿ ಹೊಸ ಫೀಚರ್​ ಬಿಡುಗಡೆ ಮಾಡುವ ಅದು ಏನಾದರೊಂದು ಕಾರಣವನ್ನು ಹೊಂದಿರುತ್ತದೆ. ಅದೇ ರೀತಿ ಈಗ ಇನ್ನೊಂದು ಸರ್ಚ್​ ಬಾರ್​ ಫೀಚರ್​ ಪರಿಚಯಿಸುತ್ತಿದ್ದು, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕಂಪ್ಲೀಟ್ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

  • Share this:

    ದೇಶದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ (Messaging Application)​ ಆಗಿರುವ ವಾಟ್ಸಾಪ್ (WhatsApp)​ ಟೆಕ್ ವಲಯದಲ್ಲಿ ಭಾರೀ ಚರ್ಚೆಯಲ್ಲಿದೆ. ವಾಟ್ಸಾಪ್​ ಈ ವರ್ಷದ ಆರಂಭದಿಂದಲೇ ಗ್ರಾಹಕರಿಗೆ ಅನೇಕ ಫೀಚರ್​ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಬಳಕೆದಾರರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದುವರೆಗೆ ವಾಟ್ಸಾಪ್​ನಲ್ಲಿ ಕೇವಲ ಚಾಟ್ (Chat)​ ಮಾತ್ರ ಮಾಡ್ಬಹುದಿತ್ತ. ಆದರೆ ಕೆಲ ತಿಂಗಳುಗಳ ಹಿಂದೆ ವಾಟ್ಸಾಪ್​ನಲ್ಲಿ ಹಣವನ್ನು ಸಹ ಇನ್ನೊಬ್ಬರಿಗೆ ಪಾವತಿಸುವ ಫೀಚರ್​ ಅನ್ನು ಬಿಡುಗಡೆ ಮಾಡಿತ್ತು. ಇತ್ತೀಚೆಗೆ ವಾಟ್ಸಾಪ್​ ತನ್ನ ಸ್ಟೋರೇಜ್​ ವಿಭಾಗದಲ್ಲಿ, ಸ್ಟೇಟಸ್​ಗಳಲ್ಲಿ ಭಾರೀ ಬದಲಾವಣೆಗಳನ್ನು ಮಾಡಿದೆ. ಇದೀಗ ಮತ್ತೊಂದು ಫೀಚರ್​​ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.


    ವಾಟ್ಸಾಪ್​ ಪ್ರತೀ ಬಾರಿ ಹೊಸ ಫೀಚರ್​ ಬಿಡುಗಡೆ ಮಾಡುವ ಅದು ಏನಾದರೊಂದು ಕಾರಣವನ್ನು ಹೊಂದಿರುತ್ತದೆ. ಅದೇ ರೀತಿ ಈಗ ಇನ್ನೊಂದು ಸರ್ಚ್​ ಬಾರ್​ ಫೀಚರ್​ ಪರಿಚಯಿಸುತ್ತಿದ್ದು, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕಂಪ್ಲೀಟ್ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.


    ಸರ್ಚ್​​ ಬಾರ್ ಫೀಚರ್​


    ವಾಟ್ಸಾಪ್‌ ಸೆಟ್ಟಿಂಗ್ ವಿಭಾಗವನ್ನು ನ್ಯಾವಿಗೇಟ್ ಮಾಡಲು ಬಳಕೆದಾರರಿಗೆ ಸುಲಭವಾಗುವಂತೆ ಮಾಡಲು ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್ ಮುಂದಾಗಿದೆ. ಇದುವರೆಗೆ ವಾಟ್ಸಾಪ್​ನಲ್ಲಿ ಏನಾದರು ಸೆಟ್​ ಮಾಡಬೇಕಾದರೆ ಪ್ರತ್ಯೇಕವಾಗಿ ಸೆಟ್ಟಿಂಗ್ಸ್​​ ವಿಭಾಗಕ್ಕೆ ಹೋಗಿಯೇ ಅಪ್ಡೇಟ್​ ಮಾಡಬೇಕಿತ್ತು.


    ಇದನ್ನೂ ಓದಿ: ಹೊಸ ಫೋನ್​ ಖರೀದಿಸುವವರಿಗೆ ಈ ಸಮಸ್ಯೆಗಳು ಇನ್ಮುಂದೆ ಎದುರಾಗಲ್ಲ! ಈ ಆ್ಯಪ್​ಗಳು ಬ್ಯಾನ್​


    ಆದರೆ ಈ ಫೀಚರ್​ ಮೂಲಕ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಹಾಗೆಯೇ ಸರ್ಚ್‌ ಬಾರ್‌ ಫೀಚರ್​ ವಾಟ್ಸಾಪ್‌ನಲ್ಲಿ ಬಳಕೆದಾರರಿಗೆ ಬೇಕಾದ ಸೆಟ್ಟಿಂಗ್‌ ಆಯ್ಕೆಯನ್ನು ಸರ್ಚ್‌ ಮಾಡಲು ಅವಕಾಶ ನೀಡುತ್ತದೆ. ಇದರಿಂದ ಇನ್ಮುಂದೆ ಬಳಕೆದಾರರು ಯಾವುದೇ ಬದಲಾವಣೆ ಬೇಕಾದರೂ ವೇಗವಾಗು ಈ ಫೀಚರ್​ ಮೂಲಕ ಬದಲಾವಣೆ ಮಾಡಬಹುದಾಗಿದೆ.


    ಯಾವೆಲ್ಲಾ ಬಳಕೆದಾರರಿಗೆ ಲಭ್ಯ?


    ವಾಟ್ಸಾಪ್‌ನ ಈ ವಿಶೇಷ ಫೀಚರ್ಸ್‌ ಅನ್ನು ವಾಬೀಟಾಇನ್ಫೋ ಗುರುತಿಸಿದ್ದು, ಐಓಎಸ್‌ ಬಳಕೆದಾರರಿಗೆ ಇದು ಲಭ್ಯ ಇರಲಿದೆ. ಹಾಗೆಯೇ ಐಒಎಸ್‌ ಬೀಟಾ ಆವೃತ್ತಿ 23.4.0.73 ನಲ್ಲಿ ವಾಟ್ಸಾಪ್‌ ಬಳಕೆ ಮಾಡುತ್ತಿರುವವರು ಈಗಾಗಲೇ ಈ ಫೀಚರ್ಸ್‌ ಅನ್ನು ಬಳಕೆ ಮಾಡುತ್ತಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲು ಪರೀಕ್ಷೆ ನಡೆಯುತ್ತಿದೆ.


    ಸಾಂಕೇತಿಕ ಚಿತ್ರ


    ಹೇಗೆ ಬಳಸೋದು?


    ಇನ್ನು ವಾಬೀಟಾಇನ್ಫೋ ವರದಿ ಮಾಡಿರುವ ಫೋಟೋದ ಪ್ರಕಾರ, ಪ್ರೊಫೈಲ್​ ಚಿತ್ರದಲ್ಲೇ ಈ ಸರ್ಚ್​ ಬಾರ್​ ಆಯ್ಕೆ ಸಿಗುತ್ತದೆ. ಈ ಮೂಲಕ ಬಳಕೆದಾರರು ಈ ಆಯ್ಕೆಯನ್ನು ಸೆಲೆಕ್ಟ್ ಮಾಡುವ ಮೂಲಕ ಅಲ್ಲಿ ಯಾವುದಾದರು ಒಂದು ವಿಷಯವನ್ನು ಸರ್ಚ್​ ಮಾಡಿದರೆ ತಕ್ಷಣ ಸೆಟ್ಟಿಂಗ್​ ವಿಭಾದಲ್ಲಿರುವ ವಿಂಡೋ ತೆರೆಯುತ್ತದೆ. ಉದಾಹರಣೆಗೆ ನೀವು ಅಲ್ಲಿ ಪ್ರೈವಸಿ ಎಂದು ಸರ್ಚ್​ ಮಾಡಿದ್ರೆ ಅಲ್ಲಿ ನೀವು ಚಾಟ್​, ಸ್ಟೇಟಸ್​ಗೆ ಸಂಬಂಧಪಟ್ಟ ಪ್ರೈವಸಿ ಸೆಟ್​ ಮಾಡಿಕೊಳ್ಳಲು ನೇರವಾಗಿ ಅವಕಾಶವನ್ನು ನೀಡುತ್ತದೆ.




    ಯಾರಿಗೆ ಹೆಚ್ಚು ಉಪಯೋಗ?


    ಇನ್ನು ಈ ಫೀಚರ್​ ಈಗ ತಾನೆ ವಾಟ್ಸಾಪ್ ಡೌನ್​ಲೋಡ್ ಮಾಡಿದವರು ಅಥವಾ ವಯಸ್ಸಾದವರಿಗೆ ಬಹಳಷ್ಟು ಸಹಕಾರಿಯಾಗುತ್ತದೆ. ಯಾಕೆಂದರೆ ಸೆಟ್ಟಿಂಗ್‌ ವಿಭಾಗಕ್ಕೆ ಹೋಗಿ ಅಲ್ಲಿ ಬೇಕಾದ ಬದಲಾವಣೆ ಮಾಡುವ ಬದಲು ನೇರವಾಗಿ ಯಾವ ವಿಭಾಗದಲ್ಲಿ ಏನೆಲ್ಲಾ ಬದಲಾವಣೆ ಬೇಕು, ಅಥವಾ ಏನನ್ನು ನೋಡಬೇಕು ಎನ್ನುವುದನ್ನು ಸುಲಭವಾಗಿ ಈ ಫೀಚರ್​ ಮೂಲಕ ಸರ್ಚ್​ ಮಾಡಬಹುದು.


    15 ನಿಮಿಷದಲ್ಲಿ ಎಡಿಟ್​ ಮಾಡ್ಬಹುದು


    ವಾಟ್ಸಾಪ್‌ ಶೀಘ್ರದಲ್ಲೇ ಎಡಿಟ್‌ ಸೆಂಡ್‌ ಮೆಸೇಜ್‌ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಈಗಾಗಲೇ ಸೆಂಡ್‌ ಮಾಡಿರುವ ಮೆಸೇಜ್‌ ಅನ್ನು ಎಡಿಟ್‌ ಮಾಡಲು ಅವಕಾಶ ನೀಡಲಿದೆ. ಆದರೆ ನೀವು ಮೆಸೇಜ್‌ ಅನ್ನು ಕಳುಹಿಸಿದ 15 ನಿಮಿಷಗಳ ಒಳಗೆ ಎಡಿಟ್ ಮಾಡಲು ಅವಕಾಶ ನೀಡಲಿದೆ ಎಂದು ವರದಿಯಾಗಿದೆ. ಇದರಿಂದ ನೀವು ಯಾರಿಗಾದರೂ ಮೆಸೇಜ್ ಕಳುಹಿಸಿದಾಗ ಅದರಲ್ಲಿ ಏನಾದರು ತಪ್ಪಿದ್ದರೆ ಆಗಲೇ ಎಡಿಟ್​ ಮಾಡುವಂತಹ ಅವಕಾಶ ಲಭ್ಯವಾಗುತ್ತದೆ.

    Published by:Prajwal B
    First published: