• Home
  • »
  • News
  • »
  • tech
  • »
  • Instagram Update: ಇನ್‌ಸ್ಟಾಗ್ರಾಮ್​ನಲ್ಲಿ ಮಕ್ಕಳ ಮೇಲೆ ಕಣ್ಣಿಡಲು ಪೋಷಕರಿಗಾಗಿ ಹೊಸ ಫೀಚರ್!

Instagram Update: ಇನ್‌ಸ್ಟಾಗ್ರಾಮ್​ನಲ್ಲಿ ಮಕ್ಕಳ ಮೇಲೆ ಕಣ್ಣಿಡಲು ಪೋಷಕರಿಗಾಗಿ ಹೊಸ ಫೀಚರ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇನ್‌ಸ್ಟಾಗ್ರಾಂನ ಈ ವಿಶೇಷ ಫೀಚರ್‌ ಅನ್ನು ಮುಖ್ಯವಾಗಿ ಹದಿಹರೆಯದವರು ಮತ್ತು ಅವರ ಪೋಷಕರನ್ನು ಗುರಿಯಾಗಿರಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಇದು ಮಕ್ಕಳು ಇನ್‌ಸ್ಟಾ ಪೇಜ್​ನಲ್ಲಿ ಏನನ್ನು ಬ್ರೌಸ್ ಮಾಡುತ್ತಿದ್ದಾರೆಂಬುದನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.

  • Share this:

    ಇನ್‌ಸ್ಟಾಗ್ರಾಂ (Instagram) ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ (Social Media) ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಹಾಗಾಗಿಯೇ ದೊಡ್ಡವರ ಜೊತೆಗೆ ಹದಿಹರೆಯದ ಮಕ್ಕಳು ಕೂಡ ಇದನ್ನು ಬಳಸಲು ಇಷ್ಟ ಪಡುತ್ತಾರೆ. ಅದರಲ್ಲೂ ಹದಿಹರೆಯದವರಿಗೆ ತಮ್ಮ ಸ್ನೇಹಿತರೊಂದಿಗೆ (Friends) ಸಂಪರ್ಕ ಸಾಧಿಸಲು ಇದು ಉತ್ತಮ ವೇದಿಕೆಯಾಗಿದೆ. ಆದಾಗ್ಯೂ, ಸರಿಯಾಗಿ ಮೇಲ್ವಿಚಾರಣೆ ಮಾಡದಿದ್ದರೆ ಇದು ಅಪಾಯಕಾರಿ ಸ್ಥಳ ಅನ್ನೋದನ್ನು ತಳ್ಳಿ ಹಾಕುವಂತಿಲ್ಲ. ಮಕ್ಕಳು ಇಂಥಹ ಸಾಮಾಜಿಕ ಮಾದ್ಯಮಗಳಲ್ಲಿ ಏನು ಮಾಡುತ್ತಾರೆ, ಏನು ನೋಡುತ್ತಾರೆ ಹಾಗೆಯೇ ಯಾರೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂಬುದು ಬಹಳ ಮುಖ್ಯವಾಗುತ್ತದೆ.


    ಅನೇಕ ಸಂದರ್ಭಗಳಲ್ಲಿ ಅವರು ವಿದ್ಯೆ ಬಿಟ್ಟು ದಾರಿ ತಪ್ಪುವ ಸಾಧ್ಯತೆಯೇ ಹೆಚ್ಚಿರುತ್ತದೆ. ಅದಕ್ಕಾಗಿಯೇ ಇನ್‌ಸ್ಟಾಗ್ರಾಂ ಪೋಷಕರ ನಿಯಂತ್ರಣ ಫೀಚರ್‌ಅನ್ನು ಅಭಿವೃದ್ಧಿಪಡಿಸಿದೆ.


    ಏನಿದು ಇನ್‌ಸ್ಟಾ ಹೊಸ ಫೀಚರ್‌ ?


    ಇನ್‌ಸ್ಟಾಗ್ರಾಂನ ಈ ವಿಶೇಷ ಫೀಚರ್‌ ಅನ್ನು ಮುಖ್ಯವಾಗಿ ಹದಿಹರೆಯದವರು ಮತ್ತು ಅವರ ಪೋಷಕರನ್ನು ಗುರಿಯಾಗಿರಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಇದು ಮಕ್ಕಳು ಇನ್‌ಸ್ಟಾ ಪೇಜ್​ನಲ್ಲಿ ಏನನ್ನು ಬ್ರೌಸ್ ಮಾಡುತ್ತಿದ್ದಾರೆಂಬುದನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.




    ಈ ಹೊಸ ಫೀಚರ್‌ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಪೋಷಕರ ನಿಯಂತ್ರಣ ಟೂಲ್‌ ತಮ್ಮ ಮಕ್ಕಳ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಪೋಷಕರಿಗೆ ಅನುಮತಿಸುತ್ತದೆ.


    ಅವರು ಯಾರನ್ನು ಫಾಲೋ ಮಾಡುತ್ತಿದ್ದಾರೆ, ಅವರು ಏನನ್ನು ನೋಡುತ್ತಾರೆ, ಯಾರಿಗೆ ಮೆಸೇಜ್‌ ಕಳುಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ಹೊಸ ವೈಶಿಷ್ಟ್ಯದೊಂದಿಗೆ, ಇನ್‌ಸ್ಟಾ ತನ್ನ ಪ್ಲಾಟ್‌ಫಾರ್ಮ್​ನ ಎಲ್ಲರಿಗೂ, ವಿಶೇಷವಾಗಿ ಮಕ್ಕಳಿಗೆ ಸುರಕ್ಷಿತವಾಗಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.


    ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಯ ಮೇಲೆ ಕಣ್ಣಿಡಲು ಹೇಗೆ ಸಹಾಯ ಮಾಡುತ್ತದೆ?


    ಹೌದು, ಪೋಷಕರು ತಮ್ಮ ಮಕ್ಕಳ ಇನ್‌ಸ್ಟಾಗ್ರಾಂ ಬಳಕೆಯ ಮೇಲೆ ಕಣ್ಣಿಡಲು ಇದು ಸಹಾಯ ಮಾಡುತ್ತದೆ. ಈ ಫೀಚರ್‌ ಗೌಪ್ಯತೆ ಮತ್ತು ಖಾತೆ ಸೆಟ್ಟಿಂಗ್‌ಗಳನ್ನು ಒಳಗೊಂಡಂತೆ ತಮ್ಮ ಮಕ್ಕಳ ಇನ್‌ಸ್ಟಾ ಖಾತೆಯನ್ನು ನೋಡಲು ಪೋಷಕರಿಗೆ ಅನುಮತಿ ನೀಡುತ್ತದೆ.


    ಸಾಂಕೇತಿಕ ಚಿತ್ರ


    ಇದರಿಂದ ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ ನಲ್ಲಿ ಮಾಡುತ್ತಿರುವ ಬದಲಾವಣೆಗಳನ್ನು ಟ್ರ್ಯಾಕ್ ಮಾಡಬಹುದು. ಈ ಹೊಸ ಟೂಲ್‌ನೊಂದಿಗೆ ಪೋಷಕರು ತಮ್ಮ ಮಕ್ಕಳು ಇನ್‌ಸ್ಟಾಗ್ರಾಮ್ ನಲ್ಲಿ ವಯಸ್ಸಿಗೆ ಸೂಕ್ತವಾದ ವಿಷಯಗಳನ್ನು ಮಾತ್ರ ವೀಕ್ಷಿಸುತ್ತಾರೆ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬಹುದು.


    ಅಲ್ಲದೇ ತಮ್ಮ ಮಕ್ಕಳು ಯಾವ ವಿಷಯವನ್ನು ವೀಕ್ಷಿಸಬಹುದು ಅಥವಾ ಏನನ್ನು ಪೋಸ್ಟ್ ಮಾಡಬಹುದು ಎಂಬುದರ ಮೇಲೆ ಮಿತಿಗಳನ್ನು ಹೊಂದಿಸುವ ಸಾಮರ್ಥ್ಯವನ್ನು ಇದು ಪೋಷಕರಿಗೆ ನೀಡುತ್ತದೆ.


    ಈ ಫೀಚರ್‌ನೊಂದಿಗೆ ಪೋಷಕರು ತಮ್ಮ ಮಕ್ಕಳು ಇನ್‌ಸ್ಟಾಗ್ರಾಂ ಬಳಸುವಾಗ ಸುರಕ್ಷಿತವಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.


    ಇನ್‌ಸ್ಟಾಗ್ರಾಂ ಫ್ಯಾಮಿಲಿ ಸೆಂಟರ್‌


    ಪೋಷಕರ ಮೇಲ್ವಿಚಾರಣಾ ಟೂಲ್ಸ್‌ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕುಟುಂಬ ಕೇಂದ್ರಕ್ಕೆ ಭೇಟಿ ನೀಡಬಹುದು. ಇನ್‌ಸ್ಟಾಗ್ರಾಮ್ ಪ್ರಕಾರ, “ಕುಟುಂಬ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಪೋಷಕರು ವಿವಿಧ ಮೇಲ್ವಿಚಾರಣಾ ಟೂಲ್‌ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಸೆಟ್‌ ಮಾಡಬಹುದು. ಅಲ್ಲದೇ ವಿಶ್ವಾಸಾರ್ಹ ತಜ್ಞರಿಂದ ಸಲಹೆಗಳನ್ನು ಪಡೆಯಬಹುದು. ಈ ಬಗ್ಗೆ ಮಾಹಿತಿಯನ್ನು ಪಡೆಯಬಹುದು.


    ಅಲ್ಲದೇ ಪಾಲಕರು ದೈನಂದಿನ ಸಮಯದ ಮಿತಿಗಳನ್ನು ಹೊಂದಿಸಬಹುದು. ಮಕ್ಕಳ ಪ್ರತಿ ಚಟುವಟಿಯನ್ನು ಅವರು ಗಮನಿಸಬಹುದಾಗಿದೆ. ಅಲ್ಲದೇ Instagram ಪೋಷಕರ ಮಾರ್ಗದರ್ಶಿಯನ್ನು ಹೊಂದಿದೆ. ಅದು ಅವರ ಹದಿಹರೆಯದ ಮಕ್ಕಳಿಗೆ ಇನ್‌ಸ್ಟಾಗ್ರಾಂಅನ್ನು ಹೇಗೆ ಟ್ರ್ಯಾಕ್‌ ಮಾಡುವುದು ಎಂಬ ಬಗ್ಗೆ ತಿಳಿಯಲು ಸಹಾಯಮಾಡುತ್ತದೆ.


    ಇದನ್ನೂ ಓದಿ: ರಿಪಬ್ಲಿಕ್​ ಡೇ ಸೇಲ್ ಆರಂಭ; ಈ ಸಾಧನಗಳ ಮೇಲೆ ಬಂಪರ್ ಆಫರ್​


    ಒಟ್ಟಾರೆಯಾಗಿ ಹದಿಹರೆಯದವರ ಕೈಗೆ ಮೊಬೈಲ್‌ ಕೊಡುವುದು ಎಂದಿಗೂ ಅಪಾಯಕಾರಿಯೇ. ಆದರೆ ಮೊಬೈಲ್‌ ಹಾಗೂ ಇಂಟರ್‌ನೆಟ್‌ ಅನ್ನೋದು ಇಂದಿನ ಅವಶ್ಯಗಳಲ್ಲಿ ಒಂದಾಗಿದೆ. ಹಾಗಾಗಿ ಅದು ಅನಿವಾರ್ಯ. ಆದರೆ ಅದರ ಬಳಕೆಯ ಮೇಲೆ ಒಂದು ಕಣ್ಣಿಡುವುದು ಮುಖ್ಯವಾಗಿದೆ. ಸರಿ ತಪ್ಪು ಗೊತ್ತಾಗದ ವಯಸ್ಸಲ್ಲಿ ಮಕ್ಕಳು ಹಾದಿ ತಪ್ಪದಂತೆ ನೋಡಿಕೊಳ್ಳುವುದು ಪಾಲಕರ ಮುಖ್ಯ ಕರ್ತವ್ಯವೂ ಆಗಿದೆ.

    Published by:Prajwal B
    First published: