ಟೆಕ್ ಜಗತ್ತಿನಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದ ಕಂಪೆನಿಯೆಂದರೆ ಅದು ಗೂಗಲ್ (Google). ಜನರು ಯಾವುದೇ ವಿಷಯವನ್ನು ಇದರಲ್ಲಿ ಸರ್ಚ್ ಮಾಡಿದ್ರೆ ಸಾಕು ಕ್ಷಣಮಾತ್ರದಲ್ಲಿ ಮಾಹಿತಿಯನ್ನು ಒದಗಿಸುತ್ತದೆ. ಗೂಗಲ್ ತನ್ನ ಆದ ಶೈಲಿಯಲ್ಲಿ ರೂಪುಗೊಂಡು, ಇಂದಿಗೆ ಸಾಕಷ್ಟು ಬಳಕೆದಾರರನ್ನು ಇದು ಹೊಂದಿದೆ. ತಮಗೆ ಬೇಕಾದ ವಿಷಯವನ್ನು ಬಳಕೆದಾರರು ಸರ್ಚ್ ಮಾಡ್ತಾರೆ ಆದರೆ ಸರ್ಚ್ ಹಿಸ್ಟರಿಯನ್ನು (Search History Delete) ಡಿಲೀಟ್ ಮಾಡಬೇಕೆಂದು ತಿಳಿದಿರುವುದಿಲ್ಲ. ಇದರಿಂದ ಕೆಲವೊಮ್ಮೆ ನಿಮ್ಮ ಗೌಪ್ಯ (Privacy) ಮಾಹಿತಿಗಳು ಇನ್ನೊಬ್ಬರಿಗೆ ತಿಳಿಯಲು ಸಾಧ್ಯವಾಗುತ್ತದೆ. ಆದರೆ ಇದನ್ನು ಮನಗಂಡಂತಹ ಗೂಗಲ್ ತನ್ನ ಸರ್ಚ್ ಹಿಸ್ಟರಿಯನ್ನು ಡಿಲೀಟ್ ಮಾಡಲು ಗ್ರಾಹಕರಿಗೆ ಇನ್ನಷ್ಟು ಸುಲಭದ ಫೀಚರ್ ಅನ್ನು ಬಿಡುಗಡೆ ಮಾಡಿದೆ.
ಗೂಗಲ್ ಕ್ರೋಮ್ನ ಬ್ರೌಸ್ ಹಿಸ್ಟರಿಗೆ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಈ ಮೂಲಕ ಬಳಕೆದಾರರು ಇನ್ನಷ್ಟು ಸುಲಭದಲ್ಲಿ ಗೂಗಲ್ ಕ್ರೋಮ್ನಲ್ಲಿ ಬ್ರೌಸ್ ಹಿಸ್ಟರಿಯನ್ನು ಡಿಲೀಟ್ ಮಾಡಬಹುದಾಗಿದೆ. ಈ ಫೀಚರ್ಗೆ ಕ್ವಿಕ್ ಡಿಲೀಟ್ ಸರ್ಚ್ ಹಿಸ್ಟರಿ ಎಮದು ಹೆಸರಿಸಲಾಗಿದೆ. ಹಾಗಿದ್ರೆ ಈ ಫೀಚರ್ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಕ್ವಿಕ್ ಡಿಲೀಟ್ ಎಂದರೇನು?
ಗೂಗಲ್ ಕ್ರೋಮ್ ಪರಿಚಯಿಸಿರುವ ಕ್ವಿಕ್ ಡಿಲೀಟ್ ಫೀಚರ್ನ ಆ್ಯಕ್ಟಿವೇಶನ್ ಫೀಚರ್ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನು ಕಂಪೆನಿ ಬಿಡುಗಡೆ ಮಾಡಿಲ್ಲ. ಇದರ ಬಳಕೆ ಸಹ ಹೇಗೆ ಮಾಡುವುದು ಎನ್ನುದರ ಬಗ್ಗೆಯೂ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಆಯ್ಕೆಯು ಬಳಕೆದಾರು ಗೂಗಲ್ ಕ್ರೋಮ್ನಲ್ಲಿ ಮಾಡಿದಂತಹ ಸರ್ಚ್ ಹಿಸ್ಟರಿಯನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಬಹುದಾಗಿದೆ. ಇದರಿಂದ ಇನ್ಮುಂದೆ ನಿಮ್ಮ ಗೌಪ್ಯತೆಯನ್ನುಕಾಪಾಡಲು ಸುಲಭವಾಗಲಿದೆ.
ಇದನ್ನೂ ಓದಿ: ಒಂದೇ ಕಂಪೆನಿಯಿಂದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಬರೋಬ್ಬರಿ 2 ಸ್ಮಾರ್ಟ್ಫೋನ್ಸ್! ಹೇಗಿದೆ ಗೊತ್ತಾ ಫೀಚರ್ಸ್?
ಈ ಫೀಚರ್ ಅನ್ನು ಗೂಗಲ್ನಲ್ಲಿ ಸಕ್ರಿಯಗೊಳಿಸುವುದು ಹೇಗೆ?
ಗೂಗಲ್ ಕ್ರೋಮ್ನ ಸೆಟ್ಟಿಂಗ್ಸ್ಗೆ ಹೋಗಿ ಈ ಕ್ವಿಕ್ ಹಿಸ್ಟರಿಯನ್ನು ಆ್ಯಕ್ಟಿವ್ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ಬಳಕೆದಾರರು ಇದನ್ನು ಆ್ಯಕ್ಟಿವ್ ಮಾಡಿದ್ರೆ ಗೂಗಲ್ ಕ್ರೋಮ್ನ ಬಲಬದಿಯಲ್ಲಿರುವ ಮೂರು ಚುಕ್ಕೆಗಳ ಮೆನುವಿನಲ್ಲಿ ಆ್ಯಕ್ಟಿವ್ ನಾಟಿಫಿಕೇಶನ್ ಕಾಣಲಿದೆ.
ಈ ಮೂಲಕ ಬಳಕೆದಾರರು ತಮ್ಮ ಗೂಗಲ್ ಕ್ರೋಮ್ನಲ್ಲಿ ಸರ್ಚ್ ಹಿಸ್ಟರಿ ಮೂಲಕ 15 ನಿಮಿಷಗಳ ಹಿಂದೆ ಸರ್ಚ್ ಮಾಡಿದ ವಿಷಯಗಳನ್ನು ಕ್ವಿಕ್ ಆಗಿ ಡಿಲೀಟ್ ಮಾಡಬಹುದಾಗಿದೆ. ಕ್ವಿಕ್ ಡಿಲೀಟ್ ಎಂಬ ಫೀಚರ್ ನಿಮ್ಮ ಕ್ರೋಮ್ನಲ್ಲಿ ಮಾಡಿರುವಂತ ಸರ್ಚ್ ಹಿಸ್ಟರಿಯನ್ನು ಕ್ಷಣಮಾತ್ರದಲ್ಲಿ ಡಿಲೀಟ್ ಮಾಡುತ್ತದೆ.
ಕಳೆದ ವರ್ಷವೇ ಪರೀಕ್ಷೆ
ಗೂಗಲ್ ಈ ಬಗ್ಗೆ ಕಳೆದ ವರ್ಷವೇ ಪರೀಕ್ಷೆಯನ್ನು ಮಾಡಿತ್ತು. ಇದರಿಂದ ಬಳಕೆದಾರರ ಪ್ರೈವಸಿಯನ್ನು ಕಾಪಾಡುವುದೇ ಮುಖ್ಯ ಉದ್ದೇಶವಾಗಿದೆ. ಇನ್ನು ಈ ಫೀಚರ್ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ. ಇದೇ ರೀತಿ ಗೂಗಲ್ ಕಳೆದ ಬಾರಿ ತನ್ನ ಬಳಕೆದಾರರಿಗೆ ಹಲವು ಪ್ರೈವಸಿ ಕಾಪಾಡುವ ಫೀಚರ್ ಅನ್ನು ಬಿಡುಗಡೆ ಮಾಡಿತ್ತು.
ಗೂಗಲ್ ಪಾಸ್ ಕೀ ಫೀಚರ್
ಗೂಗಲ್ ಕೆಲದಿನಗಳ ಹಿಂದೆ ಬಳಕೆದಾರರಿಗಾಗಿ ಪಾಸ್ ಕೀ ಫೀಚರ್ ಅನ್ನು ಲಾಂಚ್ ಮಾಡಿತ್ತು. ಈ ಮೂಲಕ ಬಳಕೆದಾರರು ಪಾಸ್ವರ್ಡ್ಗಳನ್ನು ಟೈಪ್ ಮಾಡದೆಯೇ ತಮ್ಮ ಅಕೌಂಟ್ಗಳಿಗೆ ಲಾಗಿನ್ ಮಾಡಬಹುದು. ಈ ಪಾಸ್ ಕೀಗಳನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲದಿರುವುದರಿಂದ ಇದು ಬಹಳಷ್ಟು ಸುರಕ್ಷಿತವಾಗಿರಲಿದೆ. ಇದಿಷ್ಟೇ ಅಲ್ಲದೆ ಸರ್ವರ್ ಉಲ್ಲಂಘನೆಗಳಲ್ಲಿ ಸೋರಿಕೆಯಾಗುವುದಿಲ್ಲ ಮತ್ತು ಫಿಶಿಂಗ್ ದಾಳಿಯಿಂದ ಬಳಕೆದಾರರನ್ನು ರಕ್ಷಿಸುತ್ತವೆ. ಪಾಸ್‌ಕೀಗಳನ್ನು ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಾಣ ಮಾಡಲಾಗಿದ್ದು, ವಿವಿಧ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಇದು ಕೆಲಸ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ